HEALTH TIPS

ಕೂದಲು ಉದುರುವ ಸಮಸ್ಯೆ: ಎಷ್ಟು ಕೂದಲು ಉದುರಿದರೆ ಟೆನ್ಷನ್ ಮಾಡಬೇಕಾಗಿಲ್ಲ!

 ದಿನಕ್ಕೆ ಒಂದಿಷ್ಟು ಕೂದಲು ಉದುರುವುದು ಸಹಜ. ಆದರೆ ಅಸಹಜವಾಗಿ ಕೂದಲು ಉದುರಿದರೆ, ಕೂದಲು ಉದುರುವಿಕೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದರೆ ಆಗ ಸಹಜವಾಗಿಯೇ ಟೆನ್ಶನ್ ಆಗುತ್ತೆ ಅಲ್ವಾ? ಪ್ರತಿದಿನ ಕೂದಲು ಬಾಚುವಾಗ ಸ್ವಲ್ಪ ಕೂದಲು ಹೋಗುತ್ತದೆ. ಅಂದರೆ ದಿನಕ್ಕೆ 50-100 ಕೂದಲುಗಳು ಉದುರಿದರೆ ಅದು ಸಹಜ ಎನ್ನಬಹುದು. ಆದರೆ ಅದಕ್ಕಿಂತ ಹೆಚ್ಚು ಕೂದಲು ಉದುರಿದರೆ ಅದು ಅನಾರೋಗ್ಯದ ಲಕ್ಷಣವೂ ಆಗಬಹುದು!

ಎಷ್ಟು ಪ್ರಮಾಣದಲ್ಲಿ ಕೂದಲು ಉದುರಿದರೆ ಅದು ಅಸಹಜ ಎನಿಸುತ್ತದೆ?
ಪ್ರತಿಯೊಬ್ಬರ ತಲೆಯಲ್ಲಿ ಸರಾಸರಿ 1-1.2 ಲಕ್ಷ ಕೂದಲುಗಳು ಇರುತ್ತವೆ. ಸಮಾನ್ಯವಾಗಿ 90% ನಷ್ಟು ಕೂದಲುಗಳ ಬೆಳವಣಿಗೆಯ ಸ್ಥಿತಿಯನ್ನು ಅನಾಜೆನ್ ಹಂತ ಎನ್ನಬಹುದು. ಇನ್ನು ಎಕ್ಸೋಜೆನ್ ಹಂತದಲ್ಲಿ ದಿನಕ್ಕೆ 50 ರಿಂದ 100 ಕೂದಲು ಉದುರುವುದು ಸಹಜ ಪ್ರಕ್ರಿಯೆಯಾಗಿದೆ

ಕೂದಲು ಉದುರುವ ಪ್ರಕ್ರಿಯೆ ಅಸಹಜವಾಗಿದೆ ಎಂದು ತಿಳಿದುಕೊಳ್ಳುವುದು ಹೇಗೆ?
ದಿನಕ್ಕೆ ನೂರು ಕೂದಲು ಉದುರಬಹುದು ಅಂದರೆ ಪರವಾಗಿಲ್ಲ ಎಂದು ಸುಮ್ಮನೆ ಕೂರುವುದಲ್ಲ, ಕೆಲವರಿಗೆ ದಿನಕ್ಕೆ 30 ರಷ್ಟು ಕೂದಲು ಉದುರುತ್ತಿದ್ದು ಅದರ ಸಂಖ್ಯೆ ಹೆಚ್ಚಾಗುತ್ತಾ ಹೋದರೆ ಅದು ಖಂಡಿತವಾಗಿಯೂ ಒಳ್ಳೆಯದಲ್ಲ. ಆರೋಗ್ಯಕರವೂ ಅಲ್ಲ. ಕೂದಲುದುರುವಿಕೆ ಪ್ರಮಾಣ, ರೀತಿ ಎಲ್ಲವೂ ಒಬ್ಬರಿಗಿಂತ ಇನ್ನೊಬ್ಬರಲ್ಲಿ ವಿಭಿನ್ನವಾಗಿರುತ್ತದೆ. ಹಾಗಾಗಿ ಎಲ್ಲರಿಗೂ ಕೂದಲು ಉದುರುವುದಕ್ಕೆ ಒಂದೇ ಕಾರಣವೂ ಇಲ್ಲ, ಒಂದೇ ರೀತಿಯ ಚಿಕಿತ್ಸೆಯೂ ಇಲ್ಲ. ಸಾಮಾನ್ಯವಾಗಿ ತಲೆಬಾಚಿದಾಗ ವಿಪರೀತ ಕೂದಲು ಉದುರುವುದು, ತಲೆ ಸ್ನಾನ ಮಾಡಿದಾಗ ಪ್ರತಿಬಾರಿಯೂ ಕೂದಲು ಉದುರುವುದು, ಮಲಗಿದಾಗ ದಿಂಬಿನ ಮೇಲೆ ಹೆಚ್ಚು ಕೂದಲು ಕಾಣಿಸಿಕೊಳ್ಳುವುದು. ಜಡೆ ಹಾಕಿದ್ದರೂ ನಡೆದ ಜಾಗದಲ್ಲೆಲ್ಲಾ ಒಂದೊಂದೆ ಕೂದಲು ಉದುರುವುದನ್ನು ಕಾಣುವುದು ಇವೆಲ್ಲಾ ಅತಿಯಾಗಿ ಕೂದಲು ಉದುರುತ್ತಿದೆ ಎಂಬುದನ್ನು ಸೂಚಿಸುತ್ತವೆ.

ಕೂದಲು ಉದುರುವಿಕೆಗೆ ಕಾರಣಗಳು ಏನು?
ಕೂದಲು ಉದುರುವ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೆ, ಅದಕ್ಕೂ ಬೇರೆ ಬೇರೆ ಕಾರಣಗಳು ಇರುತ್ತವೆ. ಅದಕ್ಕೆ ಕಾರಣಗಳು ಹೀಗಿವೆ.
• ಮೊದಲನೆಯದಾಗಿ ಹೆಚ್ಚಿನ ಒತ್ತಡ. ಇಂದಿನ ಜೀವನ ಶೈಲಿಗಳೆ ಹಾಗಿವೆ. ಮನುಷ್ಯ ತನ್ನನ್ನು ತಾನು ಸಮಸ್ಯೆಗಳಿಗೆ ಚಿಂತೆಗಳಿಗೆ ಒಡ್ಡಿಕೊಳ್ಳುವುದೇ ಹೆಚ್ಚು. ಹಾಗಾಗಿ ಹೆಚ್ಚಿನ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
• ಹೀಟ್ ಟ್ರಿಟ್ಮೆಂಟ್ ಬಳಸುವುದು. ಈ ಪ್ರಕ್ರಿಯೆ ಕೂಡ ಇತ್ತೀಚಿಗೆ ಹೆಚ್ಚಾಗಿದೆ. ಬ್ಯೂಟಿ ಪಾರ್ಲರ್ ಗಳಲ್ಲಿ ಮಾತ್ರವಲ್ಲದೇ ಮನೆಗಳಲ್ಲಿಯೂ ಕೂಡ ಇದನ್ನು ಹೆಚ್ಚಾಗಿ ಬಳಸುತ್ತಿರುವುದು ಕೂದಲು ಉದುರುವ ಸಮಸ್ಯೆಯನ್ನು ಹೆಚ್ಚಿಸುತ್ತಿದೆ.
• ಹಾರ್ಮೋನ್ ಅಸಮತೋಲನ. ಸಾಮಾನ್ಯವಾಗಿ ಮಹಿಳೆಯರಲ್ಲಿ ಹಾರ್ಮೋನ್ ಸಮತೋಲನ ಹೆಚ್ಚಾಗಿರುತ್ತದೆ. ಹಾಗಾಗಿ ಈ ಸಮಯದಲ್ಲಿಯೂ ಕೂಡ ಕೂದಲು ಉದುರಬಹುದು.
• ಟೈಟ್ ಆಗಿ ಕೂದಲು ಕಟ್ಟಿಕೊಳ್ಳುವುದು. ಇದೂ ಕೂಡ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಕೂದಲನ್ನು ಬಿಗಿಯಾಗಿ ಕಟ್ಟಿಕೊಳ್ಳುವುದರಿಂದ ಬುಡದಿಂದಲೇ ಕೂದಲು ಹಾನಿಗೊಳಗಾಗುತ್ತದೆ.
• ತಲೆಹೊಟ್ಟು, ತಲೆ ಕೆರೆತ ಕೂಡ ಕೂದಲು ಉದುರುವ ಸಮಸ್ಯೆಗೆ ಕಾರಣವಾಗಬಹುದು.
• ಕೂದಲಿಗೆ ಕೆಮಿಕಲ್ ಯುಕ್ತ ಕಲರ್ ಬಳಕೆ ಕೂಡ ಕೂದಲು ಉದುರಲು ಕಾರಣಾವಾಗುತ್ತದೆ.
• ಇನ್ನು ಯಾವುದಾದರೂ ಔಷಧಗಳನ್ನು ದಿರ್ಘಾವಧಿಯಿಂದ ಸೇವಿಸುತ್ತಿದ್ದರೆ, ಅದರ ಕೆಮಿಕಲ್ ಕೂಡ ಕೂದಲು ಉದುರುವಿಕೆಗೆ ಕಾರಣವಾಗಬಹುದು.
• ಕೂದಲು ಅತಿಯಾಗಿ ಉದುರುವುದು ಜೆನೆಟಿಕ್ ಸಮಸ್ಯೆಯೂ ಕೂಡ ಆಗಿರಬಹುದು.
• ಥೈರಾಯ್ಡ್ ಸಮಸ್ಯೆ ಇದ್ದರೆ ಕೂದಲು ಉದುರಬಹುದು.

ಕೂದಲು ಉದುರುವಿಕೆಗೆ ಯಾವಾಗ ಚಿಕಿತ್ಸೆ ಬೇಕು?
ಕೂದಲು ಉದುರುವುದು ಸಾಮಾನ್ಯ ಪ್ರಕ್ರಿಯೆಯೇ ಆಗಿದ್ದರೂ ಕೂಡ, ಅಧಿಕ ಕೂದಲು ಉದುರುವುದು ಒಳ್ಳೆಯದಲ್ಲ. ನಿಮ್ಮ ಕೈಯಿಂದ ಕೂದಲನ್ನು ಹಿಡಿದು ಎಳೆಯಿರಿ. ಆಗ ಕೈನಲ್ಲಿ ಹತ್ತಕ್ಕಿಂತ ಕೂದಲು ಒಟ್ಟಾಗಿ ಬಂದರೆ ನೀವು ವೈದ್ಯರನ್ನು ಸಂಪರ್ಕಿಸಲೇ ಬೇಕು ಅಂದರ್ಥ. ಇನ್ನು ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯವಾದ ವಿಷಯ ಎಂದರೆ, ಒಮ್ಮೆ ಹೆಚ್ಚು ಕೂದಲು ಉದುರಿ ಮತ್ತೆ ಮರುದಿನ ಕೂದಲು ಉದುರುವ ಪ್ರಮಾಣ ಕಡಿಮೆ ಆಗಿದೆ ಎಂದರೆ ಆಗ ದುರ್ಬಲವಾಗಿರುವ ಕೂದಲು ಕೈಗೆ ಬಂದಿರುವುದು ಅಷ್ಟೇ ಎಂದು ಭಾವಿಸಬಹುದು. ಅದಕ್ಕಾಗಿ ವೈದ್ಯರನ್ನು ಸಂಪರ್ಕಿಸುವ ಅಗತ್ಯವಿರುವುದಿಲ್ಲ.

ಕೂದಲು ಆರೋಗ್ಯವಾಗಿ ಇಟ್ಟುಕೊಳ್ಳುವುದು ಹೇಗೆ?
• ಮೊದಲು ನಿಮ್ಮಒತ್ತಡದ ಜೀವನ ಪದ್ಧತಿಯನ್ನು ಬದಲಾಯಿಸಿಕೊಳ್ಳಿ. ನಿಮ್ಮ ಕೂದಲಿನ ಆರೈಕೆಗಾಗಿ ಒಂದಿಷ್ಟು ಸಮಯವನ್ನು ಮೀಸಲಿಟ್ಟುಕೊಳ್ಳಿ. ನೈಸರ್ಗಿಕ ತೆಂಗಿನೆಣ್ಣೆ ಮೊದಲಾದ ಎಣ್ಣೆ ಬಳಸಿ ತಲೆಯನ್ನು ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ.
• ಉತ್ತಮವಾಗಿರುವ ಆಹಾರ ಸೇವಿಸಿ, ಫೈಬರ್ ಗಳು, ಕ್ಯಾಲ್ಶಿಯಂ ಅಂಶ ಅಧಿಕವಾಗಿರುವ ಆಹಾರವನ್ನು ಸೇವಿಸಬೇಕು. ಹಣ್ಣಿನ ಜ್ಯೂಸ್ , ತರಕಾರಿ ಸಲಾಡ್ ಸೇವಿಸಿ. ಕಬ್ಬಿಣ, ಪ್ರೋಟೀನ್ ಯುಕ್ತ ಆಹಾರ ಸೇವಿಸಿ.
• ನಿಮ್ಮ ಕೂದಲನ್ನು ಧೂಳು, ಕೊಳಕುಗಳಿಗೆ ಒಡ್ದಿಕೊಳ್ಳಬೇಡಿ. ಆದಷ್ಟು ಹೊರಗೆ ಹೋಗುವಾಗ ಕೂದಲನ್ನು ಬಟ್ಟೆಯಿಂದ ಕವರ್ ಮಾಡಿಕೊಳ್ಳಿ.
• ಧ್ಯಾನ ಯೋಗ ಮೊದಲಾದ ಹವ್ಯಾಸಗಳೂ ಕೂಡ ನಿಮ್ಮ ಒತ್ತಡದ ಮೈಂಡ್ ನ್ನು ಸರಿಪಡಿಸಿ, ಕೂದಲು ಉದುರುವ ಸಮಸ್ಯೆಗಳನ್ನೂ ಕೂಡ ನಿವಾರಿಸಬಲ್ಲದು.

ಹೀಗೆ ನಿಮ್ಮ ಕೂದಲಿಗೆ ಸರಿಯಾದ ಆರೈಕೆ, ರಕ್ಷಣೆ ಮಾಡಿಕೊಂಡರೆ ಕೂದಲು ಉದುರುವಿಕೆಗೆ ಮುಕ್ತಿ ಸಿಗುತ್ತದೆ. ಇಷ್ಟಾಗಿಯೂ ಕೂದಲು ಅಧಿಕವಾಗಿ ಉದುರುತ್ತಿದ್ದರೆ, ವೈದ್ಯರನ್ನು ಭೇಟಿ ಮಾಡುವುದನ್ನು ಮರೆಯಬೇಡಿ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries