HEALTH TIPS

ಮೈತಳೆದು ಅರಳಿದ ಕೊನ್ನೆ ಹೂ

              ಮಂಜೇಶ್ವರ: ಕುಂಬಳೆ : ಜಿಲ್ಲೆಯಲ್ಲಿ ಒಂದೆಡೆ ಬಿಸಿಲಿನ ಝಳ ಸಾಮಾನ್ಯರನ್ನು ಅಸ್ವಸ್ಥರನ್ನಾಗಿಸುತ್ತಿದ್ದರೆ ಇನ್ನೊಂದೆಡೆ ರಸ್ತೆ ಬದಿಯಲ್ಲಿ ಗೊಂಚು ಗೊಂಚಲಾಗಿ ಹಳದಿ ಬಣ್ಣದಲ್ಲಿ ಅರಳಿ ನಾಡಹಬ್ಬ ವಿಷುವನ್ನು ಸ್ವಾಗತಿಸುವಂತೆ ಸಿದ್ಧಗೊಂಡಿರುವ ಕೊನ್ನೆ(ಕೊಂದೆ) ಹೂ ಮನಸ್ಸಿಗೆ ತಂಪು ನೀಡಲಾರಂಭಿಸಿದೆ.

            ಬಿತ್ತನೆಯ ಹಬ್ಬವೆಂದೇ ಪ್ರಸಿದ್ಧಿ ಪಡೆದ ವಿಷು ಹಬ್ಬಕ್ಕೆ ಸಂಭ್ರಮ ತುಂಬುವಂತೆ ಕೊನ್ನೆ ಹೂ ಅರಳಿ ತೆರೆದು ನಿಂತಿದೆ. ಬೇಸಿಗೆಯ ಸುಡು ಬಿಸಿಲಿನ ನಡುವೆಯೂ ಮೀನ ಮಾಸ ಅರ್ಧದಲ್ಲಿಯೇ ನಕ್ಷ ತ್ರಗಳಂತೆ ಮರದ ರೆಂಬೆಗಳಲ್ಲಿ ಕೊನ್ನೆ ಹೂ ಆರಳಿದ್ದು ಉಲ್ಲಾಸವನ್ನು ತಂದಿದೆ. ಓಣಂ ಕೊಯ್ಲಿನ ಹಬ್ಬವಾದರೆ, ವಿಷು ಬಿತ್ತನೆಯ ಹಬ್ಬ ಎಂಬುದು ಹಿಂದಿನ ಪರಂಪರಾಗತ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯ. ಹಿಂದೆ ವಿಷು ಹಬ್ಬ ಸಮೀಪಿಸುವ ಸಂದರ್ಭದಲ್ಲಿ ಮನೆಯ ಸುತ್ತ ಸಣ್ಣ ಮಣ್ಣಿನ ಸಾಲು ತೋಡಿಕೊಂಡು ಬೀಜ ಬಿತ್ತುವ ಮೂಲಕ ಕೃಷಿ ಆರಂಭ ನಡೆಯುತ್ತಿತ್ತು. ಪ್ರಸ್ತುತ ಪ್ರಕೃತಿ, ಮಣ್ಣು ಮತ್ತು ಮನುಷ್ಯನ ನಡುವಿನ ಸಂಬಂಧ ದಿನದಿಂದ ದಿನಕ್ಕೆ ದೂರವಾಗುತ್ತಿದ್ದು ಗ್ರಾಮೀಣ ನೆರ್ಮಲ್ಯ ವಾತಾವರಣ ಇಲ್ಲದಾಗುತ್ತಿದೆ. 


             ಮಲೆಯಾಳದಲ್ಲಿ ಕಣಿಕೊನ್ನ ಎಂದು ಕರೆಯುವ ಕಕ್ಕೆಹೂ ದೊಡ್ಡ ಐತಿಹಾಸವನ್ನೇ ಹೊಂದಿದೆ. ಭೂಮಿಗೆ ಆಗಮಿಸಿದ ಐಶ್ವರ್ಯ ದೇವತೆಯಾದ ಲಕ್ಷ್ಮೀದೇವಿ ಮೀನಾ ಮಾಸದ ಬಿಸಿಲಿನ ಝಳದಲ್ಲಿ ದಣಿದು ಒಂದು ಮರದ ನೆರಳಲ್ಲಿ ಕುಳಿತುಕೊಂಡು, ವಿಶ್ರಾಂತಿ ಪಡೆದುಕೊಳ್ಳುವಳು ಎಂಬ ನಂಬಿಕೆಯಿದೆ. ತನಗೆ ವಿಶ್ರಾಂತಿಗಾಗಿ ನೆರಳು ನೀಡಿದ ಮರವನ್ನು ದೇವಿ ಮುಟ್ಟಿದಾಗ ತಕ್ಷಣ ಹೂಗಳು ಆರಳಿರುವುದಾಗಿ, ಅದರಂತೆ ಕಡು ಬಿಸಲಲ್ಲೂ ಕಕ್ಕೆ ಹೂ ಬಿಟ್ಟು ಸುಂದರವಾಗಿರುವುದು ಎಂಬುದು ಐತಿಹ್ಯ. ಆದರಿಂದಲೇ ಕೇರಳಿಯರ ವರ್ಷ ಆರಂಭವಾಗುವುದು ಐಶ್ವರ್ಯದ ಪ್ರತೀತಿಯಾದ ವಿಷು ಹಬ್ಬದಂದು. ಅದಕ್ಕಾಗಿಯೇ ಐಶ್ವರ್ಯದ ದ್ಯೋತಕವಾಗಿ ಕೊನ್ನೆ ಹೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.    

           ಕೊಂದೆ (ಕಕ್ಕೆ, ಸ್ವರ್ಣಪುಷ್ಪ್ಪ) ಎಂಬ ಹೆಸರಿನಿಂದ ಕರೆಯಲ್ಪಡುವ ಈ ಹೂವು ಮಾರ್ಚ್-ಮೇ ತಿಂಗಳಲ್ಲಿ ಕಾಣಸಿಗುತ್ತದೆ. ಇದು ಹಳದಿ ಬಣ್ಣದ ಹೂವನ್ನು ಗೊಂಚಲು ಗೊಂಚಲಾಗಿ ಮರ ತುಂಬಾ ಬಿಟ್ಟು ಅತ್ಯಂತ ಸುಂದರವಾಗಿ ಕಾಣುವುದರಿಂದ ಇದನ್ನು ಇಂಗ್ಲೀಷ್ ಭಾಷೆಯಲ್ಲಿ ಫಬಸಿಯೆ ಕುಟುಂಬದ ಏಸಲ್ಬಿನಿಯೆ ಎಂದು ಕರೆಯುತ್ತಾರೆ. ಇದು ಥೈಲ್ಯಾಂಡ್ ದೇಶದ ರಾಷ್ಟ್ರೀಯಪುಷ್ಪವಾದರೆ ಕೇರಳ ರಾಜ್ಯದ ರಾಜ್ಯಪುಷ್ಪವಾಗಿದೆ. ವಿಷು ಹಬ್ಬಕ್ಕೆ ಸಂಭ್ರಮ ತುಂಬುವಂತೆ ಕೊನ್ನೆ ಹೂ(ಕಕ್ಕೆ ಹೂ) ಎಲ್ಲೆಡೆ ಅರಳಿ ನಿಂತಿದ್ದು, ಅಗಸದಲ್ಲಿ ನಕ್ಷ ತ್ರಗಳು ಶೋಭಿಸುವಂತೆ ಮರದ ಕೊಂಬೆಗಳಲ್ಲಿ ಮಿನುಗಲಾರಂಭಿಸಿವೆ. ಶಿವನಿಗೆ ಪ್ರಿಯವಾದ ಈಹೂವನ್ನು ನಿತ್ಯ ದೇವರಿಗೆಅರ್ಪಿಸದೇ ಇದ್ದರೂ ಕೊನ್ನೆ ಹೂ ವಿಷು ದಿನದಂದು ಅರ್ಪಿಸುವುದು ವಿಶೇಷತೆಯಾಗಿದೆ. 

             ಇದರ ಸಸ್ಯಶಾಸ್ತ್ರೀಯ ಹೆಸರು ಕಾಸಿಯ ಫಿಸ್ಟುಲವಾಗಿದೆ. ಬೇಲಿ ಅಂಚಿನಲ್ಲಿ, ಕಾಡಿನಲ್ಲಿ ಬೇಸಿಗೆ ಸಮಯದಲ್ಲಿ ಹೂ ಅರಳಿ ಬಳಿಕ ಉದುರಿ ಹೋಗುತ್ತದೆ. ಆದರೆ ಇಂತಹ ಹೂವಿಗೆ ಮಹತ್ವದ ಸ್ಥಾನ ನೀಡಲಾಗಿದೆ. ತುಳುವ ರಾಜ್ಯದಲ್ಲಿ ಬಹುತೇಕರು ಕಕ್ಕೆ ಎಂದೇ ಕರೆಯುವುದನ್ನು ಕಾಣಬಹುದಾಗಿದೆ. ವಸಂತ ಋತುವಿಗೆ ಚಿಗುರಿ ಹಸಿರ ಎಲೆಗಳೊಂದಿಗೆ ಹೂ ಕೂಡ ಚಿನ್ನದ ಬಣ್ಣದಿಂದ ಗೊಂಚಲು, ಗೊಂಚಲಾಗಿ ತೂಗಾಡುತ್ತದೆ. ಮರವು ಸುಮಾರು ಹದಿನೈದರಿಂದ ಇಪ್ಪತ್ತು ಅಡಿಗೂ ಹೆಚ್ಚು ಎತ್ತರಕ್ಕೆ ಬೆಳೆಯುತ್ತದೆ. ಗಿಡದಿಂದ ಆರಂಭವಾಗಿ ಮರದ ತನಕವೂ ಹೂ ಬಿಡುತ್ತಲೇ ಇರುತ್ತದೆ.

           ಆಯುರ್ವೇದದಲ್ಲಿ ಮಹತ್ತರ ಸ್ಥಾನ:   ಇದು ನುಗ್ಗೆ ರೀತಿಯ ಕಪ್ಪಗಿನ ಕಾಯಿ ಬಿಡುತ್ತವೆ. ಇದು ಸುಮಾರು ಎರಡು ಮೀಟರ್ ನಷ್ಟು ಇರುತ್ತವೆ. ಇವು ಒಣಗಿ ಇದರಲ್ಲಿರುವ ಬೀಜಗಳು ಬಿದ್ದು ಗಿಡಗಳ ಹುಟ್ಟಿಗೆ ಕಾರಣವಾಗುತ್ತವೆ. ಇದು ಹೇಗೆಂದರೆ ಇದನ್ನು ಕೆಲವು ಕಾಡು ಪ್ರಾಣಿಗಳು ತಿನ್ನುವುದರಿಂದ ಅದರ ಮಲದ ಮೂಲಕ ಒಂದೆಡೆಯಿಂದ ಮತ್ತೊಂದೆಡೆಗೆ ಬೀಜ ಪ್ರಸಾರವಾಗುತ್ತದೆ. ಮರವೂ ಹಲವು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಇದರ ಮತ್ತೊಂದು ವಿಶೇಷತೆ ಮರವನ್ನು ಕತ್ತರಿಸಿದರೆ ಅದರಿಂದ ಚಿಗುರುಗಳೊಡೆದು ಬೆಳೆಯುತ್ತವೆ. ಕಕ್ಕೆ ಕಾಡಿನಲ್ಲಿ ಅಥವಾ ಬಯಲಿನಲ್ಲಿ ಹುಟ್ಟಿ ಅದರ ಪಾಡಿಗೆ ಬೆಳೆದರೂ ಅದು ಬಿಡುವ ಸುಂದರ ಹೂವಿಗಾಗಿ ಉದ್ಯಾನದಲ್ಲಿ, ಮನೆಯಂಗಳದಲ್ಲೂ ಸ್ಥಾನ ಪಡೆದುಕೊಂಡಿದೆ. ಇನ್ನು ಇದರ ಮರ ಹಲವು ರೀತಿಯಲ್ಲಿ ಉಪಯೋಗಕ್ಕೆ ಬಂದರೆ ಕಾಯಿ ಮತ್ತು ಹೂ ಔಷಧೀಯ ಗುಣವನ್ನು ಹೊಂದಿದ್ದು, ಆಯುರ್ವೇದದಲ್ಲಿ ಇದರ ಬಳಕೆ ಕುರಿತಂತೆ ವಿವರಿಸಲಾಗಿದೆ. 

      ಮುಖ್ಯವಾಗಿ ಹೇಳಬೇಕೆಂದರೆ ಹೂ ಮತ್ತು ಕಾಯಿಯನ್ನು ವಾತ ಸಂಬಂಧಿತ ಔಷಧಗಳಲ್ಲಿ ಉಪಯೋಗಿಸುತ್ತಾರೆ. ಕಕ್ಕೆ ಗಿಡದ ಎಲೆ, ತಿರುಳು ಕಾಯಿ, ಹೂವು, ಬೇರನ್ನು ತಂದು ನೆರಳಿನಲ್ಲಿ ಒಣಗಿಸಿ ಸಮತೂಕದಲ್ಲಿ ನಯವಾಗಿ ಚೂರ್ಣಿಸಿ ಅದರ ಎರಡು ಗ್ರಾಂ ಚೂರ್ಣಕ್ಕೆ ಎರಡು ಗ್ರಾಂ ನೆಲ್ಲಿಚೆಟ್ಟಿನ ಚೂರ್ಣ ಮತ್ತು ಎರಡೂವರೆ ಗ್ರಾಂ ಅರಿಶಿಣದ ಚೂರ್ಣ ಸೇರಿಸಿ ಚೂರ್ಣವನ್ನು ತಯಾರಿಸಿಕೊಂಡು ಅದರಲ್ಲಿ ಎರಡು ಗ್ರಾಂ ಚೂರ್ಣವನ್ನು ಒಂದು ಲೋಟ ಮಜ್ಜಿಗೆಗೆ ಹಾಕಿ ಕದಡಿ ಪ್ರತಿದಿನಕ್ಕೊಮ್ಮೆ ಐದರಿಂದ ಏಳು ದಿನಗಳ ಕಾಲ ಸೇವಿಸುವುದರಿಂದ ಬಹುಮೂತ್ರ ಮತ್ತು ಬಾಯಾರಿಕೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇನ್ನು ಸದಾ ಕಾಡುವ ಕೆಮ್ಮಿಗೆ ಸುಮಾರು ಐದು ಗ್ರಾಂ ಕಕ್ಕೆ ಗಿಡದ ಅಂಟನ್ನು ತಂದು ಎರಡು ಲೋಟ ನೀರಿನಲ್ಲಿ ರಾತ್ರಿ ನೆನೆ ಹಾಕಿ ಬೆಳಿಗ್ಗೆ ಈ ಅಂಟನ್ನು ಚೆನ್ನಾಗಿ ಕಿವುಚಿ ಬಟ್ಟೆಯಲ್ಲಿ ಶೋಧಿಸಿ ಐದು ಗ್ರಾಂ ಕೆಂಪು ಕಲ್ಲು ಸಕ್ಕರೆ ಪುಡಿ ಸೇರಿಸಿ ಸೇವಿಸಿದರೆ ಒಂದೆರಡು ಸಲ ಬೇಧಿಯಾಗುವುದರೊಂದಿಗೆ ಅಜೀರ್ಣ ಹೊಟ್ಟೆಯುಬ್ಬರ ಮಲಬದ್ದತೆ ಪರಿಹಾರ ಸಿಗುತ್ತದೆ. ಗಂಟಲು ಬೇನೆ, ಗಂಟಲು ಊದಿಕೊಂಡರೆ ಹತ್ತು ಗ್ರಾಂ ಕಕ್ಕೆ ಅಂಟನ್ನು ಒಂದು ಲೋಟ ನೀರಿಗೆ ಹಾಕಿ ಕμÁಯ ಮಾಡಿ ತಣ್ಣಗಾದ ಮೇಲೆ ಪ್ರತಿ ದಿನ ಮೂರರಿಂದ ನಾಲ್ಕು ಸಲ ಮುಕ್ಕಳಿಸಿದರೆ ಪರಿಹಾರ ಸಿಗುತ್ತದೆ. ಮಲಬದ್ಧತೆ ಶಮನಕ್ಕೆ ಸಹಕಾರಿ ಅರ್ಧ ಲೀಟರ್ ಹಸುವಿನ ಹಾಲಿನಲ್ಲಿ ಹತ್ತು ಗ್ರಾಂ ಕಕ್ಕೆ ಅಂಟನ್ನು ಹಾಕಿ ಚೆನ್ನಾಗಿ ಮರಳಿಸಿ, ಬಿಸಿಯಾದಾಗ ಬರುವ ಆವಿಯನ್ನು ಬಾಯಲ್ಲಿ ಸ್ವಲ್ಪ ಸೇದಿ ಗಂಟಲಿಗೆ ತಾಗಿಸುವುದು, ಅಥವಾ ಕಂಟಕಾರಿಯ ಹಸಿರೆಲೆಗಳನ್ನು ತಂದು ಚೆನ್ನಾಗಿ ಜಜ್ಜಿ ರಸವನ್ನು ಗಂಟಲಿನ ಮೇಲೆ ಮಂದವಾಗಿ ಲೇಪಿಸುವ ಮೂಲಕವೂ ಗಂಟಲು ಬೇನೆ ಶಮನ ಮಾಡಬಹುದಾಗಿದೆ. ಕಕ್ಕೆ ಕಾಯಿಯನ್ನು ಚೆನ್ನಾಗಿ ಒಣಗಿಸಿ ಸುಟ್ಟು ಬೂದಿ ಮಾಡಿ ಕಾಲು ಟೀ ಚಮಚ ಈ ಬೂದಿಯೊಂದಿಗೆ ಒಂದು ಚಿಟಿಕೆ ಉಪ್ಪಿನ ಪುಡಿ ಮತ್ತು ಒಂದು ಟೀ ಚಮಚ ಜೇನು ಕಲಸಿ ನೆಕ್ಕುವುದು. ದಿವಸಕ್ಕೆ ಎರಡರಿಂದ ರಿಂದ ಮೂರು ಬಾರಿ ಮಾಡುವುದರಿಂದಲೂ ಕೆಮ್ಮಿಗೆ ಶಮನ ಸಿಗುತ್ತದೆ. ಮಲಬದ್ಧತೆ ದೂರ ಮಾಡಲು ಐದು ಗ್ರಾಂ ಕಕ್ಕೆ ಕಾಯಿಯ ಒಳಗಡೆಯ ತಿರುಳನ್ನು ರಾತ್ರಿ ಶುದ್ಧವಾದ ಒಂದು ಬಟ್ಟಲು ನೀರಿನಲ್ಲಿ ನೆನೆಹಾಕುವುದು. ಬೆಳಗ್ಗೆ ಶೋಧಿಸಿದ ಈ ನೀರಿಗೆ ಸ್ವಲ್ಪ ಕೆಂಪು ಕಲ್ಲುಸಕ್ಕರೆ ಪುಡಿ ಸೇರಿಸಿ ಸೇವಿಸುವುದರಿಂದ ಒಂದೆರಡು ಸಲ ಬೇಧಿಯಾದರೂ ಉಪಯೋಗಕ್ಕೆ ಬರುತ್ತದೆ. ಕಕ್ಕೆ ಹೂವು ನಿಸರ್ಗದ ವರದಾನ ಕಕ್ಕೆ ಅಂಟು ಮತ್ತು ನೆಲಿ ಚೆಟ್ಟು ಚೂರ್ಣವನ್ನು ಸಮಭಾಗ ಚೂರ್ಣಿಸಿ ಹತ್ತು ಗ್ರಾಂ ಚೂರ್ಣವನ್ನು ಕಾಲು ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಕಾಯಿಸಿ ಅμÁ್ಟಂಶ ಕμÁಯ ಮಾಡಿ. ಒಂದು ಟೀ ಚಮಚ ಕಷಾಯಕ್ಕೆ ಸ್ವಲ್ಪ ಕೆಂಪು ಕಲ್ಲು ಸಕ್ಕರೆಪುಡಿ ಮತ್ತು ಜೇನು ಸೇರಿಸಿ ಏಳು ದಿನಗಳ ಕಾಲ ಸೇವಿಸುತ್ತಾ ಬಂದರೆ ರಕ್ತಪಿತ್ತ ನಿವಾರಣೆಯಾಗುತ್ತದೆ. ಕುಷ್ಟರೋಗಕ್ಕೆ ಕಕ್ಕೆಯ ಅಂಟು, ಆಡುಸೋಗೆ, ಅಮೃತಬಳ್ಳಿ ಸಮತೂಕ ಸೇರಿಸಿ, ಚೆನ್ನಾಗಿ ಜಜ್ಜಿ ಚತುμÁ್ಟಂಶ ಕμÁಯ ಮಾಡಿ, ಕಾಲು ಬಟ್ಟಲು ಕμÁಯಕ್ಕೆ ಸ್ವಲ್ಪ ಹರಳೆಣ್ಣೆ ಸೇರಿಸಿ ಸೇವಿಸುವುದರಿಂದಲೂ ಶಮನ ಕಾಣಬಹುದಾಗಿದೆ. ಇμÉ್ಟೀ ಅಲ್ಲದೆ, ಅಕ್ಕಿ ಅಕ್ಕಚ್ಚಿನಲ್ಲಿ ಬಲಿತ ಕಕ್ಕೆ ಗಿಡದ ಬೇರನ್ನು ತೇದು ಕೊರಳಬಾವಿಗೆ ಮಂದವಾಗಿ ಲೇಪಿಸುವುದರಿಂದ ಕೊರಳು ಬಾವು ಸಮಸ್ಯೆಗೆ ಪರಿಹಾರ ಕಾಣಲು ಸಾಧ್ಯವಿದೆ. ಆಯುರ್ವೇದಲ್ಲಿ ಕಕ್ಕೆಯ ಎಲೆ, ತೊಗಟೆ, ಅಂಟುವಿನಿಂದ ಹಲವಾರು ಉಪಯೋಗಗಳು ಇರುವುದರಿಂದಲೇ ಅದಕ್ಕೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಆದರೆ ಇದರಿಂದ ಔಷಧಿ ತಯಾರಿಸುವ ಮುನ್ನ ಆಯುರ್ವೇದ ತಜ್ಞರ ಸಲಹೆ ಪಡೆಯುವುದು ಮುಖ್ಯವಾಗುತ್ತದೆ. ಅದು ಏನೇ ಇರಲಿ ತನ್ನದೇ ಆದ ಚೆಲುವಿನಿಂದ ಬೇಸಿಗೆಯ ದಿನಗಳಲ್ಲಿ ಸುಮಾರು ಎರಡ್ಮೂರು ತಿಂಗಳ ಕಾಲ ನಮ್ಮೆಲ್ಲರ ಕಣ್ಮನ ಸೆಳೆಯುವ ಕಕ್ಕೆ ಹೂವು ನಿಸರ್ಗದ ವರದಾನ ಎಂದರೆ ತಪ್ಪಾಗಲಾರದು.


     (ಚಿತ್ರ: ಮಂಜೇಶ್ವರ ಎಸ್ ಎ ಟಿ ಶಾಲಾ ಮೈದಾನ ಬಳಿ ಅರಳಿ ನಿಂತಿರುವ ಕೊನ್ನೆ ಹೂ)



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries