HEALTH TIPS

ನಾಳೆ ಕಾಞಂಗಾಡಿನಲ್ಲಿ "ಮಾದಕ ದ್ರವ್ಯ ಮುಕ್ತ ಬೀದಿ'ಕಾರ್ಯಕ್ರಮ






         ಕಾಸರಗೋಡು: ಮಾದಕ ದ್ರವ್ಯ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಮುಕ್ತಿ ಮಿಷನ್ ನೇತೃತ್ವದಲ್ಲಿ "ಮಾದಕ ದ್ರವ್ಯ ಮುಕ್ತ ಬೀದಿ" ಕಾರ್ಯಕ್ರಮ ಜ. 26ರಂದು ಕಾಞಂಗಾಡಿನಲ್ಲಿ ನಡೆಯಲಿದೆ. ಸಂಜೆ 4.30ಕ್ಕೆ ಕಾಞಂಗಾಡ್ ಟೌನ್ ಸ್ಕ್ವೇರ್‍ನಲ್ಲಿ ಬಂದರು ಮತ್ತು ಪ್ರಾಚ್ಯವಸ್ತು ಸಂಗ್ರಹಾಲಯ ಖಾತೆ ಸಚಿವ ಅಹಮ್ಮದ್ ದೇವರಕೋವಿಲ್ ಉದ್ಘಾಟಿಸುವರು. ಶಾಸಕ ಇ. ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜಮೋಹನ್ ಉಣ್ಣಿತ್ತಾನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ, ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ. ವಿ. ಸುಜಾತಾ, ಅಪರ ಜಿಲ್ಲಾಧಿಕಾರಿ ಸೂಫಿಯಾನ್ ಅಹಮ್ಮದ್ ಪಾಲ್ಗೊಳ್ಳುವರು.  ಮಾದಕ ದ್ರವ್ಯ ವಿರೋಧಿ ಜಾಗೃತಿಯ ಎರಡನೇ ಹಂತದ ಭಾಗವಾಗಿ ನಡೆಯುವ ಸಮಾರಂಭದಲ್ಲಿ ಜಿಲ್ಲೆಯ ಶಾಲಾ, ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ. ಮದ್ಯಪಾನ ಮತ್ತು ಮಾದಕ ವ್ಯಸನದ ವಿರುದ್ಧವಾದ ಸಂದೇಶಗಳೊಂದಿಗೆ ವಿವಿಧ ಕಲಾತ್ಮಕ ಕಾರ್ಯಕ್ರಮಗಳು ನಡೆಯಲಿವೆ. ಜ. 26 ರಂದು ಮಧ್ಯಾಹ್ನ 3ಕ್ಕೆ ಕಾಞಂಗಾಡು ಹಳೆ ಬಸ್ ನಿಲ್ದಾಣ ಸನಿಹ ಫ್ಲ್ಯಾಶ್ ಮೋಬ್ " ಮಾದಕ ದ್ರವ್ಯ ಮುಕ್ತ ಬೀದಿ " ಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಜಿಲ್ಲೆಯ ಶಾಲಾ - ಕಾಲೇಜುಗಳಿಂದ ಆಯ್ಕೆಯಾದ ಎಂಟು ತಂಡಗಳು ಭಾಗವಹಿಸಲಿವೆ. ಕಾರ್ಯಕ್ರಮದ ಅಂಗವಾಗಿ ರಸಪ್ರಶ್ನೆ ಸ್ಪರ್ಧೆ, ಕಾಞಂಗಾಡು ಪೇಟೆಯ ವರೆಗೆ ಜಾಥಾ ಹಮ್ಮಿಕೊಳ್ಳಲಾಗಿದೆ. ಸ್ಟೂಡೆಂಟ್ ಪೆÇಲೀಸ್ ಕೆಡೆಟ್‍ಗಳು, ಸ್ಕೌಟ್ ಮತ್ತು ಗೈಡ್ಸ್, ಜೂನಿಯರ್ ರೆಡ್ ಕ್ರಾಸ್ ಮೊದಲಾದವರು ಮಾದಕ ದ್ರವ್ಯ ವಿರೋಧಿ ಸಂದೇಶವನ್ನು ಹೊಂದಿರುವ ಫಲಕಗಳೊಂದಿಗೆ ಜಾಥಾದಲ್ಲಿ ಭಾಗವಹಿಸುವರು. ಟೌನ್ ಸ್ಕ್ವೇರ್‍ನಲ್ಲಿ ಕಳರಿಪಯಟ್ಟು ಪ್ರದರ್ಶನ, ಚೆಸ್ ಪ್ರದರ್ಶನ ಸ್ಪರ್ಧೆ, ಬೀದಿ ನಾಟಕ, ಮೈಮ್ ಶೋ, ಏಕಪಾತ್ರಾಭಿನಯ ಪ್ರದರ್ಶನಗೊಳ್ಳಲಿದೆ.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries