HEALTH TIPS

ದಾಳಿ ವೇಳೆ ಫೋನ್‌ ಬಳಸಿದ್ದೇ ಸೈನಿಕರ ಸಾವಿಗೆ ಕಾರಣ ಎಂದ ರಷ್ಯಾ

 

         ಕೀವ್‌: ರಷ್ಯಾ ಸೈನಿಕರು ಸೆಲ್ ಫೋನ್‌ಗಳನ್ನು ಅನಧಿಕೃತವಾಗಿ ಬಳಸಿದ ಪರಿಣಾಮ ಅವರು ತಂಗಿದ್ದ ಘಟಕದ ಮೇಲೆ ಉಕ್ರೇನ್‌ನ ರಾಕೆಟ್ ದಾಳಿಗೆ ಕಾರಣವಾಯಿತು ಎಂದು ರಷ್ಯಾದ ಮಿಲಿಟರಿ ಮಂಗಳವಾರ ತಡರಾತ್ರಿ ತಿಳಿಸಿದೆ.  ವಾರಾಂತ್ಯದ ದಾಳಿಯಿಂದ ಸಾವಿನ ಸಂಖ್ಯೆ 89 ಕ್ಕೇರಿದೆ.

                      'ದೂರವಾಣಿ ಸಂಕೇತಗಳು ಕೀವ್ ಪಡೆಗಳಿಗೆ ಮಿಲಿಟರಿ ಸಿಬ್ಬಂದಿ ಸ್ಥಳ ನಿರ್ಧರಿಸಲು ಮತ್ತು ದಾಳಿ ನಡೆಸಲು ಅನುವು ಮಾಡಿಕೊಟ್ಟವು. ಭವಿಷ್ಯದಲ್ಲಿ ಈ ರೀತಿಯ ದುರಂತ ತಡೆಗಟ್ಟಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ' ಎಂದು ಜನರಲ್ ಲೆಫ್ಟಿನೆಂಟ್ ಸೆರ್ಗೆಯ್ ಸೆವ್ರಿಯುಕೋವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

                  ನಿಯಮ ಉಲ್ಲಂಘಿಸಿದ ಅಧಿಕಾರಿಗಳನ್ನು ಶಿಕ್ಷಿಸುವುದಾಗಿ ಅವರು ಭರವಸೆ ನೀಡಿದ್ದಾರೆ.

                    ಸೆವ್ರಿಯುಕೋವ್‌ ಪ್ರಕಾರ, 10 ತಿಂಗಳ ಹಿಂದೆ ಯುದ್ಧ ಪ್ರಾರಂಭವಾದಾಗಿನಿಂದ ಕ್ರೆಮ್ಲಿನ್ ಪಡೆಗಳ ಮೇಲಿನ ಅತ್ಯಂತ ಮಾರಣಾಂತಿಕ ದಾಳಿ ಹೊಸ ವರ್ಷದ ಒಂದು ನಿಮಿಷದಲ್ಲಿ ಸಂಭವಿಸಿದೆ.

                   ಉಕ್ರೇನ್ ಪಡೆಗಳು ಅಮೆರಿಕ ಪೂರೈಸಿದ್ದ ಹಿಮಾರ್ಸ್ ಬಹುಪಯೋಗಿ ಉಡಾವಣಾ ವಾಹಕ ಬಳಸಿ ಆರು ರಾಕೆಟ್‌ಗಳನ್ನು ಸೈನಿಕರು ನೆಲೆಸಿದ್ದ ಪ್ರದೇಶದಲ್ಲಿ ಹಾರಿಸಿದವು. ಎರಡು ರಾಕೆಟ್‌ಗಳನ್ನು ಹೊಡೆದುರಿಸಲಾಯಿತು. ಆದರೆ, ನಾಲ್ಕು ಕಟ್ಟಡಕ್ಕೆ ಅಪ್ಪಳಿಸಿ ಸ್ಫೋಟಗೊಂಡವು. ದಾಳಿಯಲ್ಲಿ 63 ಸೈನಿಕರು ಮೃತಪಟ್ಟಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಆರಂಭದಲ್ಲಿ ತಿಳಿಸಿತ್ತು. ಆದರೆ, ತುರ್ತು ಸಿಬ್ಬಂದಿ ಕಟ್ಟಡ ಅವಶೇಷ ಶೋಧಿಸುತ್ತಿದ್ದಂತೆ ಸಾವಿನ ಸಂಖ್ಯೆ 89ಕ್ಕೆ ಏರಿದೆ ಎಂದು ಸೆವ್ರಿಯುಕೋವ್‌ ಹೇಳಿದ್ದಾರೆ. ಮೃತರಲ್ಲಿ ರೆಜಿಮೆಂಟ್‌ನ ಡೆಪ್ಯುಟಿ ಕಮಾಂಡರ್‌ ಕೂಡ ಸೇರಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries