HEALTH TIPS

ಮದ್ಯವರ್ಜನ ಶಿಬಿರ ನೆಮ್ಮದಿ ಬದುಕು-ಲೋಕೋದ್ದಾರದ ಬದುಕಿಗೆ ಮಾಡಿದ ಚಿಂತನೆ: ಉಳಿಯತ್ತಾಯ ವಿಷ್ಣು ಆಸ್ರ: 1600ನೇ ಮಧ್ಯವರ್ಜನ ಶಿಬಿರ ಉದ್ಘಾಟಿಸಿ ಅಭಿಮತ

                
      ಕಾಸರಗೋಡು: ಮಿತಿಮೀರಿದ ಬಯಕೆ ಅಪರಾಧಿಗಳನ್ನು ಸೃಷ್ಟಿಸುತ್ತದೆ. ಸಮಾಜದ ನಾಶಕ್ಕೆ ಮದ್ಯ ಮೊದಲಾದ ಅಮಲು ಪದಾರ್ಥಗಳ ಬಳಕೆಯೇ ಕಾರಣ. ಆದುದರಿಂದ ಜನರನ್ನು ಮದ್ಯ ವಿಮುಕ್ತರನ್ನಾಗಿಸಿ ಮಾಡುವ ಡಾ.ಡಿ.ವೀರೇಂದ್ರ ಹೆಗಡೆಯವರ ಯೋಚನೆ ಮತ್ತು ಯೋಜನೆ ಜನರ ನೆಮ್ಮದಿಯ ಬದುಕಿಗಾಗಿ, ಲೋಕೋದ್ಧಾರಕ್ಕಾಗಿ ಮಾಡಿದ ಚಿಂತನೆ ಎಂದು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ  ನುಡಿದರು.
          ಅವರು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಕಾಸರಗೋಡು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು  1600 ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಕಾಸರಗೋಡು ಹಾಗೂ ಕುತ್ಯಾಳ ಶ್ರೀ ನವಜೀವನ ಸಮಿತಿ ಕೂಡ್ಲು ಕಾಸರಗೋಡು ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾ ಎಲ್ಲಾ ನವಜೀವನ ಸಮಿತಿಗಳು, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟಗಳು, ಕಾಸರಗೋಡು ವಲಯ, ಶ್ರೀ ಶಾರದಾಂಬ ಭಜನಾ ಮಂದಿರ ಆಡಳಿತ ಸಮಿತಿ ಅಣಂಗೂರು, ನಡುವಳಪ್ಪ್ ಶ್ರೀ ರಕ್ತೇಶ್ವರಿ ದೇವಸ್ಥಾನ ಅಣಂಗೂರು ಹಾಗೂ ಜಸ್ಟೀಸ್ ಕೆ.ಎಸ್.ಹೆಗ್ಡೆ ಚಾರಿಟಬಲ್ ಟ್ರಸ್ಟ್ ದೇರಳಕಟ್ಟೆ ಮಂಗಳೂರು ಇವರ ಸಹಯೋಗದೊಂದಿಗೆ ನಗರ ಸಭೆ ಕಾಸರಗೋಡು, ಆರೋಗ್ಯ ಇಲಾಖೆ ಹಾಗೂ ಪೆÇಲೀಸ್ ಠಾಣೆ ಕಾಸರಗೋಡು ಇದರ ಸಹಕಾರದೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಬೆಳ್ತಂಗಡಿ ಇದರ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ  ಶ್ರೀ ಶಾರದಾಂಬ ಸಭಾ ಭವನ, ಶಾರದಾ ನಗರ ಅಣಂಗೂರಿನಲ್ಲಿ ಪ್ರಾರಂಭಗೊಂಡ 1600ನೇ ಮಧ್ಯವರ್ಜನ ಶಿಬಿರವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
           ಜಿಲ್ಲಾ ಜನಜಾಗೃತಿ ವೇದಿಕೆ ಕಾಸರಗೋಡು ಇದರ ಅಧ್ಯಕ್ಷರಾದ ಅಶ್ವಥ್ ಪೂಜಾರಿ ಲಾಲ್ಬಾಗ್  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.   
            ಪ್ರಾಸ್ತಾವಿಕವಾಗಿ ಮಾತನಾಡಿದ ಕರಾವಳಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್ ಮಾತನಾಡಿ ಕಾಸರಗೋಡಿನಲ್ಲಿ 17ನೇ  ಮದ್ಯವರ್ಜನ ಶಿಬಿರ ಇಂದು ಪ್ರಾರಂಭಗೊಂಡಿದೆ. ಕಳೆದ 16 ಶಿಬಿರಗಳ ಫಲಾನುಭವಿಗಳ ಸಂಖ್ಯೆ ಉಳಿದೆಲ್ಲ ಕಡೆಗಳಿಗಿಂತಲೂ ಇಲ್ಲೇ ಹೆಚ್ಚು. ಮಾತ್ರವಲ್ಲದೆ ಅವರೆಲ್ಲರೂ ನವಜೀವನ ಸಮಿತಿಯ ಸದಸ್ಯರಾಗಿ ಸಮಾಜದ ಕೊಳೆಯನ್ನು ನೀಗಿ ಶುದ್ಧ ಮಾಡುವ ಕಾರ್ಯ ದಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು.
         ವಿಶೇಷ ಅತಿಥಿಯಾಗಿ ಭಾಗವಹಿಸಿದ  ಕಾಸರಗೋಡು ಠಾಣಾ ಸರ್ಕಲ್ ಇನ್ಸ್ಪೆಕ್ಟರ್ ಅಜಿತ್ ಕುಮಾರ್. ಪಿ ಮಾತನಾಡಿ ಕೇರಳದಲ್ಲಿ ಇಂದು ಮಾದಕ ವಸ್ತುಗಳ ಹೊಳೆಯೇ ಹರಿಯುತಿದೆ. ವಿದ್ಯಾರ್ಥಿಗಳು ಹಾಗೂ ಯುವಜನತೆ ಈ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದೆ. ಕೇರಳ ಸರಕಾರ ಅಮಲು ಪದಾರ್ಥಗಳ ಸೇವನೆಯಿಂದ ಜನರನ್ನು ಹೊರತರಲು ಯೋಜನೆ ರೂಪಿಸುವ ಮೊದಲೇ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸಿ ಸಾವಿರಾರು ಮಂದಿಗೆ ನವಜೀವನ ನೀಡಿರುವುದು ಮಾದರಿಯಾಗಿದೆ ಎಂದರು.
      ಜನಜಾಗೃತಿ ವೇದಿಕೆ ವಲಯಾಧ್ಯಕ್ಷರಾದ  ಸೂರಜ್.ಕೆ, ಶ್ರೀ ಶಾರದಾಂಬ ಭಜನಾ ಮಂದಿರದ ಅಧ್ಯಕ್ಷರಾದ ಕಮಲಾಕ್ಷ, ಧಾರ್ಮಿಕ ಮುಂದಾಳು ಕೆ.ಎನ್.ವೆಂಕಟ್ರಮಣ ಹೊಳ್ಳ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಅಖಿಲೇಶ್ ನಗುಮುಗಂ, 1600ನೇ ಮಧ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೆ.ಆರ್.ಅಶೋಕ್ ಕುಮಾರ್  ಉಪಸ್ಥಿತರಿದ್ದರು. ಮುಖೇಶ್ ಯೋಜನಾಧಿಕಾರಿ ಕಾಸರಗೋಡು,ಶಿಬಿರಾಧಿಕಾರಿ ದೇವಿ ಪ್ರಸಾದ್ ಸುವರ್ಣ, ಪ್ರಸಿಲ್ಲಾಪುಷ್ಪಲತ ಮೇಲ್ವಿಚಾರಕರು ಕಾಸರಗೋಡು ವಲಯ, ರವೀಂದ್ರ ಅಣಂಗೂರು,    ಮೊದಲಾದವರು ಉಪಸ್ಥಿತರಿದ್ದರು.ಕುತ್ಯಾಳ ನವಜೀವನ ಸಮಿತಿಯ ಅಧ್ಯಕ್ಷರಾದ ಉದಯ ಕುಮಾರ್ ನಾಯಕ್ ಕಾರ್ಯಕ್ರಮದಲ್ಲಿ ಸ್ವಾಗತಿಸಿ ನವಜೀವನ ಸಮಿತಿ ಸದಸ್ಯ ಬಿಜು ವಂದಿಸಿದರು ಶಂಕರ ಕಾರ್ಯಕ್ರಮ ನಿರೂಪಿಸಿದರು.
     

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries