HEALTH TIPS

ಅರ್ಪಣಾ ಭಾವ ಭಕ್ತಿಯ ರೂಪದಲ್ಲಿ ಪ್ರಕಟಗೊಂಡಿದೆ - ಎಡನೀರು ಶ್ರೀ: ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ಭೋಜನಶಾಲೆ `ಶಬರಿ' ಲೋಕಾರ್ಪಣೆ



         ಬದಿಯಡ್ಕ: ಧಾರ್ಮಿಕ ಕ್ಷೇತ್ರಗಳಿಗೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ವಿವಿಧ ಅಭಿವೃದ್ಧಿ ಕಾರ್ಯಗಳು ನಿರಂತರ ನಡೆಯುವುದು ಸಹಜ. ದೇವಾಲಯದ ಪ್ರಾಕಾರದಲ್ಲಿ ಭಜನಾಮಂದಿರವು ಇಲ್ಲಿ ಕಂಗೊಳಿಸುತ್ತಾ ಇದೆ. ಕಾರ್ಯಕರ್ತರ ಭಕ್ತಿ ಮತ್ತು ಶ್ರದ್ಧೆಯ ಫಲವಾಗಿ ಭೋಜನ ಶಾಲೆ ರೂಪುಗೊಂಡಿದೆ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
           ನೀರ್ಚಾಲು ಸಮೀಪದ ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ನೂತನವಾಗಿ ನಿರ್ಮಿಸಿದ ಶಬರಿ ಭೋಜನ ಶಾಲೆಯನ್ನು ಲೋಕಾರ್ಪಣೆಗೈದು, 28ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನವನ್ನು ನೀಡಿದರು.    
      ಭಕ್ತರಿಗೆ ಅನ್ನಪ್ರಸಾದವನ್ನು ನೀಡುವುದು ಉತ್ತಮವಾದ ಕಾರ್ಯವಾಗಿದೆ. ದೇವರು ಏನನ್ನೂ ಬಯಸುವುದಿಲ್ಲ. ಅರ್ಪಣಾ ಭಾವ ಮೂಡಿಬಂದಾಗ ಆತ ನಿಜ ಭಕ್ತನಾಗುತ್ತಾನೆ ಎಂದರು.



          ಶ್ರೀ ಅಯ್ಯಪ್ಪ ಸೇವಾ ಸಂಘದ ಅಧ್ಯಕ್ಷ ವೆಂಕಪ್ಪ ನಾಯ್ಕ ಮಾನ್ಯ ಅಧ್ಯಕ್ಷತೆ ವಹಿಸಿದ್ದರು. ವೇದಮೂರ್ತಿ ನಾರಾಯಣ ಆಸ್ರ ಉಳಿಯ, ಡಾ. ಜನಾರ್ದನ ನಾಯ್ಕ ಸಿ.ಎಚ್. ಕಾಸರಗೋಡು, ವೇದಮೂರ್ತಿ ನವೀನ್ ಭಟ್ ಕುಂಜರಿಕ್ಕಾನ, ಕಾಸರಗೋಡು ಬ್ಲಾಕ್ ಪಂಚಾಯಿತಿ ಸದಸ್ಯೆ ವಿದುಷಿಃ ಅಶ್ವಿನಿ ಭಟ್ ಮೊಳೆಯಾರು, ಬದಿಯಡ್ಕ ಗ್ರಾಮಪಂಚಾಯಿತಿ ಜನಪ್ರತಿನಿಧಿ ಕೆ.ಶ್ಯಾಮಪ್ರಸಾದ್ ಮಾನ್ಯ, ಮಂದಿರದ ಕುಂಞÂಕಣ್ಣ ಗುರುಸ್ವಾಮಿ, ನಿವೃತ್ತ ಅಧ್ಯಾಪಕ ಸಿ.ಎಚ್. ಗೋಪಾಲ ಭಟ್ ಚುಕ್ಕಿನಡ್ಕ, ವಾಸ್ತುಶಿಲ್ಪಿ ಹರಿಶ್ಚಂದ್ರ ನೆಟ್ಟಣಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು. ಇದೇ ಸಂದಭರ್Àದಲ್ಲಿ ಮಾನ್ಯವಿಶನ್ ಲಾಂಛನವನ್ನು ಶ್ರೀಗಳು ಬಿಡುಗಡೆಗೊಳಿಸಿದರು. ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕ್ಕುಂಜ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಗುರುಸ್ವಾಮಿ ಮÀಧುುಸೂದನ ಚುಕ್ಕಿನಡ್ಕ ವಂದಿಸಿದರು. ಜಯನ್ ಅದ್ರುಕುಳಿ ರೂಪಿಸಿದರು.


            ಬೆಳಗ್ಗೆ ದೀಪ ಪ್ರತಿಷ್ಠೆ, ದ್ವಾದಶ ನಾಳಿಕೇರ ಮಹಾಗಣಪತಿ ಹೋಮ ನಡೆಯಿತು. ಮೆರವಣಿಗೆಯೊಂದಿಗೆ ಎಡನೀರು ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ನಂತರ ಪಾದಪೂಜೆ ನಡೆಯಿತು. ವಿವಿಧ ಮಂದಿರಗಳ ಗುರುಸ್ವಾಮಿಗಳು, ಅಯ್ಯಪ್ಪ ವ್ರತಧಾರಿಗಳು, ಭಕ್ತಾದಿಗಳು ಪಾಲ್ಗೊಂಡಿದ್ದರು. ಮಧ್ಯಾಹ್ನ ಅನ್ನದಾನ ನಡೆಯಿತು. ಶನಿವಾರ ಬೆಳಗ್ಗೆ ಶರಣಂ ವಿಳಿ, ಗಣಪತಿ ಹೋಮ, ವಿವಿಧ ಭಜನಾ ಸಂಘಗಳಿಂದ ಭಜನೆ, 10 ಕ್ಕೆ  ಚುಕ್ಕಿನಡ್ಕ ತತ್ವಮಸಿ ಕುಣಿತ ಭಜನ ಸಂಘದ ರಂಗಪ್ರವೇಶ, ಮಧ್ಯಾಹ್ನ ಮಹಾಪೂಜೆ, ಅನ್ನದಾನ, ಸಂಜೆ ತಾಯಂಬಕ, ಭಜನೆ ನಡೆಯಲಿದೆ. ರಾತ್ರಿ ಅನ್ನದಾನದ ನಂತರ ಊರಪರವೂರ ಸುಪ್ರಸಿದ್ದ ಕಲಾವಿದರಿಂದ ಗೋಪಾಲ ಭಟ್ ಪಟ್ಟಾಜೆ ಸಂಯೋಜನೆಯಲ್ಲಿ ಮೇನಿಧಿ  ನಿರ್ಮಾಣ ಮಹಿಷ ಮರ್ಧಿನಿ ಯಕ್ಷಗಾನ ಬಯಲಾಟ ನಡೆಯಿತು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries