HEALTH TIPS

ಮಾದಕ ದ್ರವ್ಯ ವಿರುದ್ಧ ಎನ್ನೆಸ್ಸೆಸ್ ಕಾರ್ಯಕರ್ತರಿಂದ ಬೀದಿನಾಟಕ



         ಕಾಸರಗೋಡು: ಚೆಮ್ನಾಡ್ ಜಮಾಅತ್ ಹೈಯರ್ ಸೆಕೆಂಡರಿ ಶಾಲಾ ರಾಷ್ಟ್ರೀಯ ಸೇವಾ ಯೋಜನೆಯು ಮಾದಕ ವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಜಾನಪದ ಕಲಾ ಮೇಳ'ಅಲಾಮಿಕಲಿ'ಯನ್ನು ಆಯೋಜಿಸಲಾಯಿತು.  ಡ್ರಗ್ ರಾಕ್ಷಸನನ್ನು ಸಂಹರಿಸಲು ಅಲಾಮಿಗಳು ಬರುತ್ತಿದೆ ಎಂಬ ಶೀರ್ಷಿಕೆಯೊಂದಿಗೆ ಬೀದಿನಾಟಕ ಪ್ರಸ್ತುತಪಡಿಸಲಾಯಿತು.
             ಕಾಸರಗೋಡಿನ ಸ್ವಂತ ಕಲೆಯಾಗಿರುವ ಅಲಾಮಿಕಳಿಯನ್ನು ಎನ್ನೆಸ್ಸೆಸ್ ಮೂಲಕ ಜನರಿಗೆ ತಲುಪಿಸುವ "ಆರಂಗ್'ಕಾರ್ಯಕ್ರಮದ ಅಂಗವಾಗಿ ಮತ್ತು ರಾಜ್ಯ ಸರ್ಕಾರದ "ನೊ ಟು ಡ್ರಗ್ಸ್" ಮಾದಕ ವಸ್ತು ವಿರೋಧಿ ಕಾರ್ಯಕ್ರಮದ ಸಂಯೋಜಿತವಾಗಿ ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ಕಲಾರೂಪಕ ನಡೆಸಿಕಟ್ಟರು. ಎನ್‍ಎಸ್‍ಎಸ್‍ನ 18 ಸ್ವಯಂಸೇವಕರು ಅಲಂಕಾರಿಕ ಉಡುಗೆಯ ಮೂಲಕ ಈ ವಿಶೇಷ ಕಲಾಪ್ರಕಾರ ನಡೆಸಿಕೊಟ್ಟರು. "ಲೇಲೆ ಮಾಮಾ, ಲೇಲಾ ಮಾಮಾ...ದೇಶವನ್ನು ಉಳಿಸಲು ಒಂದಾಗಿ ಸೇರಿಕೊಳ್ಳಿ ಎಂಬ ಸಂದೇಶವನ್ನು ಒಳಗೊಂಡಂತೆ ಸ್ವಯಂಸೇವಕರು ಸಿದ್ಧಪಡಿಸಿದ ಸಾಹಿತ್ಯ ಆಲಾಪಿಸುತ್ತಾ ಅಲಾಮಿಗಳು ಹೆಜ್ಜೆ ಹಾಕಿದರು.  ಸ್ವಯಂಸೇವಕರಾದ ಅಭಯ್, ಅರುಣ್‍ಮತ್ತು ಶಾಲಾ ಸಂಚಾಲಕ ಸುಕುಮಾರನ್ ನಾಯರ್, ಪಿಟಿಎ ಅಧ್ಯಕ್ಷ ಅಬ್ದುಲ್ಲಾ ಪಿ.ಎಂ, ಕಾರ್ಯಕ್ರಮಾಧಿಕಾರಿ ಸಂತೋಷ್ ಸಿ.ಎ. ಶಿಕ್ಷಕರಾದ ಶ್ರೀಜಿತ್ .ಪಿ ಮತ್ತಿತರರು ನೇತೃತ್ವ ವಹಿಸಿದ್ದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries