HEALTH TIPS

ಮಾದಕವಸ್ತು ವಿರುದ್ಧದ ಹೋರಾಟ ಮನೆಯಿಂದ ಆರಂಭಗೊಳ್ಳಬೇಕು: ಶಾಸಕ ಎನ್ ಎ ನೆಲ್ಲಿಕುನ್ನು

 


                ಕಾಸರಗೋಡು: ಮಾದಕ ವ್ಯಸನದ ವಿರುದ್ಧದ ಹೋರಾಟ ಪ್ರತಿ ಮನೆಯಿಂದ ಆರಂಭಗೊಳ್ಳಬೇಕು ಎಂಬುದಾಗಿ ಶಾಸಕ ಎನ್.ಎ ನೆಲ್ಲಿಕುನ್ನು ತಿಳಿಸಿದ್ದಾರೆ. ಅವರು ಗಾಂಧಿ ಜಯಂತಿ ಸಪ್ತಾಹದ ಅಂಗವಾಗಿ ಜಿಲ್ಲಾ ವಾರ್ತಾ ಕಚೇರಿ ಹಾಗೂ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ಮಾದಕ ದ್ರವ್ಯ ವಿಮುಕ್ತ ಕೇರಳ ಯೋಜನೆಯ ಜಿಲ್ಲಾಮಟ್ಟದ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಉದ್ಘಾಟಿಸಿ ಮಾತನಾಡಿದರು.
           ಮಾದಕ ವಸ್ತು ಮುಕ್ತ ಕೇರಳದ ಯೋಜನೆ ಗುರಿ ಸಾಧಿಸಲು ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯಬೇಕು ಎಂದು ತಿಳಿಸಿದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಂಶುಪಾಲೆ ಎಂ.ರಮಾ ವ್ಯಸನ ಮುಕ್ತ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಮಾದಕ ದ್ರವ್ಯ ವಿರೋಧಿ ಕ್ಯಾಂಪಸ್ ಘೋಷಣೆ ಕೂಡ ನಡೆಯಿತು. 1975 ಹಳೇ ವಿದ್ಯಾರ್ಥಿಗಳ ಸಂಘವು ತಯಾರಿಸಿ ನೀಡಿದ ಡ್ರಗ್ ವಿರೋಧಿ ಕ್ಯಾಂಪಸ್ ಬೋರ್ಡ್‍ಗಳನ್ನು ಹಸ್ತಾಂತರಿಸಲಾಯಿತು. ಮಾದಕದ್ರವ್ಯ ವಿರುದ್ಧ ಅಬಕಾರಿ ಅಧಿಕಾರಿ ಎನ್.ಜಿ.ರಘುನಾಥನ್ ಜಾಗೃತಿ ತರಗತಿ ನಡೆಸಿದರು.
              ಚಿತ್ರ ರಚನಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶಾಸಕ ಎನ್.ಎ.ನೆಲ್ಲಿಕ್ಕುನ್ ಹಾಗೂ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಅತ್ಯುತ್ತಮ ಎನ್‍ಎಸ್‍ಎಸ್ ಸ್ವಯಂಸೇವಕ ರಾಷ್ಟ್ರ ಪ್ರಶಸ್ತಿ ಪಡೆದ ಕಾಸರಗೋಡು ಸರ್ಕಾ ಕಾಲೇಜಿನ ಪಿ.ಆಕಾಶ್ ಅವರನ್ನು ಸನ್ಮಾನಿಸಲಾಯಿತು. ವಿಮುಕ್ತಿ ಸಂಯೋಜಕ ಡಾ.ಲಿಯಾಕತ್ ಅಲಿ, ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಗಳಾದ ಆಸಿಫ್ ಇಕ್ಬಾಲ್ ಕಾಕಶ್ಸೆರಿ, ಡಾ.ಸಿ.ಕೆ.ಆಶಾಲತಾ, ಪಿ.ಟಿ.ಎ ಉಪಾಧ್ಯಕ್ಷ ಅರ್ಜುನನ್ ತಾಯಲಂಗಡಿ, ಕಾಲೇಜು ಯೂನಿಯನ್ ಅಧ್ಯಕ್ಷ ಕೆ.ಅಜಯ್ ಕೃಷ್ಣನ್ ಉಪಸ್ಥಿತರಿದ್ದರು. ಜಿಲ್ಲಾ ವಾರ್ತಾಧಿಕಾರಿ ಎಂ ಮಧುಸೂದನನ್ ಸ್ವಾಗತಿಸಿ, ಸಹಾಯಕ ಸಂಪಾದಕ ಪ್ರದೀಪ್ ನಾರಾಯಣನ್ ವಂದಿಸಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries