ಕಾಸರಗೋಡು: ನಗರಸಭಾ 4ನೇ ವಾರ್ಡು ಕುಟುಂಬ ಸಭೆ ಕಾಸರಗೋಡಿನಲ್ಲಿ ಜರುಗಿತು. ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಸಮಾರಂಭ ಉದ್ಘಾಟಿಸಿದರು. ಕಾಸರಗೋಡಿನ ಜನರಲ್ ಆಸ್ಪತ್ರೆ ಶೋಚನೀಯವಸ್ಥೆ ಮತ್ತು ನಗರದ ಶಿಥಿಲಾವಸ್ಥೆಯಲ್ಲಿರುವ ರಸ್ತೆಗಳು ನಗರದ ಜನತೆಗೆ ಶಾಪವಾಗಿ ಪರಿಣಮಿಸಿದೆ. ಕಾಸರಗೋಡಿನ ಸರ್ಕಾರಿ ಆಸ್ಪತ್ರೆ ಮತ್ತು ರಸ್ತೆ ದುರವಸ್ಥೆ ಕೇರಳದಲ್ಲೇ ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ. ನಗರಸಭೆ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದ್ದು, ಬಡಜನರನ್ನು ನಿರಂತರ ವಂಚಿಸುತ್ತಿರುವುದಾಗಿ ತಿಳಿಸಿದರು.
ಹಿರಿಯ ಮುಖಂಡರಾದ ಎ.ಟಿ. ನಾಯ್ಕ್, ನಾರಾಯಣನ್, ಮಂಡಲ ಸಮಿತಿ ಅಧ್ಯಕ್ಷ ಹಾಗೂ ವಾರ್ಡ್ ಅಭ್ಯರ್ಥಿ ಗುರುಪ್ರಸಾದ್ ಪ್ರಭು, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿತಾ ನಾಯ್ಕ್, ಹೇಮಲತಾ ಉಪಸ್ಥಿತರಿದ್ದರು.





