HEALTH TIPS

ಉಪ್ಪಳ ರೈಲು ನಿಲ್ದಾಣ ಉಳಿಸಿ ಕ್ರಿಯಾ ಸಮಿತಿಯಿಂದ ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚೆ


            ಉಪ್ಪಳ: ಉಪ್ಪಳ ರೈಲು ನಿಲ್ದಾಣ ಅಭಿವೃದ್ಧಿಗೆ ಸಂಬಂಧಿಸಿದಂತೆ ‘ಉಪ್ಪಳ ರೈಲು ನಿಲ್ದಾಣ ಉಳಿಸಿ’ ಕ್ರಿಯಾ ಸಮಿತಿಯ ಪದಾಧಿಕಾರಿಗಳು, ಸರ್ವಪಕ್ಷಗಳ ಪ್ರತಿನಿಧಿಗಳು, ವರ್ತಕರು ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
          ಉಪ್ಪಳದಲ್ಲಿ ಹಾಲ್ಟ್ ಏಜೆಂಟ್ ನೇಮಕ ನಿರ್ಧಾರವನ್ನು ಹಿಂಪಡೆಯುವುದು, ರಿಸರ್ವೇಶನ್ ಟಿಕೆಟ್ ಕಾಯ್ದಿರಿಸುವ ಸೌಲಭ್ಯವನ್ನು ಮರುಸ್ಥಾಪಿಸುವುದು, ನೇತ್ರಾವತಿ ಎಕ್ಸ್‍ಪ್ರೆಸ್, ಪರಶುರಾಮ್ ಎಕ್ಸ್‍ಪ್ರೆಸ್, ಚೆನ್ನೈ-ಮಂಗಳೂರು ಎಕ್ಸ್‍ಪ್ರೆಸ್‍ಗೆ ನಿಲುಗಡೆ ನೀಡುವುದು, ನಿಲ್ದಾಣದಲ್ಲಿ ಅಡುಗೆ ಸ್ಟಾಲ್ ಮಂಜೂರು ಮಾಡುವುದು ಮುಂತಾದ ಬೇಡಿಕೆಗಳು ಚರ್ಚೆಯ ಮೂಲಕ ಅಧಿಕಾರಿಗಳ ಮುಂದಿಡಲಾಯಿತು.  ಹಾಲ್ಟ್ ಏಜೆಂಟರನ್ನು ನೇಮಿಸಿದರೆ ಉಪ್ಪಳವನ್ನು ಅವಲಂಬಿಸಿರುವ ಸುಮಾರು 500 ವಿದ್ಯಾರ್ಥಿಗಳಿಗೆ ರಿಯಾಯಿತಿ ಟಿಕೆಟ್  ವಿತರಣೆಗೆ ತೊಂದರೆಯಾಗಲಿದೆ ಎಂಬ ಆತಂಕ ಚರ್ಚೆಯ ಮೂಲಕ ವ್ಯಕ್ತವಾಯಿತು. ಪ್ರಸ್ತುತ ಕಾಸರಗೋಡಿಗೆ ಬರುವ ರಾತ್ರಿ ರೈಲುಗಳಲ್ಲಿ ಉಪ್ಪಳ ಮಂಜೇಶ್ವರಕ್ಕೆ ತೆರಳುವ ಪ್ರಯಾಣಿಕರು ಸೇರಿದಂತೆ ಗುಡ್ಡಗಾಡು ಪ್ರದೇಶಗಳಿಗೆ ತೆರಳುವ ಪ್ರಯಾಣಿಕರು ಬಸ್ ಸೌಕರ್ಯದ ಕೊರತೆಯಿಂದ ಟ್ಯಾಕ್ಸಿಗಳಿಗೆ ಭಾರಿ ಮೊತ್ತವನ್ನು ಪಾವತಿಸಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ರೈಲುಗಳು ಕಾಸರಗೋಡು-ಮಂಗಳೂರು ನಗರಗಳ ಮಧ್ಯದಲ್ಲಿ ಅತ್ಯಂತ ಪ್ರಮುಖವಾದ ಮತ್ತು ಮಂಜೇಶ್ವರ ತಾಲೂಕಿನ ಕೇಂದ್ರವಾದ ಉಪ್ಪಳದಲ್ಲಿ ನಿಲುಗಡೆಯಾದರೆ ಉಪ್ಪಳ-ಮಂಜೇಶ್ವರ ಪ್ರದೇಶಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂಬ ಬಹುಮುಖ್ಯ ಬೇಡಿಕೆಯೂ ಚರ್ಚೆಯಲ್ಲಿ ವ್ಯಕ್ತವಾಯಿತು. ಈ ಬಗ್ಗೆ ಸಹಾನುಭೂತಿಯಿಂದ ಪರಿಗಣಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.



          ಸಮಿತಿ ಪದಾಧಿಕಾರಿಗಳಾದ ಅಸೀಂ ಮಣಿಮುಂಡ, ಎಂ.ಕೆ.ಅಲಿ ಮಾಸ್ತರ್, ಪುಷ್ಪರಾಜ್ ಕೆ. ಐಲ್, ಹನೀಫ್ ರೇನ್ಬೋ, ಸತ್ಯನ್ ಸಿ.ಉಪ್ಪಳ, ನಾಫಿ ಬಪ್ಪಾಯಿತೊಟ್ಟಿ, ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀನಾ ಟೀಚರ್, ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರುಬೀನಾ, ಜನಪ್ರತಿನಿಧಿಗಳಾದ ಮಹ್ಮದ್ ಮಣಿಮುಂಡ, ಮುಹಮ್ಮದ್ ಹುಸೈನ್ ಮುಸೋಡಿ, ಟಿ.ಎ ಷರೀಫ್, ಮೊಹಮ್ಮದ್ ರಫೀಕ್, ಮಜೀದ್ ಪಚ್ಚಂಬಳ, ಖೈರುನ್ನೀಸಾ, ಕಿಶೋರ್ ಕುಮಾರ್, ವಿವಿಧ ರಾಜಕೀಯ ಮುಖಂಡರಾದ ಟಿ.ಎ.ಮೂಸಾ, ವಸಂತ ಮಾಯಾ, ಎಂ. ಬಿ. ಯೂಸುಫ್, ಬಿ. ಎಂ. ಮುಸ್ತಫಾ, ಉಮರ್ ಅಪೆÇಲೊ, ಪಿ. ಎಂ. ಸಲೀಂ, ಮಕ್ಬೂಲ್ ಅಹ್ಮದ್, ವ್ಯಾಪಾರಿ ಸಮಿತಿ ಅಧ್ಯಕ್ಷ ಜಬ್ಬಾರ್ ಪಳ್ಳಂ, ಉಪಾಧ್ಯಕ್ಷ ಶಿವರಾಮ ಪಕಳ, ಹಮೀದ್ ನಿಫಾ, ರೈಶಾದ್ ಉಪ್ಪಳ, ಮುಹಮ್ಮದ್ ಅಶಫ್, ಚೆಮ್ಮಿ ಉಪ್ಪಳ ಗೇಟ್, ಶಬೀರ್ ಮಣಿಮುಂಡ, ಭರತ್ ರೈ ಕೋಡಿಬೈಲ್ ಹಾಗೂ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ. ಅರುಣ್, ವಾಣಿಜ್ಯ ವಿಭಾಗದ ಸದಸ್ಯರು, ಉಪ್ಪಳ ಠಾಣೆಯ ವಾಣಿಜ್ಯ ಗುಮಾಸ್ತ ವಿಷ್ಣು ಮೊದಲಾದವರು ಉಪಸ್ಥಿತರಿದ್ದರು.
       ಈ ಹಿಂದೆ ಉಪ್ಪಳ ರೈಲು ನಿಲ್ದಾಣ ಉಳಿಸಿ ಕ್ರಿಯಾ ಸಮಿತಿ ಅಧ್ಯಕ್ಷ ನ್ಯಾಯವಾದಿ. ಬಾಲಕೃಷ್ಣ ಶೆಟ್ಟಿ, ಸಂಚಾಲಕ ಅಸೀಂ ಮಣಿಮುಂಡ, ಸಹ ಸಂಚಾಲಕ ನಾಫಿ ಬಪ್ಪಾಯಿತೊಟ್ಟಿ  ರೈಲ್ವೆ ಪ್ರಯಾಣಿಕರ ಸೌಕರ್ಯ ಸಮಿತಿ ಅಧ್ಯಕ್ಷ ಪಿ. ಕೆ. ಕೃಷ್ಣದಾಸ್ ಅವರೊಂದಿಗೆ ಚರ್ಚೆ ನಡೆಸಿದ್ದರು. ಅದರ ಮುಂದುವರಿದ ಭಾಗವೇ ರೈಲ್ವೇ ಅಧಿಕಾರಿಗಳ ಈ ಭೇಟಿಯಾಗಿತ್ತು.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries