HEALTH TIPS

ನಿರ್ಮಾಪಕ ಸಾಜಿದ್ ಖಾನ್ ರನ್ನು ‘ಬಿಗ್ ಬಾಸ್’ನಿಂದ ಹೊರಹಾಕಿ: ಕೇಂದ್ರ ಸಚಿವರಿಗೆ ಡಿಸಿಡಬ್ಲ್ಯು ಪತ್ರ

 

                 ನವದೆಹಲಿ: ಸಿನಿಮಾ ನಿರ್ಮಾಪಕ ಸಾಜಿದ್ ಖಾನ್ ಅವರನ್ನು ಬಿಗ್ ಬಾಸ್ ನಿಂದ ಹೊರಹಾಕುವಂತೆ ದೆಹಲಿ ಮಹಿಳಾ ಆಯೋಗ(ಡಿಸಿಡಬ್ಲ್ಯು)ದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೆ ಪತ್ರ ಬರೆದಿದ್ದಾರೆ.

                 #MeToo ಆಂದೋಲನದ ಸಂದರ್ಭದಲ್ಲಿ ಹಲವಾರು ಮಹಿಳೆಯರು ಚಿತ್ರ ನಿರ್ಮಾಪಕ ಸಾಜಿದ್ ಖಾನ್ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. ಹಾಗಾಗಿ ಅವರನ್ನು ರಿಯಾಲಿಟಿ ಶೋ ಬಿಗ್ ಬಾಸ್‌ನಿಂದ ಹೊರಹಾಕಬೇಕೆಂದು ಮಲಿವಾಲ್ ಒತ್ತಾಯಿಸಿದ್ದಾರೆ.

                 ಬಿಗ್ ಬಾಸ್ 16ನೇ ಸೀಸನ್ ನ ಮೊದಲ ಸಂಚಿಕೆ ಅಕ್ಟೋಬರ್ 1 ರಂದು ಪ್ರಸಾರವಾಯಿತು. ಈ ಕಾರ್ಯಕ್ರಮವನ್ನು ನಟ ಸಲ್ಮಾನ್ ಖಾನ್ ಹೋಸ್ಟ್ ಮಾಡಿದ್ದಾರೆ.

                  “#MeToo ಆಂದೋಲನದ ಸಂದರ್ಭದಲ್ಲಿ ಹತ್ತು ಮಹಿಳೆಯರು ಸಾಜಿದ್ ಖಾನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಎಲ್ಲಾ ದೂರುಗಳು ಸಾಜಿದ್ ಅವರ ಅಸಹ್ಯಕರ ಮನಸ್ಥಿತಿಯನ್ನು ತೋರಿಸುತ್ತವೆ. ಈಗ ಈ ವ್ಯಕ್ತಿಗೆ ಬಿಗ್ ಬಾಸ್‌ನಲ್ಲಿ ಸ್ಥಾನ ನೀಡಲಾಗಿದೆ, ಅದು ತಪ್ಪು. ನಾನು ಅನುರಾಗ್ ಠಾಕೂರ್ ಅವರಿ ಗೆ ಪತ್ರ ಬರೆದಿದ್ದೇನೆ. ಈ ಕಾರ್ಯಕ್ರಮದಿಂದ ಸಾಜಿದ್ ಖಾನ್ ಅವರನ್ನು ಹೊರಹಾಕಬೇಕು ಎಂದು ಸ್ವಾತಿ ಮಲಿವಾಲ್ ಸೋಮವಾರ ಟ್ವೀಟ್ ಮಾಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries