ಮಂಜೇಶ್ವರ: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಮಂಜೇಶ್ವರ ಉಪಜಿಲ್ಲಾ ಘಟಕದ ಆಶ್ರಯದಲ್ಲಿ ದಸರಾ ನಾಡಹಬ್ಬದ ಆಚರಣೆಯ ಪ್ರಯುಕ್ತ ಮೀಯಪದವು ವಿದ್ಯಾವರ್ಧಕ ಎಯುಪಿ ಶಾಲೆಯಲ್ಲಿ ಪ್ರೌಢಶಾಲಾ ವಿಭಾಗದ "ಹುಲಿವೇಷ ಕುಣಿತ" ಸ್ಪರ್ಧೆ ನಡೆಯಿತು.
ಒಟ್ಟು ಐದು ತಂಡಗಳು ಭಾಗವಹಿಸಿದ ಸ್ಪರ್ಧೆಯಲ್ಲಿ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ತಂಡವು ಪ್ರಥಮ ಸ್ಥಾನವನ್ನು ಗಳಿಸಿತು. ಹುಲಿವೇಷ ಸ್ಪರ್ಧೆಯಲ್ಲಿ ಹುಲಿವೇಷಧಾರಿಗಳಾಗಿ ವಿದ್ಯಾರ್ಥಿಗಳಾದ ಸಿಂಚನ್, ತೇಜಸ್, ಚಿನ್ಮಯಿ ಶೆಟ್ಟಿ, ಧನ್ವಿಷ್, ಮನ್ವಿತ್, ಸೋಹನ್ ಶೆಟ್ಟಿ, ಸಾತ್ವಿಕ್, ಸುಹಾನ್ ಭಾಗವಹಿಸಿದ್ದರು. ಹಿಮ್ಮೇಳದಲ್ಲಿ ವಿದ್ಯಾರ್ಥಿಗಳಾದ ಕನಿಶ್ಕ್ ರಾಜ್, ರುಚಿತ್ ಯು. ಕೆ., ತನ್ವಿಷ್, ಮನ್ವಿತ್, ಅರ್ಪಿತ್, ಶ್ರೀ ವಿಷ್ಣು ಸಹಕರಿಸಿದರು.
ದಸರಾ ನಾಡಹಬ್ಬ ಆಚರಣೆ: ಹುಲಿವೇಷ ಸ್ಪರ್ಧೆಯಲ್ಲಿ ಧರ್ಮತ್ತಡ್ಕ ತಂಡ ಪ್ರಥಮ
0
ಅಕ್ಟೋಬರ್ 18, 2022
Tags




.jpg)
