ಕಾಸರಗೋಡು: ಕೃಷಿ, ಹಂದಿ ಸಾಕಣೆ ಮೂಲಕ ಉತ್ತಮ ಸಾಧನೆಗೈದಿರುವ ಪ್ರಗತಿಪರ ಕೃಷಿಕ ಕೂಡ್ಲು ನಾಯಕ್ಕೋಡಿಯ ಗಣೇಶ್ ರೈ ಅವರಿಗೆ ಬಂಟರ ಸಂಘ ಮಧೂರು ಸಮಿತಿ ಹಾಗೂ ಕೂಡ್ಲು ಘಟಕ ವತಿಯಿಂದ ಸನ್ಮಾನಿಸಲಾಯಿತು.
ಕೂಡ್ಲು ಗಂಗೆ ಬಾಲಕೃಷ್ಣ ರೈ ಅವರ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಕಾಸರಗೋಡು ವಲಯ ಬಂಟರ ಸಂಘದ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಕುಚ್ಚಿಕ್ಕಾಡು ಅಧ್ಯಕ್ಷತೆ ವಹಿಸಿದ್ದರು. ಮಧೂರು ಸಮಿತಿ ಅಧ್ಯಕ್ಷ ಕುತ್ತಾರ್‍ಗುತ್ತು ರಾಮಕೃಷ್ಣ ಆಳ್ವ, ಕೂಡ್ಲು ಘಟಕದ ಅಧ್ಯಕ್ಷ ಬಾಲಕೃಷ್ಣ ರೈ ಅವರು ಕೃಷಿಕ ಗಣೇಶ್ ರಐ ಅವರನ್ನು ಸನ್ಮಾನಿಸಿದರು. ಈ ಸಂದರ್ಭ ನಡೆದ ಸಂಘಟನೆ ಮಾಸಿಕ ಸಭೆಯಲ್ಲಿ ರಾಮನಾಥ ಆಳ್ವ ಮಂಗಳೂರು, ಸದಾಶಿವ ರೈ ಕುಚ್ಚಿಕ್ಕಾಡು, ಶ್ವೇತಾ ಆರ್. ಶೆಟ್ಟಿ, ರತನ್ ಶೆಟ್ಟಿ ಉಪಸ್ಥಿತರಿದ್ದರು. ಗಣೇಶ್ ರೈ ಅವರ ಕೃಷಿ ಸಾಧನೆಗಾಗಿ ಮೊಗ್ರಾಲ್‍ಪುತ್ತೂರು ಮತ್ತು ಮಧೂರು ಗ್ರಾಮ ಪಂಚಾಯಿತಿ ವತಿಯಿಂದ ಇತ್ತೀಚೆಗೆ ಸನ್ಮಾನಿಸಲಾಗಿತ್ತು.
ಪ್ರಗತಿಪರ ಕೃಷಿಕಗೆ ಬಂಟರ ಸಂಘದಿಂದ ಸನ್ಮಾನ
0
ಸೆಪ್ಟೆಂಬರ್ 15, 2022
Tags





