ಬದಿಯಡ್ಕ: ನೀರ್ಚಾಲು ಅಶ್ವತ್ಥ ಪ್ರೆಂಡ್ಸ್ ವತಿಯಿಂದ ಸಂಕಷ್ಟದಲ್ಲಿರುವ ಕಯುಟುಂಬಗಳಿಗೆ ಇತ್ತೀಚೆಗೆ ಧನಸಹಾಯ ಹಸ್ತಾಂತರಿಸಲಾಯಿತು.
ಕಿಡ್ನಿ ಕಾಯಿಲೆಯಿಂದ ಬಳಲುತ್ತಿರುವ ಪುದುಕೋಳಿ ನಿವಾಸಿ ಬಾಬು ಎಂಬವರ ಪತ್ನಿ ಉಷಾ ಅವರ ಚಿಕಿತ್ಸೆಗೆ ಹಾಗೂ ತಿಂಗಳ ಹಿಂದೆ ಅಪಘಾತದಲ್ಲಿ ಕಾಲು ಹಾಗೂ ಮುಖಕ್ಕೆ ತೀವ್ರ ಗಾಯಗಳೊಂದಿಗೆ ಚಿಕಿತ್ಸೆ ಪಡೆಯುತ್ತಿರುವ ನೀರ್ಚಾಲು ಸಮೀಪದ ಓಣಿಯಡ್ಕ ನಿವಾಸಿ ಚೋಮ ನಾಯ್ಕ್ ಅವರಿಗೆ ಆರ್ಥಿಕ ನೆರವು ಹಸ್ತಾಂತರಿಸಲಾಯಿತು. ಅಶ್ವತ್ಥ ಪ್ರೆಂಡ್ಸ್ ತಂಡದ ಪದಾಧಿಕಾರಿಗಳು ಈ ಮೊತ್ತಗಳನ್ನು ಹಸ್ತಾಂತರಿಸಿದರು.
ನೀರ್ಚಾಲು ಅಶ್ವತ್ಥ ಪ್ರೆಂಡ್ಸ್ ವತಿಯಿಂದ ಧನ ಸಹಾಯ ಹಸ್ತಾಂತರ
0
ಸೆಪ್ಟೆಂಬರ್ 18, 2022





