ಕಾಸರಗೋಡು: ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಬೇಕಲ್ ಅಂತರರಾಷ್ಟ್ರೀಯ ಬೀಚ್ ಫೆಸ್ಟ್ ಜನವರಿಯಲ್ಲಿ ನಡೆಯಲಿದೆ. ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವೈವಿಧ್ಯಮಯ ಸಾಂಸ್ಕøತಿಕ ಮತ್ತು ಪ್ರವಾಸೋದ್ಯಮ ಉತ್ಸವಕ್ಕೆ ಬೇಕಲ ಸಾಕ್ಷಿಯಾಗಲಿದೆ. ಬಿಆರ್ಡಿಸಿ, ಡಿಟಿಪಿಸಿ, ಜಿಲ್ಲೆಯ ಕುಟುಂಬಶ್ರೀ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳು ಬೀಚ್ ಫೆಸ್ಟ್ಗೆ ನೇತೃತ್ವ ನೀಡಲಿದೆ. ಮೇಳಕ್ಕೆ ವಿವಿಧ ಇಲಾಖೆಗಳ ಸಹಕಾರವೂ ಲಭ್ಯವಗಲಿದೆ. ಹೊಸ ವರ್ಷದ ಆಚರಣೆಯ ಅಂಗವಾಗಿ ಬೀಚ್ ಫೆಸ್ಟ್ ಅನ್ನು ಜನವರಿ 2023 ರಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಒಂದು ವಾರದ ಕಲಾ-ಸಾಂಸ್ಕøತಿಕ ಉತ್ಸವ ಮತ್ತು ಅತ್ಯುತ್ತಮ ಪ್ರವಾಸೋದ್ಯಮ ಮೇಳ ನಡೆಯಲಿದೆ. ಬೀಚ್ ಕಾರ್ನೀವಲ್, ವಿವಿಧ ಪ್ರದರ್ಶನ ಮಳಿಗೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮದ ಅಂಗವಾಗಿ ನಡೆಯಲಿದೆ. ಕಾಸರಗೋಡಿನ ಸಂಸ್ಕøತಿ, ಇತಿಹಾಸ, ಸ್ವಾದವನ್ನು ಪ್ರವಾಸಿಗರಿಗೆ ತಿಳಿಸಿಕೊಡಲಾಗುವುದು. ಜಿಲ್ಲೆಯ ವಿವಿಧ ಪ್ರವಾಸೋದ್ಯಮ ಕೇಂದ್ರಗಳನ್ನು ಪರಿಚಯಿಸುವ ಪ್ರದರ್ಶನಗಳು ಇರುತ್ತವೆ. ಆ ಸ್ಥಳಗಳಿಗೆ ಹೆಚ್ಚಿನ ಜನರನ್ನು ಆಕರ್ಷಿಸುವ ಪ್ರಯತ್ನ ಇದಾಗಿದೆ. ಪ್ರವಾಸೋದ್ಯಮದ ಅಭಿವೃದ್ಧಿಯೊಂದಿಗೆ, ಬೀಚ್ ಉತ್ಸವವು ಆ ಪ್ರದೇಶದ ಜನರ ಆರ್ಥಿಕ ಉನ್ನತಿಯ ಗುರಿಯನ್ನು ಹೊಂದಿದೆ.ಆಯೋಜಿಸಿದೆ ಬೀಚ್ ಫೆಸ್ಟ್ ಸ್ವಾಗತ ಸಮಿತಿ ಸಭೆ ಸೆ. 17ರಂದು ಸಂಜೆ 5 ಗಂಟೆಗೆ ಬೇಕಲ ಬೀಚ್ ಪಾರ್ಕ್ ನಲ್ಲಿ ನಡೆಯಲಿರುವುದಾಗಿ ಪ್ರಕಟಣೆ ತಿಳಿಸಿದೆ.
ಪ್ರವಾಸೋದ್ಯಮ ಕ್ಷೇತ್ರ ಪುನಶ್ಚೇತನ ಜನವರಿಯಲ್ಲಿ ಬೇಕಲ್ ಇಂಟರ್ನ್ಯಾಷನಲ್ ಬೀಚ್ ಫೆಸ್ಟ್
0
September 15, 2022
Tags