HEALTH TIPS

No title

                  ಆಥರ್ಿಕ ಸಮೀಕ್ಷೆ ನಂತರ ಬಜೆಟ್ ಕಾತರ
                       ಇಂದು ಮುಂಗಡ ಪತ್ರ ಮಂಡನೆ
        ದೆಹಲಿ: ಕೇಂದ್ರ ಸಕರ್ಾರ ಇಂದು ಮುಂಗಡ ಪತ್ರ ಮಂಡಿಸಲಿದ್ದು,   ಇದಕ್ಕೆ ಪೂರ್ವಭಾವಿಯಾಗಿ ಸೋಮವಾರ (ಜ.29) ಮುಂದಿನ ವರ್ಷಕ್ಕೆ ದಿಕ್ಸೂಚಿಯಾಗುವಂತಹ ದೇಶದ ಆಥರ್ಿಕ ಸಮೀಕ್ಷೆ 2018 ಮಂಡನೆಯಾಗಿದೆ. ಮಹಿಳಾ ಸಬಲೀಕರಣ, ಉದ್ಯೋಗ ಸೃಜನೆ, ಕೃಷಿ ಕ್ಷೇತ್ರಕ್ಕೆ ಉತ್ತೇಜನದಂತಹ ಕ್ರಮಗಳನ್ನು ಮುಂದಿನ ವರ್ಷ ನಿರೀಕ್ಷಿಸಬಹುದು ಎಂಬ ಸೂಚನೆ ಇದರಲ್ಲಿ ಸಿಕ್ಕಿದೆ. ಹಾಗೆಯೇ, ತೈಲಬೆಲೆ ಏರಿಕೆ ಆಗುತ್ತಿದ್ದು, ಅದರಿಂದ ದೇಶದ ಅರ್ಥ ವ್ಯವಸ್ಥೆ ಮೇಲಾಗಬಹುದಾದ ದುಷ್ಪರಿಣಾಮದ ಬಗ್ಗೆ, ಅಲ್ಲದೆ, ಹವಾಮಾನ ವೈಪರೀತ್ಯ ಕಾರಣದಿಂದಾಗಿ ಈ ವರ್ಷ ಕೃಷಿಕರ ಆದಾಯದಲ್ಲಿ ಶೇಕಡ 20-25 ಇಳಿಕೆಯಾಗುವ ಸಾಧ್ಯತೆ ಕುರಿತೂ ಸಮೀಕ್ಷೆ ಎಚ್ಚರಿಕೆ ನೀಡಿದೆ. ಇಷ್ಟಾಗ್ಯೂ, ಜಿಡಿಪಿ ಬೆಳವಣಿಗೆ ಮುಂದಿನ ವರ್ಷ ಶೇಕಡ 7ರಿಂದ 7.5 ಇರಬಹುದೆಂಬ ನಿರೀಕ್ಷೆಯನ್ನೂ ವ್ಯಕ್ತಪಡಿಸಿದೆ. ಹೀಗಿರುವಾಗ ಸಮೀಕ್ಷೆ ನೀಡಿದ ಮುನ್ಸೂಚನೆ ಪ್ರಕಾರ ಈ ಸಲದ ಮುಂಗಡಪತ್ರ ಯಾವುದರ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಬಹುದು ಎಂಬ ಸಹಜ ಕುತೂಹಲ ಕಾಡದೇ ಇರದು.
  ವಿತ್ತ ಸಚಿವ ಅರುಣ್ ಜೇಟ್ಲಿ ಇಂದು ಮಂಡಿಸುವ ಬಜೆಟ್ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಸಿಗುವ ನಿರೀಕ್ಷೆ ಇದೆ.  ಈ ಸಲದ ಆಥರ್ಿಕ ಸಮೀಕ್ಷೆಯೂ ಅದೇ ವಿಷಯಕ್ಕೆ ಆದ್ಯತೆ ನೀಡಿದೆ. ಆದಾಗ್ಯೂ, ಕೃಷಿಕರ ಆದಾಯ ದುಪ್ಪಟ್ಟುಗೊಳಿಸುವ ಮೋದಿ ಸಕರ್ಾರದ ಪ್ರಮುಖ ಆಶಯಕ್ಕೆ ಈ ಸಲ ಹವಾಮಾನ ವೈಪರೀತ್ಯ ಕೊಂಚ ಹಿನ್ನಡೆ ಉಂಟುಮಾಡಬಹುದು ಎಂಬ ಸುಳಿವನ್ನು ಸಮೀಕ್ಷೆ ನೀಡಿದೆ. ಅಂದರೆ, ಕೃಷಿಕರ ಆದಾಯ ಈ ವರ್ಷ ಶೇಕಡ 15ರಿಂದ ಶೇಕಡ 18 ಕಡಿಮೆ ಬೀಳಬಹುದು. ನೀರಾವರಿ ಇಲ್ಲದ ಪ್ರದೇಶಗಳಲ್ಲಿ ಇದು ಶೇಕಡ 20ರಿಂದ ಶೇಕಡ 25 ಆಗಬಹುದು. ಸಮೀಕ್ಷೆಯಲ್ಲಿನ ಈ ವಿಚಾರಗಳು ಈ ಸಲದ ಮುಂಗಡಪತ್ರದಲ್ಲಿನ ಸೂಕ್ಷ್ಮ ಶಿಫಾರಸುಗಳು ಎಂದರೆ ತಪ್ಪಾಗಲಾರದು. ಹನಿ ಮತ್ತು ಸಿಂಚನ ತಂತ್ರಜ್ಞಾನಗಳ ಅನುಷ್ಠಾನದೊಂದಿಗೆ ನೀರಾವರಿ ವಿಸ್ತರಣೆಗೆ ಹೆಚ್ಚಿನ ಹೂಡಿಕೆ ಅಗತ್ಯ ಇದೆ ಎಂದಾಯಿತು. ಎಲ್ಲದಕ್ಕೂ ಮಿಗಿಲಾಗಿ ಎಲ್ಲಿಗೂ ಸಾಕಾಗದ ಕೃಷಿ ಸಹಾಯಧನವನ್ನು ಕೃಷಿಕರಿಗೆ ನೇರ ಆದಾಯ ಬೆಂಬಲಕ್ಕೆ ಯೋಜನೆ ಅನುಷ್ಠಾನಗೊಳಿಸಬೇಕು.
   ;ಉದ್ಯೋಗ ಸೃಜನೆಗೆ ಸಂಬಂಧಿಸಿದ ಸಮಸ್ಯೆಯನ್ನು ಪರಿಹರಿಸಬೇಕಾದ ತುತರ್ು ಅಗತ್ಯ ಈ ಸಲದ ಮುಂಗಡಪತ್ರಕ್ಕಿದೆ. ಅಂತಾರಾಷ್ಟ್ರೀಯ ಕಾವರ್ಿಕ ಸಂಘಟನೆಯ ದತ್ತಾಂಶ ಪ್ರಕಾರ, ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇಕಡ 3.5ರ ಆಸುಪಾಸಿನಲ್ಲಿದೆ. ಈ ಪೈಕಿ 15-24ರ ವಯೋಮಾನದವರ ನಿರುದ್ಯೋಗ ಪ್ರಮಾಣ ಶೇಕಡ 10.5 ಇದೆ. ಹೊಸ ಕೆಲಸಗಾರರಿಗೆ ಉದ್ಯೋಗ ಒದಗಿಸುವ ಸಾಮಥ್ರ್ಯ ದೇಶದಲ್ಲಿ ಬಹಳ ಕಡಿಮೆ ಇದೆ. ಉತ್ಪಾದನಾ ಕ್ಷೇತ್ರವನ್ನು ಬಲಗೊಳಿಸುವುದೊಂದೇ ಈ ಸಮಸ್ಯೆಗೆ ಪರಿಹಾರ. ಕಾವರ್ಿ?ಕ ಕೇಂದ್ರಿತ ರಫ್ತು ಕ್ಷೇತ್ರಗಳಲ್ಲಿ ಅವರಿಗೆ ಉತ್ತೇಜನ ಒದಗಿಸುವ ಮೂಲಕ ಮುಂಗಡಪತ್ರ ಒಂದೇ ಕಲ್ಲಿನಿಂದ ಎರಡು ಹಕ್ಕಿಗಳನ್ನು ಹೊಡೆಯಬಲ್ಲ ಕ್ರಮವನ್ನು ತೆಗೆದುಕೊಳ್ಳಬಹುದು. ಉದ್ಯೋಗ ಒದಗಿಸುವ ಹೊರತಾಗಿ, ರಫ್ತು ಕ್ಷೇತ್ರದ ಬೆಳವಣಿಗೆ ಉತ್ತೇಜನ ನೀಡಿದರೆ ವಿತ್ತೀಯ ಖಾತೆಯಲ್ಲಿ ಹೆಚ್ಚಿನ ಹಣ ಸಂಗ್ರಹವಾಗಿ, ಜಾಗತಿಕ ತೈಲಬೆಲೆ ಏರಿಳಿತಗಳ ಹೊರತಾಗಿಯೂ ಭಾರತದ ಅರ್ಥ ವ್ಯವಸ್ಥೆ ಸ್ಥಿರವಾಗಿರಲಿದೆ.
  ಜೊತೆಗೆ ಹೂಡಿಕೆಗೆ ಉತ್ತೇಜನ, ಜಿಎಸ್?ಟಿ ವ್ಯವಸ್ಥೆಯ ಸ್ಥಿರೀಕರಣ, ವಿತ್ತೀಯ ಕೊರತೆ ಗುರಿಗೆ ಸ್ಥಿರವಾಗಿರುವುದು ಸೇರಿ ಹಲವು ವಿಚಾರಗಳ ಕುರಿತ ಸಂದೇಹವನ್ನು ಮುಂಗಡಪತ್ರ ಪರಿಹರಿಸಲಿದೆ. ಚುನಾವಣಾ ಪೂರ್ವ ವರ್ಷದ ಬಜೆಟ್ ಎಂಬ ಕಾರಣಕ್ಕೆ ಮಾತ್ರವಲ್ಲ, ಸದ್ಯದ ಆಥರ್ಿಕ ಪರಿಸ್ಥಿತಿಯೂ ಮುಂಗಡಪತ್ರದ ಬಗ್ಗೆ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries