HEALTH TIPS

ಶಾಲೆಗಳಲ್ಲಿ ದೂರು ನಿವಾರಣಾ ಕೋಶಗಳನ್ನು ಕಡ್ಡಾಯ ಸ್ಥಾಪಿಸಬೇಕು: ಮಹಿಳಾ ಆಯೋಗ

 


               ಕಾಸರಗೋಡು: ಶಾಲೆಗಳಲ್ಲಿ ದೂರು ನಿವಾರಣಾ ಕೋಶವನ್ನು ಕಡ್ಡಾಯವಾಗಿ ಸ್ಥಾಪಿಸಬೇಕು ಮತ್ತು ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಕೇರಳ ಮಹಿಳಾ ಆಯೋಗದ ಅಧ್ಯಕ್ಷೆ ಪಿ.ಸತಿ ದೇವಿ ತಿಳಿಸಿದ್ದಾರೆ. ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶನಿವಾರ ನಡೆದ ರಾಜ್ಯ ರಾಜ್ಯ ಮಹಿಳಾ ಆಯೋಗದ ಸಭೆಯ ಬಳಿಕ ಅವರು ಮಾತನಾಡಿದರು. ಶಾಲೆಗಳಲ್ಲಿ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳು ಆಯೋಗದ ಮುಂದೆ ಬರಲಿವೆ. 10 ನೌಕರರಿದ್ದರೆ ಆಂತರಿಕ ದೂರು ನಿವಾರಣಾ ಕೋಶ ಇರಬೇಕು ಆದರೆ ಬಹುತೇಕ ಶಾಲೆಗಳಲ್ಲಿ ಅಂತಹ ವ್ಯವಸ್ಥೆ ಇಲ್ಲದಿರುವುದನ್ನು ಆಯೋಗ ಗಂಭೀರವಾಗಿ ಪರಿಗಣಿಸಲಿದೆ ಎಂದು ತಿಳಿಸಿದರು. ವಿವಾಹಗಳನ್ನು ನೋಂದಾಯಿಸುವ ಮೊದಲು ಇದನ್ನು ದೃಢೀಕರಿಸಬೇಕು. ಪಂಚಾಯಿತಿಗಳಲ್ಲಿಯೂ ಕೌನ್ಸೆಲಿಂಗ್ ಕೇಂದ್ರಗಳನ್ನು ಆರಂಭಿಸಿದರೆ ಹದಿಹರೆಯದವರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಇಲ್ಲಿ ವಿವಾಹ ಪೂರ್ವ ಕೌನ್ಸೆಲಿಂಗ್ ಕೂಡಾ ನಡೆಸಬಹುದಾಗಿದೆ. ಜಾಗೃತ ಸಮಿತಿಗಳಿಗೆ ಕೌಟುಂಬಿಕ ಸಮಸ್ಯೆಗಳನ್ನು ಬಹುತೇಕ ಪರಿಹರಿಸಲು ಸಾಧ್ಯವಾಗಲಿದ್ದು,  ಜಾಗೃತ ಸಮಿತಿಗಳ ಕಾರ್ಯನಿರ್ವಹಣೆಯನ್ನು ಪಂಚಾಯಿತಿ ಮಟ್ಟದಲ್ಲಿ ದಕ್ಷತೆಯಿಂದ ನಿರ್ವಹಿಸಬೇಕು ಎಂದು ತಿಳಿಸಿದರು.
                                25ದೂರುಗಳ ಪರಿಗಣನೆ:
            ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶನಿವಾರ ನಡೆಸಿದ ಅದಾಲತ್‍ನಲ್ಲಿ ಹತ್ತು ದೂರುಗಳಿಗೆ ಪರಿಹಾರ ಕಲ್ಪಿಸಲಾಯಿತು. ಒಟ್ಟು 25 ದೂರುಗಳನ್ನು ಪರಿಗಣಿಸಲಾಗಿದ್ದು, ಹತ್ತು ದೂರುಗಳನ್ನು ಮುಂದಿನ ಅದಾಲತ್‍ಗೆ ವರ್ಗಾಯಿಸಲಾಯಿತು. ಪೆÇಲೀಸ್ ಪ್ರಕರಣ ಬಾಕಿ ಇರುವ ಕಾರಣ ಮೂರು ದೂರುಗಳ ಬಗ್ಗೆ ಪೆÇಲೀಸ್ ವರದಿ ಕೇಳಿ ನೋಟೀಸು ಜಾರಿಗೊಳಿಸಲಾಗಿದೆ. ಎರಡು ದೂರುಗಳ ಮೇಲೆ ಸಮಾಲೋಚನೆನಡೆಸುವ ಮೂಲಕ ಈ ದೂರುಗಳಿಗೆ ¥ರಿಹಾರ ಕಲ್ಪಿಸಲು ಸಾಧ್ಯ ಎಂದು ತಿಳಿಸಿದರು. ವಕೀಲೆ ಎಸ್.ರೇಣುಕಾದೇವಿ ತಂಗಚಿ, ಜಿಲ್ಲಾ ಪಂಚಾಯಿತಿ ಜಾಗೃತ ಸಮಿತಿ ಕೌನ್ಸಿಲರ್ ಸುಕುಮಾರಿ, ಸಮಾಜ ಕಲ್ಯಾಣ ಮಂಡಳಿ ಕೌನ್ಸಿಲರ್ ರಮ್ಯಾ ಶ್ರೀನಿವಾಸನ್, ಮಹಿಳಾ ಸೆಲ್ ಸಬ್ ಇನ್ಸ್ ಪೆಕ್ಟರ್ ಟಿ.ಕೆ.ಚಂದ್ರಿಕಾ, ಸಿಪಿಒ ಸುಪ್ರಿಯಾ ಜೇಕಬ್ ಅದಾಲತ್‍ನಲ್ಲಿ ಭಾಗವಹಿಸಿದ್ದರು.
                                ಕಾಸರಗೋಡಿನಲ್ಲಿ ರಾಜ್ಯಸೆಮಿನಾರ್:
            ಶಾಲೆಗಳನ್ನು ಕೇಂದ್ರೀಕರಿಸಿ ಲಿಂಗಸಮಾನತೆಅಭಿಯಾನ ನಡೆಸಲಾಗುವುದು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಪಿ.ಸಾತೆದೇವಿ ತಿಳಿಸಿದರು. ಶಾಲಾ ಕಾಲಾವಧಿಯಿಂದಲೇ ಲಿಂಗ ಸಮಾನತೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಲಿಂಗನೀತಿ ಮತ್ತು ಸಂವಿಧಾನ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಕಾಸರಗೋಡಿನಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries