HEALTH TIPS

ಅಚ್ಚರಿ-ಕುತೂಹಲದ ನವೀನ ಆಶಯಗಳ ಪ್ರದರ್ಶನವಾದ ಗ್ರಾಮೀಣ ಸಂಶೋಧಕರ ಸಭೆ


              ಕಾಸರಗೋಡು: ಇಂಟರ್ ಮೀಡಿಯೇಟ್ ಲೋಡ್ ಪ್ರೊಟೆಕ್ಟರ್ ಆಂಡ್ ಪವರ್ ಸೇವರ್‍ನಿಂದ ತೊಡಗಿ ತ್ರೀಇನ್ ವನ್ ಸ್ಟೌವ್ ವರೆಗೆ. ಸಲೀಸಾಗಿ ತೆಂಗಿನಕಾಯಿ ಬಿಡಿಸುವ  ಸನಿಕೆಯಿಂದ ಹಿಡಿದು ಮೊಬೈಲ್ ಅಪ್ಲಿಕೇಶನ್‍ನ ಸಹಾಯದಿಂದ ಕೆಲಸ ಮಾಡುವ ನೀರಿನ ಗುಣಮಟ್ಟದ ಪರೀಕ್ಷಕರವರೆಗೆ ನವೀನ ತಂತ್ರಜ್ಞಾನಗಳ ಪ್ರದರ್ಶನ ಅಚ್ಚರಿಗೊಳಿಸಿತು. ಕಾಸರಗೋಡು ಕೇಂದ್ರೀಯ ತೋಟಗಾರಿಕೆ ಸಂಶೋಧನಾ ಕೇಂದ್ರ(ಸಿ.ಪಿ.ಸಿ.ಆರ್.ಐ)ದಲ್ಲಿ ನಡೆದ ಗ್ರಾಮೀಣ ಸಂಶೋಧನಾ ಸಭೆಯಲ್ಲಿ ಕಂಡುಬಂದ ಕೆಲವು ಪ್ರದರ್ಶಕ ಸಾಮಗ್ರಿಗಳಿವು. ಕೇರಳದ ಸಾಮಾನ್ಯ ಗ್ರಾಮೀಣ ಸಂಶೋಧಕರು ಸಿದ್ಧಪಡಿಸಿದ ತಂತ್ರಜ್ಞಾನಗಳನ್ನು ಸಂಶೋಧನಾ ಸಭೆಯಲ್ಲಿ ಪ್ರದರ್ಶಿಸಲಾಯಿತು.



         ಇಡುಕ್ಕಿಯ ಬಿಜು ನಾರಾಯಣ್ ಅವರು ಮನೆ ಮತ್ತು ಕಾರ್ಯಾಲಯಗÀಳಲ್ಲಿ ವ್ಯರ್ಥವಾಗುವ ವಿದ್ಯುತ್ ಅನ್ನು ನಿಯಂತ್ರಿಸುವ ಮೂಲಕ ಇಂಧನ ಉಳಿತಾಯವನ್ನು ಸಾಧಿಸುವ ಇಂಟರ್ಮೀಡಿಯೇಟ್ ಲೋಡ್ ಪೆÇ್ರಟೆಕ್ಟರ್ ಮತ್ತು ಪವರ್ ಸೇವರ್ (ಐಎಲ್ಪಿಎಸ್) ಎಂಬ ಸಾಧನದೊಂದಿಗೆ ಗ್ರಾಮೀಣ ಸಂಶೋಧಕರ ಸಂಗಮಕ್ಕೆ ಬಂದಿದ್ದರು. ಹೆಚ್ಚುತ್ತಿರುವ ವಿದ್ಯುತ್ ವೆಚ್ಚದ ಪರಿಸ್ಥಿತಿಯಲ್ಲಿ ಈ ವ್ಯವಸ್ಥೆಯು ತುಂಬಾ ಪ್ರಸ್ತುತವಾಗಿದೆ ಎಂದು ಬಿಜು ನಾರಾಯಣನ್ ಹೇಳುತ್ತಾರೆ. ಕೇರಳದ ವಿವಿಧೆಡೆ ಈ ಸಾಧನವನ್ನು ಬಳಸುವ ಮೂಲಕ ವಿದ್ಯುತ್ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ ಎಂದು ಅವರು ಹೇಳಿದರು. ಮನೆಗಳು ಮತ್ತು ಕಚೇರಿಗಳಲ್ಲಿ ಈ ಸಾಧನ ಬಳಸುವುದರಿಂದ, 5 ರಿಂದ 22 ಪ್ರತಿಶತದಷ್ಟು ವಿದ್ಯುತ್ ಉಳಿತಾಯ ಮತ್ತು ವಿದ್ಯುತ್ ಬಿಲ್‍ಗಳಲ್ಲಿ ಕಡಿತಗಳಿಸಬಹುದಾಗಿದೆ. ವಿವಿಧ ವಿದ್ಯುತ್ ಉಪಕರಣಗಳ ಬಳಕೆಗೆ ಅನುಗುಣವಾಗಿ ಮೋಡ್‍ಗಳನ್ನು ಬದಲಾಯಿಸುವ ಮೂಲಕ ವಿದ್ಯುತ್ ಬಳಕೆಯನ್ನು ನಿಯಂತ್ರಿಸುವ ವ್ಯವಸ್ಥೆಯೂ ಇದೆ. ಇಡುಕ್ಕಿ ತೊಡುಪುಳ ಪಝು ಮೂಲದವರಾದ ಬಿಜು ನಾರಾಯಣನ್ ಅವರು ಗ್ರಾಮೀಣ ಸಂಶೋಧಕರಾಗಿದ್ದು, ಇಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಇನ್ನೋವೇಟರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.


        ಡೈಲಿ ವಾಟರ್ ಕ್ವಾಲಿಟಿ ಚೆಕರ್ ಎಂಬ ತಂತ್ರಜ್ಞಾನದ ಹಿಂದೆ ಚಾಲಕುಡಿ ಸಹೃದಯ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ವಿಭಾಗದ ನಾಲ್ಕನೇ ವರ್ಷದ ವಿದ್ಯಾರ್ಥಿಗಳು ಗಮನ ಸೆಳೆದರು. ಆಗಮಿಸಿದ್ದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮೊಬೈಲ್ ಆ್ಯಪ್ ಮೂಲಕ ಮನೆ ಮತ್ತು ನೀರಿನ ತೊಟ್ಟಿಗಳಲ್ಲಿನ ನೀರಿನ ಗುಣಮಟ್ಟವನ್ನು ತಿಳಿದುಕೊಳ್ಳುವ ತಂತ್ರಜ್ಞಾನವನ್ನು ಸಿದ್ಧಪಡಿಸಿದ್ದಾರೆ. ಸಾಧನವನ್ನು ಟ್ಯಾಂಕ್‍ಗೆ ಜೋಡಿಸಿದರೆ, ಟ್ಯಾಂಕ್‍ನಲ್ಲಿರುವ ನೀರಿನ ಗುಣಮಟ್ಟವನ್ನು ಸಾಧನದ ಮೂಲಕ ಪ್ರತಿದಿನ ಪರಿಶೀಲಿಸಬಹುದು. ನೀರಿನ ಗುಣಮಟ್ಟದಲ್ಲಿ ಇಳಿಕೆಯಾಗಿದ್ದರೆ, ಮೊಬೈಲ್ ಅಪ್ಲಿಕೇಶನ್‍ನಲ್ಲಿ ಅದರ ಬಗ್ಗೆ ನಿಮಗೆ ಎಚ್ಚರಿಕೆ ನೀಡುವ ರೀತಿಯಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಹೆನ್ವಿನ್ ಜಾಯ್, ಮರಿಯಾ ಶಾಜು ಮತ್ತು ಗ್ರೆನಂಟ್ ಪಾಲ್ ರಫಿ ಈ ಆವಿಷ್ಕಾರದ ಹಿಂದಿರುವ ಯುವ ಗ್ರಾಮೀಣ ತಂತ್ರಜ್ಞರು.
          ತ್ರಿಶೂರ್‍ನ ಪಿ.ವಿ.ಶೈಜು ತೆಂಗಿನೆಣ್ಣೆ, ಇಡಿಯಪ್ಪಂ ತಯಾರಿಕೆ, ತೆಂಗಿನಕಾಯಿ ತುರಿಯುವ ತ್ರೀ ಇನ್ ಒನ್ ಯಂತ್ರವನ್ನು ಸಿದ್ಧಪಡಿಸಿ ಪ್ರದರ್ಶಿಸಿದರು. ಕಡಿಮೆ ಪ್ರಮಾಣದ ತೆಂಗಿನಕಾಯಿಯನ್ನು ಗಿರಣಿಗಳಿಗೆ ತೆಗೆದುಕೊಂಡು ಹೋಗಿ ಎಣ್ಣೆಯಾಗಿ ಪರಿವರ್ತಿಸುವುದು ಪ್ರಾಯೋಗಿಕವಲ್ಲದ ಕಡೆ ಶೈಜು ಅವರ ಆವಿಷ್ಕಾರವು ತುಂಬಾ ಉಪಯುಕ್ತವಾಗಿದೆ. ಅರ್ಧ ಲೀಟರ್ ಎಣ್ಣೆಯನ್ನು ಅರ್ಧ ಗಂಟೆಯೊಳಗೆ ತೆಗೆಯಬಹುದು. ಶೈಜು ಈ ಹಿಂದೆ ಕರಿಮೆಣಸು ಬೇರ್ಪಡಿಸುವ ಯಂತ್ರ ತಯಾರಿಯ ತಂತ್ರಜ್ಞಾನಕ್ಕಾಗಿ ರೂರಲ್ ಇನ್ನೋವೇಶನ್ ಪ್ರಶಸ್ತಿ ಪಡೆದಿದ್ದರು.


         ಗ್ರಾಮೀಣ ಸಂಶೋಧಕರ ಸಂಗಮದಲ್ಲಿ ನಡೆಯುತ್ತಿರುವ ವಸ್ತುಪ್ರದರ್ಶನದಲ್ಲಿ ಕಾಲು-ಕೈ ಬಳಸಿ ತೆಂಗಿನಕಾಯಿ ಸುಲಿಯುವ ಸಾಧನ, ಹೊಂಡ ತೋಡುವ ಸರಳ ಸಾಧನ ಮೊದಲಾದ ಕೃಷಿ ಕ್ಷೇತ್ರವನ್ನು ಸದೃಢಗೊಳಿಸುವ ಹಲವು ಆವಿಷ್ಕಾರಗಳನ್ನು ಪ್ರದರ್ಶಿಸಲಾಗಿದೆ. ಗ್ರಾಮೀಣ ಸಂಶೋಧಕರ ಸಂಗಮವು ವಿವಿಧ ಕೃಷಿ ಕ್ಷೇತ್ರಗಳಿಗೆ ಉಪಯುಕ್ತವಾದ ನವೀನ ಕಲ್ಪನೆಗಳನ್ನು ಪ್ರದರ್ಶಿಸುವಲ್ಲಿ ಗಮನ ಸೆಳೆಯುತ್ತಿದೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries