HEALTH TIPS

ಮಣಿಪುರ: ಶಾಂತಿ ಒಪ್ಪಂದಕ್ಕೆ ಕೇಂದ್ರ- ಯುಎನ್‌ಎಲ್‌ಎಫ್‌ ಸಹಿ

             ವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಮಣಿಪುರದ ಬಂಡುಕೋರರ ಗುಂಪು 'ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್‌' (ಯುಎನ್‌ಎಲ್‌ಎಫ್‌) ಸರ್ಕಾರದೊಂದಿಗೆ ಶಾಂತಿ ಒಪ್ಪಂದಕ್ಕೆ ಬುಧವಾರ ಸಹಿ ಹಾಕಿದೆ.

               'ಮಣಿಪುರದಲ್ಲಿ ಬಹುಹಿಂದಿನಿಂದಲೂ ಸಕ್ರಿಯವಾಗಿರುವ ಯುಎನ್‌ಎಲ್‌ಎಫ್‌, ಹಿಂಸಾಚಾರ ತ್ಯಜಿಸುವುದಾಗಿ ಹೇಳಿದೆ.

              ನವದೆಹಲಿಯಲ್ಲಿ ಇಂದು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ' ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದ್ದಾರೆ.

             'ಇದೊಂದು ಐತಿಹಾಸಿಕ ಮೈಲುಗಲ್ಲ. ಈಶಾನ್ಯ ಭಾಗದಲ್ಲಿ ಶಾಶ್ವತವಾಗಿ ಶಾಂತಿ ನೆಲೆಸಬೇಕು ಎಂಬ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಿರಂತರ ಪ್ರಯತ್ನದ ಫಲವಾಗಿ ಈ ಒಪ್ಪಂದ ಏರ್ಪಟ್ಟಿದೆ' ಎಂದೂ ಅವರು ಹೇಳಿದ್ದಾರೆ.

                 'ಕೇಂದ್ರ ಹಾಗೂ ಮಣಿಪುರ ರಾಜ್ಯ ಸರ್ಕಾರದೊಂದಿಗೆ ಯುಎನ್‌ಎಲ್‌ಎಫ್‌ ಮಾಡಿಕೊಂಡಿರುವ ಈ ಶಾಂತಿ ಒಪ್ಪಂದವು ಕಣಿವೆ ರಾಜ್ಯದಲ್ಲಿನ ಆರು ದಶಕಗಳ ಸಶಸ್ತ್ರ ಹೋರಾಟವನ್ನು ಕೊನೆಗಾಣಿಸಲಿದೆ' ಎಂದು ಅವರು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries