ಕಾಸರಗೋಡು: ಜಿಲ್ಲೆಯ ಆರೋಗ್ಯ ವಲಯದ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಖ್ಯಾತ ಸಾಮಾಜಿಕ ಹೋರಾಟಗಾರ್ತಿ ದಯಾಬಾಯಿ ಅವರು ತಿರುವನಂತಪುರದ ಸೆಕ್ರೆಟರಿಯೇಟ್ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ 10 ದಿನ ಕಳೆದರೂ ಸರ್ಕಾರ ಮಧ್ಯ ಪ್ರವೇಶಿಸದಿರುವ ಕ್ರಮ ವಿರೋಧಿಸಿ ಮೊಗ್ರಾಲ್ ದೇಶೀಯ ವೇದಿ ಸಂಘಟನೆ ವತಿಯಿಮದ ಪ್ರತಿಭಟನೆ ನಡೆಯಿತು. ದಯಾಬಾಯಿ ನಡೆಸುತ್ತಿರುವ ಅನಿರ್ಧಿಷ್ಟಕಾಲ ನಿರಾಹಾರ ಸತ್ಯಗ್ರಹದ ಬಗ್ಗೆ ಸರ್ಕಾರ ಮಾತುಕತೆಗೆ ಮುಂದಾಗದಿರುವುದನ್ನು ವಿರೋಧಿಸಿ ಸೋಮವಾರ ಸ್ವಯಂಸೇವಾ ಸಂಘಟನೆಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಕರಾಳ ದಿನ ಆಚರಿಸಲಾಗಿದ್ದು, ಇದರ ಅಂಗವಾಗಿ ಮೊಗ್ರಾಲ್ ನ ಮೊಗ್ರಾಲ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪ್ರತಿಭಟನಾ ಸಭೆ ಆಯೋಜಿಸಿತ್ತು.
ಎಂ.ಎ.ಮೂಸಾ ಪ್ರತಿಭಟನೆ ಉದ್ಘಾಟಿಸಿದರು. ಅಧ್ಯಕ್ಷ ಎ.ಎಂ.ಸಿದ್ದೀಕ್ ರಹಮಾನ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ರಂಗಮಂದಿರಪೆÇೀಷಕರಾದ ಎಂ.ಎ.ಹಮೀದ್, ಎಂ.ಮಾಹಿನ್ ಮಾಸ್ತರ್, ಎಂ.ಎ.ಅಬ್ದುರಹಮಾನ್ ಸುರ್ತಿಮುಲ್ಲಾ, ಹಮೀದ್ ಪೆರ್ವಾಡ್, ಹಮೀದ್ ಕಾವಿಲ್, ಟಿ.ಕೆ.ಅನ್ವರ್, ಎಂ.ಎಂ.ರಹಮಾನ್, ಎಂ.ಜಿ.ಎ.ರಹಮಾನ್, ಹಾರಿಸ್ ಬಾಗ್ದಾದ್, ಅಶ್ರಫ್ ಪೆರ್ವಾಡ್, ಮುಹಮ್ಮದ್ ಅಶ್ರಫ್ ಸಾಹಿಬ್, ಅಬ್ದುಲ್ಲಕುಞÂ ನಟ್‍ಪಾಲಂ, ಇಬ್ರಾಹಿಂ ಕುಞ, ಇಬ್ರಾಹಿಂ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಕೆ.ಜಾಫರ್ ಸ್ವಾಗತಿಸಿದರು. ಮುಹಮ್ಮದ್ ಮೊಗ್ರಾಲ್ ವಂದಿಸಿದರು.
ದಯಾಬಾಯಿ ಹೋರಾಟ: ಸರ್ಕಾರದ ಧೋರಣೆ ಖಂಡಿಸಿ ಪ್ರತಿಭಟನೆ
0
ಅಕ್ಟೋಬರ್ 11, 2022
Tags


