HEALTH TIPS

ಕೇರಳದಲ್ಲಿ ಭಾರೀ ಸ್ಫೋಟಕ್ಕೆ ಯೋಜನೆ; ತ್ರಿಶೂರ್ ಮತ್ತು ಪಾಲಕ್ಕಾಡ್‍ನಲ್ಲಿ ಸಂಚು: ಆರಾಧನಾಲಯಗಳೂ ಲಕ್ಷ್ಯದಲ್ಲಿ: ಐಎಸ್ ಭಯೋತ್ಪಾದನೆ ಪ್ರಕರಣದಲ್ಲಿ ಎನ್ ಐಎಯಿಂದ ಬಂಧನಕ್ಕೊಳಗಾಗಿದ್ದ ಶಿಯಾಸ್ ಸಿದ್ದಿಕ್ ಹೇಳಿಕೆ ಬಹಿರಂಗ

              ಕೊಚ್ಚಿ: ಐಎಸ್ ಭಯೋತ್ಪಾದನೆ ಪ್ರಕರಣದಲ್ಲಿ ಬಂಧಿತನಾಗಿರುವ ಶಿಯಾಸ್ ಸಿದ್ದಿಕ್ ಕೇರಳದಲ್ಲಿ ಸ್ಫೋಟ ನಡೆಸುವ ಸಂಚಿನಲ್ಲಿ ಭಾಗಿಯಾಗಿದ್ದಾಗಿ ಹೇಳಿಕೆ ನೀಡಿದ್ದಾನೆ.

            ತ್ರಿಶೂರ್ ಮತ್ತು ಪಾಲಕ್ಕಾಡ್‍ನಲ್ಲಿ ನಡೆದ ಸಂಚಿನಲ್ಲಿ ತಾನು ಭಾಗವಹಿಸಿದ್ದನ್ನು ಬಂಧಿತ ಶಿಯಾಸ್ ಎನ್‍ಐಎಗೆ ಬಹಿರಂಗಪಡಿಸಿದ್ದಾನೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ವಿಷಯ ತಿಳಿಸಿದ್ದಾನೆ. ಇದೇ ವೇಳೆ ಎರಡನೇ ಆರೋಪಿ ನಬೀಲ್ ಗಾಗಿ ನೆರೆ ರಾಜ್ಯಗಳಲ್ಲಿ ವ್ಯಾಪಕ ಶೋಧ ನಡೆಯುತ್ತಿದೆ.

            ಐಎಸ್ ಕೇರಳ ಮಾಡ್ಯೂಲ್‍ನ ಭಾಗವಾಗಿದ್ದ ಶಿಯಾಸ್ ಸಿದ್ದಿಕ್, ಈ ಹಿಂದೆ ಬಂಧಿತನಾಗಿದ್ದ ಆಶಿಫ್ ಮತ್ತು ಬಂಧಿತ ನಬೀಲ್ ಜೊತೆಗೆ ಭಯೋತ್ಪಾದಕ ದಾಳಿಯ ಯೋಜನೆಗಳ ಭಾಗವಾಗಿದ್ದ. ತ್ರಿಶೂರ್‍ನ ಕಟ್ಟೂರು ಮೂಲದವನಾದ ಶಿಯಾಸ್ ತನ್ನ ಮನೆ ಬಳಿ ನಡೆದ ಪಿತೂರಿ ಮತ್ತು ಪಾಲಕ್ಕಾಡ್ ಸ್ಫೋಟದ ಯೋಜನೆಯಲ್ಲಿ ಭಾಗಿಯಾಗಿದ್ದ. ಕೇರಳದಲ್ಲಿ ವ್ಯಾಪಕ ಸ್ಫೋಟಗಳನ್ನು ನಡೆಸಲು ಯೋಜನೆ ರೂಪಿಸಲಾಗಿತ್ತು. ಎರಡು ಷಡ್ಯಂತ್ರಗಳ ನಂತರ ಯೋಜನೆ ಜಾರಿಯಾಗದೆ ತಲೆಮರೆಸಿಕೊಂಡಿದ್ದು, ಗುಪ್ತಚರ ಸಂಸ್ಥೆಗಳ ಕಣ್ಗಾವಲಿರುವ ಶಂಕೆ ವ್ಯಕ್ತವಾಗಿತ್ತು ಎಂದು ಶಿಯಾಸ್ ಸಿದ್ದಿಕ್ ಹೇಳಿಕೆ ನೀಡಿದ್ದಾನೆ.

          ತನಿಖಾ ತಂಡದ ಅತ್ಯಂತ ರಹಸ್ಯ ಕಾರ್ಯಾಚರಣೆ ಮೂಲಕ ಶಿಯಾಸ್ ನನ್ನು ಬಂಧಿಸಲಾಗಿದೆ. ನಿನ್ನೆ ಆರೋಪಿಯನ್ನು ಮೂರು ದಿನಗಳ ಕಾಲ ಕಸ್ಟಡಿಗೆ ಪಡೆದು ವಿವರವಾದ ವಿಚಾರಣೆ ನಡೆಸಿದಾಗ ಹೆಚ್ಚಿನ ಮಾಹಿತಿ ಲಭಿಸಿದೆ. ಪ್ರಕರಣದಲ್ಲಿ ಮೊದಲ ಆರೋಪಿ ಆಶಿಫ್ ನನ್ನು ಬಂಧಿಸಲಾಗಿತ್ತು. ಪಿತೂರಿಗಳಲ್ಲಿ ಮುಖ್ಯವಾಗಿ ನಾಲ್ವರು ಭಾಗಿಯಾಗಿದ್ದರು. ಆರಾಧನಾಲಯಗಳನ್ನೇ ಗುರಿಯಾಗಿಸಿಕೊಂಡ ಆರೋಪಿಗಳು ಹೆಚ್ಚಿನ ಪ್ರಾಣಹಾನಿ ಉಂಟುಮಾಡುವ ದೊಡ್ಡ ಸ್ಫೋಟಗಳನ್ನು ಯೋಜಿಸುತ್ತಿದ್ದರು. ಇದರೊಂದಿಗೆ ಆರೆಸ್ಸೆಸ್ ಮುಖಂಡರೂ ಆರೋಪಿಗಳ ಹಿಟ್ ಲಿಸ್ಟ್‍ನಲ್ಲಿದ್ದರು ಎಂದು ತಿಳಿದುಬಂದಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries