HEALTH TIPS

ವಕ್ಫ್ ಮಂಡಳಿ ಸದಸ್ಯರು ಅರೆ-ನ್ಯಾಯಾಂಗ ಅಧಿಕಾರಿಗಳು, ಅವರ ನಿರ್ಧಾರಗಳಲ್ಲಿ ಧರ್ಮವು ಅಂಶವಾಗಿರುವುದಿಲ್ಲ: ಸುಪ್ರೀಂ

                 : ವಕ್ಫ್ ಮಂಡಳಿಗಳ(Waqf Board) ಸದಸ್ಯರು ಅರೆ-ನ್ಯಾಯಾಂಗ ಅಧಿಕಾರಿಗಳಾಗಿ ಶಾಸನಬದ್ಧ ಪಾತ್ರವನ್ನು ಹೊಂದಿದ್ದಾರೆ ಮತ್ತು ಮಂಡಳಿಯ ನಿರ್ಧಾರಗಳಲ್ಲಿ ಧರ್ಮವು ಒಂದು ಅಂಶವಾಗಿರುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು(Supreme Court) ಹೇಳಿದೆ.

                  ವಕ್ಫ್ ಮಂಡಳಿಗಳನ್ನು 'ಶಾಸನಬದ್ಧ ಮಂಡಳಿಗಳು' ಎಂದು ಬಣ್ಣಿಸಿದ ನ್ಯಾಯಾಲಯವು, ವಕ್ಫ್ ಮಂಡಳಿಗಳಿಗೆ ಸಂಬಂಧಿಸಿದಂತೆ ಧರ್ಮವನ್ನು ಕೇಂದ್ರೀಕರಿಸಿದ್ದ ಅರ್ಜಿದಾರರ ವಾದಗಳನ್ನು ಪ್ರಶ್ನಿಸಿದ ಸಂದರ್ಭದಲ್ಲಿ ಮೌಖಿಕ ಅವಲೋಕನಗಳನ್ನು ನಡೆಸಿತು.

                ಅರ್ಜಿದಾರರಾದ ವಕೀಲ ಹಾಗೂ ಬಿಜೆಪಿ(BJP) ನಾಯಕ ಅಶ್ವಿನಿ ಉಪಾಧ್ಯಾಯ ಅವರು,ವಕ್ಫ್ ಕಾಯ್ದೆಯನ್ನು(Waqf Act) ಪ್ರಶ್ನಿಸಿರುವ ಎಲ್ಲ ಅರ್ಜಿಗಳನ್ನು ದಿಲ್ಲಿ ಉಚ್ಚ ನ್ಯಾಯಾಲಯದಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿದ್ದರು.

                  ನಿರ್ದಿಷ್ಟವಾಗಿ ಅರ್ಜಿದಾರರು ವಕ್ಫ್ ಮಂಡಳಿಗಳ ಸದಸ್ಯರು ಇಸ್ಲಾಮ್(Islam) ಧರ್ಮದ ಅನುಯಾಯಿಗಳಾಗಿರುವುದನ್ನು ಕಡ್ಡಾಯಗೊಳಿಸಿರುವ ವಕ್ಫ್ ಕಾಯ್ದೆಯ ಕೆಲವು ನಿಬಂಧನೆಗಳನ್ನು ಆಕ್ಷೇಪಿಸಿದ್ದರು. ಅರ್ಜಿದಾರರ ಪರ ವಕೀಲ ರಣಜಿತ್ ಕುಮಾರ್ ಅವರ ವಾದವನ್ನು ತೀವ್ರ ತರಾಟೆಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಹೃಷಿಕೇಶ ರಾಯ್ ಅವರ ಪೀಠವು,ಈ ಮಂಡಳಿಗಳು ಶಾಸನಬದ್ಧವಾಗಿದ್ದು, ಅವುಗಳ ನಿರ್ಧಾರಗಳಲ್ಲಿ ಧರ್ಮದ ಪಾತ್ರವಿಲ್ಲ ಎಂದು ಒತ್ತಿ ಹೇಳಿತು.

                 'ನ್ಯಾಯಮಂಡಳಿಗೆ ನ್ಯಾಯಾಂಗ ಸದಸ್ಯರೋರ್ವರು ನೇಮಕಗೊಂಡರೆ ಅವರು ಧರ್ಮದ ಆಧಾರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ನೀವು ಹೇಳಿದರೆ ನಾವು ಆಘಾತವನ್ನು ವ್ಯಕ್ತಪಡಿಸಲೇಬೇಕು. ರಣಜಿತ್ ಕುಮಾರ್, ನೀವು ಇದನ್ನು ನಿಜವಾಗಿ ಹೇಳುತ್ತಿದ್ದೀರಾ? ನಾವು ಧರ್ಮವನ್ನು ಆಧರಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆಯೇ' ಎಂದು ಪೀಠವು ಪ್ರಶ್ನಿಸಿತು.

                   ವಕ್ಫ್ ಆಸ್ತಿಗಳನ್ನು ರಕ್ಷಿಸುವ ಸೋಗಿನಲ್ಲಿರುವ ಈ ಕಾಯ್ದೆಯು ವಾಸ್ತವದಲ್ಲಿ ಧಾರ್ಮಿಕ ತಾರತಮ್ಯಕ್ಕೆ ಕಾರಣವಾಗುತ್ತದೆ ಎಂದು ವಾದಿಸಿದ್ದ ಅರ್ಜಿದಾರರು, ಹಿಂದು, ಬೌದ್ಧ ಮತ್ತು ಇತರ ಧರ್ಮಗಳ ಅನುಯಾಯಿಗಳು ತಮ್ಮ ಪ್ರಯೋಜನಕ್ಕಾಗಿ ಇಂತಹ ಯಾವುದೇ ಕಾನೂನನ್ನು ಹೊಂದಿಲ್ಲ. ಹೀಗಾಗಿ ವಕ್ಫ್ ಕಾಯ್ದೆಯು ಜಾತ್ಯತೀತತೆ, ದೇಶದ ಏಕತೆ ಮತ್ತು ಸಮಗ್ರತೆಗೆ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿದ್ದರು.

               ಇದಕ್ಕೆ ಪ್ರತಿಕ್ರಿಯಿಸಿದ ಸರ್ವೋಚ್ಚ ನ್ಯಾಯಾಲಯವು, ಒಡಿಶಾ, ಮಧ್ಯಪ್ರದೇಶ, ತಮಿಳುನಾಡು ಮತ್ತು ಕೇರಳಗಳಲ್ಲಿ ಈ ಎಲ್ಲ ಕಾಯ್ದೆಗಳಲ್ಲಿ ಮಂಡಳಿಯ ಸದಸ್ಯರು ಹಿಂದು ಧರ್ಮಕ್ಕೆ ಸೇರಿರಬೇಕು ಎಂಬ ನಿಬಂಧನೆಯಿದೆ ಎಂದು ಹೇಳಿತು. ರಾಜ್ಯದಲ್ಲಿಯ ಹಿಂದು ಟ್ರಸ್ಟ್‌ಗಳ 'ಅಧಿಕಾರಿಗಳು' ಹಿಂದು ಧರ್ಮದವರಾಗಿರಬೇಕು ಎಂದು ಕಡ್ಡಾಯಗೊಳಿಸಿರುವ ಒಡಿಶಾ ಹಿಂದು ಧಾರ್ಮಿಕ ದತ್ತಿಗಳ ಕಾಯ್ದೆ, 1952ರ ಕಲಂ 5ನ್ನು ಅದು ಉದಾಹರಣೆಯಾಗಿ ಬೆಟ್ಟು ಮಾಡಿತು.

            ಪೀಠದ ಪ್ರಶ್ನೆಗಳಿಗೆ ಉತ್ತರಗಳನ್ನು ಸಲ್ಲಿಸಲು ತನಗೆ ಸಮಯಾವಕಾಶ ಅಗತ್ಯವಿದೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದಾಗ, ನ್ಯಾಯಾಲಯವು ಅ.10ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಗೊಳಿಸಿತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries