HEALTH TIPS

ಭಾರತದ 74ನೇ ಗಣರಾಜ್ಯೋತ್ಸವ : ವಿಶೇಷತೆ ಏನು? ಇಲ್ಲಿದೆ ಇಂಟ್ರೆಸ್ಟಿಂಗ್ ಸಂಗತಿಗಳು!

 ಭಾರತದ ಸಂವಿಧಾನ ಅಂಗೀಕೃತಗೊಂಡು  ನಾಳೆಗೆ ಜನವರಿ (26) 74 ವರ್ಷಗಳು. ಭವ್ಯ ಗಣರಾಜ್ಯೋತ್ಸವ ಪರೇಡ್‌, ವಿದೇಶದಿಂದ ಗಣ್ಯರ ಆಗಮನ ರಾಷ್ಟ್ರಪತಿಗಳ ಭಾಷಣ ಮಾತ್ರವಲ್ಲದೆ ಈ ದಿನದ ವಿಶೇಷತೆಯ ಬಗ್ಗೆ ಹತ್ತು ಹಲವಾರು ನೀವು ತಿಳಿದಿರಬೇಕಾದ ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ.

ಜನಗಣಮನ ರಾಷ್ಟ್ರಗೀತೆಯಾದುದು
ಸಂವಿಧಾನ ಸಭೆಯು 1950ರ ಜ.24ರಂದು ರವೀಂದ್ರನಾಥ ಟಾಗೋರ್‌ ವಿರಚಿತ 'ಜನಗಣಮನ ಅಧಿನಾಯಕ ಜಯ ಹೇ' ಪದ್ಯವನ್ನು ನಮ್ಮ ರಾಷ್ಟ್ರಗೀತೆ ಎಂದು ಅಂಗೀಕರಿಸಿತು. ಸಂವಿಧಾನ ಸಭೆಯ ಅಧ್ಯಕ್ಷ ಡಾ.ರಾಜೇಂದ್ರ ಪ್ರಸಾದರು ಇದನ್ನು ಘೋಷಿಸಿದರು. ಇದರ ಜೊತೆಗೇ, ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಬಂಕಿಮಚಂದ್ರ ಚಟರ್ಜಿ ವಿರಚಿತ 'ವಂದೇ ಮಾತರಂ' ಗೀತೆಯನ್ನು 'ರಾಷ್ಟ್ರೀಯ ಹಾಡು' ಎಂದು ಕರೆದು ಅದಕ್ಕೂ 'ಜನಗಣಮನ'ದ ಸಮಾನ ಸ್ಥಾನಮಾನ ನೀಡಲಾಯಿತು.

'ಜನಗಣಮನ'ವನ್ನು ಟಾಗೋರ್‌ ಐದು ಚರಣಗಳಲ್ಲಿ ಬರೆದಿದ್ದರು. 'ಭಾರತ ಭಾಗ್ಯ ವಿಧಾತ'ನನ್ನು ಸ್ತುತಿಸುವ ಗೀತೆಯಿದು. ದೇಶದ ಎಲ್ಲ ವೈವಿಧ್ಯಗಳನ್ನು, ಹಿರಿಮೆಗಳನ್ನು ಇದು ಕೀರ್ತಿಸುತ್ತದೆ. ಇದನ್ನು ಸಾರ್ವಜನಿಕವಾಗಿ ಮೊದಲು ಹಾಡಿದ್ದು ಕಲ್ಕತ್ತಾದಲ್ಲಿ 1911ರ ಡಿಸೆಂಬರ್‌ 27ರಂದು ನಡೆದ ಕಾಂಗ್ರೆಸ್‌ ಅಧಿವೇಶನದಲ್ಲಿ. ಆಗ ಅದು ಒಂದು ದೇಶಭಕ್ತಿ ಗೀತೆಯಾಗಿತ್ತು. ಕೆಲವೇ ತಿಂಗಳಲ್ಲಿ, ಟಾಗೋರ್‌ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ 'ತತ್ವಬೋಧಿನಿ ಪತ್ರಿಕಾ'ದಲ್ಲಿಅದು ಪ್ರಕಟವಾಯಿತು.
 

1947ರಲ್ಲಿ ದೇಶ ಸ್ವತಂತ್ರವಾದಾಗ, ದೇಶಕ್ಕೊಂದು ರಾಷ್ಟ್ರಗೀತೆ ಬೇಕೆಂಬ ಒತ್ತಡ ಹಲವು ಕಡೆಗಳಿಂದ ಬಂತು. ಅದೇ ವರ್ಷ ವಿಶ್ವಸಂಸ್ಥೆಯಲ್ಲಿ ಜನಗಣಮನವನ್ನು ಹಾಡಲಾಯಿತು. ಇದರ ವಿನ್ಯಾಸ, ಲಯ, ಘನತೆಗಳಿಂದ ಅಂತಾರಾಷ್ಟ್ರೀಯ ಪ್ರತಿನಿಧಿಗಳು ಪ್ರಭಾವಿತರಾದರು. ಅಂತಾರಾಷ್ಟ್ರೀಯ ಆರ್ಕೆಸ್ಟ್ರಾಗಳಲ್ಲಿ ಕೂಡ ನುಡಿಸಬಹುದಾದ ಇದರ ಜಾಗತಿಕ ಲಯವಿನ್ಯಾಸವೇ ಇದರ ಪರವಾಗಿ ನಿಂತಿತು ಎನ್ನಬೇಕು.

ವಿಶೇಷ ಅತಿಥಿಗಳು!

ದಿಲ್ಲಿಯ ರಾಜಪಥದಲ್ಲಿ ನಡೆಯುವ ಗಣರಾಜ್ಯ ದಿನದ ಪರೇಡ್‌ ವೀಕ್ಷಿಸಲು ಕೆಲವೊಮ್ಮೆ ಅನ್ಯದೇಶಗಳ ನಾಯಕರನ್ನು ಆಹ್ವಾನಿಸಲಾಗುತ್ತದೆ. ಹೀಗೆ ಹಲವಾರು ದೊಡ್ಡ ನಾಯಕರು ಆಗಮಿಸಿ ಪರೇಡ್‌ ವೀಕ್ಷಿಸಿ ಶ್ಲಾಘಿಸಿದ್ದಾರೆ. ಮೊದಲ ಗಣರಾಜ್ಯ ದಿನದ ಮೆರವಣಿಗೆಗೆ ಹೀಗೆ ಆಗಮಿಸಿದವರು ಆಗಿನ ಇಂಡೋನೇಷ್ಯಾದ ಪ್ರೆಸಿಡೆಂಟ್‌ ಸುಕಾರ್ನೊ. ಅವರು ಸ್ವತಂತ್ರ ಇಂಡೋನೇಷ್ಯಾದ ಪ್ರಥಮ ಅಧ್ಯಕ್ಷ, ಅಲ್ಲಿನ ಸ್ವಾತಂತ್ರ್ಯ ಚಳವಳಿಯ ಮುಖಂಡ, ಭಾರತದ ಮಿತ್ರ, ಭಾರತ ಅಳವಡಿಸಿಕೊಂಡ ಅಲಿಪ್ತ ನೀತಿಯ ಸಹಭಾಗಿ ಆಗಿದ್ದರು.

ಬ್ರಿಟಿಷ್‌ ರಾಜ ದಂಪತಿ ಎರಡು ವರ್ಷ ಪ್ರತ್ಯೇಕವಾಗಿ ಆಗಮಿಸಿದರು. 1958ರಲ್ಲಿ ರಾಜಕುಮಾರ ಫಿಲಿಪ್‌ ಬಂದರೆ, 1961ರಲ್ಲಿ ರಾಣಿ ಎರಡನೇ ಎಲಿಜಬೆತ್‌ ಆಗಮಿಸಿದರು. 1958ರಲ್ಲಿ ಆಗಮಿಸಿದ ಯೆ ಜಿಯಾನ್‌ಯಿಂಗ್‌, ಚೀನಾದ ಪ್ರಥಮ ಹಾಗೂ ಕೊನೆಯ ಅತಿಥಿ.

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries