HEALTH TIPS

1947ರಲ್ಲಿ ಭಾರತ-ಪಾಕ್​​​ ನಡುವಿನ ರೈಲು ಸಂಚಾರದ ಟಿಕೆಟ್ ದರ ಎಷ್ಟಿತ್ತು ಗೊತ್ತಾ? ಹಳೇ ಟಿಕೆಟ್​ ಫೋಟೋ ವೈರಲ್​ ​

 

              ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ರೈಲು ಪ್ರಯಾಣಕ್ಕೆ ಸಂಬಂಧಿಸಿದ ರೈಲು ಟಿಕೆಟ್​ನ ಫೋಟೋವೊಂದು​ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ, ಆ ಟಿಕೆಟ್​ ಪ್ರಸ್ತುತ ಸಮಯದಲ್ಲ, ಅದು ಭಾರತಕ್ಕೆ ಸ್ವಾತಂತ್ರ ಬಂದ ಕಾಲದ್ದು.

ಅದರಲ್ಲಿರುವ ಟಿಕೆಟ್​ನ ಪ್ರಯಾಣ ದರ ನೋಡಿ ಎಲ್ಲರು ಚಕಿತರಾಗಿದ್ದಾರೆ.

                  ಪ್ರಸ್ತುತ ಬೆಲೆ ಏರಿಕೆಯ ಬಗ್ಗೆ ದೇಶದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಪೆಟ್ರೋಲ್​-ಡೀಸೆಲ್​ ದರ ಏರಿಕೆಯಿಂದ ಅಗತ್ಯ ವಸ್ತುಗಳು ಮಾತ್ರವಲ್ಲದೆ, ಸಾರಿಗೆ ಸೌಲಭ್ಯ ದರವೂ ಏರಿಕೆಯಾಗಿರುವುದರಿಂದ ಜನ ಸಾಮಾನ್ಯರಿಗೆ ಹೊರೆಯಾಗಿದೆ. ಈ ಬಗ್ಗೆ ಪರ-ವಿರೋಧ ಚರ್ಚೆಯಾಗುತ್ತಿರುವುದರ ನಡುವೆಯೇ 1947ನೇ ಇಸವಿಗೆ ಸಂಬಂಧಿಸಿದ ಭಾರತ-ಪಾಕಿಸ್ತಾನ ನಡುವಿನ ರೈಲು ಪ್ರಯಾಣಕ್ಕೆ ವಿಧಿಸಿದ ಟಿಕೆಟ್​ನ ಫೋಟೋ ಜಾಲತಾಣದಲ್ಲಿ ಹರಿದಾಡುತ್ತಿದೆ.

                       'ಪಾಕಿಸ್ತಾನ ರೈಲು ಲವರ್ಸ್'​ ಹೆಸರಿನ ಫೇಸ್​ಬುಕ್​ ಪೇಜ್​​ನಲ್ಲಿ ಟಿಕೆಟ್​ ಅನ್ನು ಶೇರ್​ ಮಾಡಲಾಗಿದೆ. ರೈಲು ಟಿಕೆಟ್​ ಅನ್ನು 17-09-1947ರ ಸ್ವಾತಂತ್ರ್ಯದ ಬಳಿಕ ಪಾಕಿಸ್ತಾನದ ರಾವಲ್ಪಿಂಡಿಯಿಂದ ಅಮೃತಸರಕ್ಕೆ ಪ್ರಯಾಣಿಸುತ್ತಿದ್ದ 9 ಮಂದಿಗೆ ವಿತರಿಸಲಾಗಿದೆ. 9 ಜನರಿಗೆ 36 ರೂಪಾಯಿ ಮತ್ತು 9 ಅಣೆಗಳನ್ನು ಚಾರ್ಜ್​ ಮಾಡಲಾಗಿದೆ. ಬಹುಶಃ ಕುಟುಂಬವೊಂದು ಭಾರತಕ್ಕೆ ವಲಸೆ ಹೋಗುತ್ತಿತ್ತು ಎಂದು ಬರೆಯಲಾಗಿದೆ.

                  9 ಜನರಿಗೆ 36 ರೂಪಾಯಿ ಅಂದರೆ ಒಬ್ಬರಿಗೆ 4 ರೂ. ಆಗುತ್ತಿತ್ತು. ಟಿಕೆಟ್​ ಫೋಟೋ ನೋಡಿದ ಕೆಲವರು ಕೇವಲ 4 ರೂ.ಗೆ ಪಾಕಿಸ್ತಾನದಿಂದ ಭಾರತಕ್ಕೆ ಬರಬಹುದಿತ್ತಾ ಎಂದು ಹುಬ್ಬೇರಿಸಿದ್ದಾರೆ. ಇನ್ನು ಕೆಲವರು, ಆ ಕಾಲಕ್ಕೆ 4 ರೂ. ಮೌಲ್ಯ ಕಡಿಮೆಯೇನಲ್ಲ. ಅದು ಕೂಡ ದುಬಾರಿಯೇ ಎಂದಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries