HEALTH TIPS

ನಿಗದಿಯಂತೆಯೇ ಲಡಾಖ್ ನಲ್ಲಿ ಸೇನಾ ಹಿಂತೆಗೆತ ಪ್ರಕ್ರಿಯೆ ಚಾಲ್ತಿಯಲ್ಲಿ: ಸೇನಾ ಮುಖ್ಯಸ್ಥ

 

          ನವದೆಹಲಿ: ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಲಡಾಖ್ ಭಾಗದಲ್ಲಿ ಸೇನಾ ಹಿಂತೆಗೆದ ಬಗ್ಗೆ ಮಾತನಾಡಿದ್ದು, ಚೀನಾ- ಭಾರತದ ಸೇನಾಪಡೆಗಳು ಈಗಾಗಲೇ ನಿರ್ಧಾರವಾಗಿದ್ದಂತೆ ಸೇನಾ ಹಿಂತೆಗೆತದ ಪ್ರಕ್ರಿಯೆಯಲ್ಲಿ ನಿರತವಾಗಿದೆ ಎಂದು ತಿಳಿಸಿದ್ದಾರೆ. 

                   "ಗೋಗ್ರಾ-ಹಾಟ್ ಸ್ಪ್ರಿಂಗ್ಸ್ ಪ್ರದೇಶದ ಪ್ಯಾಟ್ರೋಲಿಂಗ್ ಪಾಯಿಂಟ್ 15 ನಲ್ಲಿ ಚೀನಾ-ಭಾರತ ಸೇನೆಗಳನ್ನು ಹಿಂಪಡೆಯುತ್ತಿವೆ ನಿಗದಿಯಂತೆಯೇ ಪ್ರಕ್ರಿಯೆ ನಡೆಯುತ್ತಿದೆ" ಎಂದು ಹೇಳಿದ್ದಾರೆ. 

                  ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೆ.09 ರಂದು ಈ ಬಗ್ಗೆ ಮಾಹಿತಿ ನೀಡಿ, ಸೆ.12 ರ ವೇಳೆಗೆ ಸೇನಾ ಹಿಂತೆಗೆತ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿತ್ತು

              ಲಡಾಖ್ ಗೆ ಭೇಟಿ ನೀಡಿದ್ದ ಜನರಲ್ ಪಾಂಡೇ ಸೋಮವಾರ ದೆಹಲಿಗೆ ಮರಳಿದ್ದು, ಸೇನಾ ಲಾಜಿಸ್ಟಿಕ್ಸ್ ಕುರಿತ ಸೆಮಿನಾರ್ ನಲ್ಲಿ ಮಾತನಾಡುತ್ತಿದ್ದಾಗ ಲಡಾಖ್ ಬಗ್ಗೆ ಪ್ರಸ್ತಾಪಿಸಿ ಈ ಮಾಹಿತಿ ನೀಡಿದರು.Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries