HEALTH TIPS

ಸಂಜೆ 6 ರಿಂದ 10 ಗಂಟೆಯವರೆಗೆ ವಿದ್ಯುತ್ ಬಳಸಿದರೆ ಶೇ.20 ಹೆಚ್ಚುವರಿ ಶುಲ್ಕ; ಕೆ.ಎಸ್.ಇ.ಬಿಯಿಂದ ಚಿಂತನೆ


         ತಿರುವನಂತಪುರ: ದಿನದ ವಿವಿಧ ಸಮಯಗಳಲ್ಲಿ ವಿದ್ಯುತ್ ಬಳಕೆಗೆ ವಿವಿಧ ದರಗಳನ್ನು ವಿಧಿಸುವ ವಿಧಾನವನ್ನು ಹೆಚ್ಚಿನ ಗೃಹಬಳಕೆದಾರರಿಗೆ ಅನ್ವಯಿಸಲು ಕೆಎಸ್‍ಇಬಿ ಯೋಜಿಸುತ್ತಿದೆ. ಇದನ್ನು ಜಾರಿಗೆ ತಂದರೆ, ಸಂಜೆ 6 ರಿಂದ ರಾತ್ರಿ 10 ರವರೆಗಿನ ವಿದ್ಯುತ್ ಬಳಕೆಗೆ ಶೇಕಡಾ 20 ರಷ್ಟು ಹೆಚ್ಚು ಶುಲ್ಕ ವಿಧಿಸಲಾಗುತ್ತದೆ.
         ಪ್ರಸ್ತುತ ಈ ವಿಧಾನವನ್ನು ತಿಂಗಳಿಗೆ 500 ಯೂನಿಟ್‍ಗಳಿಗಿಂತ ಹೆಚ್ಚು ವಿದ್ಯುತ್ ಬಳಸುವ ಮನೆಗಳು ಮತ್ತು ಕೈಗಾರಿಕೆಗಳಿಗೆ ಮಾತ್ರ ಅಳವಡಿಸಲಾಗಿದೆ. ಆದರೆ ಇದೇ ವಿಧಾನವನ್ನು ನಿರ್ದಿಷ್ಟ ಮಿತಿಯವರೆಗೆ ಬಳಸುವ 500 ಯೂನಿಟ್‍ಗಳೊಳಗಿನ ಮನೆಗಳಿಗೆ ಅನ್ವಯಿಸುವ ಆಲೋಚನೆ ಇದೆ. ಮುಂದಿನ ವರ್ಷಕ್ಕೆ ದರ ಪರಿಷ್ಕರಣೆಗಾಗಿ ನಿಯಂತ್ರಣ ಆಯೋಗಕ್ಕೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಈ ಪ್ರಸ್ತಾವನೆಯನ್ನು ಸೇರಿಸಲು ಕೆಎಸ್‍ಇಬಿಯಲ್ಲಿ ಚರ್ಚೆ ನಡೆಯುತ್ತಿದೆ. ಆಯೋಗವು ಅನುಮೋದನೆ ನೀಡಿದ ನಂತರ ಹೊಸ ದರ ಜಾರಿಗೆ ಬರಲಿದೆ.
        ಈ ವಿಧಾನವನ್ನು ಟೈಮ್ ಆಫ್ ದಿ ಡೇ ಟ್ಯಾರಿಫ್ (ಟಿಒಡಿ ಟ್ಯಾರಿಫ್) ಎಂದು ಕರೆಯಲಾಗುತ್ತದೆ. ಈ ರೀತಿಯಲ್ಲಿ ದಿನವನ್ನು ಸಾಮಾನ್ಯ, ಪೀಕ್ ಮತ್ತು ಆಫ್ ಪೀಕ್ ಎಂದು ಮೂರು ಸಮಯ ವಲಯಗಳಾಗಿ ವಿಂಗಡಿಸುವ ಮೂಲಕ ದರವನ್ನು ಲೆಕ್ಕಹಾಕಲಾಗುತ್ತದೆ. ನಿಯಂತ್ರಣ ಆಯೋಗವು ಅನುಮೋದಿಸಿದ ದರವು ಈ ಕೆಳಗಿನಂತಿರುತ್ತದೆ.
        ಈ ದರವನ್ನು ಲೆಕ್ಕಾಚಾರ ಮಾಡಲು ಪ್ರತ್ಯೇಕ ಮೀಟರ್ ಅಳವಡಿಸುವ ಅಗತ್ಯವಿಲ್ಲ. ಮನೆಗಳಲ್ಲಿ ಈಗಿರುವ ಹೆಚ್ಚಿನ ಮೀಟರ್‍ಗಳು ಈ ಸೌಲಭ್ಯವನ್ನು ಹೊಂದಿವೆ. ರಾತ್ರಿ 10ರ  ಬಳಿಕದ ಪದ್ಧತಿಯ ಬದಲಾಗಿ ಪೀಕ್ ಟೈಮ್ ಅನ್ನು ಸಂಜೆ 6 ರಿಂದ 12 ಗಂಟೆಗೆ ಬದಲಾಯಿಸುವಂತೆ ಮಂಡಳಿಯು ಆಯೋಗಕ್ಕೆ ಈ ಹಿಂದೆ ಮನವಿ ಮಾಡಿತ್ತು, ಆದರೆ ಆಯೋಗ ಅದಕ್ಕೆ ಅವಕಾಶ ನೀಡಲಿಲ್ಲ.
         ರಾಜ್ಯದಲ್ಲಿ ಈಗಿರುವ 1.3 ಕೋಟಿ ಗ್ರಾಹಕರ ಪೈಕಿ 98 ಲಕ್ಷ ಮಂದಿ ಗೃಹಬಳಕೆದಾರರಾಗಿದ್ದಾರೆ. ಬಲ್ಬ್, ಫ್ಯಾನ್ ಗಳ ಸಂಖ್ಯೆ ಕಡಿಮೆ ಮಾಡಬೇಕು ಹಾಗೂ ಹೆಚ್ಚು ವಿದ್ಯುತ್ ಅಗತ್ಯವಿರುವ ಐರನ್, ವಾಷಿಂಗ್ ಮೆಷಿನ್ ಇತ್ಯಾದಿಗಳ ಬಳಕೆಯನ್ನು ರಾತ್ರಿ 10 ಗಂಟೆಯ ನಂತರ ಮಾಡಿ ಅಧಿಕ ಬಿಲ್ ಬರದಂತೆ ನೋಡಿಕೊಳ್ಳಬೇಕು. ಇದು ಯಾವಾಗಲೂ ಎಲ್ಲರಿಗೂ ಪ್ರಾಯೋಗಿಕವಾಗಿಲ್ಲದಿರಬಹುದು. ಹಾಗಾಗಿ ಬಿಲ್ ಏರಲಿದೆ. ಆದರೆ, ದರ ಏರಿಕೆ ಮಾಡದೇ ಜನರಿಗೆ ದಂಡ ವಿಧಿಸದ ರೀತಿಯಲ್ಲಿ ಜಾರಿಗೆ ತರಲು ಯೋಜಿಸಲಾಗಿದೆ ಎಂದು ಸಚಿವ ಕೆ. ಕೃಷ್ಣನಕುಟ್ಟಿ ವಿವರಿಸಿರುವರು.
           ಈಗ ತಿಂಗಳಿಗೆ 500 ಯೂನಿಟ್‍ಗಿಂತ ಹೆಚ್ಚು ವಿದ್ಯುತ್ ಬಳಸುವ 15,000 ಜನರಿಗೆ ಮಾತ್ರ ಅನ್ವಯಿಸುತ್ತಿದೆ. 98 ಲಕ್ಷ ಗ್ರಾಹಕರಲ್ಲಿ ಇನ್ನಷ್ಟು ಗ್ರಾಹಕರನ್ನು ಈವ್ಯಾಪ್ತಿಗೆ ತರಲು ಲಕ್ಷ್ಯವಿರಿಸಲಾಗಿದೆ. ಆದಾಗ್ಯೂ, ಟಿಒಡಿ ದರಪಟ್ಟಿ ಜಾರಿಯಾದರೆ ರಾತ್ರಿಯ ವಿದ್ಯುತ್ ಬಳಕೆಯನ್ನು ನಿಯಂತ್ರಿಸಬಹುದು ಮತ್ತು ಪ್ರಸ್ತುತ ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸಲು ವ್ಯಯಿಸುತ್ತಿರುವ ಅಪಾರ ಪ್ರಮಾಣದ ಹಣವನ್ನು ಕಡಿಮೆ ಮಾಡಬಹುದು ಎಂದು ಮಂಡಳಿಯು ಆಶಯ ವ್ಯಕ್ತಪಡಿಸಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries