ಕಾಸರಗೋಡು: ಜಿಲ್ಲೆಯ ಆರೋಗ್ಯ ರಂಗದ ಶೋಚನೀಯಾವಸ್ಥೆ ಪರಿಹರಿಸುವಂತೆ ಆಗ್ರಹಿಸಿ ಖ್ಯಾತ ಪರಿಸರ ಹೋರಾಟಗಾರ್ತಿ 83 ವರ್ಷದ ದಯಾಬಾಯಿ ಅಕ್ಟೋಬರ್ 2ರ ಗಾಂಧಿ ಜಯಂತಿಯಿಂದ ತಿರುವನಂತಪುರದ ಸೆಕ್ರೆಟರಿಯೇಟ್ ಎದುರು ನಡೆಸಲಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಕಾಸರಗೋಡಿನ ಜನತೆಯ ಅಳಲು ಆಲಿಸಿ ಎಂಬ ಪತ್ರಗಳನ್ನು ಜಿಲ್ಲೆಯ ವಿವಿಧೆಯಿಂದ ಪತ್ರಗಳನ್ನು ರವಾನಿಸಲಾಯಿತು.
ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಕಾಸರಗೋಡು ಪ್ರಧಾನ ಅಂಚೆ ಕಛೇರಿಯಲ್ಲಿ ಕಾಸರಗೋಡು ನಗರಸಭಾ ಅಧ್ಯಕ್ಷ, ವಕೀಲ ವಿ.ಎಂ.ಮುನೀರ್ ಅಂಚೆಪೆಟ್ಟಿಗೆಗೆ ಕರ್ಡು ಹಾಕುವ ಮೂಲಕ ನೆರವೇರಿಸಿದರು. ಸಂಘಟನಾ ಸಮಿತಿ ಉಪಾಧ್ಯಕ್ಷ ಜುಬೈರ್ ಪಡ್ಪು ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಂಚಾಲಕ ಕರೀಂ ಚೌಕಿ ಸ್ವಾಗತಿಸಿದರು. ಕಾಸರಗೋಡು ಜಿಲ್ಲೆಯ ವಿವಿಧ ಕೇಂದ್ರಗಳಿಂದಪತ್ರಗಳನ್ನು ಕಳುಹಿಸಲಾಯಿತು. ಹಮೀದ್ ಚೇರಂಕೈ, ಅಬ್ದುಲ್ ರಹ್ಮಾನ್ ಬಂದ್ಯೋಡು, ತಾಜುದ್ದೀನ್ ಪಡಿಂಞËರ್, ಸೀದಿ ಹಾಜಿ, ಶೇಖರನ್ ಎಂ.ಕೆ. ಕಾರ್ತಿಕ್ ಮುಳಿಯಾರ್, ಸುಲೇಖಾ ಮಾಹಿನ್. ಉಸ್ಮಾನ್ ಕಡವತ್, ಅಭಿಚಿತ್, ಮುನೀರ್ ಪಳ್ಳಂ.ಸುನೇಶ್. ರಾಧಾಕೃಷ್ಣನ್, ಅಜಿತ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಸೆಕ್ರೆಟೇರಿಯೆಟ್ ಎದುರು ನಿರಾಹಾರ ಸತ್ಯಾಗ್ರಹ: ಮುಖ್ಯಮಂತ್ರಿಗೆ ಸಾರ್ವಜನಿಕ ಪತ್ರ ರವಾನೆ ಅಭಿಯಾನಕ್ಕೆ ಚಾಲನೆ
0
ಸೆಪ್ಟೆಂಬರ್ 15, 2022
Tags




