HEALTH TIPS

ಪಿಎಫ್‍ಐಗೆ ಕೇರಳದಲ್ಲಿ ತನ್ನದೇ ಆದ ಗುಪ್ತ ವಿಭಾಗ, ಇತರ ಸಮುದಾಯದ ಯಾದಿ ತಯಾರಿ: ಎನ್‍ಐಎ ವರದಿ

 

       ತಿರುವನಂತಪುರ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿ.ಎಫ್.ಐ)ಕೇರಳದಲ್ಲಿ ತನ್ನದೇ ಅದ ಗುಪ್ತ ವಿಭಾಗವನ್ನು ಹೊಂದಿದ್ದು, ಈ ಬಗ್ಗೆ ಸಮಗ್ರ ತನಿಖೆಯ ಅಗತ್ಯವಿದೆ ಎಂದು ರಾಷ್ಟ್ರೀಯ ತನಿಖಾ ಏಜನ್ಸಿ(ಎನ್.ಐ.ಎ)ಎರ್ನಾಕುಳಂನ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.
                 ಮುಸ್ಲಿಮೇತರ ಸಮುದಾಯದ ಮಾಹಿತಿ ಸಂಗ್ರಹಿಸಿ, ಅವರಲ್ಲಿ ಪ್ರಮುಖರನ್ನು ಗುರಿಯಾಗಿಸಿ, ಇವರ ಯಾದಿ ತಯಾರಿಸುವ ಪ್ರಕ್ರಿಯೆಗೆ ಪಿಎಫ್‍ಐ ಗುಪ್ತ ವಿಭಾಗ ಈಗಾಗಲೇ ಚಾಲನೆ ನೀಡಿದೆ. ಅಲ್ಲದೆ ದೇಶದ್ರೋಹಿ ಚಟುವಟಿಕೆಗಳಿಗೆ ಸಂಬಂಧಿಸಿದ ತರಬೇತಿಯನ್ನೂ ಈ ಸಂಘಟನೆ ನೀಡುತ್ತಾ ಬಂದಿರುವುದಗಿ ವರದಿಯಲ್ಲಿ ತಿಳಿಸಲಾಗಿದೆ.
            ಪಿಎಫೈ ನಿಷೇಧದ ನಂತರ ದೇಶವ್ಯಪಿಯಾಗಿ ಬಂಧಿತರಗಿರುವವರ ನ್ಯಯಾಂಗ ಬಂಧನದ ಅವಧಿಯನ್ನು 180ದಿವಸಗಳ ತನಕ ಮುಂದುವರಿಸುವಂತೆ ಎನ್‍ಐಎ ನ್ಯಾಯಾಲಯಕ್ಕೆ ಆಗ್ರಹಿಸಿದೆ.  ಪಿಎಫ್‍ಐ ಗುಪ್ತಚರ ವಿಭಾಗ ತರಬೇತಿ ನೀಡಿದವರ ಹಾಗೂ ಇದರ ಹಿಂದಿನ ಉದ್ದೇಶದ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು.ಜತೆಗೆ ಪಿಎಫ್‍ಐ ನೇತೃತ್ವದಲ್ಲಿ  ಇತ್ತೀಚೆಗೆ ನಡೆದಿರುವ ಕೊಲೆಕೃತ್ಯಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕಾಗಿದೆ. ತಮ್ಮ ಇದಿರಾಳಿಗಳನ್ನು ಅತ್ಯಂತ ಕ್ರೂರವಾಗಿ ಕೊಲೆ ನಡೆಸುವುದು ಹಾಗೂ ಈ ಮೂಲಕ ಸಮಾಜದಲ್ಲಿ ಭೀತಿಯ ವಾತಾವರಣ ಸೃಷ್ಟಿಸುವುದು ಸಂಘಟನೆ ಗುರಿಯಾಗಿದೆ. ಸಂಘಟನೆಯ ಶಂಕಾಸ್ಪದ ರೀತಿಯ ಆರ್ಥಿಕ ವ್ಯವಹಾರಗಳನ್ನೂ ಪತ್ತೆಹಚ್ಚಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.





 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries