HEALTH TIPS

ಉಕ್ಕಿನಡ್ಕದ ಕಾಸರಗೋಡು ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ವಿದ್ಯುತ್ ಸಂಪರ್ಕ-ಉದ್ಘಾಟನೆಗೆ ಮೊದಲೇ ಮಹಾಮಾರಿಗೆ ತೆರೆದ ಆಸ್ಪತ್ರೆ

 
       ಪೆರ್ಲ: ಉಕ್ಕಿನಡ್ಕದಲ್ಲಿ ಬಹುತೇಕ ಪೂರ್ಣಗೊಂಡಿರುವ ಬಹುನಿರೀಕ್ಷಿತ  ಕಾಸರಗೋಡು ವೈದ್ಯಕೀಯ ಕಾಲೇಜನ್ನು ಕೋವಿಡ್-19 ಆಸ್ಪತ್ರೆಯಾಗಿ ಮಾರ್ಪಡಿಸುವ ಅಂಗವಾಗಿ ಈ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಶನಿವಾರ ಲಭಿಸಿದೆ. ಕೇರಳ ವಿದ್ಯುತ್ ಪ್ರಸರಣ ಬೋರ್ಡ್(ಕೆ.ಎಸ್.ಇ.ಬಿ.) ಅಧ್ಯಕ್ಷ ಎನ್.ಎಸ್.ಪಿಳ್ಳೆ ಅವರ ಆದೇಶ ಪ್ರಕಾರ 160 ಕೆ.ವಿ. ಟ್ರಾನ್ಸ್ ಫಾರ್ಮರ್ ಸ್ಥಾಪಿಸಲಾಗಿದೆ. ಉತ್ತರ ಮಲಬಾರ್ ಪ್ರಧಾನ ಎಂಜಿನಿಯರ್ ಆರ್.ರಾಧಾಕೃಷ್ಣನ್, ಕಾಸರಗೋಡು ಡೆಪ್ಯೂಟಿ ಪ್ರಧಾನ ಎಂಜಿನಿಯರ್ ಪಿ.ಸುರೇಂದ್ರನ್, ವಿದ್ಯುತ್ ವಿಭಾಗ ಕಾರ್ಯಕಾರಿ ಎಂಜಿನಿಯರ್ ಪಿ.ಜಯಕೃಷ್ಣನ್, ಪೆರ್ಲ ವಿದ್ಯುತ್ ವಿಭಾಗ ಸಹಾಯಕ ಎಂಜಿನಿಯರ್ ಅಶೋಕನ್ ಅವರ ನೇತೃತ್ವದಲ್ಲಿ ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಲಭಿಸಿದೆ. 
       ಉದ್ಘಾಟನೆಗೆ ಮೊದಲೇ ಕೋವಿಡ್ 19 ಮಹಾಮಾರಿಯಿಂದ ಖಾತೆ ತೆರೆದ ಆಸ್ಪತ್ರೆ!
         ಕೋವಿಡ್-19 ವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ರೋಗಬಾಧಿತರ ಚಿಕಿತ್ಸೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದು, ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಯನ್ನು ತುರ್ತಾಗಿ ಕೋವಿಡ್ ಆಸ್ಪತ್ರೆಯನ್ನಾಗಿ ಮಾರ್ಪಡಿಸಲು ಈ ಕ್ರಮ ಕೈಗೊಂಡಿದೆ.
     ಕಟ್ಟಡ ಕಾಮಗಾರಿ ಅಂತಿಮ ಹಂತದಲ್ಲಿರುವ ಮಧ್ಯೆ ಕಟ್ಟಡಕ್ಕೆ ಶನಿವಾರ ತುರ್ತಾಗಿ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಕಳೆದ 2013 ನ.30 ರಂದು ಅಂದಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಶಂಕುಸ್ಥಾಪನೆ ನೆರವೇರಿಸಿದ್ದರು. 2015ರಲ್ಲಿ ಉದ್ಘಾಟಿಸಿ ಕಾರ್ಯಾಚರಿಸಲು ಲಕ್ಷ್ಯವಿರಿಸಲಾಗಿದ್ದರೂ ಹಲವು ರೀತಿಯ ಉದ್ದೇಶಿತ ಕಾರಣಗಳಿಂದ ನಿಧಾನ ಗತಿಯಲ್ಲಿ ಸಾಗಿದ ಕಾಮಗಾರಿ ಪ್ರಸ್ತುತ ವೈದ್ಯಕೀಯ ಕಾಲೇಜು ಬ್ಲಾಕ್ ಕೆಲಸ ಪೂರ್ತಿಯಾಗಿದ್ದು ಆಸ್ಪತ್ರೆ ಕೆಲಸವಿನ್ನೂ ಬಾಕಿಯಿದೆ. ಈ ಮಧ್ಯೆ ಕರೊನಾ ಆರ್ಭಟದ ಹಿನ್ನೆಲೆಯಲ್ಲಿ ತುರ್ತು ವಿದ್ಯುತ್ ಸಂಪರ್ಕ ಕಲ್ಪಿಸಿ ಕರೊನಾ ಚಿಕಿತ್ಸೆಗೆ ತೆರೆದುಕೊಳ್ಳುವ ಮೂಲಕ ಉದ್ಘಾಟನೆಗೆ ಮೊದಲೇ ಚಿಕಿತ್ಸೆಗೆ ಕಾರನವಾದ ಆಸ್ಪತ್ರೆ ಎಂಬ ಹೆಸರು ಉಕ್ಕಿನಡ್ಕಕ್ಕೆ ಲಭ್ಯವಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries