ಮಲಯಾಳಂ ಇಂಡಸ್ಟ್ರಿಯ ನಟಿ ಅಪರ್ಣಾ ದಾಸ್ ಮತ್ತು ಮಂಜುಮ್ಮೇಲ್ ಬಾಯ್ಸ್ ನಟ ದೀಪಕ್ ಪರಮಾ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚೆಗಷ್ಟೇ ನಿಶ್ಚಿತಾರ್ಥ ಸಮಾರಂಭದ ಬಳಿಕ ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಪ್ರಕಟಿಸಿದ ಈ ಲವ್ ಬರ್ಡ್ಸ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
0
samarasasudhi
ಏಪ್ರಿಲ್ 25, 2024
ಮಲಯಾಳಂ ಇಂಡಸ್ಟ್ರಿಯ ನಟಿ ಅಪರ್ಣಾ ದಾಸ್ ಮತ್ತು ಮಂಜುಮ್ಮೇಲ್ ಬಾಯ್ಸ್ ನಟ ದೀಪಕ್ ಪರಮಾ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚೆಗಷ್ಟೇ ನಿಶ್ಚಿತಾರ್ಥ ಸಮಾರಂಭದ ಬಳಿಕ ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಪ್ರಕಟಿಸಿದ ಈ ಲವ್ ಬರ್ಡ್ಸ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅಪರ್ಣಾ ದಾಸ್ , ದೀಪಕ್ ಪರಮಾ ಜೋಡಿ ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹಕ್ಕೂ ಮುನ್ನ ದಂಪತಿ ವಡಕಂಚೇರಿಯ ದೇವಸ್ಥಾನದಲ್ಲಿ ಸರಳವಾಗಿ ಕೆಲವೇ ಕೆಲವು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಅವರ ವಿವಾಹ ನೆರವೇರಿತು. ಅವರ ಮದುವೆ ಸಮಾರಂಭದ ಫೋಟೋಗಳು ಮತ್ತು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.