HEALTH TIPS

ಶಾಂತಿನಗರ-ಕರಣಿ ಭಾಗದಲ್ಲಿ ಜನವಸತಿ ಪ್ರದೇಶದಲ್ಲಿ ಅಡಗಿದ್ದ ಕಾಡಾನೆಗಳನ್ನು ಹಿಮ್ಮೆಟ್ಟಿಸಿದ ಅಧಿಕಾರಿಗಳು


        ಮುಳ್ಳೇರಿಯ: ಕಾರಡ್ಕದ ಶಾಂತಿನಗರ-ಕರಣಿ ಪ್ರದೇಶದ ಜನವಸತಿ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದ ಮೂರು ಕಾಡಾನೆಗಳನ್ನು ಹಿಮ್ಮೆಟ್ಟಿಸಲಾಗಿದೆ. ಅರಣ್ಯ ಇಲಾಖೆಯ ವಿಶೇಷ ಕಾರ್ಯಪಡೆ ನೇತೃತ್ವದಲ್ಲಿ ಹತ್ತು ಗಂಟೆಗಳ ಸುದೀರ್ಘ ಪ್ರಯತ್ನದ ನಂತರ ಕಾಡಾನೆಗಳನ್ನು ಸಮೀಪದ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಓಡಿಸಲಾಯಿತು. ಮಿಷನ್ ಶನಿವಾರ ಸಂಜೆ ಪ್ರಾರಂಭವಾಯಿತು ಮತ್ತು ಭಾನುವಾರ ಬೆಳಿಗ್ಗೆ 4.30 ರ ಸುಮಾರಿಗೆ ಪೂರ್ಣಗೊಂಡಿತು. ಸ್ಥಳೀಯರು ಮತ್ತು ಪೋಲೀಸರು ಅರಣ್ಯ ಇಲಾಖೆ ತಂಡಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಆನೆ ನಿಯಂತ್ರಣದಲ್ಲಿ  ನಿರತರಾಗಿದ್ದ ಅಧಿಕಾರಿಗಳಿಗೆ ಸ್ಥಳೀಯರು ಅರಣ್ಯ ಇಲಾಖೆ ಮನವಿ ಮಾಡಿದ ಸಮಯಕ್ಕೆ ಮನೆಗಳಲ್ಲಿ ಲೈಟ್ ಆಫ್ ಮಾಡಿ, ಇತರೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ನೀರು ಮತ್ತಿತರ ಸಹಾಯ ಮಾಡಿ ನೆರವಾದರು.
       ಕಾರಡ್ಕ  ಬ್ಲಾಕ್ ಪಂಚಾಯತಿ ವ್ಯಾಪ್ತಿಯ ಜನವಸತಿ ಪ್ರದೇಶದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಓಡಿಸಲು ಕಣ್ಣೂರು ವಿಭಾಗದ ವಿಶೇಷ ತಂಡ ಗುರುವಾರ ಮಧ್ಯಾಹ್ನ ಆಗಮಿಸಿತ್ತು. ಕಾರ್ಯಪಡೆಯು ಅರಣ್ಯ ಇಲಾಖೆಯ ಕಣ್ಣೂರು ಉತ್ತರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಮೇಲ್ವಿಚಾರಣೆಯಲ್ಲಿತ್ತು. ವಿಭಾಗದ ಅರಣ್ಯಾಧಿಕಾರಿ ಕೆ.ಆರ್.ವಿಜಯನಾಥ್, ಬೀಟ್ ಫಾರೆಸ್ಟ್ ಆಫೀಸರ್ ಎಂ.ಜಿತಿನ್ ಹಾಗೂ ಎನ್ ಎಂಆರ್ ನೌಕರರಾದ ಅನೂಪ್, ಮೆಲ್ಜೋ, ರಾಜೇಂದ್ರನ್ ತಂಡದಲ್ಲಿದ್ದರು. ಇವರಲ್ಲದೆ ಕಾಸರಗೋಡು ಫ್ಲೈಯಿಂಗ್ ಸ್ಕ್ವಾಡ್, ವಿಭಾಗ ಸಿಬ್ಬಂದಿ, ಕಣ್ಣೂರು, ಕಾಸರಗೋಡು ಆರ್.ಆರ್. ಟಿ. ಸಿಬ್ಬಂದಿ ಸೇರಿದಂತೆ ಬೃಹತ್ ಕಾರ್ಯಪಡೆ ಆನೆ ಓಡಿಸುವ ನೇತೃತ್ವ ವಹಿಸಿತ್ತು. ಡಿಎಫ್‍ಒ ಪಿ.ಬಿಜು, ಕಾಸರಗೋಡು ಅರಣ್ಯ ರಕ್ಷಕ ಟಿ.ಜಿ.ಸೊಲೊಮನ್, ವಲಯ ಅರಣ್ಯಾಧಿಕಾರಿ ಎನ್.ವಿ.ಸತ್ಯನ್ ಉಪಸ್ಥಿತರಿದ್ದರು.
         ಕಣ್ಣೂರು ವಿಭಾಗದ ಫ್ಲೈಯಿಂಗ್ ಸ್ಕ್ವಾಡ್ ಮತ್ತು ವಯನಾಡ್ ಸಿಬ್ಬಂದಿ ಮುಂದಿನ ದಿನಗಳಲ್ಲಿ ಕಾರ್ಯಾಚರಣೆಗೆ ಸೇರಲಿದ್ದಾರೆ. ಪುಲಿಪರಂಬ ಪ್ರದೇಶದಲ್ಲಿ ಸೋಲಾರ್ ನೇತಾಡುವ ಬೇಲಿ ನಿರ್ಮಾಣ ಕಾರ್ಯವೂ ನಡೆಯುತ್ತಿದೆ. ಇದಕ್ಕೂ ಮುನ್ನ ಆನೆಯನ್ನು ಕಾಡಿಗೆ ಓಡಿಸುವಾಗ ಗಾಯಗೊಂಡಿದ್ದ ಇರಿಯಣ್ಣಿಯ ಸನಲ್‍ಗೆ ಅರಣ್ಯ ಇಲಾಖೆಯಿಂದ 75 ಸಾವಿರ ರೂ.ಧನಸಹಾಯವನ್ನು ಡಿಎಫ್‍ಒ ಹಸ್ತಾಂತರಿಸಿದರು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries