HEALTH TIPS

ಸಿಯುಇಟಿ ಅಳವಡಿಸಿಕೊಳ್ಳಲು ಎಲ್ಲಾ ಕೇಂದ್ರೀಯ ವಿ.ವಿಗಳಿಗೆ ಯುಜಿಸಿ ಒತ್ತಾಯ

 

               ನವದೆಹಲಿ: ಮುಂದಿನ ಶೈಕ್ಷಣಿಕ ವರ್ಷದಿಂದ ವಿಶ್ವವಿದ್ಯಾಲಯಗಳ ಸ್ನಾತ್ತಕೋತ್ತರ ಪದವಿ ಸಾಮಾನ್ಯ ಪರೀಕ್ಷೆಯನ್ನು (ಸಿಯುಇಟಿ-ಪಿಜಿ) ಅಳವಡಿಸಿಕೊಳ್ಳುವಂತೆ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದ (ಯುಜಿಸಿ) ಮುಖ್ಯಸ್ಥ ಎಂ. ಜಗದೀಶ್‌ ಕುಮಾರ್‌ ಅವರು ಎಲ್ಲಾ ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು ಮಂಗಳವಾರ ಒತ್ತಾಯಿಸಿದ್ದಾರೆ.

                   'ಸಿಯುಇಟಿಯು ದೇಶದಾದ್ಯಂತ ಎಲ್ಲಾ ಅಭ್ಯರ್ಥಿಗಳಿಗೆ ಸಾಮಾನ್ಯ ವೇದಿಕೆ, ಸಮಾನ ಅವಕಾಶಗಳನ್ನು ನೀಡುತ್ತದೆ ಎಂಬುದು ನಿಮಗೆ ತಿಳಿದೇ ಇದೆ. ವಿಶೇಷವಾಗಿ ದೇಶದ ಈಶಾನ್ಯ ಭಾಗ, ಗ್ರಾಮೀಣ ಪ್ರದೇಶ ಮತ್ತು ಅತಿ ದೂರದ ಪ್ರದೇಶಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯಗಳ ಜೊತೆ ಉತ್ತಮ ರೀತಿಯಲ್ಲಿ ಸಂಪರ್ಕ ಸಾಧಿಸಲು ಅನುಕೂಲ ಮಾಡಿಕೊಡುತ್ತದೆ. ಒಂದು ಪ್ರವೇಶ ಪರೀಕ್ಷೆಯು ಹಲವಾರು ಕೇಂದ್ರೀಯ ವಿ.ವಿಗಳು ಮತ್ತು ಇತರ ಉತ್ತಮ ವಿ.ವಿಗಳ ಪ್ರವೇಶಾತಿಯಲ್ಲಿ ಭಾಗಿಯಾಗುವ ಅವಕಾಶವನ್ನು ಅಭ್ಯರ್ಥಿಗಳಿಗೆ ನೀಡುತ್ತದೆ' ಎಂದು ಅವರು ಹೇಳಿದ್ದಾರೆ.

                 'ಸಿಯುಇಟಿ-ಯುಜಿ ಮತ್ತು ಪಿಜಿ ಪರೀಕ್ಷೆಯನ್ನು ನಡೆಸುವ ಜವಾಜ್ದಾರಿಯನ್ನು ರಾಷ್ಟ್ರೀಯ ಪರೀಕ್ಷಾ ಆಯೋಗ (ಎನ್‌ಟಿಎ) ವಹಿಸಿಕೊಂಡಿದೆ. ಎಲ್ಲಾ ಕೇಂದ್ರೀಯ ವಿ.ವಿಗಳೂ ಸಿಯುಇಟಿ-ಪಿಜಿ ಪರೀಕ್ಷೆ ಒಪ್ಪಿಕೊಳ್ಳಬೇಕು. ಇದರಿಂದ ದೇಶದಾದ್ಯಂತ ವಿದ್ಯಾರ್ಥಿಗಳಿಗೆ ಉತ್ತಮ ವಿ.ವಿಯಲ್ಲಿ ಪ್ರವೇಶ ಪಡೆಯಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಹಾಗಾಗಿ ಎಲ್ಲಾ ಕೇಂದ್ರೀಯ ವಿ.ವಿಗಳು ಸ್ನಾತ್ತಕೋತ್ತರ ಪದವಿ ಪ್ರವೇಶಾತಿಗೆ ಸಿಯುಇಟಿ-ಪಿಜಿಯ ಅಂಕಗಳನ್ನು ಪರಿಗಣಿಸಬೇಕು' ಎಂದಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries