ಜನಸಂಖ್ಯಾ ಆಯೋಗ ರಚನೆ, ಎನ್‌ಆರ್‌ಸಿ ಜಾರಿಗೆ ಮಣಿಪುರ ನಿರ್ಧಾರ

 

             ಇಂಫಾಲ: ರಾಜ್ಯ ಜನಸಂಖ್ಯಾ ಆಯೋಗ ರಚನೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿಗೊಳಿಸುವ ಕುರಿತು ಮಣಿಪುರ ವಿಧಾನಸಭೆಯು ಸರ್ವಾನುಮತದಿಂದ ನಿರ್ಣಯಗಳನ್ನು ಅಂಗೀಕರಿಸಿದೆ.

                ವಿಧಾನಸಭೆ ಬಜೆಟ್‌ ಅಧಿವೇಶನದ ಕಡೆಯ ದಿನವಾದ ಶನಿವಾರ ಜೆಡಿಯು ಸದಸ್ಯ ಜಾಯ್‌ಕಿಶನ್‌ ಅವರು ಈ ಸಂಬಂಧ ಪ್ರತ್ಯೇಕವಾಗಿ ಖಾಸಗಿ ನಿರ್ಣಯವನ್ನು ಮಂಡಿಸಿದ್ದರು.

                  ರಾಜ್ಯದ ಬೆಟ್ಟಗುಡ್ಡ ಪ್ರದೇಶಗಳಲ್ಲಿ 1971 ರಿಂದ 2001ರ ಅವಧಿಯಲ್ಲಿ ಜನಸಂಖ್ಯೆಯು ಶೇ 153.3ರಷ್ಟು ಏರಿದೆ. ಏರಿಕೆ ಪ್ರಮಾಣ 2001-2011ರ ಅವಧಿಯಲ್ಲಿ ಶೇ 250.9ರಷ್ಟಿದೆ ಎಂದು ಅವರು ಪ್ರತಿಪಾದಿಸಿದರು.

                   ಈ ಏರಿಕೆಗೆ ಹೊರಗಿನವರ ಒಳನುಸುಳುವಿಕೆಯೂ ಕಾರಣ ಎಂದು ಆತಂಕ ವ್ಯಕ್ತಪಡಿಸಿದರು. ಮಣಿಪುರ ರಾಜ್ಯಕ್ಕೆ ಹೊಂದಿಕೊಂಡಂತೆಯೇ ಮ್ಯಾನ್ಮಾರ್ ಅಂತರರಾಷ್ಟ್ರೀಯ ಗಡಿ ಇದೆ.

               ಇನ್ನೊಂದೆಡೆ, ರಾಜ್ಯದ ಹಲವು ಸ್ಥಳೀಯ ಸಂಸ್ಥೆಗಳು ಪರಿಷ್ಕೃತ ಎನ್‌ಆರ್‌ಸಿ ಬೇಕು ಎಂದು ಬೇಡಿಕೆ ಮಂಡಿಸಿದ್ದವು. ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್, ಇಂಥ ನಿರ್ಣಯಗಳು ಸದನದ ಒಟ್ಟು ಹಿತಾಸಕ್ತಿ ಈಡೇರಿಸಲಿದೆ ಎಂದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries