HEALTH TIPS

ಹೆಚ್ಚಿನ ದೇಶಗಳು ಕೊರೋನ ಸಾಂಕ್ರಾಮಿಕ ಎದುರಿಸಲು ಸಜ್ಜಾಗಿರಲಿಲ್ಲ:ಲ್ಯಾನ್ಸೆಟ್ ವರದಿ

                 ನವದೆಹಲಿ :ಹೆಚ್ಚಿನ ದೇಶಗಳು ಕೊರೋನವೈರಸ್ ಸಾಂಕ್ರಾಮಿಕವನ್ನು ಎದುರಿಸಲು ಸಜ್ಜಾಗಿರಲಿಲ್ಲ ಮತ್ತು ಅತ್ಯಂತ ನಿಧಾನವಾಗಿ ಪ್ರತಿಕ್ರಿಯಿಸಿದ್ದವು ಎಂದು ಬುಧವಾರ ಬಿಡುಗಡೆಗೊಂಡ ಲ್ಯಾನ್ಸೆಟ್ ಕೋವಿಡ್-19 ಆಯೋಗದ ನೂತನ ವರದಿಯು ಹೇಳಿದೆ.

                2020,ಜನವರಿಯ ಆರಂಭದಲ್ಲಿ ಕೋವಿಡ್ ಪಿಡುಗಿನ ಬಗ್ಗೆ ಜಾಗತಿಕವಾಗಿ ಅರಿವಾದಾಗ ಹೆಚ್ಚಿನ ಸರಕಾರಗಳು ಅದರ ಗಂಭೀರತೆಯನ್ನು ಒಪ್ಪಿಕೊಳ್ಳುವಲ್ಲಿ ಮತ್ತು ಉತ್ತರವಾಗಿ ತುತುರ್ ಕ್ರಮಗಳನ್ನು ಕೈಗೊಳ್ಳುವಲ್ಲಿ ಆಮೆಗತಿಯನ್ನು ಅನುಸರಿಸಿದ್ದವು ಎಂದು ಹೇಳಿರುವ ವರದಿಯು,ಸರಕಾರಗಳು ತಮ್ಮ ಸಮಾಜಗಳಲ್ಲಿಯ ಅತ್ಯಂತ ದುರ್ಬಲ ವರ್ಗಗಳಿಗೆ ಅತ್ಯಂತ ಕಡಿಮೆ ಗಮನವನ್ನು ನೀಡಿದ್ದವು ಮತ್ತು ಅಂತರರಾಷ್ಟ್ರೀಯ ಸಹಕಾರದ ಕೊರತೆ ಹಾಗೂ ತಪ್ಪುಮಾಹಿತಿಯ ಸಾಂಕ್ರಾಮಿಕದಿಂದ ಪೀಡಿತವಾಗಿದ್ದವು ಎಂದು ತಿಳಿಸಿದೆ.

              ಜಾನ್ಸ್ ಹಾಪ್‌ಕಿನ್ಸ್ ವಿವಿಯು ಒದಗಿಸಿರುವ ಅಂಕಿಅಂಶಗಳಂತೆ 2019,ಡಿಸೆಂಬರ್‌ನಲ್ಲಿ ಚೀನಾದ ವುಹಾನ್ ನಗರದಲ್ಲಿ ಸಾಂಕ್ರಾಮಿಕವು ಹರಡಿದಾಗಿನಿಂದ ವಿಶ್ವಾದ್ಯಂತ 61.03 ಕೋ.ಜನರು ಕೋವಿಡ್-19 ಸೋಂಕಿಗೊಳಗಾಗಿದ್ದರು ಮತ್ತು 65.20 ಲ.ಸಾವುಗಳು ಸಂಭವಿಸಿವೆ.

                  ಬುಧವಾರದ ತನ್ನ ವರದಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಯಿಂದ ಕೊರೋನವೈರಸ್ ಸಾಂಕ್ರಾಮಿಕದ ನಿರ್ವಹಣೆಯನ್ನು ಟೀಕಿಸಿರುವ ಆಯೋಗವು,ಅದನ್ನು ಬಲಪಡಿಸಲು ಕರೆಯನ್ನು ನೀಡಿದೆ.

                   ಮನುಷ್ಯರಿಗೆ ವೈರಸ್ ಹರಡುವಿಕೆ ಕುರಿತು ಜಗತ್ತಿಗೆ ಎಚ್ಚರಿಕೆ ನೀಡುವ ಮತ್ತು ಸಾರ್ವಜನಿಕ ಆರೋಗ್ಯ ತುರ್ತು ಸ್ಥಿತಿಯನ್ನು ಘೋಷಿಸುವಂತಹ ಹಲವಾರು ಮಹತ್ವದ ವಿಷಯಗಳಲ್ಲಿ ಡಬ್ಲುಎಚ್‌ಒ 'ಅತಿಯಾದ ಜಾಗರೂಕತೆ 'ಯನ್ನು ಪ್ರದರ್ಶಿಸಿತ್ತು ಎಂದಿರುವ ವರದಿಯು,ಮಾಸ್ಕ್‌ಗಳ ಸಾರ್ವಜನಿಕ ಬಳಕೆಯನ್ನು ಅನುಮೋದಿಸುವಲ್ಲಿ ಮತ್ತು ಗಾಳಿಯ ಮೂಲಕ ವೈರಸ್‌ನ ಪ್ರಸರಣವನ್ನು ಗುರುತಿಸುವಲ್ಲಿ ಅದು 'ತುಂಬ ನಿಧಾನ 'ವಾಗಿತ್ತು ಎಂದೂ ಹೇಳಿದೆ.

               ಡಬ್ಲುಎಚ್‌ಒದ ಸುಧಾರಣೆಗಳು ಅದರ ಮುಖ್ಯ ಬಜೆಟ್‌ನಲ್ಲಿ ಗಣನೀಯ ಹೆಚ್ಚಳವನ್ನು ಒಳಗೊಂಡಿರಬೇಕು ಎಂದು ಶಿಫಾರಸು ಮಾಡಿರುವ ಆಯೋಗವು, ಡಬ್ಲುಎಚ್‌ಒದ ಕೇಂದ್ರ ಪಾತ್ರದೊಂದಿಗೆ ಪೈಪೋಟಿಗಿಳಿಯುವ ಅಥವಾ ಅದನ್ನು ದುರ್ಬಲಗೊಳಿಸುವ ಹೊಸ ಜಾಗತಿಕ ಆರೋಗ್ಯ ನೀತಿ ಮತ್ತು ಹಣಕಾಸು ಕೇಂದ್ರಗಳನ್ನು ವಿಶ್ವ ಸಮುದಾಯವು ಸ್ಥಾಪಿಸಬಾರದು ಎಂದಿದೆ.

             ವರದಿಗೆ ಪ್ರತಿಕ್ರಿಯಿಸಿರುವ ಡಬ್ಲುಎಚ್‌ಒ,ಆಯೋಗದ ಶಿಫಾರಸುಗಳನ್ನು ತಾನು ಸ್ವಾಗತಿಸುತ್ತೇನಾದರೂ ವರದಿಯು ಪ್ರಮುಖ ವಿಷಯಗಳನ್ನು ಕೈಬಿಟ್ಟಿದೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಯನ್ನು ತಪ್ಪಾಗಿ ನಿರೂಪಿಸಿದೆ ಎಂದು ಹೇಳಿದೆ.

             ಅಗತ್ಯವಿರುವ ದೇಶಗಳಿಗೆ ಕೋವಿಡ್-19 ಉಪಕರಣಗಳನ್ನು ತಲುಪಿಸುವಲ್ಲಿ ಡಬ್ಲುಎಚ್‌ಒ ಪ್ರಮುಖ ಪಾತ್ರವನ್ನು ವಹಿಸಿತ್ತು ಮತ್ತು ಈಗಲೂ ಅದನ್ನು ಮುಂದುವರಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ವಿಶ್ವ ಆರೋಗ್ಯ ಸಂಸ್ಥೆಯು,ಸಾಂಕ್ರಾಮಿಕದುದ್ದಕ್ಕೂ ಮಹಾ ನಿರ್ದೇಶಕರು ಜನರನ್ನು ರಕ್ಷಿಸಲು ಮತ್ತು ಉಪಕರಣಗಳನ್ನು ಸಮಾನವಾಗಿ ಹಂಚಿಕೊಳ್ಳಲು ಕ್ರಮಗಳನ್ನು ಕೈಗೊಳ್ಳುವಂತೆ ದೇಶಗಳ ನಾಯಕರಿಗೆ ಪದೇ ಪದೇ ಕರೆಗಳನ್ನು ನೀಡಿದ್ದರು ಎಂದಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries