HEALTH TIPS

ತ್ರಿಶೂರ್‍ನಲ್ಲಿ ಕೋಟಿಗಟ್ಟಲೆ ಹೂಡಿಕೆ ವಂಚನೆ: ಕಾರವಾನ್ ಪ್ರವಾಸೋದ್ಯಮ ನೆಪದಲ್ಲಿ ವಂಚಿಸಿದ ಸಿನಿಮಾ ತಾರೆಯರ ಆಪ್ತ ಸ್ವಾತಿ ರಹೀಮ್ ಬಂಧನ


            ತ್ರಿಶೂರ್: ಸಿನಿಮಾ ತಾರೆಯರ ನಂಬಿಕಸ್ಥ ಎಂದೇ ಖ್ಯಾತರಾಗಿರುವ ತ್ರಿಶೂರ್ ನಿವಾಸಿ ಸ್ವಾತಿ ರಹೀಮ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ.
         ಆನ್ ಲೈನ್ ಹರಾಜು ಸಂಸ್ಥೆ ಸೇವ್ ಬಾಕ್ಸ್ ನ ಮಾಲೀಕ ಸ್ವಾತಿ ರಹೀಮ್ ಹಲವರಿಂದ ಠೇವಣಿ ಪಡೆದು ವಂಚನೆ ಮಾಡಿದ್ದರು. ರಾಜ್ಯ ಸರ್ಕಾರದ ಕಾರವಾನ್ ಟೂರಿಸಂ ನೆಪದಲ್ಲಿಯೂ ವಂಚನೆ ಎಸಗಿರುವ ಬಗ್ಗೆ ಪೆÇಲೀಸರಿಗೆ ಮಾಹಿತಿ ಲಭಿಸಿದೆ.
           ಸಿನಿಮಾ ತಾರೆಯರನ್ನು ಯಾಮಾರಿಸಿ ಹೂಡಿಕೆ ಸ್ವೀಕರಿಸಿದ್ದ. ತ್ರಿಶೂರ್ ಪೂರ್ವ ಪೆÇಲೀಸ್ ಸಿಐ ಲಾಲ್ ಮತ್ತು ಅವರ ತಂಡ ಆರೋಪಿಯನ್ನು ಹಿಡಿದಿದೆ. ಅವರು ತ್ರಿಶೂರ್‍ನಲ್ಲಿ ಅನೇಕ ಚಲನಚಿತ್ರ ತಾರೆಯರ ಭಾಗವಹಿಸುವಿಕೆಯೊಂದಿಗೆ ಸೇವ್ ಬಾಕ್ಸ್ ಬಿಡುಗಡೆಯನ್ನು ಆಯೋಜಿಸಿದ್ದ.  ಸೇವ್ ಬಾಕ್ಸ್ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಿನಿಮಾ ತಾರೆಯರಿಗೆ ಉಡುಗೊರೆಯಾಗಿ ನೀಡಿದ್ದ ಐಫೆÇೀನ್ ಗಳು ನಕಲಿ ಎಂಬುದು ನಂತರ ತಿಳಿದುಬಂದಿದೆ.
    ಆಕರ್ಷಕ ಮಾಸಿಕ ಆದಾಯದ ಭರವಸೆ ನೀಡಿ ಹೂಡಿಕೆದಾರರನ್ನು ವಂಚಿಸುತ್ತಿದ್ದ. ಆದರೆ ಹೂಡಿಕೆದಾರರಿಗೆ ಲಾಭ ಸಿಗದಿದ್ದಾಗ ದೂರು ಬಂದಿತ್ತು. ಸ್ವಾತಿ ರಹೀಮ್ ಹೆಸರಿನಲ್ಲಿ ಹಲವು ಪೆÇಲೀಸ್ ಠಾಣೆಗಳಲ್ಲಿ ದೂರುಗಳಿವೆ. ತ್ರಿಶೂರ್ ಪೂರ್ವ ಠಾಣೆಯೊಂದರಲ್ಲೇ ಮೂರು ಪ್ರಕರಣಗಳಿವೆ. ಸ್ವಾತಿ ರಹೀಮ್ ಮಧ್ಯಸ್ಥಿಕೆ ಮೂಲಕ ಈ ಪ್ರಕರಣಗಳನ್ನು ಇತ್ಯರ್ಥಪಡಿಸಲು ಪ್ರಯತ್ನಿಸಿದ್ದ.
          


            ಮಂಜು ವಾರಿಯರ್ ಮತ್ತು ಬಾಬಿ ಚೆಮ್ಮನ್ನೂರ್ ಅವರಂತಹ ಸೆಲೆಬ್ರಿಟಿಗಳೊಂದಿಗೆ ನಿಕಟನಾಗಿ ಹೂಡಿಕೆದಾರರ ವಿಶ್ವಾಸವನ್ನು ಗಳಿಸಿದ್ದ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries