HEALTH TIPS

ಭಾರತ ಪ್ರವೇಶಿಸಲಿಚ್ಛಿಸುವ ಆಫ್ಘನ್ನರಿಗೆ ಇನ್ಮುಂದೆ ಇ-ವೀಸಾ ಕಡ್ಡಾಯ

 

           ನವದೆಹಲಿ: ಅಫ್ಘಾನಿಸ್ತಾನದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನಿಂದಾಗಿ ಭದ್ರತಾ ದೃಷ್ಟಿಯಿಂದ ಭಾರತಕ್ಕೆ ಬರಲು ಇಚ್ಛ್ಹಿಸುವ ಆಫ್ಘನ್ನರು ಕಡ್ಡಾಯವಾಗಿ ಇ-ವೀಸಾ ಹೊಂದಿರಬೇಕು ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಸೂಚನೆ ಹೊರಡಿಸಿದೆ. ತುರ್ತಿನ ಸನ್ನಿವೇಶ ಎದುರಾಗಿರುವುದರಿಂದ ಭಾರತೀಯ ವೀಸಾ ಆಕಾಂಕ್ಷಿಗಳಿಗೆ ಕ್ಷಿಪ್ರ ಗತಿಯಲ್ಲಿ ವೀಸಾ ನೀಡಿಕೆ ಪ್ರಕ್ರಿಯೆಯನ್ನು ನದೆಸಲು ಸಹಾಯವಾಗುವಂತೆ ಭಾರತ ಇ-ವೀಸಾ ಕಾರ್ಯಕ್ರಮ ಜಾರಿಗೊಳಿಸಿತ್ತು.

           ಕೆಲ ಆಫ್ಘನ್ನರ ಪಾಸ್ ಪೋರ್ಟ್ ಗಳು ಕಾಣೆಯಾಗಿರುವ ಬಗ್ಗೆ ವರದಿಗಳು ಕೇಳಿಬಂದ ಹಿನ್ನೆಲೆಯಲ್ಲಿ ಭಾರತ ಈ ಹಿಂದೆ ಆಫ್ಘನ್ನರಿಗೆ ನೀಡಿದ್ದ ವೀಸಾಗಳಿಗೆ ನಿರ್ಬಂಧ ಹೇರಿದೆ. ಕೇವಲ ಇ- ವೀಸಾಗಳು ಮಾತ್ರವೆ ಮಾನ್ಯತೆ ನೀಡಲಾಗುವುದು.

            ಆಫ್ಘನ್ ನಾಗರಿಕರು ಭಾರತದ ಇ-ವೀಸಾ ಪಡೆಯಲು ಅಧಿಕೃತ ಜಾಲತಾನದಲ್ಲಿ ಮೊದಲು ಅರ್ಜಿ ಸಲ್ಲಿಸಬೇಕು. ಎಲ್ಲಾ ಆಫ್ಗನ್ನರು ಜಾತಿಭೇದಗಳ ಹಂಗಿಲ್ಲದೆ ಯಾರು ಬೇಕಾದರೂ ಭಾರತದ ಇ-ವೀಸಾಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ನವದೆಹಲಿಯಲ್ಲಿ ಅರ್ಜಿಯ ಪರಿಶೀಲನೆ ನಡೆಸಲಾಗುವುದು.

            ಆಗಸ್ಟ್ 17ರಂದು ಭಾರತ ಆಫ್ಘನ್ನರಿಗೆ ಇ-ವೀಸಾ ಘೋಷಣೆ ಮಾಡಿತ್ತು. ಅಫ್ಘಾನಿಸ್ತಾನದಲ್ಲಿ ಭಾರತ ತನ್ನೆಲ್ಲಾ ರಾಜತಾಂತ್ರಿಕ ಕಚೇರಿಗಳನ್ನು ಮುಚ್ಚಿರುವುದರಿಂದ ಆನ್ ಲೈನ್ ಮುಖಾಂತರ ಮಾತ್ರವೇ ಆಫ್ಘನ್ನರು ಇ-ವೀಸಾಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries