HEALTH TIPS

ಪಾನಮತ್ತ ಯುವತಿ ಮುಂಬೈನಲ್ಲಿ ಕುಳಿತು ಜೊಮ್ಯಾಟೊದಲ್ಲಿ ಬೆಂಗಳೂರಿನ 2,500 ರೂ. ಮೌಲ್ಯದ ಬಿರಿಯಾನಿ ಆರ್ಡರ್​ ಮಾಡಿದ್ಲು!

 

            ಬೆಂಗಳೂರು: ಯುವತಿಯೊಬ್ಬಳು ಪಾನಮತ್ತಳಾಗಿ ಮುಂಬೈನಲ್ಲಿ ಕುಳಿತು ಬೆಂಗಳೂರಿನ ಬಿರಿಯಾನಿ ಆರ್ಡರ್ ಮಾಡಿದ್ಲಾ?
                 - ಹೀಗೆನ್ನಬಹುದಾದ ಸಂಗತಿಯೊಂದು ಟ್ವಿಟರ್​ನಲ್ಲಿ ಚರ್ಚೆಯಾಗಿ ಗಮನ ಸೆಳೆದಿದ್ದಲ್ಲದೆ, ಅದಕ್ಕೆ ಜೊಮ್ಯಾಟೊ ಕೂಡ ಪ್ರತಿಕ್ರಿಯೆ ನೀಡಿದೆ.

              @_subiii_ ಎಂಬ ಹ್ಯಾಂಡಲ್ ಹೊಂದಿರುವ ಯುವತಿ ಜೊಮ್ಯಾಟೊದಲ್ಲಿ ತಾನು ಬಿರಿಯಾನಿ ಬುಕ್ ಮಾಡಿದ್ದ ಬಗ್ಗೆ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಳು. ಆರ್ಡರ್​ನ ಸ್ಕ್ರೀನ್​ಶಾಟ್ ಹಾಕಿದ್ದ ಆಕೆ, 'ನಾನು ಕುಡಿದು 2,500 ರೂ. ಮೌಲ್ಯದ ಬಿರಿಯಾನಿ ಬೆಂಗಳೂರಿನಿಂದ ಆರ್ಡರ್ ಮಾಡಿದ್ನಾ?' ಎಂಬುದಾಗಿ ಕೇಳಿಕೊಂಡಿದ್ದಳು.

              ಆಕೆಯ ಈ ಟ್ವೀಟ್​ಗೆ ಭಾರಿ ಪ್ರತಿಕ್ರಿಯೆ ಬಂದಿದೆ ಎನ್ನಲಾಗಿದ್ದು, ಜೊಮ್ಯಾಟೊದ ಅಧಿಕೃತ ಹ್ಯಾಂಡಲ್​ಗಳಲ್ಲಿ ಒಂದಾದ ಜೊಮ್ಯಾಟೊ ಕೇರ್​ ಕೂಡ ಅದಕ್ಕೆ ಪ್ರತಿಕ್ರಿಯಿಸಿದೆ. ಆರ್ಡರ್​ ನಿಮ್ಮಲ್ಲಿಗೆ ಬಂದ ಬಳಿಕ ನಿಮಗೆ ಹ್ಯಾಪಿ ಹ್ಯಾಂಗೋವರ್ ಆಗಿರಲಿದೆ. ನಿಮ್ಮ ಅನುಭವ ಆಮೇಲೆ ಹಂಚಿಕೊಳ್ಳಿ ಎಂಬುದಾಗಿ ಈ ಖಾತೆಯಿಂದ ಪ್ರತಿಕ್ರಿಯೆ ನೀಡಲಾಗಿತ್ತು. ಬಹುಶಃ ಆ ಯುವತಿ ಅದಾಗಲೇ ಹ್ಯಾಂಗೋವರ್​ನಿಂದ ಹೊರಬಂದಿರಬಹುದೇನೋ ಎಂಬಂತೆ ಆಕೆ ಈತ ತನ್ನ ಟ್ವಿಟರ್​ ಖಾತೆ ಡಿಲೀಟ್ ಮಾಡಿದಂತಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries