HEALTH TIPS

ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಸರಗೋಡಿನ ಪಾತ್ರ


            ತಾಯಿ ಮತ್ತು ತಾಯ್ನಾಡಿನ ಸೇವೆ ಮಾಡಿ ಧನ್ಯರಾದವರು ದೇಶ ಸರ್ವತ್ರ ಇದ್ದಾರೆ. ನಮ್ಮ ಭಾರತದೇಶ ದಲ್ಲಿಯೂ ಇಂತು. ಚಿರಸ್ಮÀರಣೀಯರಾದವರನ್ನು ನಾವು ಕಾಣುತ್ತೇವೆ, ಶತಶತಮಾನಗಳಿಂದ ಅನ್ಯರ, ಪದಾಕ್ರಾಂತವಾಗಿ ಬಂಧನದಲ್ಲಿದ್ದ ಜನ್ಮಭೂಮಿ ಭಾರತವನ್ನು ಬಿಡುಗಡೆಗೊಳಿಸುವ ಪವಿತ್ರ ಕಾರ್ಯದಲ್ಲಿ ಅನುಪಮ ತ್ಯಾಗದಿಂದ - ಧೀರವಾದ ಹೋರಾಟದಿಂದ, ಕಷ್ಟ ನಿಷ್ಠುರಗಳನ್ನೆಲ್ಲಾ ಸಹಿಸಿ ಖ್ಯಾತರಾದ ದೇಶಪ್ರೇಮಿಗಳು, ಕಾಸರಗೋಡು ಪ್ರದೇಶದಲ್ಲಿಯೂ ಸಾಕಷ್ಟು ಇದ್ದಾರೆ ಎಂಬುದು ಅಭಿಮಾನ ಪಡತಕ್ಕ ಸಂಗತಿ.
        1885ರ ಸಿಪಾಯಿದುಗೆ ಫಲಕಾರಿಯಾಗದೆ ಇದ್ದರೂ, ಭಾರತೀಯರ ಸ್ವಾತಂತ್ರ ಸ್ಫೂರ್ತಿಗೆ ಅದು ಪ್ರತ್ಯಕ್ಷ ಪ್ರದರ್ಶನವಾಯಿತು. ವೀರ ಸಾವಕಧರ ತಿಲಕರೇ ಮೊದಲಾದ ದೇಶಭಕ್ತರು ಜನತೆಯನ್ನು ಹುರಿದುಂಬಿಸಿದರು. ವಿದೇಶೀ ಪ್ರಭುತ್ವದ ವಿರುದ್ಧವಾಗಿ ಅಹಲ್ಯಾಬಾಯಿ ಹೋಳ್ಳಾರ್, ರಾಣಿ ಚನ್ನಮ್ಮ, ಉಳ್ಳಾಲದ ಅಬ್ಬ ರಾಣಿ ಇಂತಹ ವೀರಮಹಿಳೆಯರೂ ಕತ್ತಿಹಿಡಿದು ಹೋರಾಡಿದ ಕತೆ ರೋಮಾಂಚಕಾರಿ, ತನ್ನ ವಕಾಲತ್ತಿನ ಉದ್ಯೋಗಾರ್ಥ ದಕ್ಷಿಣಾಫ್ರಿಕಕ್ಕೆ ತೆರಳಿದ ಗಾಂಧಿಗೆ ಅಲ್ಲಿ ಬಿಳಿಯರ ನಿರಂಕುಶ ಪ್ರಭುತ್ವದ ವಿರುದ್ಧ ಸೆಟೆದು ನಿಂತರು, ಸ್ವಾತಂತ್ರ್ಯದ ಮಾತೆತ್ತಿದವರನ್ನು ದಬ್ಬಾಳಿಕೆಯಿಂದ ಅಡಗಿಸುವ ಪ್ರಯತ್ನ ಬ್ರಿಟಿಷರಿಂದ ನಿರಂತರ ಭಾರತದಲ್ಲಿ ನಡೆಯಿತು; ಲೆಟ್ ಆಕ್ಟ್ ಜಾರಿಗೆ ಬಂತು, ಪರಿಸಾಲಿನ ಭೀಕರ ಹತ್ಯಾಕಾಂಡ ನಡೆಯಿತು, ತಿಲಕರು ಅಂಡಮಾನ ಸೆರೆಮನೆಗೆ ಸಾಗಿಸಲ್ಪಟ್ಟರು, ವೀರಸಾವರ್ಕರರೂ ಬಂಧಿತರಾದರು; ದಕ್ಷಿಣಾಫ್ರಿಕವನ್ನು ಬಿಟ್ಟುಬಂದ ಗಾಂಧೀಜಿ ಭಾರತದಲ್ಲಿನ ಈ ಸ್ವಾತಂತ್ರ್ಯದ ಎದೆಗುದಿಯನ್ನು ಮನಗಂಡು ರಾಷ್ಟ್ರವ್ಯಾಪಿಯಾದ ಒಂದು ಚಳವಳಿಯನ್ನು 1920ರಲ್ಲಿ ಪ್ರಾರಂಭಿಸಿದರು. ಅದೇ ಅಸಹಕಾರ ಆಂದೋಳನ
           ಸತ್ಯವನ್ನು ಬಿಡದೆ, ಹಿಂಸೆಗೆ ಹೋಗದೆ ಶೋಷÀಣೆ ಮಾಡುವ ಪ್ರಭುತ್ವದ ಇದಿರಾಗಿ ಪ್ರಪ್ರಥಮ ಮಾಡಿದ ವಿಶಾಲವಾದ ಸ್ವಾತಂತ್ರ್ಯ ಆಂದೋಲನವೇ ಅಸಹಕಾರ ಚಳವಳ; ಬ್ರಿಟಿμï ಪ್ರಭುತ್ವದ ಕೈಕೆಳಗೆ ಉದ್ಯೋಗ ಮಾಡಲಾರೆವು, ಬ್ರಿಟಿμï ಪೆÇೀಷಿತ ಶಾಲೆಗಳಲ್ಲಿ ವಿದ್ಯೆ ಕಲಿಯಲಾರೆವು, ಬ್ರಿಟಿಷರ ವಸ್ತ್ರವನ್ನು, ಒಡವೆ ವಸ್ತುಗಳನ್ನು ಪರಕೊಳ್ಳಲಾರೆವು, ನಮ್ಮ ವಿದ್ಯೆಯನ್ನು ನಾವೇ ರಾಷ್ಟ್ರೀಯ ಶಾಲೆ ಸ್ಥಾಪಿಸಿ ಕಲಿಸುವೆವು, ನಮ್ಮ ಬಟ್ಟೆ ನಾವೇ ಚರಕದಲ್ಲಿ

ನೂತ ನೂಲಿನಿಂದ ತಯಾರಿಸುವೆವು. ನಮಗೆ ಬೇಕಾದ ಸಕಲ ಜೀವನಾವಶ್ಯಕ ವಸ್ತುಗಳನ್ನು ನಾವೆ ಸಿದ್ಧಮಾಡುವೆವು. ಎಂಬಿ' ಧೋರಣೆಯಿಂದ ಅಸಹಕಾರ ಚಳವಳ ತೊಡಗಿತು. ಇದರಲ್ಲಿ ಹಲವರು ಸೆರೆಮನೆಗೆ ಹೋದರು, ಆಸ್ತಿ ಒಡವೆಗಳನ್ನು ಬದುಕು ಭಾಗ್ಯಗಳನ್ನು ಕಳಕೊಂಡರು.
    ದಕ್ಷಿಣಕನ್ನಡ ಜಿಲ್ಲೆಯ ಭಾಗವಾದ ಕಾಸರಗೋಡಿನಲ್ಲಿಯೂ ಈ ಚಳವಳ ಪ್ರಾರಂಭಗೊಂಡಿತು; ಕಾರ್ನಾಡು ಸದಾಶಿವರಾಯರೂ, ಇದರ ನೇತೃತ್ವ ವಹಿಸಿ, ಜಿಲ್ಲೆಯಾದ್ಯಂತ ಸಂಚರಿಸಿದರು, ಶ್ರೀಮಂತ ತಂದೆಯ ಏಕಮಾತ್ರ ಪುತ್ರನಾದ ಸದಾಶಿವರಾಯರು ತನ್ನ ಎಲ್ಲವನ್ನೂ ಬಿಟ್ಟು ದೇಶಸೇವಾದೀಕ್ಷೆ ವಹಿಸಿ ಜೀವನವನ್ನು ತ್ಯಾಗಪೂರ್ಣವಾಗಿ ನಡೆಸಿದ ಮಹಾತ್ಮರು. ಇವರ ಈ ಸ್ಫೂರ್ತಿ ಕಾಸರಗೋಡಿನಲ್ಲಿಯೂ, ಮೂಡಬಿದ್ರೆ ಉಮೇಶರಾಯರು, ಖಂಡಿಗೆ ಕೃಷ್ಣಭಟ್ಟರು, ದೇವಪ್ಪ ಆಳ್ವ ಮೊದಲಾದ ಮಹನೀಯರು ಅಸಹಕಾರ ಆಂದೋಲನ ತೊಡಗಿ, ಶಾಲೆಕಾಲೇಜು ಬಿಟ್ಟು, ಖಾದಿ ಪ್ರಚಾರ, ಅಸ್ಪೃಶ್ಯತಾ ನಿವಾರಣೆ ಇತ್ಯಾದಿ ಕಾರ್ಯಕ್ರಮ ನಿರತರಾದರು. ಕಾಸರಗೋಡಿನ ಶೆಡ್ಡೆ ಲಕ್ಷಣರಾಯರೂ ತಮ್ಮ ವಕಾಲತ್ತನ್ನು ತ್ಯಜಿಸಿದರು. ಆಗ ಕಾಸರಗೋಡು ತಾಲೂಕು ದಕ್ಷಿಣ ಕನ್ನಡ  ಮಂಜೇಶ್ವರದ ಕವ್ವಾಯಿ ಹೊಳೆವರೆಗೆ ವ್ಯಾಪಿಸಿದ್ದುದರಿಂದ, ಅಲ್ಲಿಯ ತನಕವೂ ಕಾರ್ನಾಡು ಸದಾಶಿವರಾಯರ ನೇತೃತ್ವದಲ್ಲಿ ಕಾರ್ಯಕ್ರಮಗಳು ಜರಗಿದವು ಹೊಸದುರ್ಗದಲ್ಲಿ ಏಕ್ಯಾನ ಕಣ್ಣನ್ ನಾಯರ್, ವಿ.ಆರ್. ನಾಯರ್, ನೀಲೇಶ್ವರದಲ್ಲಿ ರಾಘವನ್ ನಂಬ್ಯಾರ್ ಪ್ರಭ್ರೃತಿಗಳು ಸ್ವಾತಂತ್ರ್ಯ ಸಂಗ್ರಾಮ ಹಾಗೂ ಖಾದಿ ಪ್ರಚಾರ ಮೂದಲಾದ ರಚನಾತ್ಮಕ ಕಾರ್ಯಗಳಿಗೆ ನೇತೃತ್ವ ನೀಡಿದರು, ಡಾ. ಬೆಳ್ಳಿಕೋತ್ ರಘುನಾಥ ತನ್ನ 1923ರಲ್ಲಿ ನಾಗಪುರ ಧ್ವಜಸತ್ಯಾಗ್ರಹದಲ್ಲಿ ಭಾಗವಹಿಸಿ ಶಿಕ್ಷೆ ಅನುಭವಿಸಿದರು.
        ಅದೇ ಸಂದರ್ಭ ಇಲ್ಲಿ ಹಲವು ವಿದ್ಯಾ ಸಂಸ್ಥೆಗಳು ಪ್ರಾರಂಭವಾಗಿ, ಅಲ್ಲಿನ ಆಡಳಿತದವರೂ, ಅಧ್ಯಾಪಕರೂ ದೇಶಾಭಿಮಾನವನ್ನು ಉತ್ತೇಜಿಸಿದರು. ನಾರಾಯಣಮಂಗಲ ಸಂಸ್ಕøತ ಶಾಲೆ, ಪೆರಡಾಲ ಮಹಾಜನ ಸಂಸ್ಕೃತ ಕಾಲೇಜು ಉಕ್ಕಿನಡ್ಕ ವಸಿμÁ್ಠಶ್ರಮ ಸಂಸ್ಕೃತ ಶಾಲೆ, ಹೊಸದುರ್ಗದ ವಿಜ್ಞಾನದಾಯಿನಿ ಸಂಸ್ಕೃತಶಾಲೆ - ಇವೆಲ್ಲವೂ ರಾಷ್ಟ್ರೀಯ ಭಾವನೆಯ ಪ್ರೇರಣೆ ನೀಡಿದವು, ಮಹಾಜನ ಸುಸ್ಕೃತ ಕಾಲೇಜಿನ ಆಡಳಿತದ ಖಂಡಿಗೆ ಕೃಷ್ಣಭಟ್ಟರು, ಉಕ್ಕಿನಡ್ಕ ವಸಿμÁ್ಠಶ್ರಮ ಸ್ಥಾಪಕರಾದ ಪಾಣಾಜೆ ವೈದ್ಯ ಶಂಕರನಾರಾಯಣ ಭಟ್ಟರು, ಹೊಸದುರ್ಗದ ವಿಜ್ಞಾನದಾಯಿನಿ ಸಂಸ್ಕೃತರಾಲೆಯ ಕಣ್ಣನ್ ನಾಯರ್, ಕೇಳ, ನಾಯರ್ ಮೊದಲಾದವರು ಸ್ವಾತಂತ್ರ್ಯ ಹೋರಾಟಕ್ಕೆ ಮುಂದೆ ಬಂದರು.
           1927ರ ಆಗಸ್ಟ್ 1ರಂದು ತಿಲಕರ ಪುಣ್ಯತಿಥಿ ಕಾಸರಗೋಡಿನ ಎಲ್ಲಾ ಕಡೆಗಳಲ್ಲಿಯೂ ಉತ್ಸಾಹಪೂರ್ಣವಾಗಿ ಆಚರಿಸಲಾಯಿತು. ಉಮೇಶರಾವ್, ಕಣ್ಣನ್‍ನಾಯರ್, ರಾಘವನ್ ನಂಬ್ಯಾರ್, ಪ್ರಭತಿಗಳು ಈ ಸಭೆಗಳನ್ನು ಸಂಘಟಿಸಿದರು. ಆ ಕಾಲದಲ್ಲಿಯೇ ಹೊಸದುರ್ಗದ ಕೋಟೆಚೇರಿಯಲ್ಲಿ ಸೇರಿದ ಕಾಂಗ್ರೆಸ್ ಸಮ್ಮೇಳನದಲ್ಲಿ ಕೆ.ಆರ್. ಕಾರಂತರು, ಮಾಧವರಾಯರು, ಕೆ.ಆರ್, ಆಚಾರರು ಭಾಗವಹಿಸಿದರು. ಅದೇ ಅಕ್ಟೋಬರಿನಲ್ಲಿ ಗಾಂಧಿ ಮಂಗಳೂರಿಗೆ ಬಂದರು. ಈ ಪ್ರದೇಶದ ಕುಂಬಳೆ, ಕಾಸರಗೋಡು, ಹೊಸದುರ್ಗ, ನೀಲೇಶ್ವರ ಎಲ್ಲಾ ರೈಲ್ವೆ ಸ್ಟೇಶÀನುಗಳಲ್ಲೂ ಗಾಂಧಿಗೆ ಅಭೂತಪೂರ್ವ ಸ್ವಾಗತ ದೊರಕಿತು. ಗಾಂಧೀಜಿಯ ಈ ಸಂದರ್ಶನದಿಂದ ಕಾಸರಗೋಡಿನ ಜನತೆಯಲ್ಲಿ ದೇಶಾಭಿಮಾನ ಉಕ್ಕೇರಿತು. ಆಗಲೇ ಗಾಂಧೀಜಿ ರಾಷ್ಟ್ರದ ಎಕೈಕ ಆಸಾಮಾನ್ಯ ನೇತಾರರಾಗಿ ಗಣನೀಯರಾಗಿದ್ದರು. ಅವರ ಮಾತು ಮಂತ್ರದಂತೆ ಜನತೆಯಲ್ಲಿ ಅದ್ಭುತ ಪರಿಣಾಮವನ್ನುಂಟು ಮಾಡುತ್ತಿತ್ತು . ಸೈಮನ್ ಕಮಿಶನನ್ನು ಬಹಿಷ್ಕರಿಸಬೇಕೆಂದು ಗಾಂಧೀಜಿ ಕರೆಯಿತ್ತರು, 1928 ಫೆಬ್ರವರಿ 3ರಂದು ಕಾಸರಗೋಡಿನ ನಾನಾ ಕಡೆಗಳಲ್ಲಿ ಸೈಮನ್ ಕಮಿಶನ್ ಬಹಿμÁ್ಕರ ಸಭೆ ಜರಗಿತು. ಹರತಾಳ ನಡೆಯಿತು. ವಾಸ್ವಾನಿಯವರು ಸಂಘಟಿಸಿದ ಭಾರತ ಯುವಜನ ಸಂಘದ ಶಾಖೆಯೂ ಇಲ್ಲಿ ಪ್ರಾರಂಭವಾಗಿ ದೇಶಸೇವೆಯ ಸಂದೇಶವನ್ನು ಎಲ್ಲೆಡೆ ಸಾರಿತು, ಹೊಸದುರ್ಗದ ಬೆಳ್ಳಿಕೋತ್ ಎಂಬಲ್ಲಿನ ವಾಚನಾಲಯದ ವಾರ್ಷಿಕೋತ್ಸವದಲ್ಲಿ ಕಾರ್ನಾಡು ಸದಾಶಿವರಾಯರು ಭಾಗವಹಿಸಿ ಸ್ಫೂರ್ತಿದಾಯಕ ಭಾಷಣ ಮಾಡಿದರು, ಖಾದಿ ತೊಡುವ ಪ್ರತಿಜ್ಞೆ, ಮಹಿಳಾ ಸಂಘಟನೆ, ಬಾಲಸಮಾಜ ನಿರ್ಮಾಣ ಮೊದಲಾದ ಕಾರ್ಯಕ್ರಮಗಳು ಅಂದು ಅಲ್ಲಿ ರೂಪಿತವಾದುವು. ಮಂಗಳೂರಿನಲ್ಲಿ ಜರಗಿದ್ದ ರಾಜಕೀಯ ಸಮ್ಮೇಳನದಲ್ಲಿ ಕೆ.ಎಫ್, ನರಿಮನ್ ಅಧ್ಯಕ್ಷರಾಗಿದ್ದರು, ಆ ಸಮ್ಮೇಳನದಲ್ಲಿ ಉಮೇಶರಾಯರೇ ಮೊದಲಾದ ಮುಂದಾಳುಗಳ ಕಾರ್ಯಕರ್ತರೂ ಭಾಗವಹಿಸಿದರು. 1930 ಜನವರಿ 26ರಂದು ಲಾಹೋರಿನಲ್ಲಿ ನೆಹರೂ ಅಧ್ಯಕ್ಷತೆಯಲ್ಲಿ ಜರಗಿದ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವೀಕರಿಸಿದ ಪೂರ್ಣ ಸ್ವರಾಜ್ಯದ ನಿರ್ಣಯವನ್ನು ಕಾಸರಗೋಡು ಪ್ರದೇಶದ ಎಲ್ಲಾ ಕಡೆಗಳಲ್ಲಿಯೂ ಸಭೆಸೇರಿ ಅನುಮೋದಿಸಲಾಯಿತು. ಮಾತೃಭೂಮಿಯ ಬಂಧವಿಮೋಚನೆಗೆ ಸರ್ವತ್ಯಾಗ ಮಾಡಲು ಕಾಸರಗೋಡಿನ ಜನತೆ ಸರ್ವಸಿದ್ಧತೆಗೊಂಡಿತು.
        ಗಾಂಧೀಜಿ ದೇಶದ ಬಂzsನÀವಿಮೋಚನೆಗೆ ಒಂದು ಹೊಸ ರೀತಿಯ ಹೋರಾಟಕ್ಕೆ ಕರೆಯಿತ್ತರು. ಉಪ್ಪು ಸಮುದ್ರದಲ್ಲಿ ಧಾರಾಳ ಸಿಗುತ್ತದೆ. ತೆಗೆದಷ್ಟೂ ಅದು ಮುಗಿಯುವಂತಹುದಲ್ಲ. ಅದಕ್ಕೂ ತೆರಿಗೆ ಹಾಕಿ ಬ್ರಿಟಿಷರು ನಮ್ಮನ್ನು ಸುಲಿಗೆ ಮಾಡುತ್ತಾರೆ ಎನ್ನುವುದನ್ನು ಜಗತ್ತಿಗೆ ಪ್ರದರ್ಶಿಸಲು ಉಪ್ಪಿನ ಸತ್ಯಾಗ್ರಹ 1930ರಲ್ಲಿ ಪ್ರಾರಂಭವಾಯಿತು. ಸತ್ಯಾಗ್ರಹಿಗಳು ಸಮುದ್ರಕ್ಕೆ ಹೋಗುವರು; ಅಲ್ಲಿಂದ ಒಪ್ಪುನೀರನ್ನು ತರುವರು; ಆ ನೀರನ್ನು ಕಾಸಿ ಉಪ್ಪನ್ನು ಸಾರ್ವಜನಿಕವಾಗಿ ಮಾರುವರು; 1930ರ ಫೆಬ್ರವರಿ 10ರಂದು ಸಬರಮತಿಯಲ್ಲಿ ಸಭೆಸೇರಿ ಉಪ್ಪಿನ ಸತ್ಯಾಗ್ರಹ ಹೂಡಲು ನಿಶ್ಚಯವಾಯಿತು. ಗಾಂಧೀಜಿ, ಸ್ವಯಂಸೇವಕರನ್ನು ಕರೆದುಕೊಂಡು ದಂಡಿಯಾತ್ರೆಗೆ ಹೊರಟರು ಉಪ್ಪುಸತ್ಯಾಗ್ರದಲ್ಲಿ ಭಾಗವಹಿಸಿದ್ದ ಸ್ವಯಂಸೇವಕ ದಳವನ್ನೂ ಬಂಧಿಸಿ ಸೆರೆಮನೆಗೆ ಹಾಕಿದರು. ದಂಡಿಯ ಯಾತ್ರೆಯಲ್ಲಿ  ಗಾಂಧೀಜಿ ಹಿಡಿದ ಊರುಗೋಲು, ಮಂಜೇಶ್ವರದ ರಾಷ್ಟ್ರಕವಿ ಗೋವಿಂದ ಪೈಯವರು ಕಾ ಕಾಲೇಲ್ಕರರಿಗೆ ಕೊಟ್ಟ ನಾಗರಬೆತ್ತವೆನ್ನುವುದು ಒಂದು ಚಾರಿತ್ರಿಕ ಮಹತ್ವದ ಘಟನೆ. ಈ ಸತ್ಯಾಗ್ರಹದ ಕಹಳೆ ಭಾರತದಾದ್ಯಂತ ಮೊಳಗಿತು; ಕಾಸರಗೋಡಿನಲ್ಲಿಯೂ ಉತ್ಸಾಹ ಉಕ್ಕಿತು. ಕಾಸರಗೋಡು ಮಲ್ಲಿಕಾರ್ಜುನ ದೇವಸ್ಥಾನದ ಮುಂದೆ ಸಭೆ ಸೇರಿತು, ಉಮೇಶರಾಯರೂ ಅವರ ಪತ್ನಿಯವರೂ ಸತ್ಯಾಗ್ರಹದಲ್ಲಿ ಭಾಗಿಗಳಾದರು. ಕಾಸರಗೋಡಿನ ಗೌಡಸಾರಸ್ವತ ಬ್ರಾಹ್ಮಣ ಮಹಿಳೆಯರೂ ಸಭೆಯಲ್ಲಿ ಪಾಲ್ಗೊಂಡರು, ಅಲ್ಲಲ್ಲಿ ವಿದೇಶಿ ವಸ್ತ್ರದಹನವೂ ಆಯಿತು, ಖಂಡಿಗೆ ಕೃಷ್ಣಭಟ್ಟರು, ಪಾಣಾಜೆ ವೈದ್ಯ ಶಂಕರನಾರಾಯಣ ಭಟ್ಟರು, ಕೋಟಚ್ಚರಿ ಅಚ್ಯುತ ಶಣೈ ಮೊದಲಾದ ಹಲವಾರು ಮುಖಂಡರು ಸೆರೆಮನೆ ಸೇರಿದರು, ಸತ್ಯಾಗ್ರಹಿಗಳ ಮೇಲೆ ತೀವ್ರ ಮರ್ದನ ಕಾರ್ಯ ತೊಡಗಿತು; ಪೆÇೀಲೀಸರು ಅವರಿಗೆ ಹೊಡೆದು ಮೂರ್ಛೆ ತಪ್ಪಿದ ಮೇಲೆ ಎಳೆದು ಚರಂಡಿಗೆ ಹಾಕುತ್ತಿದ್ದರು; ಸತ್ಯಾಗ್ರಹಿ ದೆಯ್ಯಂದ್ರೆ ಬೀರು ಶೆಟ್ಟರನ್ನು ಹಾಗೆ ಮೂರ್ಛೆ ಬರುವ ತನಕ ಹೊಡೆದು ಬೀಳಿಸಿದರು; ಹಲವರನ್ನು ಅಸಹನೀಯ ಯಾತನೆಗೆ ಗುರಿಪಡಿಸಿದರು; ಉಪ್ಪು ಮಾರಾಟ ಮಾಡುವ ಸತ್ಯಾಗ್ರಹಿಗಳ ಕೈಯಿಂದ ಪೆÇೀಲೀಸರು ಉಪ್ಪನ್ನು ಸೆಳೆಯುತ್ತಿದ್ದಾಗ, ಬಿಗಿದ ಮುಷ್ಟಿಯನ್ನು ಬಲಾತ್ಕಾರವಾಗಿ ಬಿಡಿಸುವಲ್ಲಿ ಬೆರಳು ಮುರಿಯುತ್ತಿತ್ತು; ಆದರೂ ಮುಷ್ಠಿ ಬಿಡುತ್ತಿರಲಿಲ್ಲ. ಕಾಸರಗೋಡಿನ ಮುಖಂಡರು ಹಲವರು, ಆಗಿನ ಜಿಲ್ಲಾ ಕೇಂದ್ರವಾದ ಮಂಗಳೂರಲ್ಲಿಯೇ ಸತ್ಯಾಗ್ರಹ ಹೂಡಿ ಸೆರೆಮನೆ ಸೇರಿದರು; ಕಳ್ಳಿನಂಗಡಿಯ ಪಿಕೆಟಿಂಗ್ ನಡೆಯಿತು; ಅಲ್ಲಿಯೂ ಪೆÇೀಲೀಸರಿಂದ ಮರ್ದನ ತೊಡಗಿತು. 1926ರಿಂದ 1932ರ ತನಕ ರಂಗೂನಿನಲ್ಲಿದ್ದ ದೇವಪ್ಪ ಆಳ್ವರು ಅಲ್ಲಿ ಸ್ವಾತಂತ್ರ್ಯ ಸಂದೇಶ ಸಾರಿದರು. 1932 ಜುಲ್ಕಾ 21ರಂದು ಬೊಂಬಾಯಿಗೆ ಬಂದ ಅವರು ವಿದೇಶಿ ವಸ್ತ್ರ ಬಹಿμÁ್ಕರ ಚಳವಳದಲ್ಲಿ ಭಾಗವಹಿಸಿ ಸೆರೆಮನೆ ಸೇರಿದರು.
        1932ರ ಜನವರಿಯಲ್ಲಿ ಗಾಂಧೀಜಿ ಬಂಧನವಾಗಿ, ಕಾಂಗ್ರೆಸ್ ಸಂಸ್ಥೆ ಕಾನೂನುಬಾಹಿರವೆಂದು ಸರಕಾರ ಸಾರಿದಾಗ ಕಾಸರಗೋಡು ಪ್ರದೇಶದಲ್ಲಿಯೂ ಸಭೆ ಮೆರವಣಿಗೆಗಳಾದುವು; ಮಾಧವನ್, ಮಾಲಿಂಗ ಮಣಿಯಾಣಿ ಪ್ರಮುಖರು ಹೊಸದುರ್ಗದಲ್ಲಿ, ಉಮೇಶರಾವ್, ರಾಮಹೆಗ್ಡೆ, ಲಕ್ಷಣ ಹೆಗ್ಡೆ, ಕೃಷ್ಣ ಮನೊÉಳಿತ್ತಾಯರೆ ಮೊದಲಾದವರು ಕಾಸರಗೋಡಿನಲ್ಲಿ ಸಭೆ ಮೆರವಣಿಗೆ ಸತ್ಯಾಗ್ರಹ ಹೂಡಿದರು. ಮಾಲಿಂಗ ಮಣಿಯಾಣಿ ಪೆÇೀಲೀಸರ ಪೆಟ್ಟಿನಿಂದ ಮೃತರಾದರು; ಅವರ ಹೆಸರಲ್ಲಿ ಹೊಸದುರ್ಗದಲ್ಲಿ ಮಾಲಿಂಗನಗರ ನಿರ್ಮಾಣವಾಯಿತು. ಸತ್ಯಾಗ್ರಹಿಗಳನ್ನು ಹೊಡೆಯುವುದು, ರಾತ್ರಿ ಕೊಂಡೊಯ್ದು ಎಲ್ಲಿಯೋ ಬಿಡುವುದು, ಅವರು ಪುನಃ ನಡೆದುಕೊಂಡು ಬಂದು ಸತ್ಯಾಗ್ರಹ ಹೂಡುವುದು, ಇದು ನಡೆಯಿತು. ಡಾ| ಎನ್. ನಾರಾಯಣ ಭಟ್ಟ, ಎಚ್. ವಾಸುದೇವ, ಉಮಾನಾಥ ರಾವ್, ಬೈಲಂಗಡಿ ರಾಮ ಆಗ್ಗಿತ್ತಾಯ, ವಾಮನ ಭಟ್ಟಿ ಮೊದಲಾದವರೂ ಈ ಚಳವಳದಲ್ಲಿ ಸೇರಿಕೊಂಡರು. ಈ ಸಂದರ್ಭದಲ್ಲಿ ಅರಣ್ಯ ಸತ್ಯಾಗ್ರಹ ಕಾಸರಗೋಡು ಪ್ರದೇಶದಲ್ಲಿ ರಭಸದಿಂದ ಸಾಗಿತು. ಕಾಡಿಗೆ ಪ್ರವೇಶಿಸುವುದು, ಗಂಧದ ಮರ ಕಡಿಯುವುದು, ಪೆÇೀಲೀಸರಿಂದ ಪೆಟ್ಟು ತಿನ್ನುವುದು, ಬಂಧಿತರಾಗುವುದು - ಈ ಸತ್ಯಾಗ್ರಹ ಕಾಸರಗೋಡು ತಾಲೂಕಿನ ಕಾರಡ್ಕ, ಮುಳ್ಳೇರಿಯಾ, ಆದೂರು ಮೊದಲಾದ ಕಡೆಗಳು ತೀವ್ರಗತಿಯಿಂದ ನಡೆಯಿತು. ಆಗ ಆ ಗ್ರಾಮದ ಪಠೇಲರು ಪಂಬೆತ್ತಡ್ಕ ವಿಷ್ಣು ಕಡಂಬಳಿತ್ತಾಯರು, ಅವರು ಸತ್ಯಾಗ್ರಹಿಗಳಿಗೆ ಸಹಾಯಮಾಡಿದರೆಂದು ಅವರನ್ನು ಪಠೇಲಿಕೆಯಿಂದ ಸರಕಾರ ತೆಗೆದುಹಾಕಿತು; 1937ರಲ್ಲಿ ರಾಜಾಜಿ ಮಂತ್ರಿಮಂಡಳ ಮದ್ರಾಸಿನಲ್ಲಿ ರಚನೆಯಾದಾಗ

ಅವರ ಪನರ್ ನೇಮಕÀವಾಯಿತು. ಕ್ವಿಟ್ ಇಂಡಿಯಾ ಚÀಳವಳದಲ್ಲಿಯೂ ಅವರು ಭಾಗವಹಿಸಿದರು. ನಾರಂತಟ್ಟ  ಕೃಷ್ಣ ನಂಬಿಯಾರರು ಆರಣ್ಯ ಸತ್ಯಾಗ್ರಹಿಗಳಿಗೆ ಸಹಾಯಮಾಡಿದರು. ಕಾಸರಗೋಡು ಪೇಟೆಯಲ್ಲಿ ಪೆÇಲೀಸರ ತೀವ್ರ ಮರ್ದನಕ್ಕೆ ಗುರಿಯಾಗಿ ಗಾಯÀಗೊಂಡ ಸ್ವಯಂ ಸೇವಕರಿಗೆ ಡಾ| ಪಿ. ವಿಠಲಭಂಡಾರಿಯವರು ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರು. ಮತ್ತೆ ಗಾಂಧಿ ಇರ್ವಿನ್ ಒಪ್ಪಂದದಂತೆ ಒಮ್ಮೆ ಸತ್ಯಾಗ್ರಹ ನಿಲ್ಲಿಸಲ್ಪಟ್ಟಿತು. 1934ರಲ್ಲಿ ಎರಡನೆಯ ಸಲ ಗಾಂದೀಜಿ ಮುಗಳೂರಿಗೆ ಬಂದಾಗ ಅವರಿಗೆ ದೊರಕಿದ ಸ್ವಾಗತ ಸಮಾರಂಭದಲ್ಲಿ ಕಾಸರಗೋಡಿನ ಕಾರ್ಯಕರ್ತರು ಸೇರಿಕೊಂಡು ತಮ್ಮ ಅಭಿಮಾನವನ್ನು ತೋರ್ಪಡಿಸಿದರು.
         1927ರ ಸುಮಾರಿಗೆ ನಾನು ಬದಿಯಡ್ಕ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾಗ, ಅಲ್ಲಿನ ಮುಖ್ಯೋವಾದ್ಯಾಮರಾದ ಕೃμÁ್ಣನಂತ ಪೈ ಎಂಬವರು ಗಾಂಧೀಜಿ ಮಂಗಳೂರಿಗೆ ಬರುತ್ತಾರೆಂದೂ ಅಲ್ಲಿಗೆ ನಮ್ಮನ್ನು ಕರೆದುಕೊಂಡು ಹೋಗುವದಾಗಿಯೂ ತಿಳಿಸಿದರು; ಆ ಸಂದರ್ಭದಲ್ಲಿ ಎಲ್ಲರೂ ಖಾದಿಯನ್ನೇ ಹಾಕಿಕೊಳ್ಳುವ ವ್ರತ ಅಂಗೀಕರಿಸಬೇಕೆಂದು ಸೂಚಿಸಿ, ನಾವು ಆ ಮುಖ್ಯೋಪಾಧ್ಯಾಯರ ನೇತೃತ್ವದಲ್ಲಿ 'ಸುಶೀಲಾ' ಎಂಬ ಹಸ್ತಾಕ್ಷÀರದ ಪತ್ರಿಕೆ ಸಂಪಾದಿಸುತ್ತಿದ್ದೆವು, ಆದರ ವಿಶೇಷ ಸಂಚಿಕೆ  ಒಂದನ್ನು ತಯಾರಿಸಿ ಗಾಂಧೀಜಿಗೆ ಕೊಡಬೇಕೆಂದೂ ಅವರು ಹೇಳಿದರು, ಆ ಪತ್ರಿಕೆಗೆ ಬಾಲಕ ಧ್ರುವನ ಕುರಿತು ಒಂದು ಲೇಖನ ಒಟ್ಟ -12 ಪುಟ. ಹಾಗೆ ಎಲ್ಲವೂ ಸಿದ್ದವಾಯಿತು, ಕೊನೆಗಳಿಗೆಯಲ್ಲಿ ಮಂಗಳೂರಿಗೆ ಗಾಂಧೀಜಿ ಬಂದಾಗ ನನಗೆ ಆ ಪಂಗಡದಲ್ಲಿ ಸೇರಿ ಅವರ ದರ್ಶನ ಮಾಡುವ ಭಾಗ್ಯ ದೊರಕಲಿಲ್ಲ. ಆದರೆ ಅಂದಿನಿಂದ ಖಾದಿಯನ್ನು ವ್ರತದಂತೆ ತೊಟ್ಟುಕೊಳ್ಳಲು ನಿಶ್ಚಯಿಸಿ, ಸ್ವಾತಂತ್ರ ಸಂಗ್ರಾಮದ ಕುರಿತು ವಿಶೇಷ ಆಸಕ್ತಿ ವಹಿಸಿದೆ. ಮುಂದೆ, 1930ರ ಸಮಯಕ್ಕೆ ನಾನು ಕಲಿಯುತ್ತಿದ್ದ ಮಹಾಜನ ಸಂಸ್ಕøತ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದ ವೆಂಕಪ್ಪ ಶರ್ಮಾ ಮೊದಲಾದವರು ರಾಷ್ಟ್ರೀಯವಾದಿಗಳಾಗಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುತ್ತಿದ್ದರು, ಆ ಕಾಲೇಜಿನ ಆಡಳಿತ ಮಂಡಳಿಯವರಾದ ಖಂಡಿಗೆ ಕೃಷ್ಣ ಭಟ್ಟರು ಮತ್ತು ಅವರ ಭಾವನೆಂಟನಾದ ಪಾಣಾಜೆ ವೈದ್ಯ ಶಂಕರನಾರಾಯಣ ಭಟ್ಟರೂ ಸತ್ಯಾಗ್ರಹ ಹೂಡಿ ಸೆರೆಮನೆಗೆ ಹೋಗಿದ್ದರು. ಪ್ರಸಿದ್ಧ ವಾಗ್ಮಿ ನಾರಾಯಣ ಕಿಲ್ಲೆಯವರು, ತುಳು ಚಳವಳದ ಮುಂದಾಳುಗಳಾದ ಪಣಿಯಾಡಿ, ಶೀನಪ್ಪ ಹೆಗ್ಡೆ ಮೊದಲಾದವರು ಇದ್ದ ಸೆರೆಮನೆಯಲ್ಲಿಯೇ ಖಂಡಿಗೆ ಕೃಷ್ಣಭಟ್ಟರೂ ಇದ್ದರು. ತುಳು ವ್ಯಾಕರಣವೊಂದನ್ನು ಅಲ್ಲಿ ಬರೆಯ ತೊಡಗಿದ ಪಣಿಯಾಡಿದವರಿಗೆ ನೋಡಲು ಬೇಕೆಂದು, ಮಹಾಜನ ಕಾಲೇಜಿನಿಂದ ಪಾಣಿನಿ ವ್ಯಾಕರಣವನ್ನು ಇತರ ಗ್ರಂಥಗಳನ್ನೂ ಖಂಡಿಗೆ ಕೃಷ್ಣಭಟ್ಟರು ಸೆರೆಮನೆಗೆ ತರಿಸಿಕೊಂಡ ವಿಷಯವೂ ನನಗೆ ನೆನಪಿದೆ; ಮತ್ತೆ ಸೆರೆಮನೆವಾಸ ಮುಗಿಸಿ ಮುರಳುವಾಗ ಕಾಲೇಜ್ ಅದ್ಯಾಪಕರೂ, ನಾವು ವಿದ್ಯಾರ್ಥಿಗಳೂ ಖಂಡಿಗೆ ಕೃಷ್ಣಭಟ್ಟರನ್ನು ಸಂಭ್ರಮದಿಂದ ಸ್ವಾಗತಿಸಿದೆವು; ನಾವೇ ನೂತ ನೂಲಿನಿಂದ ಬಟ್ಟೆ ತಯಾರಿಸಿ ಅವರಿಗೆ ಕಾಣಿಕೆ ನೀಡಿದೆವು.
         ಕಾಂಗ್ರೆಸ್ ಸುವರ್ಣ ಮಹೋತ್ಸವದ ಆಚರಣೆ ಈ ಪ್ರದೇಶದಲ್ಲಿಯೂ ಎಲ್ಲಾ ಕಡೆ ಆಚರಿಸಲ್ಪಟ್ಟಿತು. ಈ ಹೊತ್ತಿಗೆ ಕಾಂಗ್ರೆಸ್ ಸೊಶಿಯಲಿಸ್ಟ್ ಪಕ್ಷದ ಅವಿರ್ಭಾವವಾಗಿ, ಕಾಂಗ್ರೆಸ್ ಪಕ್ಷ ಎಡ-ಬಲವೆಂದು ಇಬ್ಬಾಗವಾಯಿತು. 1937ರಲ್ಲಿ ಬ್ರಿಟಿμï ಅಧಿಪತ್ಯದ ಅಧೀನದಲ್ಲಿಯೇ ಕಾಂಗ್ರೆಸ್‍ಪಕ್ಷ ಶಾಸನಸಭೆಯನ್ನು ಪ್ರವೇಶಿಸಲು ನಿರ್ಣಯಮಾಡಿದ ಸಂದರ್ಭದಲ್ಲಿ ಕಾಸರಗೋಡು ಪುತ್ತೂರು ಮತದಾರಕ್ಷೇತ್ರವನ್ನು ಕೆ.ಆರ್. ಕಾರಂತರು ಪ್ರತಿನಿಧೀಕರಿಸಿದರು; ಅವರ ಅಂದಿನ ಚುನಾವಣೆಯ ವಿಜಯವು ಸ್ವಾತಂತ್ರ್ಯ ಸಂಗ್ರಾಮದ ಭಾಗವೇ ಎಂಬ ಸ್ಫೂರ್ತಿ ನೀಡಿತು. ಮದ್ರಾಸಿನಲ್ಲಿ ಸ್ಥಾಪಿತವಾಗಿದ್ದ ಜಸ್ಟಿಸಪಾರ್ಟಿ ಕಾಂಗ್ರೆಸ್‍ಗೆ ಇದಿರಾಗಿ ಇಲ್ಲಿಯೂ ನಿಲ್ಲಿಸಿದ ಅಭ್ಯರ್ಥಿಗಳು ಪ್ರಚಂಡವಾದ ಸೋಲನ್ನು ಅನುಭವಿಸಿದರು. ಕೆ.ಆರ್. ಕಾರಂತರ, ಎ.ಬಿ. ಶೆಟ್ಟರೂ ರಾಜಾಜಿ ಮಂತ್ರಿಮಂಡಳದಲ್ಲಿ ಪಾರ್ಲಿಮೆಂಟರಿ ಕಾರ್ಯದರ್ಶಿಗಳಾಗಿ ಅಧಿಕಾರ ಸ್ವೀಕರಿಸಿದರು. ಮುಂದೆ ಮದ್ರಾಸ್ ಮಂತ್ರಿಮಂಡಳ ರಚಿಸಿದ ಪ್ರಕಾಶಂ ಮಂತ್ರಿ ಮಂಡಳದಲ್ಲಿ ಕಾಸರಗೋಡು - ಪುತ್ತೂರು ಪ್ರದೇಶದ ಪ್ರತಿನಿಧಿ ಕಾರಂತರು ರೆವೆನ್ಯೂ ಮಂತ್ರಿಯಾದರು.
         ಕಾಸರಗೋಡು ತಾಲೂಕಿನ ಉತ್ತರಭಾಗದಲ್ಲಿ ಸೋಶಿಯಲಿಸ್ಟ ಸಂಘಟನೆಯೂ, ಕಮ್ಯುನಿಸ್ಟ ಸಂಘಟನೆಯೂ 1937ರಿಂದ ಬಲಗೊಳ್ಳುತ್ತಾ ಬಂತು, ಸೋಶಿಯಲಿಸ್ಟರಾಗಿ ಪ್ರಥಮ ಪರಿವರ್ತನೆ ಹೊಂದಿದ ಮುಖಂಡರನೇಕರು ಕಮ್ಯೂನಿಸ್ಟವಾದವು. 1938ರ ದಶಂಬರದಲ್ಲಿ ಮಂಗಳೂರು ಜಿಲ್ಲಾ ಕಲೆಕ್ಟರರಲ್ಲಿಗೆ ಸುಬ್ರಹ್ಮಣ್ಯನ್ ತಿರುಮುಂಬು ಇವರ ನೇತೃತ್ವದಲ್ಲಿ ರೈತರ ಒಂದು ಜಾಥಾ ಹೊರಟು ಮನವಿ ಸಮರ್ಪಿಸಿತು. 1939ರಲ್ಲಿ ಅಲ್ಲಲ್ಲಿ ಎಡಪಕ್ಷಗಳ ಸಮ್ಮೇಳನ ಸೇರಿ ಈ ಚಳವಳಿಯ ಮುಖಂಡರು 1940ರಲ್ಲಿ ಭೂಗತರಾದರು. ಅದೇ ಕಾಲಕ್ಕೆ ಕಯ್ಯೂರು ಹೋರಾಟವೂ ನಡೆಯಿತು. ಒಕ್ಕೆಲೆಬ್ಬಿಸುವ ವರ್ಗದವರ ವಿರುದ್ದ ಈ ಸಮರ. ಒಕ್ಕಲೆಬ್ಬಿಸಿದರೆ ಆ ಗದ್ದೆಗಳಿಗೆ ಕೃಷಿ ಕಾರ್ಮಿಕರು ಸಿಗುತ್ತಿರಲಿಲ್ಲ. ಬಂಧನ ವಿರೋಧಿಸಿ ಮೆರವಣಿಗೆ ನಡೆಯಿತು.  
       ಕಾಸರಗೋಡಿನ ಕವಿಗಳ ಸ್ವಾತಂತ್ರ್ಯ' ಗೀತೆಗಳನ್ನು ಹಾಡಿದ್ದಾರೆ; ಇವರಲ್ಲಿ ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚತ್ತಾಯರ ಹೆಸರು ಗಣನೀಯ, 'ರಾಷ್ಟ್ರಗೀತ ರತ್ನಾಕರ' ಎಂಬ ಹೆಸರಿನ ಅವರು ಒಂದು ಕವಿತಾಗುಚ್ಚ ಸಂಪೂರ್ಣ ರಾಷ್ಟ್ರೀಯ ಹಾಡುಗಳಿಂದಲೇ ಕೂಡಿದೆ, ನನ್ನ ಚೊಚ್ಚಲ ಕವನ ಸಂಗ್ರಹವಾದ 'ಶ್ರೀಮುಖ'ದ ಮೊದಲಪದ್ಯವೆ ರಾಷ್ಟ್ರ ಗೀತೆ, ಅಂತೆ ನನ್ನÀ ಪುನರ್ನವ, ಐಕ್ಯಗಾನ, ಚೇತನ, ಕೊರಗ, ಶತಮಾನದಗಾನ - ಈ ಎಲ್ಲವೂ ದೇಶಭಕ್ತಿಯ ಹಲವು ಕವನಗಳಿವೆ.
         1939 ರಲ್ಲಿ ದ್ವಿತೀಯ ಮಹಾಯುದ್ಧ ಪ್ರಾರಂಭವಾಯಿತು; ಪ್ರಾಂತಪ್ರಾಂತಗಳಲ್ಲಿ ಜನತೆಯಿಂದ ಆಯ್ಕೆಗೊಂಡ ಮಂತ್ರಿಮಂಡಳ ಅಧಿಕಾರದಲ್ಲಿದ್ದರೂ, ಅವರೊಡನೆ ಒಂದು ಮಾತೂ ಕೇಳದೆ, ಭಾರತ ಯುದ್ಧದಲ್ಲಿ ಸೇರಿದೆ ಎಂದು ಸಾರಿದ ಬ್ರಿಟಿμï ಸರಕಾರದ ನೀತಿಗೆ ವಿರೋಧವಾಗಿ 1940ರಲ್ಲಿ ವೈಯುಕ್ತಿಕ ಸತ್ಯಾಗ್ರಹವನ್ನು ಗಾಂಧೀಜಿ ಪ್ರಾಂಭಿಸಿದರು. ''ಪ್ರಥಮ ಮಹಾ ಯುದ್ಧದಲ್ಲಿ ನಿಮಗೆ ಸಹಾಯ ಮಾಡಿದೆವು, ಅದರ ಪ್ರತಿಫಲವಾಗಿ ನಮಗೆ ದೊರೆತದ್ದು ಸೆರೆಮನೆವಾಸ, ಲಾಠಿಬಿಟ್ಟು, ದಬ್ಬಾಳಿಕೆಗಳು; ಮತ್ತೆ ಈಗ ಯುದ್ಧ ಬಂದಿದೆ. ಇದು ನಮ್ಮ ಯುದ್ಧವಲ್ಲ; ಇದು ಸಾಮಾಜಶಾಹಿತ್ವವನ್ನು ಬಲಪಡಿಸುವ ಯುದ್ಧ, ಇದರಲ್ಲಿ ನಿಮಗೆ ಸಹಾಯ ಮಾಡಲಾರೆವು.' ಹೀಗೆಂದು ಗಾಂಧೀಜಿ ಮುಂದಾಳುತನದಲ್ಲಿ ಕಾಂಗ್ರೆಸ್‍ಪಕ್ಷ ಸಾರಿತು; ಯುದ್ಧ ವಿರುದ್ಧ ಘೋಷಣೆ ಮಾಡಿ ವೈಯಕ್ತಿಕ ಸತ್ಯಾಗ್ರಹ ಪ್ರಾರಂಭವಾಯಿತು. ಭಾರತಸರ್ವತ್ರ ಈ ಸತ್ಯಾಗ್ರಹ ಸಮರ ನಡೆದಂತೆ ಕಾಸರಗೋಡು ಪ್ರದೇಶದಲ್ಲಿಯೂ ಭುಗಿಲೆದ್ದಿತು.

ವಿನೋಬಾಜಿ ವೈಯಕ್ತಿಕ ಸತ್ಯಾಗ್ರಹದ ಮೊದಲ ಸತ್ಯಾಗ್ರಹಿ ಅವರ ಬಂಧನದ ನಂತರ ನೆಹರೂ ಬಂಧನ. ನವಂಬರ 2ರಲ್ಲಿ ಕೋಟಿಚೇರಿ, ಕಾಸರಗೋಡು ಈ ಎಲ್ಲಾ ಸ್ಥಳಗಳಲ್ಲಿಯೂ ಹರತಾಳ ನಡೆಯಿತು. ಪೆರಡಾಲದಲ್ಲಿ ಡಾ| ಪಿ.ಎಸ್. ಶಾಸ್ತ್ರಿ, ಕೆ.ಟಿ. ಶಂಕರ್, ಕಮಲಾಕ್ಷ ಪೈ, ಬೀರು ಶೆಟ್ಟಿ, ಎಸ್. ರಾಮಭಟ್ಟರೇ ಮೊದಲಾದವರು, ಕುಂಬಳೆಯಲ್ಲಿ ದೇವಪ್ಪ ಆಳ್ವ, ಮಾಧವ ಪೈ, ಪ್ರಬೃಕೃತಿಗಳು, ಕಾಸರಗೋಡಿನಲ್ಲಿ ಉಮೇಶರಾವ್, ಅಚ್ಯುತನ್, ಎಂ.ಕೆ. ರಾಮ ಮೊದಲಾದವರೂ ಸೇರೆಮನೆ ಸೇರಿದರು; ಮೊದಮೊದಲು ಸತ್ಯಾಗ್ರಹ ಹೂಡಿದವರನ್ನು ಬಂಧಿಸಿದರೂ, ಆ ಮೇಲೆ ಯಾರನ್ನೂ ಬಂಧಿಸದೆ ಇದ್ದಾಗ, ಅವರೆಲ್ಲರೂ ಯುದ್ಧ ವಿರೋಧ ಘೋಷಣೆ ಮಾಡುತ್ತಾ ಸಾಗಿ ಭಟ್ಕಳದಲ್ಲಿ ಮುಂಬಯಿ ರಾಜ್ಯದ ಗಡಿಯಲ್ಲಿ ಬಂಧಿತರಾಗಿ ಸೆರೆಮನೆ ಸೇರಿದರು.
           ಬಂಧಿತರಾಗದೆ, ಭಟ್ಕಳದ ಕಡೆಗೆ ಹೊರಟ ಸತ್ಯಾಗ್ರಹಿಗಳಲ್ಲಿ ಕುಂಬಳೆಯ ಬಿ. ಮಾಧವ ಪೈಗಳು ಒಬ್ಬರು. ಅವರು ಕುಂಬಳೆಯಿಂದ ಹೊರಟು ಮಂಗಳೂರಿಗೆ ಬರುವ ದಿನ ನನಗೂ ತಿಳಿಸಿದ್ದರು. ನಾನು ಅವರನ್ನು ಮಂಗಳೂರು ಮೈದಾನದಲ್ಲಿ ಭೇಟಿಯಾದೆ. ಅವರ ಜತೆಯಲ್ಲಿ ಇಬ್ಬರೋ ಮೂವರೋ ಅವರ ಮಕ್ಕಳೂ ಬಂದಿದ್ದರು, ತಂದೆ ತಮ್ಮನ್ನು ಬಿಟ್ಟು ಸೆರೆಮನೆಗೆ ಹೋಗುತ್ತಾರೆ ಎಂಬ ಕಳವಳ ಆ ಮುಗ್ಧ ಮಕ್ಕಳ ಮುಖದಲ್ಲಿ ಕಾಣುತ್ತಿತ್ತು; ಮರಳಿ ಕುಂಬಳೆಗೆ ಮಕ್ಕಳನ್ನು ಕಳುಹಿಸುವುದಾಗಿಯೂ ಪೈಗಳು ಹೇಳಿದರು; ತಂದೆ ಮಕ್ಕಳ ಕಣ್ಣುಗಳು ಒದ್ದೆಯಾಗಿದ್ದುವು; ಸೆರೆಮನೆಗೆ ಹೋದವರು ಮರಳಿ ಬಾರದ ಪ್ರಸಂಗಗಳೂ ಆಗ ಇದ್ದುವು; ಸತ್ಯಾಗ್ರಹಿಗಳು ಲಾಥಿಪೆಟ್ಟು ಗುಂಡುಗಳಿಗೆ ಆಹುತಿಯಾದ ಸಂದರ್ಭವೂ ಬೇಕಾದಷ್ಟು ಇತ್ತು. ಇಂತಹ ಅನೀರಿಕ್ಷಿತ ಘಟನೆಗಳನ್ನು ನೆನಪು ಮಾಡಿಕೊಂಡು ಸಂಕಟವೆನಿಸಿತು. ಇದೇ ರೀತಿ, ಪೆರಡಾಲದ ಡಾ| ಶಾಸ್ತ್ರಿಗಳೂ ಪ್ರಾಕ್ಟಿಸ್ ಪ್ರಾರಂಭಿಸಿ ಹೆಚ್ಚುಕಾಲ ಆಗಿರಲಿಲ್ಲ;
    ಮನೆಯಲ್ಲಿ ಹಿರಿಯರಿಂದ ಬಂದ ಆರ್ಥಿಕ ಶ್ರೀಮಂತಿಕೆ ಇರಲಿಲ್ಲ; ತುಂಬು ಸಂಸಾರ, ತನ್ನ ಸಾರ್ವಜನಿಕ ಸೇವಾದೀಕ್ಷೆಯಿಂದ ಗಳಿಸಿದಕ್ಕಿಂತ ಹೆಚ್ಚು ವೆಚ್ಚ ಮಾಡಿ ಎಲ್ಲ ಬರಿದಾದ ಸ್ಥಿತಿ; ಅವರೂ ಹಿಂದುಮುಂದೆ ನೋಡದೆ ಸತ್ಯಾಗ್ರಹ ಸಮರಕ್ಕೆ ಧುಮುಕಿದ್ದರು.
          ನಾನಾಗ ಮಂಗಳೂರು ಸ್ವದೇಶಾಭಿಮಾನಿ ಪತ್ರಿಕೆಯಲ್ಲಿ ಉಪಸಂಪಾದಕನಾಗಿ ಉದ್ಯೋಗದಲ್ಲಿದ್ದೆ ಸತ್ಯಾಗ್ರಹಿಯಾಗಿ ನಾನೂ ಆಯ್ಕೆಗೊಂಡಿದ್ದೆ; ಕಾಂಗ್ರೆಸ್‍ಪಕ್ಷದಲ್ಲಿ ಹಾಗೂ ಅಧಿಕಾರ ಸ್ಥಾನದಲ್ಲಿ ಇದ್ದವರು ಪ್ರಾತಿನಿಧಿಕ ರೀತಿಯಲ್ಲಿ ಮೊದಲು ಸತ್ಯಾಗ್ರಹ ಹೂಡಬೇಕೆಂದು ನಿರ್ದೇಶನವಿತ್ತು ; ಮಂತ್ರಿಗಳಾದವರು, ಎಂ.ಎಲ್.ಎ.ಗಳಾದವರು, ಜಿಲ್ಲಾ ಬೋರ್ಡು ಅಧ್ಯಕ್ಷರು, ಸದಸ್ಯರು, ಮುನ್ಸಿಪಲ್ ಕೌನ್ಸಿಲರು, ಅಧ್ಯಕ್ಷರು, ಕಾಂಗ್ರೆಸ್ ಕಮಿಟಿಗಳ ಅಧ್ಯಕ್ಷರು, ಸದಸ್ಯರು ಇವರೆಲ್ಲರ ಸತ್ಯಾಗ್ರಹದ ಪಟ್ಟಿ ಮೊದಲು ಮುಗಿದು ಆ ಮೇಲೆ ನನ್ನಂತಹವರ ಸರದಿ ಆಗಬೇಕಿತ್ತು ; ನಾನು ಯಾವುದೇ ಪ್ರಾತಿನಿಧಿಕ ಸ್ಥಾನದಲ್ಲಿರಲಿಲ್ಲವಾಗಿ ಸರದಿಗೆ ಕಾಯುತ್ತಿದ್ದ. ಅದೇ ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೀಕರವಾದ ನೆರೆ ಪಾವಳಿ ಉಂಟಾಯಿತು; ಪತ್ರಿಕೋದ್ಯಮಿಯಾಗಿದ್ದ ನಾನು ಜಿಲ್ಲೆಯಾದ್ಯಂತ ಸಂಚರಿಸಿ ನೆರೆಹಾವಳಿಯ ಸಂಕಷ್ಟವನ್ನು ವಿವರವಾಗಿ ವರದಿ ಮಾಡಿದೆ. ನನ್ನ ಆ ವರದಿ ಮದ್ರಾಸಿನ ಇಂಗ್ಲಿμï ಪತ್ರಿಕೆಗಳಲ್ಲಿಯೂ ಪ್ರಾಮುಖ್ಯವಾಗಿ ಪ್ರಕಟವಾಯಿತು. ಸರಕಾರ ಮತ್ತು ಕಾಂಗ್ರೆಸ್ ಪಕ್ಷ - ಎರಡೂ ನೆರೆ ಪರಿಹಾರ ಕಾರ್ಯವನ್ನು ತೀವ್ರಗತಿಯಿಂದ ಪ್ರಾರಂಭಮಾಡಿದವು. ಗಾಂಧೀಜಿ, ನನಗೂ ಎಚ್.ಕೆ. ತಿಂಗಳಾಯರಿಗೂ ನೆರೆ ಪರಿಹಾರ ಕಾರ್ಯ ಕೈಗೊಳ್ಳುವಂತೆ ಆದೇಶ ನೀಡಿದರು. ಸೆರೆಮನೆಯ ಕತ್ತಲುಕೋಣೆಯಲ್ಲಿ ಬಿದ್ದಿರುವುದಕ್ಕಿಂತ, ಹಳ್ಳಿಹಳ್ಳಿಗಳಿಗೆ ಹೋಗಿ ಸಂತ್ರಸ್ತರಾದ ನಾಡಿನ ನಮ್ಮ ಬಾಂಧವರ ಕಂಬನಿಯೊರೆಸುವ ಪುಣ್ಯ ಪಾಲು ನನಗೂ ಅದರಿಂದಾಗಿ ದೊರಕಿತು.
         ಇದೇ ಸಂದರ್ಭದಲ್ಲಿ ದೇವಪ್ಪ ಆಳ್ವರು ವೈಯಕ್ತಿಕ ಸತ್ಯಾಗ್ರಹ ಹೂಡಲು ನಿಶ್ಚಯಿಸಿ ನಾನು ಉದ್ಯೋಗದಲ್ಲಿದ್ದ 'ಸ್ವದೇಶಾಭಿಮಾನಿ' ಕಚೇರಿಗೆ ಒಂದು ದಿನ ಬಂದರು. ಕುಂಬಳೆ ದೇವಸ್ಥಾನದ ಇದಿರಲ್ಲಿ ಸತ್ಯಾಗ್ರಹವನ್ನು ಇಂಥಾ ದಿವಸ ತಾನು ಮಾಡುವುದಾಗಿ ತಿಳಿಸಿದರು; ಆದಿನ ಅಲ್ಲಿ ಬರುತ್ತೇನೆಂದು ಹೇಳಿದೆ, ಪತ್ರಿಕೆಯ ಬಗೆಗೂ ವರದಿ ಮಾಡಲು ಹೋಗಬೇಕಾದ ಅವಶ್ಯವಿತ್ತು. ಸತ್ಯಾಗ್ರಹಿಯಾಗಿ ಹೊರಟ ಅವರು ನನ್ನೊಡನೆ ಕೆಲವೊಂದು ಆತ್ಮೀಯ ವಿಷಯಗಳನ್ನು ಹೇಳಿದರು. ಸಂಗ್ರಾಮಕ್ಕೆ ಹೊರಟವನು ಮರಳಿ ಬರುತ್ತಾನೆ ಎಂಬ ಭರವಸೆ ಇಲ್ಲವμÉ್ಟ. ಅದೇ ದಾಟಿಯಲ್ಲಿ ನನ್ನೊಡನೆ ಕೆಲವೊಂದು ಅವರ ಆಪ್ತವಿಚಾರಗಳನ್ನು ತಿಳಿಸಿದರು. ಅವರ ಆ ಮನಸ್ಥಿತಿಯನ್ನು ಕಂಡು ನಾನು ಬೆರಗಾದ; ಆ ಸ್ಥಿತಪ್ರಜ್ಞತೆ, ಗಾಂಧೀಜಿಯ ಸರಿಯಾದ ಅನುಯಾಯಿಗಳಿಗೆ ಮಾತ್ರ ದಕ್ಕುವಂತಹುದೆಂದು ನಾನು ಅರ್ಥಮಾಡಿಕೊಂಡೆ. ದೇವಾಳ್ವರು ಈ ಸತ್ಯಾಗ್ರಹ ಮುಂದುವರಿಯುತ್ತಿದ್ದುದನ್ನು ಗಮನಿಸಿ ಇನ್ನೊಮ್ಮೆಯೂ ಸತ್ಯಾಗ್ರಹ ಹೂಡಿ, ಸೆರೆಮನೆ ಸೇರಿದರು, ಇಂತು ಎಲ್ಲಾ ಹೋರಾಟಗಳಲ್ಲೂ ಏಕಸಮವಾದ ಉತ್ಸಾಹದಿಂದ ಭಾಗವಹಿಸಿದವರು ಕೆಲವರು ಮಾತ್ರ. ಅದರಲ್ಲೂ ಒಂದು ಸಲದ ಸತ್ಯಾಗ್ರಹದಲ್ಲಿಯೇ ಎರಡೆರಡು ಸಲ ದೇವಪ್ಪ ಆಳ್ವರಂತೆ ಸೆರೆಮನೆ ಸೇರಿದವರು ತೀರಾ ವಿರಳ,
            ಮುಂದಿನ ಸ್ವಾತಂತ್ರ್ಯಸಂಗ್ರಾಮ - ಕೊನೆಯ ಹೋರಾಟವೆಂದು ಹೆಸರಾದ 'ಭಾರತ ಬಿಟ್ಟು ತೊಲಗಿ' ಎಂದು ಸಾರಿದ ಸಂಗ್ರಾಮ; ಅದನ್ನು ಮಾಡು ಇಲ್ಲವೇ ಮಡಿ ಸಮರ ಎಂದೂ ಕರೆಯುತ್ತಾರೆ. ಬ್ರಿಟಿಷರು ನಮ್ಮ ತಾಯ್ನೆಲದಿಂದ ಹೊರಟು ಹೋಗಲೇ ಬೇಕು; ಪರಕೀಯರಿಗೆ ನಮ್ಮನ್ನಾಳುವ ಹಕ್ಕೇ ಇಲ್ಲ; ನಮ್ಮನ್ನು ನಾವೇ ಆಳಲು ಸಮರ್ಥರು; ಅವರು ಬಿಟ್ಟು ಹೋಗದೇ ಇದ್ದರೆ, ಅವರನ್ನು ಹೊರಗಟ್ಟುವಲ್ಲಿ ನಾವು ಕೃತಾರ್ಥರಾಗುತ್ತೇವೆ; ಆಗದಿದ್ದರೆ ಸಾಯುತ್ತೇವೆ. ಈ ಘೋಷಣೆಯೊಂದಿಗೆ 1942 ಆಗಸ್ಟ್ 8ಕ್ಕೆ ಮುಂಬಯಿಯಲ್ಲಿ ಕಾಂಗ್ರೆಸ್ ವಕಿರ್ಂಗ್ ಕಮಿಟಿ ಸಭೆಸೇರಿ ನಿರ್ಣಯಿಸಿತು. ಈ ನಿರ್ಣಯವನ್ನು ಜಾರಿಗೊಳಿಸುವ ಮುನ್ನ ಮತ್ತೊಮ್ಮೆ ಬ್ರಿಟಿμï ಪ್ರಭುತ್ವದ ಪ್ರತಿನಿಧಿ ವೈಸರಾಯರೊಡನೆ ಮಾತುಕತೆ ಮಾಡಬೇಕೆಂದೂ ಅಲ್ಲಿ ನಿರ್ಣಯವಾಗಿತ್ತು .
           ಆದರೆ ಆಗಸ್ಟ್ 8ರ ರಾತ್ರಿಯೇ ಗಾಂಧಿ, ನೆಹರು, ಪಟೇಲ್ ಆಜಾದ್ ರಾಷ್ಟ್ರನಾಯಕರನ್ನು, ಭಾರತಾದ್ಯಂತ ಸರಕಾರ ಬಂಧಿಸಿತು; ರಾಷ್ಟ್ರನಾಯಕರನ್ನು ಎಲ್ಲಿಗೊಯ್ದಿತು ಏನು ಮಾಡಿತು ಎಂಬ ಯಾವ ಅರಿವೂ ಜನತೆಗೆ ನೀಡದೆ ಎಲ್ಲರೂ ದಿಗ್ರಾಂತರಾದರು. 'ಮಾಡು ಇಲ್ಲವೇ ಮಡಿ' ಎಂಬ ಘೋಷಣೆ ಮಾತ್ರ ಭಾರತದ ಜನತೆಯ ಮುಂದೆ ಇತ್ತು ; ನಿಮಗೆ ನೀವೇ ನಾಯಕರು ಎಂದೂ ಗಾಂಧೀಜಿ ಸಾರಿದ್ದರು. ಅದಾಗಿ ರಾμÁ್ಟ್ರದ್ಯಂತ ಅತ್ಯಂತ ಕೋಲಾಹಲ ಪುಟಿದೆತ್ತಿತು.ಸೆರೆಮನೆಗೆ ಸೇರಿಸಲ್ಪಟ್ಟವನ್ನುಳಿದು ಇತರ ಹಲವರು ಭೂಗತರಾದರು. ಗುಪ್ತ ಚಳವಳಿಗೆ ತೊಡಗಿದರು.ತಂತಿಕಂಬಗಳು ಮುರಿದುಬಿದ್ದವು. ಸಂಕಗಳು ದ್ವಂಸಗೊಂಡವು. ಕೋರ್ಟ್ ಕಚೇರಿಗಳಿಗೆ ಬೆಂಕಿಹಚ್ಚಲಾಯಿತು.  ಇದರಲ್ಲಿ ಇಂಗ್ರೆಸ್ ಸೋಶಿಯಲಿಸ್ಟರು ಜಯಪ್ರಕಾಶ ನಾರಾಯಣರ ಮುಖಂಡತ್ವದಲ್ಲಿ ಅಗ್ರಗಣ್ಯರಾಗಿ ದುಡಿದರು.
         ಇಲ್ಲೊಂದು ವಿರೋಧಾಭಾಸ ನಡೆಯಿತು; ಕಮ್ಯುನಿಸ್ಟರು ಕಾಂಗ್ರೆಸಿನ ಹಾಗೂ ಗಾಂಧೀಜಿಯ ಚಳವಳ ತೀರಾ ಸಪ್ಪೆ,  ಮಂದಗಾಮಿಯೆಂದು ಹೇಳುತ್ತಿದ್ದರು; 1942ರ ಆಗಸ್ಟ್ ಕ್ರಾಂತಿ ಅತ್ಯುಗ್ರ ರೀತಿಯದಾಗಿತ್ತು : ಇಷ್ಟರಲ್ಲಿ ದ್ವಿತೀಯ ಮಹಾಯುದ್ಧದ ಗತಿಯಲ್ಲಿ ಒಂದು ಪ್ರಬಲವಾದ ಮಾರ್ಪಾಟು ಒದಗಿತು: ರಶ್ಯಾ ಜರ್ಮನಿ ಒಕ್ಕೂಟವಾಗಿದ್ದು ಬ್ರಿಟನನ್ನು ಇದಿರಿಸುತ್ತಿದ್ದುದು ಒಮ್ಮೆಲೇ ವ್ಯತ್ಯಾಸವಾಗಿ, ರಶ್ಯಾ ಬ್ರಿಟಿನು ಒಂದಾಗಿ ಜರ್ಮನಿಯನ್ನು ವಿರೋಧಿಸಿತು; ಆಗ ಕಮ್ಯುನಿಸ್ಟ ದೃಷ್ಟಿಯಲ್ಲಿ ಯುದ್ಧ ಫಾಸಿಸ್ಟ್ ವಿರೋಧಿಯಾಯಿತು. ಅಷ್ಟರಲ್ಲಿ ಭಾರತ ಕಮ್ಯುನಿಸ್ಟರೂ ಯುದ್ಧವಿರೋಧ ಮಾಡುವ ಕಾಂಗ್ರೆಸಿನ ಹಾಗೂ ಗಾಂಧೀಜಿಯ ಧೋರಣೆ ವಾಸಿಸ್ಟರಿಗೆ ಅನುಕೂಲವೆಂದು ಬಗೆವರು, ಬ್ರಿಟನಿಗೆ ಯುದ್ಧದಲ್ಲಿ ಸಹಾಯಮಾಡಬೇಕೆಂದು ಹೇಳಿದರು; ಈ ಯುದ್ಧ ಜನತಾಯುದ್ಧವೆಂದರು. ಕಮ್ಯುನಿಸ್ಟರ ಈ ನಿಲುವು, ಕ್ವಿಟ್ ಇಂಡಿಯಾ' ಕ್ರಾಂತಿಸಮರಕ್ಕೆ ವಿರೋಧವಾಯಿತು: ಕಮ್ಯುನಿಸ್ಟರ ಧೋರಣೆ ಇಂತಾದರೂ, ಕ್ವಿಟ್ ಇಂಡಿಯಾ ಚಳವಳ ಯಶಸ್ವಿಯಾಗಿಯೇ  ಸಾಗಿತು; ಭೂಗತ ಕಾರ್ಯಕ್ರಮಗಳು ಕೂಡ ಹೆಚ್ಚಿದವು. ಮೇಲೆತ್ತ್ ನಾರಾಯಣ ನಂಬ್ಯಾರ್, ಎನ್.ಕೆ. ಬಾಲಕೃಷ್ಣನ್, ಉಮೇಶರಾವ್, ಅವರ ಮಗ ಮೋಹನ್‍ರಾವ್, ದೇವಪ್ಪ ಆಳ್ವ, ಕೆ.ಟಿ. ಶಂಕರ, ಬೀರುಶೆಟ್ಟಿ ಮೊದಲಾದವರು ಸೆರೆಮನೆಗೆ ಸಾಗಿದರು; ಮಂಗಳೂರಲ್ಲಿ ಜರಗಿದ ಕೋರ್ಟು ಪಿಕೆಟಿಂಗ್ ಸತ್ಯಾಗ್ರಹದಲ್ಲಿ ವಿದ್ಯಾರ್ಥಿಗಳಾಗಿದ್ದ ಎಸ್. ಗೋಪಾಲಕೃಷ್ಣ ಭಟ್ಟರು, ಕಯ್ಯಾರು ನರಸಿಂಹ ಹೊಳ್ಳರು, ಕಜಂಪಾಡಿ ವಿಷ್ಣುಭಟ್ಟರೇ ಮುಂತಾದ ಕಾಸರಗೋಡಿನ ವಿದ್ಯಾರ್ಥಿಗಳು ಬಂಧಿತರಾಗಿ ಶಿಕ್ಷೆಗೊಳಗಾದರು; ಕಾಸರಗೋಡಿನಲ್ಲಿ ಬಂಬ್ರಾಣ ತಿಮ್ಮಣ್ಣ ಆಳ್ವರ ಮೊದಲಾದ ವಿದ್ಯಾರ್ಥಿ ಮುಖಂಡರ ಮುಂದಾಳುತನದಲ್ಲಿ, ನೀಲೇಶ್ವರ ಹೈಸ್ಕೂಲಿನಲ್ಲಿ ಕಳ್ಳಿಗೆ ಮಹಾಬಲ ಭಂಡಾರಿಗಳೇ ಮುಂತಾದ ವಿದ್ಯಾರ್ಥಿಧುರೀಣರ ನೇತೃತ್ವದಲ್ಲಿ ಹರತಾಳ ಸಭೆ ಮೆರವಣಿಗೆ ನಡೆಯಿತು. ರಾಷ್ಟ್ರ ಪತಾಕೆ ಹಾರಿತು. ಕೆಲ ವಿದ್ಯಾರ್ಥಿಗಳು ಶಾಲೆಯಿಂದ ಡಿಸ್‍ಮಿಸ್‍ಗೊಂಡರು. 144ನೇ ಸೆಕ್ಷನ್ ಜಾರಿಯಾಯಿತು.



       ನಾನು 1935ರಿಂದ 1944ರ ತನಕ ಮಂಗಳೂರಿನಲ್ಲಿಯೇ ಇದ್ದು, ನನ್ನ ಎಲ್ಲಾ ಚಟುವಟಿಕೆಯ ಕ್ಷೇತ್ರ ಅಲ್ಲೆ ಆಗಿತ್ತು . ಕ್ವಿಟ್ ಇಂಡಿಯಾ ಚಳವಳದ ಪರಿಣಾಮ, ಸಂಪೂರ್ಣ ಸ್ವಾತಂತ್ರ್ಯವೋ, ಸಂಪೂರ್ಣ ನಾಶವೋ ಎಂಬ ಕುರಿತು ಹಲವರಿಗೆ ಸಂಶಯವುಂಟಾಗಿತ್ತು; ಸಂಪೂರ್ಣ ನಾಶವಾದರೂ ಹೋರಾಟದಿಂದ ಹಿಂದೆ ಉಳಿಯುವುದು ಸಾಧ್ಯವಿಲ್ಲ. ಏಕೆಂದರೆ ಆ ಚಳವಳದ ಘೋಷಣೆಯೇ 'ಮಾಡು ಇಲ್ಲವೇ ಮಡಿ' ಎಂಬುದು. ಬ್ರಿಟಿμï ಸರಕಾರ, ಸಾಮ್ರಾಜ್ಯ ಶಾಹಿತ್ವವನ್ನು ಉಳಿಸಿಕೊಳ್ಳಲು ಮರ್ದನಕ್ಕೆ ತೊಡಗಿದ್ದು ಅವರ ದೃಷ್ಟಿಯಲ್ಲಿ ಸಹಜವೇ; ಇದರೊಂದಿಗೆ ನಮ್ಮವರೂ ಕೆಲವರು, ಇದು ಸಾಮ್ರಾಜ್ಯಶಾಹಿ ಯುದ್ಧವಲ್ಲ, ಜನತೆಯ ಯುದ್ಧವೆಂದು ಘೋಷಿಸಿದರು; ಈ ಸಂದರ್ಭದಲ್ಲಿ ರಾಷ್ಟ್ರದ ರಾಜಕೀಯ ತುಂಬಾ ಜಾಗ್ರತೆಯಿಂದ ಮುಂದೆ ಹೋಗಬೇಕಾಗಿತ್ತು ; ರಾಷ್ಟ್ರನಾಯಕರು ಈ ಬಗ್ಗೆಯೂ ಯೋಚಿಸದಿರಲಿಲ್ಲ. ಅದಕ್ಕಾಗಿಯೇ ಸೆರೆಮನೆಗೆ ಹೋಗದೆ ಕೆಲವರು ಗುಪ್ತವಾಗಿಯೂ ಭೂಗತರಾಗಿಯೂ ದುಡಿಯಬೇಕೆಂದು ಮುಂದಾಳುಗಳಿಂದ ಆದೇಶ ಬಂತು; ಸ್ವಾತಂತ್ರ್ಯ ಸಮರದ ಸುದ್ದಿಯನ್ನು ಒಂದು ಕಡೆಯಿಂದ ಇನ್ನೊಂದೆಡೆಗೆ ಸಾಗಿಸುವುದು; ಅಂಕೆಸಂಖ್ಯೆ ಸಹಿತ ವರದಿ ತಯಾರಿಸುವುದು, ಹೋರಾಟ ನಿಲ್ಲದಂತೆ ನೋಡಿ ಕೊಳ್ಳುವುದು - ಈ ಎಲ್ಲಾ ಕೆಲಸ ಮಾಡಲು ಒಂದು ಪ್ರತ್ಯೇಕ ಪಡೆ ಸಿದ್ಧವಾಯಿತು; ಕೂಡಿಯಾಲಬೈಲಿನ ಕೃಷ್ಣ ಶೆಟ್ಟರು, ಧಾರವಾಡದಿಂದ ಮಂಗಳೂರಿಗೆ ಬಂದರು; ಅಲ್ಲಿನ ಮುಂದಾಳುಗಳ ಸಂದೇಶ ಹೊತ್ತುತಂದರು; ಭೂಗತ ಗುಪ್ತ ಚಟುವಟಿಕೆಗಳ ಇನ್ನಷ್ಟು ಮಾಹಿತಿ ದೊರಕಿತು. ಮಂಗಳೂರಲ್ಲಿಯೂ ಕೋರ್ಟು ಸುಡುವ ಪ್ರಯತ್ನ ನಡೆಯಿತು; ನೇತ್ರಾವತಿ ಸಂಕ ಒಡೆಯುವ ಹಂಚಿಕೆ ಹೂಡಲಾಯಿತು; ಮೂಡಬಿದ್ರೆ ಬಳಿ ಒಂದು ಸಂಕ ಮುರಿದ ಬಗ್ಗೆ ಕೆಲವರಿಗೆ ಛಡಿಶಿಕ್ಷೆ ವಿಧಿಸಲಾಯಿತು. ಈ ಸುದ್ದಿಯನ್ನು ನಾನು ಪತ್ರಿಕೆಯಲ್ಲಿ ಬರೆದೆ; ಆಗ ಸುದ್ದಿ ಸೆನ್ಸರಿಗೆ ಒಪ್ಪಿಸಬೇಕಾಗಿತ್ತು : ಸೇನಾ ಅಧಿಕಾರಿ ಡಿ. ಕಲೆಕ್ಟರ್ ಆಗಿದ್ದ ಯೋಗಪ್ಪ ಎಂಬವರು, ನನ್ನನ್ನು ಕರೆದು ಜೋರುಮಾಡಿದರು, ಆದದ್ದನ್ನು ಬರೆದಿದ್ದೇನೆ ಎಂದೆ. ಛಡಿಶಿಕ್ಷೆ ವಿಧಿಸಿದ್ದನ್ನು ಪತ್ರಿಕೆಯಲ್ಲಿ ಪ್ರಕಟಿಸಬಾರದೆಂದು ಕೆಂಪುಶಾಯಿಯಲ್ಲಿ ಬರೆದುಕೊಟ್ಟರು! ಛಡಿಕೊ ಕೊಡಬಾರದೆಂದಲ್ಲ; ಅದನ್ನು ಪ್ರಕಟಿಸಬಾರದೆಂದು ಮಾತ್ರ! ಈ ಎಲ್ಲಾ ವಿವರಗಳು ಒಂದೆಡೆಯಿಂದ ಇನ್ನೊಂದೆಡೆಗೆ
ಸಾಗಬೇಕು; ರಾತ್ರಿ ಹೊತ್ತಾದರೂ ನಿದ್ದೆಗೆಟ್ಟು ಹೋಗಬೇಕು; ರೈಲುದಾರಿ ಇದ್ದರೂ, ಮೋಟಾರು ಸಂಚಾರ ಮಾಡ ಬಹುದಾಗಿದ್ದರೂ ತಪ್ಪಿಸಿ ಗುಪ್ತಚಟುವಟಿಕೆಯ ಸಂದೇಶ ಅಲ್ಲಿಗಲ್ಲಿಗೆ ತಲಪಬೇಕು. ಮುಂದಾಳುಗಳ ಆದೇಶದಂತೆ ನಾನೂ ಈ ಭೂಗತ ಗುಪ್ತಚಟುವಟಿಕೆಗೆ ನೆರವು ನೀಡಿದೆ. ಎμÉ್ಟೂೀ ಸಲ ಪೆÇೀಲೀಸರ, ಸರಕಾರದ ಗುಪ್ತಚರರ ಕಣ್ಣುತಪ್ಪಿಸಿಕೊಳ್ಳಬೇಕಾದರೆ ಪ್ರಾಣಾಂತಿಕ ಕಷ್ಟ ಆಗುತ್ತಿತ್ತು; ಎಲ್ಲಿಯಾದರೂ ಸಿಕ್ಕಿಬಿದ್ದರೆ ಗುಂಡಿಗೆ ಬಲಿ! ಮಂಗಳೂರು, ಕೋರ್ಟು ಪಿಕೆಟಿಂಗ್ ಸಂಘಟನೆಯಲ್ಲಿ ನಾನೂ ಸೇರಿಕೊಂಡಿದ್ದೆ, ಅದರಲ್ಲಿ ವಿದ್ಯಾರ್ಥಿಗಳೇ ಹೆಚ್ಚಿನ ಮಟ್ಟಿಗೆ ಪಾಲ್ಗೊಂಡಿದ್ದರು; ನಾನೂ ಆಗ ವಿದ್ಯಾರ್ಥಿ ಸಂಘದ ಸಕ್ರಿಯ ಕಾರ್ಯಕರ್ತನಾಗಿದ್ದೆ, ಪಿಕೆಟಿಂಗ್ ಮಾಡು ತ್ರಿದ್ದವರನ್ನೆಲ್ಲಾ ಬಂಧಿಸುವಾಗ ನನ್ನನ್ನೂ ಬಂಧಿಸಿದರು. ನನ್ನನ್ನು ಏಕೆ ಬಂಧಿಸಿದಿರಿ ಎಂದು ಪೆÇಲೀಸ್ ಇನ್‍ಸ್ಪೆಕ್ಟರರೊಡನೆ ಕೇಳಿದೆ; ಪಿಕೆಟಿಂಗ್ ಮಾಡಿದ್ದಕ್ಕೆ ಎಂದರು; ನಾನು ಪತ್ರಿಕಾ ವರದಿಗಾರನೆಂದು ಹೇಳಿದೆ ಬಿಟ್ಟು ಬಿಟ್ಟರು. ನಿಜವಾಗಿಯೂ ಅಲ್ಲಿ ನಾನು ಪಿಕೆಟಿಂಗ್‍ನ್ನು ಪೆÇ್ರೀತ್ಸಾಹಿಸುತ್ತಾ ಇದ್ದೆನು. ಆದರೆ ಸೆರೆಮನೆಗೆ ಹೋಗುವರೆ ಆದೇಶ ಇರಲಿಲ್ಲವಾಗಿ ಸಂಯಮ ಮಾಡಿಕೊಂಡೆ, ಹಗಲುಹೊತ್ತು ಪತ್ರಿಕಾ ಕಛೇರಿಯಲ್ಲಿ ಬಿಡುವಿಲ್ಲದ ಲೇಖನ ವ್ಯವಸಾಯವೂ ತನ್ನದೆ ಸುದ್ದಿಗಾಗಿ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಬೇರೆ ಬೇರೆ ಕಚೇರಿಗಳಿಗೆ, ಸಭೆ ಸಮಾರಂಭಗಳಾಗುವಲ್ಲಿಗೆ ಸೈಕಲಲ್ಲಿ ಅಲೆದಾಟ, ರಾತ್ರಿ ಗುಪ್ತಚಟುವಟಿಕೆಯ ಕಾರ್ಯಕ್ರಮ. ಇದರಿಂದ ನನ್ನ ದೈಹಿಕ ಆರೋಗ್ಯ ಆಗ ತೀರಾ ಹದಗೆಟ್ಟಿತು. ಆದರೂ ಉತ್ಸಾಹ ಕುಗ್ಗಲಿಲ್ಲ. ಉದ್ಯೋಗದಲ್ಲಿದ್ದ ಪತ್ರಿಕೆಯ ಕಚೇರಿಯ ಮೇನೇಜಿಂಗ್ ಡೈರೆಕ್ಟರರು ಡಾ| ಪಿ.ಪಿ. ಕಾಮತರು, ಒಳ್ಳೆಯ ದಯಾಳು ಡಾಕ್ಟರರು; ನನ್ನನ್ನು ಆಗಾಗ ಪರೀಕ್ಷಿಸಿ ಮದ್ದು ಟಾನಿಕ್ ಎಲ್ಲವನ್ನೂ ನೀಡಿ ಸಹಾಯಮಾಡಿದರು. ನನ್ನ ಕಚೇರಿ ಕೆಲಸದ ಕುರಿತು ಅವರಿಗೆ ತುಂಬಾ ತೃಪ್ತಿಯಿತ್ತು ; ಮತ್ತೆ ನಾನು 1944ರ ಮೇ ತಿಂಗಳಲ್ಲಿ ಮಂಗಳೂರು ಬಿಟ್ಟು ಊರಿಗೆ ಬರುವಾಗ 'ನಿಮಗೆ ಹಳ್ಳಿ ಹಿಡಿಸದಿದ್ದರೆ, ಯಾವಾಗ ಬೇಕಾದರೂ ಬನ್ನಿ, ಇಲ್ಲಿ ಉದ್ಯೋಗ ಮಾಡಬಹುದು' ಎಂದು ಆತ್ಮೀಯವಾದ ಮಾತು ಹೇಳಿ ಕಳುಹಿಸಿಕೊಟ್ಟರು. ಆದರೆ ನನಗೆ ಮರಳಿ ನಗರಕ್ಕೆ ಹೋಗಿ ನೆಲಸುವ ಸಂದರ್ಭ ಬರಲಿಲ್ಲ.

1946ರ ಮೇ ತಿಂಗಳ ಅಧಿವೇಶನದಲ್ಲಿ ಮದ್ರಾಸಿನ ಪ್ರಕಾಶು ಮಂತ್ರಿಮಂಡಳ ಸಾರ್ವಜನಿಕ ಸಂರಕ್ಷಣಾ ಆರ್ಡಿನನ್ಸ್ ಒಂದನ್ನು ಮಂಜೂರು ಮಾಡಿತು; ಆಹಾರಧಾನ್ಯಗಳಿಗೆ ಬೆಲೆ ಹೆಚ್ಚಿದ ಬಗ್ಗೆ ಕಮ್ಯುನಿಸ್ಟರು ಆಂದೋಳನ ಹೂಡಿದರು; ಅದೇ ಸಂದರ್ಭದಲ್ಲಿ ಕಾಸರಗೋಡಿನ ಬಿ.ವಿ. ಕಕ್ಕಿಲ್ಲಾಯರೂ, ತಿಮ್ಮಂಗೂರಿನ ಎ. ಕೃಷ್ಣ ಶೆಟ್ಟರೂ ಬಂಧನಕ್ಕೊಳಗಾದರು.
           1947ರ ಆಗಸ್ಟ್ ಹದಿನೈದನೆಯ ದಿನಾಂಕ ಮಧ್ಯರಾತ್ರಿ ಭಾರತದ ಸ್ವಾತಂತ್ರ್ಯ ಘೋಷಣೆಯಾಯಿತು. ತ್ರಿವರ್ಣರಂಜಿತ ರಾಷ್ಟ್ರಧ್ವಜ ಎಲ್ಲಾ ಕಟ್ಟಡಗಳ ಮೇಲೆ ಹಾರಿಸಲ್ಪಟ್ಟಿತು; ಭಾರತದ ಕೋಟಿ ಕೋಟಿ ಜನತೆ ಹರ್ಷನಿರ್ಭರರಾದರು. ನಾನಿದ್ದ ಹಳ್ಳಿಯಲ್ಲಿಯೂ, ಬದಿಯಡ್ಕದಲ್ಲಿಯೂ, ಎಲ್ಲರೂ ಸೇರಿ ಆ ಸಂತೋಷ ಸಮಾರಂಭವನ್ನು ಅಮಿತಾನಂದದಿಂದ ಆಚರಿಸಿ ಕೃತಾರ್ಥರಾದೆವು. ಶ್ರೀ ಕಲ್ಯಾಣಪುರ ಕೃಷ್ಣರಾಯರು ಅಂದು ಉದ್ಯೋದಕವಾದ ಭಾಷಣವಿತ್ತರು. ರಾತ್ರಿ ನೆಲವನ್ನು ತಣ್ಣಗಾಗಿಸುವ ಮಳೆಯೂ ಬಂತು.
      ಹೀಗೆ ಆ ಸ್ವಾತಂತ್ರ್ಯದೇವತೆ ಪ್ರತ್ಯಕ್ಷವಾಗಲು ಕಾಸರಗೋಡಿನ ಜನರೂ ಅನುಪಮ ಸಾಹಸ ತ್ಯಾಗ ಮಾಡಿದರು; ಅಜ್ಞಾತರಾಗಿ, ದುಡಿದ ದೇಶಪ್ರೇಮಿಗಳೂ ಹಲವರಿರುವರು. ಜ್ಞಾತ-ಅಜ್ಞಾತ ಸ್ವಾತಂತ್ರ್ಯವೀರರೆಲ್ಲರಿಗೂ ನಾವು ಕೃತಜ್ಞರಾಗಿರಬೇಕು, ಗೌರವ ಸಲ್ಲಿಸಬೇಕು.
      -ನಾಡೋಜ.ಡಾ.ಕಯ್ಯಾರ ಕಿಞ್ಞಣ್ಣ ರೈ


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries