HEALTH TIPS

ರಸ್ತೆಗುಂಡಿಗಳ ನಡುವೆ ವೆಡ್ಡಿಂಗ್​ ಫೋಟೋಶೂಟ್! ವಧುವಿನ ನಡೆಗೆ ನೆಟ್ಟಿಗರಿಂದ ಬಹುಪರಾಕ್​

 

               ಮಲಪ್ಪುರಂ: ಮದುವೆಗೂ ಮುನ್ನ ಅಥವಾ ನಂತರ, ಸಮಯ ಯಾವುದೇ ಇರಲಿ ಇಂದಿನ ದಿನದಲ್ಲಿ ವೆಡ್ಡಿಂಗ್​ ಫೋಟೋಶೂಟ್​ ನವ ಜೋಡಿಯ ಅವಿಭಾಜ್ಯ ಅಂಗವಾಗಿದೆ. ಬಹುತೇಕ ಜೋಡಿಗಳು ತಮ್ಮ ವೆಡ್ಡಿಂಗ್​ ಫೋಟೋಗಳು ತುಂಬಾ ವಿಭಿನ್ನವಾಗಿರಬೇಕೆಂಬ ಕನಸನ್ನೂ ಹೊಂದಿರುತ್ತಾರೆ.

                          ಸಾಧ್ಯವಾದಷ್ಟು ಸುಂದರವಾದ ತಾಣಗಳಲ್ಲಿ ಸೆರೆಹಿಡಿಯಬೇಕೆಂದು ಬಯಸುತ್ತಾರೆ. ಆದರೆ, ಕೇರಳದ ವಧುವೊಬ್ಬಳು ವಿಭಿನ್ನವಾಗಿ ವೆಡ್ಡಿಂಗ್​ ಫೋಟೋಶೂಟ್​ ಮಾಡಿಸಿದ್ದು, ಈ ಮೂಲಕವು ಸರ್ಕಾರದ ಅವ್ಯವಸ್ಥೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

                 ಮಲಪ್ಪುರಂ ಜಿಲ್ಲೆಯ ನೀಲಂಬುರ್​ ಪಟ್ಟಣದಲ್ಲಿರುವ ರಸ್ತೆಯು ಗುಂಡಿಮಯವಾಗಿದೆ. ರಸ್ತೆಯ ಈ ಶೋಚನಿಯ ಸ್ಥಿತಿಯನ್ನು ಸರ್ಕಾರಕ್ಕೆ ಮನವರಿಕೆ ಮಾಡಬೇಕೆಂಬ ಉದ್ದೇಶದಿಂದ ಪೂಕೊಟ್ಟುಂಪದಂ ಮೂಲದ ಸುಜೀಶಾ ಎಂಬಾಕೆ ರಸ್ತೆ ಗುಂಡಿಗಳ ನಡುವೆಯೇ ವೆಡ್ಡಿಂಗ ಫೋಟೋಶೂಟ್​ ಮಾಡಿಸಿದ್ದಾರೆ.

               ನೀಲಂಬುರ್​ನಲ್ಲಿರುವ ಆಯರೋ ವೆಡ್ಡಿಂಗ್​ ಕಂಪನಿ ಈ ಫೋಟೋಶೂಟ್​ ಮಾಡಿದೆ. ರಸ್ತೆಯು ಗುಂಡಿಮಯವಾಗಿದ್ದು, ಗುಂಡಿಗಳಲ್ಲಿ ನೀರು ತುಂಬಿ ಸವಾರರು ಬಹುದಿನಗಳಿಂದ ಪರದಾಡುವಂತಾಗಿದೆ. ಹೀಗಾಗಿ ಸಂಪೂರ್ಣ ಹಾಳಾದ ರಸ್ತೆಯ ಮಧ್ಯೆ ನಿಂತು ಫೋಟೋಶೂಟ್ ನಡೆಸುವುದು ಅಧಿಕಾರಿಗಳ ನಿಷ್ಕ್ರಿಯತೆಯ ವಿರುದ್ಧ ಪ್ರತಿಭಟಿಸುವ ಒಂದು ಸಾಧನವಾಗಿದೆ ಎಂದು ಛಾಯಾಗ್ರಾಹಕ ಆಶಿಕ್ ಹೇಳಿದರು. ಈ ಯೋಜನೆಯನ್ನು ವಧುವಿಗೆ ಸೂಚಿಸಿದಾಗ, ಅವರು ಸಹ ಒಪ್ಪಿಗೆ ನೀಡಿದರು ಎಂದು ಆಶಿಕ್​ ತಿಳಿಸಿದರು.

                  ಹಲವಾರು ಇನ್​ಸ್ಟಾಗ್ರಾಂ ಬಳಕೆದಾರರು ಫೋಟೋಶೂಟ್‌ಗೆ ಧನಾತ್ಮಕ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಬೆಂಬಲವನ್ನು ಸೂಚಿಸುತ್ತಿದ್ದು, ವಧುವಿಕೆ ಬಹುಪರಾಕ್​ ಎನ್ನುತ್ತಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries