ರೋಗಲಕ್ಷಣವಿಲ್ಲದೆ ಸೈಲೆಂಟ್ ಆಗಿ ಹಬ್ಬುತ್ತಿದ್ಯಾ ಮಂಕಿಪಾಕ್ಸ್?

 

ಮಂಕಿ ಪಾಕ್ಸ್ ಅಥವಾ ಮಂಗನ ಸಿಡುಬು ಸದ್ಯ ಜಗತ್ತಿನಾದ್ಯಂತ ಜನರನ್ನು ಭಯಭೀತಗೊಳಿಸಿರುವ ವೈರಸ್. ಹೌದು, ಮಂಕಿಪಾಕ್ಸ್ ಸದ್ಯ ಜಗತ್ತಿನೆಲ್ಲೆಡೆ ವೇಗವಾಗಿ ಹರಡುತ್ತಿದೆ. ಮುಂದುವರಿದ ದೇಶಗಳಾದ ಅಮೆರಿಕ, ಯುರೋಪ್ ನಲ್ಲೂ ಮಂಕಿಪಾಕ್ಸ್ ತೀವ್ರ ತರದಲ್ಲಿ ಹಬ್ಬುತ್ತಿದೆ. ಅದರಲ್ಲೂ ವಿಶ್ವ ಆರೋಗ್ಯ ಸಂಸ್ಥೆ (WHO) ಹಲವು ವರ್ಷಗಳ ಬಳಿಕ ಮಂಕಿಪಾಕ್ಸ್ ಹಿನ್ನೆಲೆ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.

ಹೀಗಾಗಿ ಜನರಲ್ಲಿ ಆತಂಕ ಮನೆ ಮಾಡಿದೆ. ಸದ್ಯ ಜಗತ್ತಿನಾದ್ಯಂತ ಅಂದರೆ ಸುಮಾರು 80 ದೇಶಗಳಲ್ಲಿ ಬರೋಬ್ಬರಿ 20,000 ಜನರಲ್ಲಿ ಮಂಕಿಪಾಕ್ಸ್ ರೋಗ ಕಾಣಿಸಿಕೊಂಡಿದೆ. ಜಗತ್ತಿನಾದ್ಯಂತ ಮಂಕಿಪಾಕ್ಸ್ ಗೆ ಈವರೆಗೆ ನಾಲ್ಕು ಮಂದಿ ಬಲಿಯಾಗಿದ್ದಾರೆ. ಇನ್ನು ಭಾರತದಲ್ಲಿ ಈವರೆಗೆ ಒಟ್ಟು ಎಂಟು ಮಂದಿಯಲ್ಲಿ ಮಂಕಿಪಾಕ್ಸ್ ಸೋಂಕು ದೃಢಪಟ್ಟಿದ್ದು, ಕೇರಳಲ್ಲಿ ಓರ್ವ ಮಂಕಿಪಾಕ್ಸ್ ನಿಂದಾಗಿ ಮೃತಪಟ್ಟಿದ್ದಾನೆ. ಈ ಮಧ್ಯೆ ಮಂಕಿಪಾಕ್ಸ್ ರೋಗಿಗಳಲ್ಲಿ ಹೊಸ ರೋಗಲಕ್ಷಣಗಳು ಕಂಡು ಬರುತ್ತಿವೆಯೇ?

ಯಾರಾದರೂ ವೈರಸ್‌ಗೆ ತುತ್ತಾದರೆ ರೋಗಲಕ್ಷಣಗಳಿಲ್ಲದೆ ಇರಬಹುದೇ ಎಂಬಂತಹ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಒಂದೊಂದಾಗಿ ವಿವರಿಸುತ್ತಾ ಹೋಗುತ್ತೇವೆ ಮುಂದೆ ಸ್ಟೋರಿ ಓದಿ.

ಮಂಕಿ ಪಾಕ್ಸ್ ಎಂದರೇನು?

ಮಂಕಿಪಾಕ್ಸ್ ಎಂದರೆ ಸಿಡುಬಿನ ಒಂದು ಪ್ರಭೇದ. 1958ರಲ್ಲಿ ಪ್ರಯೋಗಾಲದಲ್ಲಿ ಸಂಶೋಧನೆಗೆಂದು ಇಟ್ಟುಕೊಂಡಿದ್ದ ಕೆಲವು ಮಂಗಗಳಲ್ಲಿ ಇದು ಮೊದಲ ಬಾರಿಗೆ ಕಂಡಿದ್ದರಿಂದ ಇದನ್ನು ಮಂಕಿಪಾಕ್ಸ್ ಎಂದು ಕರೆಯಲಾಗಿತ್ತು. ಆದರೆ ಈ ಮಂಗಗಳಿಗೆ ಹೇಗೆ ಈ ರೋಗ ಬಂತು ಅನ್ನುವುದು ಇನ್ನು ನಿಗೂಡವಾಗಿದೆ. ಇನ್ನು ಈ ಮಂಕಿಪಾಕ್ಸ್ ರೋಗ 1970ರಲ್ಲಿ ಮೊದಲ ಬಾರಿಗೆ ಮನುಷ್ಯರಲ್ಲೂ ಕಂಡುಬಂತು. ಪ್ರಾಣಿಗಳಿಂದ ಮನುಷ್ಯರಿಗೆ ಹಬ್ಬುವ ಈ ವೈರಸ್, ಓರ್ವ ಕಾಯಿಲೆಪೀಡಿತ ವ್ಯಕ್ತಿಯಿಂದ ಮತ್ತೊಬ್ಬನಿಗೆ ಹರಡುತ್ತದೆ. ಇದೀಗ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಮಂಕಿಪಾಕ್ಸ್ ರೋಗ ಕಂಡುಬಂದಿದ್ದು, ಬಳಿಕ ಆಫ್ರಿಕಾ ಹಾಗೂ ಯುರೋಪ್ ಗೂ ಹಬ್ಬಿದೆ. ಇದೀಗ ಅಮೆರಿಕಾದಲ್ಲಿ ಮಂಕಿಪಾಕ್ಸ್ ಅಟ್ಟಹಾಸ ಮೆರೆಯುತ್ತಿದೆ.

ಮಂಕಿಪಾಕ್ಸ್ ಲಕ್ಷಣಗಳೇನು?

ಮಂಕಿಪಾಕ್ಸ್ ನಿಮ್ಮ ದೇಹಕ್ಕೆ ವೈರಸ್ ದಾಳಿಯಾದ್ರೆ ಜ್ವರ, ತಲೆನೋವು, ಬೆನ್ನುನೋವು, ಮೈ-ಕೈ ನೋವು, ಸುಸ್ತು ಕಾಡುತ್ತವೆ. ಗಡ್ಡದ ಬಳಿ, ಕಂಕುಳಿನಲ್ಲಿ ಸಣ್ಣ ಉಂಡೆಗಳಂತಹ ದುಗ್ಧಗ್ರಂಥಿಗಳು ಕಾಣುತ್ತವೆ. ದುಗ್ಧಗ್ರಂಥಿಗಳು ನಮ್ಮ ಶರೀರದ ರಕ್ಷಕ ವ್ಯವಸ್ಥೆಯ ಭಾಗಗಳು. ಸಾಮಾನ್ಯವಾಗಿ ಸಣ್ಣ ಗಾತ್ರದಲ್ಲಿ ಇರುವ ಇವು, ಶರೀರಕ್ಕೆ ರೋಗ ಬಂದಾಗ ಹಿರಿದಾಗುತ್ತವೆ. ಜ್ವರ ಆರಂಭವಾದ ಮೂರು ದಿನಗಳ ಒಳಗೆ ಚರ್ಮ ಕೆಂಪಾಗಿ, ಸಬ್ಬಕ್ಕಿ ಕಾಳಿನ ಗಾತ್ರದ ಬೊಕ್ಕೆಗಳು ಏಳುತ್ತವೆ. ಈ ಬೊಕ್ಕೆಗಳ ಒಳಗೆ ನೀರಿನಂತಹ ದ್ರಾವಣ ಇರುತ್ತದೆ. ಕೆಲವೊಮ್ಮೆ ಈ ದ್ರಾವಣದ ಬಣ್ಣ ತುಸು ಹಳದಿ ಇರಬಹುದು. ಒಬ್ಬ ವ್ಯಕ್ತಿಯ ಮೈ ಮೇಲೆ ಬೆರಳೆಣಿಕೆಯಷ್ಟು ಸಂಖ್ಯೆಯಿಂದ ಹಿಡಿದು ಸಾವಿರಾರು ಬೊಕ್ಕೆಗಳು ಕಾಣಬಹುದು. ಇವು ಮುಖ್ಯವಾಗಿ ಮುಖ, ಅಂಗೈ ಮತ್ತು ಅಂಗಾಲುಗಳ ಮೇಲೆ ಇರುತ್ತದಾದರೂ, ತೀವ್ರವಾದ ಸೋಂಕಿನಲ್ಲಿ ಬಾಯಿ, ಕಣ್ಣು ಸೇರಿ ಶರೀರದ ಎಲ್ಲೆಡೆ ಬರಬಹುದು.ಈ ಲಕ್ಷಣಗಳು ಸುಮಾರು 2ರಿಂದ 4 ವಾರಗಳ ಕಾಲ ಇರುತ್ತವೆ.

ಮಂಕಿಪಾಕ್ಸ್ ಹೊಸ ಲಕ್ಷಣಗಳೇನು?

ಮಂಕಿಪಾಕ್ಸ್ ಸೋಂಕು ದೃಢಪಟ್ಟ ರೋಗಿಗಳಿಗೆ ಈ ಮೇಲಿನ ಲಕ್ಷಣಗಳಲ್ಲದೆ ಗುದನಾಳದ ನೋವು ಮತ್ತು ಶಿಶ್ನ ನೋವು ಕಾಣಿಸಿಕೊಳ್ಳುತ್ತಿದೆಯಂತೆ ಈ ಬಗ್ಗೆ ರೋಗಿಗಳೆ ಹೇಳುತ್ತಿದ್ದಾರೆ. ಅದಾಗ್ಯೂ ಎಲ್ಲರಿಗೂ ಈ ರೀತಿಯ ಸಮಸ್ಯೆ ಕಾಡುತ್ತಿಲ್ಲ ಎಂದು ತಿಳಿದುಬಂದಿದೆ. ಆದ್ರೆ ಇದು ಕೂಡ ಮಂಕಿಪಾಕ್ಸ್ ನ ಹೊಸ ರೋಗ ಲಕ್ಷಣವಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸುವಂತೆ ಆಯಾ ದೇಶದ ಆರೋಗ್ಯ ಇಲಾಖೆಗಳು ಜನರಿಗೆ ಸೂಚನೆ ನೀಡುತ್ತಿವೆ.

ಲಕ್ಷಣರಹಿತವಾಗಿ ಹರಡುತ್ತಿದ್ಯಾ ಮಂಕಿಪಾಕ್ಸ್!

ಕೊರೊನಾದಂತೆ ಮಂಕಿಪಾಕ್ಸ್ ಕೂಡ ಇದೀಗ ರೋಗ ಲಕ್ಷಣರಹಿತವಾಗಿ ಅಂದರೆ ಅಸಿಂಪ್ಟಮ್ಯಾಟಿಕ್ ಆಗಿ ಹರಡುತ್ತಿದೆ ಎಂದು ಹೇಳಲಾಗಿದೆ. ಮಂಕಿಪಾಕ್ಸ್ ವೈರಸ್ ನಿಮ್ಮ ದೇಹದಲ್ಲಿ ಇದ್ದರೂ ನಿಮಗೆ ಯಾವುದೇ ರೋಗ ಲಕ್ಷಣಗಳು ಇಲ್ಲದೆ ಇರಬಹುದು ಎಂದು ಅಧ್ಯಯನಗಳು ತಿಳಿಸಿವೆ. ಇತ್ತೀಚೆಗೆ ಮೂರು ಯುವಕರಲ್ಲಿ ಮಂಕಿಪಾಕ್ಸ್ ಇರುವುದು ದೃಢಪಟ್ಟಿತ್ತು. ಆದರೆ ಅವರಿಗೆ ಯಾವುದೇ ರೋಗ ಲಕ್ಷಣಗಳು ಇರಲಿಲ್ಲ. ಮಂಕಿಪಾಕ್ಸ್ ದೃಡಪಟ್ಟು ವಾರ ಕಳೆದರು ಯಾವುದೇ ಲಕ್ಷಣಗಳು ಅವರು ಹೊಂದಿರಲಿಲ್ಲ. ಇನ್ನು ಮಂಕಿ ಪಾಕ್ಸ್ ವೈರಸ್ ಮನುಷ್ಯನ ದೇಹವನ್ನು ಹೊಕ್ಕರೆ 5 ರಿಂದ 21 ದಿನಗಳಲ್ಲಿ ಚರ್ಮದ ಮೇಲೆ ಗುಳ್ಳೆಗಳು ಏಳುವುದು, ಜ್ವರ ಹೀಗೆ ಇನ್ನಿತರ ರೋಗಗಳು ಬರುತ್ತವೆ. ಆದರೆ ಇವರಲ್ಲಿ ಯಾವುದೇ ಒಂದು ಲಕ್ಷಣ ಕೂಡ ಕಂಡುಬಂದಿಲ್ಲ. ಹೀಗಾಗಿ ಮಂಕಿಪಾಕ್ಸ್ ವೈರಸ್ ರೋಗ ಲಕ್ಷಣ ರಹಿತವಾಗಿದೆ ಎಂದು ಅಧ್ಯಯನ ಹೇಳಿದೆ. ಇನ್ನು ಕೆಲವರಿಗೆ ಎಲ್ಲಾ ಲಕ್ಷಣಗಳು ಕಾಣುತ್ತಿಲ್ಲ. ಕೆಲವರಿಗೆ ದದ್ದುಗಳು ಚರ್ಮದ ಮೇಲೆ ಕಾಣಿಸಿಕೊಂಡರು ಇನ್ನಿತರ ಲಕ್ಷಣಗಳು ಕಾಣುತ್ತಿಲ್ಲ.

ಆರೋಗ್ಯದ ಮೇಲೆ ಪರಿಣಾಮ ಬೀರುತ್ತಾ ಮಂಕಿಪಾಕ್ಸ್ ರೋಗ!

ವೈದ್ಯರುಗಳ ಪ್ರಕಾರ ಕೆಲವೊಂದು ರೋಗಲಕ್ಷಣಗಳು ಆರೋಗ್ಯಕ್ಕೆ ಯಾವುದೇ ಸಮಸ್ಯೆ ಮಾಡದೆ ಇರಬಹುದು. ಅಥವಾ ಮಾಡಿದ್ದರೂ ನಿಮ್ಮ ಅರಿವಿಗೆ ಬರದೆ ಇರಬಹುದು. ಆದ್ರೆ ಮಂಕಿಪಾಕ್ಸ್ ರೋಗದಿಂದ ಮೆದುಳಿನ ಸಮಸ್ಯೆ ಉಂಟಾಗುತ್ತದೆ ಎಂದು ವೈದ್ಯರುಗಳು ತಿಳಿಸಿದ್ದಾರೆ. ಮಂಕಿಪಾಕ್ಸ್ ರೋಗಕ್ಕೆ ತುತ್ತಾದವರಿಗೆ ಭವಿಷ್ಯದಲ್ಲಿ ಮೆದುಳಿನ ಸಮಸ್ಯೆ ಕಾಡಬಹುದು ಎಂದಿದ್ದಾರೆ. ಆದರೂ ಈ ಬಗ್ಗೆ ಸರಿಯಾದ ಅಧ್ಯಯನ ನಡೆಯಬೇಕಿದೆ. ಸೋಂಕು ಅಥವಾ ಅಲರ್ಜಿಯಿಂದ ಮೆದುಳಿಗೆ ಡ್ಯಾಮೇಜ್ ಆಗಬಹುದು ಎಂದಿದ್ದಾರೆ.


 

 

 

 

 

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries