ಕಾಸರಗೋಡು: ವಿಶ್ವಕರ್ಮ ಸಮುದಾಯದ ಎರೋಳ್ ಗ್ರಾಮ ಸಮಿತಿ ವತಿಯಿಂದ ವಿಶ್ವಕರ್ಮ ದಿನಾಚರಣೆ ಸೆ. 18ರಂದು ಪನಾಯಾಲ್ ನೆಲ್ಲಿಯಡ್ಕ ಶಾಲೆಯಲ್ಲಿ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಅಜನೂರು ವಿಶ್ವಕರ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಜತೆಕಾರ್ಯದರ್ಶಿ ರಾಜಣ್ಣ ಟೇಕೇಕರ ಉದ್ಘಾಟಿಸುವರು. ಡಾ.ಪುಷ್ಪರಾಜ್ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಈ ಸಂದರ್ಭ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಎನ್.ಎ.ಕುಮಾರನ್, ಚಂದ್ರನ್ ಕರಿಪೆÇಡಿ, ಜಯರಾಮನ್ ಕುಂಡಂಗುಳಿ ಮತ್ತಿತರರು ಪಾಲ್ಗೊಳ್ಳುವರು.
ಸೈಬರ್ ವಂಚನೆಗಳ ವಿಷಯವಾಗಿ ಕಾಸರಗೋಡು ನಗರ ಪೆÇಲೀಸ್ ಠಾಣೆ ಹಿರಿಯ ಸಿವಿಲ್ ಪೆÇಲೀಸ್ ಅಧಿಕಾರಿ ಪಿ.ಶಿವಕುಮಾರ್ ತರಗತಿ ನಡೆಸುವರು. ಗ್ರಾಮ ಸಮಿತಿ ಅಧ್ಯಕ್ಷ ಕೆ.ಶಶಿಧರ ಆಚಾರಿ ಅಧ್ಯಕ್ಷತೆ ವಹಿಸುವರು. ವಿಶ್ವಕರ್ಮ ದಿನಾಚರಣೆ ಅಂಗವಾಗಿ ವಿವಿಧ ಕ್ರೀಡಾ ಸ್ಪರ್ಧೆಗಳು ಹಾಗೂ ವಿವಿಧ ಕಲಾ ಕಾರ್ಯಕ್ರಮಗಳು ನಡೆಯಲಿರುವುದಾಗಿ ಪ್ರಕಟಣೆ ತಿಳಿಸಿದೆ.
18ರಂದು ನೆಲ್ಲಿಯಡ್ಕ ಶಾಲೆಯಲ್ಲಿ ವಿಶ್ವಕರ್ಮ ದಿನಾಚರಣೆ
0
ಸೆಪ್ಟೆಂಬರ್ 15, 2022
Tags




