HEALTH TIPS

ಪ್ಲಸ್ ಟು ಜೊತೆ ಲರ್ನರ್ ಸರ್ಟಿಫಿಕೇಟ್: ರಸ್ತೆ ಕಾನೂನು ಮತ್ತು ಅಧ್ಯಯನ ವಿಷಯ; ಯೋಜನೆ ಜಾರಿಗೊಳಿಸಲಿರುವ ಸಾರಿಗೆ ಇಲಾಖೆ


                ತಿರುವನಂತಪುರ: ಪ್ಲಸ್ ಟು ತೇರ್ಗಡೆಯಾಗುವ ವಿದ್ಯಾರ್ಥಿಗಳಿಗೆ ಕಲಿಕಾ ಪರವಾನಗಿ(ಲರ್ನರ್ಸ್ ಸರ್ಟಿಫಿಕೇಟ್)  ನೀಡಲು ಸಾರಿಗೆ ಇಲಾಖೆ ಮುಂದಾಗಿದೆ.
        ಹೈಯರ್ ಸೆಕೆಂಡರಿ ಪಠ್ಯಕ್ರಮವು ಕಲಿಕಾ ಪರವಾನಗಿಗೆ ಸಂಬಂಧಿಸಿದ ವಿಷಯಗಳನ್ನು ಸಹ ಒಳಗೊಂಡಿರಬೇಕು ಎಂದು ಶಿಫಾರಸು ಮಾಡಲಾಗಿದೆ. ಮೋಟಾರು ವಾಹನ ಇಲಾಖೆ ಸಿದ್ಧಪಡಿಸಿರುವ ಪಠ್ಯಕ್ರಮ ಮುಂದಿನ ವಾರ ಶಿಕ್ಷಣ ಇಲಾಖೆಗೆ ಹಸ್ತಾಂತರವಾಗಲಿದೆ. ಇದಕ್ಕೆ ಸರ್ಕಾರ ಒಪ್ಪಿಗೆ ನೀಡಿದರೆ, ಕಾನೂನಿಗೆ ತಿದ್ದುಪಡಿ ತರಲು ಕೇಂದ್ರವನ್ನು ಸಂಪರ್ಕಿಸಲು ನಿರ್ಧರಿಸಲಾಗಿದೆ.
              ಪ್ಲಸ್ ಟು ತೇರ್ಗಡೆಯಾಗುವ ಯಾವುದೇ ವಿದ್ಯಾರ್ಥಿಗೆ ಶಿಕ್ಷಣ ಪ್ರಮಾಣಪತ್ರದೊಂದಿಗೆ ಲರ್ನರ್ಸ್ ಪ್ರಮಾಣಪತ್ರ ಒದಗಿಸುವುದು ಯೋಜನೆಯಾಗಿದೆ. ಇದಕ್ಕಾಗಿ ಪ್ಲಸ್ ಒನ್ ಮತ್ತು ಪ್ಲಸ್ ಟು ತರಗತಿಗಳ ಪಠ್ಯಕ್ರಮದಲ್ಲಿ ರಸ್ತೆ ಕಾನೂನು ಮತ್ತು ಸಂಚಾರ ಕಾನೂನನ್ನು ಸೇರಿಸಲಾಗುವುದು. ಇದಕ್ಕಾಗಿ ಪಠ್ಯಕ್ರಮವನ್ನೂ ಸಿದ್ಧಪಡಿಸಲಾಗಿದೆ. ಸಾರಿಗೆ ಸಚಿವ ಆಂಟನಿ ರಾಜು ಶಿಕ್ಷಣ ಸಚಿವರಿಗೆ ಹಸ್ತಾಂತರಿಸಲಿದ್ದಾರೆ.
             ಸರ್ಕಾರ ಈ ಯೋಜನೆಗೆ ಒಪ್ಪಿಗೆ ನೀಡಿದರೆ ಕೇಂದ್ರ ರಸ್ತೆ ಸಂಚಾರ ಕಾಯ್ದೆಯಲ್ಲಿ ಬದಲಾವಣೆ ತರಬೇಕಾಗುತ್ತದೆ. ಈ ಮೂಲಕ ವಿದ್ಯಾರ್ಥಿಗಳಿಗೆ ರಸ್ತೆ ನಿಯಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಬಹುದಾಗಿದೆ. ಲರ್ನರ್ ಸರ್ಟಿಫಿಕೇಟ್ ಪಡೆಯುವಲ್ಲಿನ ಅಕ್ರಮಗಳಿಗೂ ಕಡಿವಾಣ ಹಾಕಬಹುದು ಎಂಬುದು ಉದ್ದೇಶವೆಂದು ಹೇಳಲಾಗಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries