HEALTH TIPS

ಹಿಂದೂ ನಂಬಿಕೆಗೆ ಅವಮಾನ: ನಟ ಸೂರಜ್ ವೆಂಜರಮೂಡ್ ವಿರುದ್ಧ ಪೋಲೀಸ್ ದೂರು


           ಪತ್ತನಂತಿಟ್ಟ: ಖ್ಯಾತ ಚಲಚಿತ್ರ ನಟ ಸೂರಜ್ ವೆಂಜರಮೂಡ್ ವಿರುದ್ಧ ಪೋಲೀಸ್ ದೂರು ದಾಖಲಾಗಿದೆ. ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಆಡಿರುವ ಮಾತುಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಪೋಲೀಸರಿಗೆ ದೂರು ನೀಡಲಾಗಿದೆ.
           ಪತ್ತನಂತಿಟ್ಟ ಬಾರ್ ಅಡ್ವೊಕೇಟ್ ಎನ್.ಮಹೇಶ್ ರಾಮ್  ದೂರು ನೀಡಿದವರು.  ದೂರಿನ ಪ್ರಕಾರ, ಫ್ಲವರ್ಸ್ ಚಾನೆಲ್‍ನ ಕಾಮಿಡಿ ಉತ್ಸವಂ ಕಾರ್ಯಕ್ರಮದಲ್ಲಿ ನಿರೂಪಕಿ ಅಶ್ವತಿ ಶ್ರೀಕಾಂತ್ ಅವರ ಕೈಗೆ ಹಲವು ದಾರಗಳನ್ನು ಕಟ್ಟಲಾಗಿದೆ ಎಂದು ಸೂರಜ್ ಹೇಳಿಕೆ ನೀಡಿದ್ದಾಗಿದೆ. ಶರÀಂಕುತ್ತಿಯಲ್ಲೂ ಇಷ್ಟೊಂದು ದಾರಗಳಿರದೆಂದು ಸೂರಜ್ ಹೇಳಿದ್ದು, ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೂರಲಾಗಿದೆ.
          ದೂರಿನಲ್ಲಿ ಕಾರ್ಯಕ್ರಮ ಸಂಪಾದಕರು, ಸೂರಜ್ ಹಾಗೂ ಮುಖ್ಯ ಸಂಪಾದಕರನ್ನು  ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಶಬರಿಮಲೆಯನ್ನು ಹಿಂದೂ ಸಮುದಾಯದವರು ಅತ್ಯಂತ ಪವಿತ್ರವೆಂದು ಪರಿಗಣಿಸಿದ್ದಾರೆ. ಉದ್ದೇಶಪೂರ್ವಕವಾಗಿ ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸೆಕ್ಷನ್ ಐಪಿಸಿ 295 ಎ ಅಡಿಯಲ್ಲಿ ಅಪರಾಧ ಸೂರಜ್ ಕಡೆಯಿಂದ ಕಂಡುಬಂದಿದೆ. ಸೂರಜ್ ಚಾನೆಲ್ ನಿರೂಪಕಿ ಅಶ್ವತಿ ಶ್ರೀಕಾಂತ್ ಅವರ ಕೈಯನ್ನು ದಾರದಿಂದ ಕಟ್ಟಿರುವುದನ್ನು ಹಾಸ್ಯ ಮಾಡುತ್ತಿರುವುದು ಬಿತ್ತರಗೊಂಡಿದೆ.
         ಕೆಲವರು ಅನಾವಶ್ಯಕವಾಗಿ ದಾರಗಳನ್ನು ಕಟ್ಟುವಂತೆ, ಸರಂಕುತ್ತಿಯಲ್ಲಿ ಮರದ ಮುಂಭಾಗಕ್ಕೆ ಹೋದರೆ ಹಲವು ಗಂಟುಗಳು ಕಾಣಿಸುತ್ತವೆ. ಅದನ್ನು ಹಾಗೆ ಕಟ್ಟಲಾಗಿದೆ. ಇದು ತೀರಾ ಕಳಪೆಯದ್ದು ಎಂದು ಸೂರಜ್ ಹೇಳಿರುವುದಾಗಿ ದೂರಿನಲ್ಲಿ ಹೇಳಲಾಗಿದ್ದು, ಹಿಂದೂ ಸಮಾಜಕ್ಕೆ ಅವಮಾನ ಮಾಡುವಂತಿದೆ ಎಂದು ತಿಳಿಸಲಾಗಿದೆ. ನಟ ಮಾಡಿರುವ ಟೀಕೆಗಳನ್ನು ಎಡಿಟ್ ಮಾಡಿ ಬದಲಾಯಿಸದೆ ಉದ್ದೇಶಪೂರ್ವಕವಾಗಿ ವಾಹಿನಿಯ ಮೂಲಕ ಪ್ರಸಾರ ಮಾಡಿರುವುದು ಐಪಿಸಿ 295ರ ಉಲ್ಲಂಘನೆಯಾಗಿದೆ ಎಂದು ಮಹೇಶ್ ಸ್ಪಷ್ಟಪಡಿಸಿದ್ದಾರೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries