HEALTH TIPS

ಇಂದಿನಿಂದ ಬೇಕಲ ಕೋಟೆಯಲ್ಲಿ ವಿಶ್ವ ಪಾರಂಪರಿಕ ಸಪ್ತಾಹ

 


         ಕಾಸರಗೋಡು: ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ, ಕಾಸರಗೋಡು ಜಿಲ್ಲಾ ಪ್ರವಾಸೋದ್ಯಮ ಉತ್ತೇಜನಾ ಮಂಡಳಿ ಮತ್ತು ಬಿಆರ್‍ಡಿಸಿ ಜಂಟಿಯಾಗಿ ನ. 19ರಿಂದ 25ರ ವರೆಗೆ ವಿಶ್ವ ಪರಂಪರೆಯ ಸಪ್ತಾಹವನ್ನು ಬೇಕಲ ಕೋಟೆಯಲ್ಲಿ ಆಚರಿಸಲಿದೆ.
         ಸಾರ್ವಜನಿಕರು ಮತ್ತು ಯುವಕರ ಅನುಕೂಲಕ್ಕಾಗಿ ಈ ವರ್ಷ ವಿವಿಧ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 20 ರಿಂದ 24  ಚಿತ್ರಕಲೆ , ರಸಪ್ರಶ್ನೆ, ಪ್ರಬಂಧ ಬರವಣಿಗೆಯಂತಹ ವಿವಿಧ ಪರಂಪರೆಯ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. 24ರಂದು ಬೇಕಲ ಕೋಟೆ ಹಾಗೂ ಸುತ್ತಮುತ್ತ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುವ ವಿಶೇಷ ಸ್ವಚ್ಛತಾ ಅಭಿಯಾನ ನಡೆಯಲಿದೆ. ಪ್ರತಿದಿನ ಸಂಜೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ವಿಶ್ವ ಪರಂಪರೆಯ ವಾರಾಚರಣೆ ಸಮಾರೋಪ ಸಮಾರಂಭ ನ.25ರಂದು ಬೇಕಲ ಕೋಟೆಯಲ್ಲಿ ನಡೆಯಲಿದೆ. ವಿಜೇತರಿಗೆ ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ನೀಡಲಾಗುವುದು. ನಂತರ ಸಂಗೀತ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. 19 ರಂದು ಸಾರ್ವಜನಿಕರಿಗೆ ಕೋಟೆಗೆ ಪ್ರವೇಶ ಉಚಿತವಾಗಿರುತ್ತದೆ.
           ಕೇಂದ್ರ ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿ ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ  ಪ್ರತಿ ವರ್ಷ ನವೆಂಬರ್ 19 ರಿಂದ 25 ರವರೆಗೆ ವಿಶ್ವ ಪರಂಪರೆ ಸಪ್ತಾಹ ಆಚರಿಸುತ್ತಿದೆ.  



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries