HEALTH TIPS

No title

            ಇಂದಿನಿಂದ ರಂಗಾಭ್ಯಾಸಿಗಳ ರಂಗೋತ್ಸವ "ನಾಂದಿ" ಮಂಗಳೂರಲ್ಲಿ
   ಮಂಗಳೂರು: ಜನರ್ಿ ಥೇಟರ್ ಗ್ರೂಫ್ ಮಂಗಳೂರು ಮತ್ತು ಅರೆಹೊಳೆ ಪ್ರತಿಷ್ಠಾನ ಸಹಯೋಗದೊಂದಿಗೆ ಭಾರತೀಯ ರಂಗಶಿಕ್ಷಣ ಕೇಂದ್ರ ಮೂರು ದಿನಗಳ ಕಾಲ ಪ್ರಸ್ತುತಪಡಿಸುವ ರಂಗಾಭ್ಯಾಸಿಗಳ ರಂಗೋತ್ಸವ "ನಾಂದಿ" ಇಂದಿನಿಂದ ಮೇ.30ರ ವರೆಗೆ ಮಂಗಳೂರು ಡಾನ್ ಬಾಸ್ಕೋ ಸಭಾಂಗಣದಲ್ಲಿ ನಡೆಯಲಿದೆ. ಪ್ರತಿದಿನ ಸಂಜೆ 6.30 ರಿಂದ ತಂಗೋತ್ಸವ ಆರಂಭಗೊಳ್ಳಲಿದ್ದು, ರೂ.50 ಪ್ರವೇಶ ದರ ನಿಗದಿಗೊಳಿಸಲಾಗಿದೆ.
   ಇಂದು ವೇಣಿ ಸಂಹಾರ(ಸಾಲಿಯಾನ್ ಉಮೇಶ್ ನಾರಾಯಣ್ ನಿದರ್ೇಶನ), ನಾಳೆ ದೇಹಭಾನ(ಚಿತ್ತರಂಜನ್ ಗಿರಿ ಪುಣೆ ನಿದರ್ೇಶನ) ಹಾಗೂ ಬುಧವಾರ ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ (ಭಾಗೀರಥಿ ಬಾಯಿ ಕದಂ ನಿದರ್ೇಶನ) ನಾಟಕಗಳು ಪ್ರದರ್ಶನಗೊಳ್ಳಿದೆ.
      ಮುನ್ನೂಟ ವಿವರ :
  *ಭಟ್ಟನಾರಾಯಣ ವಿರಚಿತ*
*ವೇಣಿ ಸಂಹಾರ*
ನಿದರ್ೇಶನ : ಸಾಲಿಯಾನ ಉಮೇಶ್ ನಾರಾಯಣ
ಅನುವಾದ: ಆಸ್ಥಾನವಿದ್ವಾನ್ ಎಂ. ಸೀತಾರಾಮಶಾಸ್ತ್ರಿಗಳು
ರಂಗವಿನ್ಯಾಸ : ಹೆಚ್.ಕೆ. ದ್ವಾರಕಾನಾಥ್
ಸಂಗೀತ: ಗಣೇಶ್ ಎಂ ಮತ್ತು ಸುಬ್ರಹ್ಮಣ್ಯ ಮೈಸೂರು
ಸಾಂಗತ್ಯ: ಶುಭಕರ್ ಪುತ್ತೂರು
ಬೆಳಕು : ಮಹೇಶ್ ಕಲ್ಲತ್ತಿ

ನಾಟಕದ ಬಗ್ಗೆ
ವೇಣೀಸಂಹಾರ ಎಂದರೆ ಮುಡಿಕಟ್ಟುವಿಕೆ ಎಂದರ್ಥ. ಮಹಾಭಾರತದ ಸಭಾಪರ್ವದಲ್ಲಿ, ದ್ರೌಪದಿ ವಸ್ತ್ರಾಪಹರಣದ ಸಂದರ್ಭ ದುಶ್ಯಾಸನ, ದುಯರ್ೋಧನರ ರಕ್ತದಿಂದಲೇ ದ್ರೌಪದಿಯ ಮುಡಿ ಕಟ್ಟುವುದಾಗಿ ಭೀಮ ಮಾಡುವ ಶಪಥ ವೇಣೀ ಸಂಹಾರದ ನಾಟಕದ ಕಥಾವಸ್ತು. ಸಂಧಾನಕ್ಕೆ ಕೃಷ್ಣನನ್ನು ಕಳುಹಿಸುವ ಯುಧಿಷ್ಠಿರನ ತೀಮರ್ಾನವನ್ನು ಹಂಗಿಸುತ್ತಾ ಪ್ರವೇಶಿಸುವ ಭೀಮ, ನೋವಿನ ಮಡುವಾದ ದ್ರೌಪದಿಯನ್ನು ಸಮಾಧಾನಿಸುತ್ತಾ ಪ್ರತಿಜ್ಞೆಗೈಯ್ಯುತ್ತಾನೆ. ಅಷ್ಟರಲ್ಲಿ ಸಂಧಾನ ಮುರಿದುಬಿದ್ದು ಯುದ್ಧ ಘೋಷಣೆಯಾಗುತ್ತದೆ.
ಎರಡನೇ ಅಂಕದಲ್ಲಿ ಅಭಿಮನ್ಯುವಿನ ಸಾವು. ಆ ಸಂಭ್ರಮವನ್ನಾಚರಿಸುವ ದುಯರ್ೋಧನನ ದೃಶ್ಯವಾದರೆ, ದುಯರ್ೋಧನನ ಪತ್ನಿ ಭಾನುಮತಿಯ ಕನಸು, ಕುರುಕ್ಷೇತ್ರ ಯುದ್ಧದಲ್ಲಿ ಮಡಿಯುವ ನೂರು ಮಂದಿ ಕೌರವರ ಸಾವನ್ನು ಸೂಕ್ಷ್ಮವಾಗಿ ತಿಳಿಸುತ್ತದೆ. ದ್ರೋಣನ ಸಾವು, ಕರ್ಣ, ಅಶ್ವತ್ಥಾಮರ ಮಾತಿನ ಚಕಮಕಿ, `ಕರ್ಣ ಮಡಿಯುವವರೆಗೂ ಶಸ್ತ್ರ ಹಿಡಿಯಲಾರೆ' ಎಂಬ ಅಶ್ವತ್ಥಾಮನ ಪ್ರತಿಜ್ಞೆ ದುಶ್ಯಾಸನನ ಎದೆ ಬಗೆವ ಭೀಮ, ಕರ್ಣ ಪುತ್ರ ವೃಷಸೇನನ ಸಾವು, ಕರ್ಣನ ಸಾವು ಹೀಗೆ ಎಲ್ಲಾ ದುರಂತ ಕತೆಗಳನ್ನೂ ಹೇಳುತ್ತಾ ನಾಟಕ ಸಾಗುತ್ತದೆ. ಇದೆಲ್ಲದರ ನಡುವೆ ಒಬ್ಬಂಟಿಯಾಗುಳಿವ ದುಯರ್ೋಧನನ್ನು ಧೃತರಾಷ್ಟ್ರ ಹಾಗೂ ಗಾಂಧಾರಿ ಸಂಜಯನ ಜೊತೆ ನೋಡಲು ಬರುತ್ತಾರೆ. `ಈಗಲಾದರೂ ಸಂಧಿಗೆ ಒಪ್ಪಿಕೊ' ಎಂದು ಬೇಡುತ್ತಾರೆ. ಎಲ್ಲವನ್ನೂ ತಿರಸ್ಕರಿಸಿ ಯುದ್ಧಕ್ಕೆ ಹೊರಡುವ ದುಯರ್ೋಧನ ಸ್ಯಮಂತ ಪಂಚಕದಲ್ಲಿ ಜಲಸ್ತಂಭನ ವಿದ್ಯೆ ಬಳಸಿ ಅಡಗಿ ಕೂರುತ್ತಾನೆ.
ಕೊನೆಯ ದೃಶ್ಯ ವ್ಯಾಸಭಾರತದ ಕತೆಯಿಂದ ಹೊರತಾದದ್ದು. ದುಯರ್ೋಧನ ಗೆಳೆಯ ಚಾವರ್ಾಕ ಅನ್ನುವ ರಾಕ್ಷಸ, ಮುನಿಯ ವೇಷದಲ್ಲಿ ಬಂದು ಭೀಮ ದುಯರ್ೋಧನರ ಗದಾಯುದ್ಧದಲ್ಲಿ ಭೀಮ ಮಡಿದಿರುವುದಾಗಿಯೂ ಅಜರ್ುನ ಗದಾಯುದ್ಧದಲ್ಲಿ ತೊಡಗಿರುವುದಾಗಿಯೂ ಹೇಳಿ ಗೊಂದಲ ಹುಟ್ಟಿಸಿ ನೋವಿನ ವಾತಾವರಣ ಸೃಷ್ಠಿಯಾಗುತ್ತದೆ. ಹಾಗಾಗಿ ದ್ರೌಪದಿ ಮತ್ತು ಯುಧಿಷ್ಠಿರ ಅಗ್ನಿಪ್ರವೇಶಕ್ಕೆ ಮುಂದಾಗುತ್ತಾರೆ. ಅದೇ ಸಂದರ್ಭ ದುಶ್ಯಾಸನ, ದುಯರ್ೋಧನರನ್ನು ಕೊಂದು ಅವರ ರಕ್ತದಿಂದ ತೋಯ್ದು ಹೋದ ಭೀಮನ ಪ್ರವೇಶವಾಗಲು ಆತನೇ ದುಯರ್ೋಧನನೆಂದು ತಪ್ಪಾಗಿ ತಿಳಿದ ಯುಧಿಷ್ಠಿರ ಯುದ್ಧಕ್ಕೆ ಸನ್ನದ್ಧನಾಗುತ್ತಾನೆ. ಅಷ್ಟರಲ್ಲಿ ಕಂಚುಕಿಯೊಬ್ಬನಿಂದ ಆತ ದುಯರ್ೋಧನನಲ್ಲ ಭೀಮ ಎಂದು ತಿಳಿದು ಬರುತ್ತದೆ. ಭೀಮ ತನ್ನ ಶಪಥದಂತೆಯೇ ದುಯರ್ೋಧನ, ದುಶ್ಯಾಸನರ ರಕ್ತದಿಂದ ದ್ರೌಪದಿಯ ಮುಡಿ ಕಟ್ಟುತ್ತಾನೆ. ಹೀಗೆ ನಾಟಕ ಅಂತ್ಯವಾಗುತ್ತದೆ.
ಭಟ್ಟನಾರಾಯಣ
ವೇಣೀಸಂಹಾರ ನಾಟಕದ ಕತರ್ೃ ಶ್ರೀ ಭಟ್ಟನಾರಾಯಣ. ಅವನ ಕಾಲ ದೇಶಗಳಾಗಲಿ, ಜೀವನ ವಿಚಾರವಾಗಲಿ ಖಚಿತವಾಗಿ ತಿಳಿದು ಬಂದಿಲ್ಲವಾದರೂ `ಮೃಗರಾಜ' ಎಂಬ ಉಪ ನಾಮಧೇಯ ಅಥವಾ ಬಿರುದು ಇವನಿಗೆೆ ದೊರಕಿದೆ. ಇವರು ಕ್ರಿ.ಶ.800ರಲ್ಲಿ ಬದುಕಿದಂತಹ ವ್ಯಕ್ತಿ. `ವೇಣೀಸಂಹಾರ' ಮಹಾಭಾರತವನ್ನು ಆಧರಿಸಿದ ನಾಟಕ. ಇದು ಆರು ಅಂಕದ ನಾಟಕವಾಗಿ ರೂಪುಗೊಂಡಿದ್ದು, `ವೇಣೀಸಂಹಾರ' ನಾಟಕವು ಯುದ್ಧದ ಕ್ರೂರತೆಯನ್ನು ಬಿಂಬಿಸಿದ್ದು, ಈ ನಾಟಕದಲ್ಲಿ ಬರುವ ಪಾತ್ರಗಳು ವೀರತ್ವವನ್ನು ತೋರುತ್ತವೆ. ಪರಂಪರೆಯ ಪ್ರಕಾರ, ಪ್ರಸಿದ್ಧವಾದ ಟಾಗೂರ್ ವಂಶದ ಮೂಲಪುರುಷ ಭಟ್ಟನಾರಾಯಣ. ಅವರು ವಿಷ್ಣುಭಕ್ತನೆಂದೂ ಅದ್ವೈತ ಪಂಥದವನೆಂದೂ ತಿಳಿದು ಬರುತ್ತದೆ.

ನಿದರ್ೇಶಕರ ಬಗ್ಗೆ
ಸಾಲಿಯಾನ್ ಉಮೇಶ ನಾರಾಯಣ ಇವರು ದಕ್ಷಿಣ ಕನ್ನಡ ಜಿಲ್ಲೆಯವರು ನೀನಾಸಮ್ ರಂಗಶಿಕ್ಷಣ ಕೇಂದ್ರದ ಪದವೀಧರರಾಗಿದ್ದು, ನೀನಾಸಮ್ ತಿರುಗಾಟ, ಥಿಯೇಟರ್ ಸಮುರಾಯ್, ಗೊಂಬೆಮನೆ, ಕಿನ್ನರಮೇಳ ತಂಡಗಳಲ್ಲಿ ನಟರಾಗಿ, ತಂತ್ರಜ್ಞರಾಗಿ ಕೆಲಸ ಮಾಡಿದ್ದಾರೆ. ಎಸ್.ಡಿ.ಎಂ ಕಾಲೇಜು, ಉಜಿರೆ ಮತ್ತು ಸಾಗರದ ಎಲ್.ಬಿ. ಸಮುದಾಯ ಕಾಲೇಜು ರಂಗಶಿಕ್ಷಣ ಕೇಂದ್ರದಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದು, ಮೈಸೂರು ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರದಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ನಿದರ್ೇಶಿಸಿರುವ ಪ್ರಮುಖ ನಾಟಕಗಳು- ಚಂದ್ರಹಾಸ, ಸಾಹೇಬರು ಬರುತ್ತಾರೆ, ಮೀಡಿಯಾ, ಪೋಸ್ಟ್ ಬಾಕ್ಸ್ ನಂ.9, ಈಡಿಪಸ್ ಮತ್ತು ಅಂತಿಗೊನೆ. ಪ್ರಸ್ತುತ ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರದ ವಿದ್ಯಾಥರ್ಿಗಳಿಗೆ ಶ್ರೀ ಭಟ್ಟನಾರಾಯಣರು ರಚಿಸಿದ `ವೇಣೀಸಂಹಾರ' ನಾಟಕವನ್ನು ನಿದರ್ೇಶನ ಮಾಡಿದ್ದಾರೆ.

ರಂಗದ ಮೇಲೆ
ಭೀಮಸೇನಂ, ಮೇಳ - ಭಾಸ್ಕರ ಎನ್
ಸಹದೇವಂ, ಮೇಳ, ಪಾಂಚಾಲಕ - ನಂದೀಶ ಪಾಟೀಲ್ ಜಿ.ಬಿ
ದ್ರೋಣ
ಯುಧಿಷ್ಠಿರಂ, ಮೇಳ ? ಕಿರಣ .ಎಸ್
ಅಜರ್ುನಂ, ಮೇಳ, ಸೂತಂ ? ಕಾತರ್ಿಕಗೌಡ ಎಂ.ಸಿ
ನಕುಲಂ, ಕೃಪಂ - ಶಿವರಾಜ್ಗೌಡ
ದ್ರೌಪದಿ, ಮೇಳ, ದೃಷ್ಟದ್ಯುಮ್ನಂ ? ಜಯಶ್ರೀ ಇಡ್ಕಿದು
ದುಯರ್ೋಧನಂ - ಬಸವರಾಜ್ ಎ.ಪಿ
ಭಾನುಮತಿ, ಸೂತಂ, ಮೇಳ ? ಅಶ್ವಿನಿ ಚಂದ್ರಪ್ಪ .ಬಿ
ಧೃತರಾಷ್ಟ್ರಂ, ಮೇಳ ? ವೀರು.ಅಣ್ಣಿಗೇರಿ
ಗಾಂಧಾರಿ, ಮೇಳ, ಸಖಿ (ಕೌರವ) ? ಟುವ್ವಿ ಟುವ್ವಿ,  ಸಿ.ಕೆ
ಕರ್ಣಂ, ಮೇಳ, ಕಂಚುಕಿ (ಪಾಂಡವ) ? ಅಜಯಕುಮಾರ್ ಬಿ.ಎನ್
ಅಶ್ವತ್ಥಾಮಂ, ಮೇಳ - ಶ್ರೇಯಸ್ ಪಿ
ಸೂತ್ರಧಾರಂ, ಮೇಳ, ಪಡಿಯರತಿ ? ಧನುಷ್ನಾಯ್ಕ
ಸುಂದರಕಂ, ಅಗ್ನಿಮಿತ್ರಂ

ಚಾವರ್ಾಕಂ, ಕಂಚುಕಿ(ಕೌರವ),ಮೇಳ ? ಮಲ್ಲೇಶ ಮಾಲ್ವಿ
ರುಧಿರಪ್ರಿಯಾ, ದುಶ್ಯಾಸನಂ - ಸುಕೇತ ಪಟೇಲ್
ಮೇಳ, ಸೂತಂ, ಜಯದ್ರಥ
ವಸಾಗಂಧೆ,ಚೇಟಿ(ಪಾಂಡವ),ಮೇಳ? ರಂಜಿತಾ ಆರ್ ಮತ್ತೂರು
ಅಸ್ಥಿಗಂಧ, ರಾಕ್ಷಸ, ಕಂಚುಕಿ (ಪಾಂಡವ) - ಪವನಕುಮಾರ್ ಎಂ ಗಂಟೆ
ಸಂಜಯಂ, ಮೇಳ, ಕಂಚುಕಿ (ಪಾಂಡವ)? ಮನುರಾಜ ಹೆಚ್.ಎನ್
ಜಯದ್ರಥನ ಮಾತೆ, ಮೇಳ - ಲಕ್ಷ್ಮಿ ಎಂ

ರಂಗದ ಹಿಂದೆ
ರಂಗ ನಿರ್ವಹಣೆ : ಭಾಸ್ಕರ್ ಎನ್
ವಸ್ತ್ರ ವಿಭಾಗ:ವೀರು.ಅಣ್ಣಿಗೇರಿ, ಸುಕೇತ್ ಪಟೇಲ್, ಅಶ್ವಿನಿಚಂದ್ರಪ್ಪ ಬಿ
ಪ್ರಸಾದನ ವಿಭಾಗ : ಲಕ್ಷ್ಮಿ ಎಂ
ರಂಗಸಜ್ಜಿಕೆ : ಅಜಯ್ಕುಮಾರ್ ಬಿ.ಎನ್, ಕಿರಣ,
ಶ್ರೇಯಸ್, ರಂಜಿತಾ
ಪರಿಕರ ವಿಭಾಗ : ಜಯಶ್ರೀ ಇಡ್ಕಿದು, ನಂದೀಶ, ಕಾತರ್ಿಕ
ಬೆಳಕಿನ ವಿಭಾಗ : ಧನುಷ, ಮಲ್ಲೇಶ, ಬಸವರಾಜ, ಶಿವರಾಜ
ಸಂಗೀತ ವಿಭಾಗ : ಟುವ್ವಿ ಟುವ್ವಿ, ಪವನ, ಮನುರಾಜ್
ಪ್ರಚಾರ : ರವಿ, ವೀರು.ಅಣ್ಣಿಗೇರಿ
[5/27, 5:44 ಕಒ] ಆಡಿ. ಒಚಿಚಿಟಟಿರಚಿ ಃಚಿಣ: *29 ಮೇ 2018*
*ಅಭಿರಾಮ್ ಭಡ್ಕಮ್ಕರ್ ವಿರಚಿತ*
*ದೇಹಭಾನ*
ಅನುವಾದ : ಸರಜೂ ಕಾಟ್ಕರ್
ನಿದರ್ೇಶನ : ಚಿತ್ತರಂಜನ್ ಗಿರಿ, ಪುಣೆ
ಸಂಗೀತ : ಸುಬ್ರಹ್ಮಣ್ಯ ಮೈಸೂರು
ವಸ್ತ್ರ ವಿನ್ಯಾಸ : ಅಶ್ವಿನಿ ಗಿರಿ
ರಂಗ ವಿನ್ಯಾಸ : ಹೆಚ್.ಕೆ. ದ್ವಾರಕಾನಾಥ್
ಬೆಳಕು ವಿನ್ಯಾಸ: ಮಹೇಶ್ ಕಲ್ಲತ್ತಿ

ನಾಟಕದ ಬಗ್ಗೆ
ಮರಾಠಿಯ ಖ್ಯಾತ ನಾಟಕಕಾರರಾದ ಅಭಿರಾಮ ಭಡಕಮ್ಕರ್ರ 'ದೇಹಭಾನ' ನಾಟಕವು ಮಹಾರಾಷ್ಟ್ರದಲ್ಲಿ ವೈಚಾರಿಕ ಅಲ್ಲೋಲ ಕಲ್ಲೋಲವನ್ನು ಉಂಟು ಮಾಡಿದ ನಾಟಕ. ಕಾಮ ಮತ್ತು ಸಂಯಮ, ನಿಸರ್ಗ ಮತ್ತು ನಿಸರ್ಗ ವಿರೋಧ- ಈ ನಾಟಕದ ವಸ್ತು. ಕಾಲದಿಂದ ಕಾಲಕ್ಕೆ ಮೌಲ್ಯಗಳು ಅದ್ಹೇಗೆ ಮಣ್ಣುಗೂಡುತ್ತಿವೆಯೆಂಬುದಕ್ಕೆ ಈ ನಾಟಕ ಒಂದು ಉತ್ತಮ ಉದಾಹರಣೆ. ಭೂತ ಮತ್ತು ವರ್ತಮಾನ ಕಾಲ ಹೀಗೆ ಎರಡು ಕಾಲಗಳಲ್ಲಿ ನಾಟಕ ಏಕಕಾಲದಲ್ಲಿ ಅವಿಭರ್ಾವಗೊಳ್ಳುತ್ತದೆ. ವ್ಯಕ್ತಿಯೇ ವರ್ತಮಾನ ಕಾಲದಲ್ಲಿಯೂ ಗೋಚರಿಸುತ್ತಾನೆ ಭೂತ ಮತ್ತು ವರ್ತಮಾನಗಳು ಭವಿಷ್ಯತ್ಕಾಲದ ಮುನ್ನುಡಿಯನ್ನು ಬರೆಯುವುದು ಈ ನಾಟಕದ ವೈಶಿಷ್ಟ್ಯ. ದೇಶ ಮತ್ತು ಕಾಲವನ್ನು ಮೀರಿ ನಾಟಕ ಕ್ಷಣಕ್ಷಣಕ್ಕೂ ಬೆಳೆಯುತ್ತದೆ.

ಮೂಲ ಲೇಖಕರು : ಅಭಿರಾಮ್ ಭಡಕಮ್ಕರ್
ಅಭಿರಾಮ್ ಭಡಕಮ್ಕರ್, ಭಾರತೀಯ ಶ್ರೇಷ್ಠ ನಾಟಕಕಾರರಲ್ಲೊಬ್ಬರಾದ ಶ್ರೀ ವಿಜಯ ತೆಂಡೂಲ್ಕರ್ ನಂತರದ ಮರಾಠಿ ರಂಗಭೂಮಿಯ ಒಬ್ಬ ಪ್ರತಿಭಾವಂತ ನಾಟಕಕಾರರೆಂದು ಜನಮನ್ನಣೆ ಗಳಿಸಿದ್ದಾರೆ. ಹಲವಾರು ಚಲನಚಿತ್ರ ಹಾಗೂ ಕಿರುತೆರೆಗಳಿಗೆ ಬರಹಗಾರರಾಗಿ ಕೃಷಿ ಮಾಡಿರುವ ಇವರ ಪ್ರಮುಖ ಚಲನಚಿತ್ರಗಳು ಬಾಲಗಂಧರ್ವ, ಪಚಾಡ್ಲೇಲ, ಆಯಿ, ಖಬರ್ದಾರ್ ಎ ರೈನಿ ಡೇ, ಪೌಲ್ವಾತ್ ಮತ್ತು ಮುಂತಾದವು. ಭಾರತೀಯ ಭಾಷೆಗಳಿಗೂ ಅನುವಾದವಾಗಿರುವ ಇವರ ಕೆಲವು ಮರಾಠಿ ನಾಟಕಗಳು ದೇಹಭಾನ, ಅಲ್ತುನ್ ಪಲ್ತುನ್, ಪಹುಣ, ಸುಕಾಂಶಿ ಭಡಾಟೋ ಅಮಿ, ಲಡಿ ನಝರಿಯಾ, ಹಸತ್ ಖೇಲತ್, ಜ್ಯಾಚಾ ತ್ಯಾಚಾ ಪ್ರಶ್ನ ಮುಂತಾದವು. ಶ್ರೀಯುತರು ಹಲವಾರು ಕಥೆಗಳನ್ನು ಬರೆದು ಪ್ರಕಟಿಸುವುದರ ಜೊತೆಗೆ 'ಅಂಶಿ ಆಸು ಲಡ್ಕೆ' ಎಂಬ ಚಲನಚಿತ್ರವನ್ನು ನಿದರ್ೇಶಿಸದ್ದಾರೆ. ಹಲವಾರು ಚಲನಚಿತ್ರ ಮತ್ತು ಕಿರುತೆರೆಯ ಧಾರವಾಹಿಗಳಲ್ಲಿ ನಟರಾಗಿ ನಟಿಸಿದ್ದಾರೆ.

ಅನುವಾದಕರು : ಡಾ. ಸರಜೂ ಕಾಟ್ಕರ್
ಡಾ. ಸರಜೂ ಕಾಟ್ಕರ್ ಕನ್ನಡದ ಅತ್ಯಂತ ಪ್ರಮುಖ ಬರಹಗಾರರಲ್ಲಿ ಒಬ್ಬರು. ಸಮಾಜ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಯುತರು ಪತ್ರಿಕೋದ್ಯಮ ಹಾಗೂ ಸಾಹಿತ್ಯಕ್ಕೆ ಕೊಡಮಾಡುವ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಕವನ ಸಂಕಲನ, ಕಾದಂಬರಿ, ಪ್ರವಾಸ ಸಾಹಿತ್ಯ, ಜೀವನ ಚರಿತ್ರೆಗಳನ್ನು ಬರೆದು ಪ್ರಕಟಿಸಿರುವ ಶ್ರೀಯುತರು ಮರಾಠಿಯ ಪ್ರಮುಖ ದಲಿತ ಬರಹಗಾರರ ಜೀವನ ಚರಿತ್ರೆ, ನಾಟಕಗಳನ್ನು ಕನ್ನಡ ಸಾಹಿತ್ಯಕ್ಕೆ ಅನುವಾದಿಸಿದ್ದಾರೆ. ಸುವರ್ಣ ಕನರ್ಾಟಕ ರಾಜ್ಯೋತ್ಸವದ ಪ್ರಶಸ್ತಿ ಪುರಸ್ಕೃತರಾದ ಶ್ರೀಯುತರು ಲಂಡನ್ ಮತ್ತು ಹೂಸ್ಟನ್ ನಗರದಲ್ಲಿ ನಡೆದ ವಿಶ್ವಕನ್ನಡ ಕೂಟದಲ್ಲಿ ಕನರ್ಾಟಕವನ್ನು ಪ್ರತಿನಿಧಿಸಿದ್ದಾರೆ. ಕನರ್ಾಟಕದ ಹಲವಾರು ಪ್ರಮುಖ ಪ್ರಶಸ್ತಿ ನಿರ್ಣಯ ಸಮಿತಿಯಲ್ಲಿ ತೀಪರ್ುಗಾರರಾಗಿ ಕೆಲಸ ನಿರ್ವಹಿಸಿದ್ದಾರೆ. ಶ್ರೀಯುತರಿಗೆ ಕೇಂದ್ರ ಹಾಗೂ ಕನರ್ಾಟಕ ಸಕರ್ಾರದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.

ನಿದರ್ೇಶಕರ ಬಗ್ಗೆ
ಶ್ರೀ ಚಿತ್ತರಂಜನ್ ಗಿರಿ ಹಿಂದಿ ರಂಗಭೂಮಿಯ ಪ್ರಖ್ಯಾತ ನಟರಲ್ಲೊಬ್ಬರು. ರಾಷ್ಟ್ರೀಯ ನಾಟಕ ಶಾಲೆಯ ಪದವೀಧರರಾದ ಶ್ರೀಯುತರು ರಾಷ್ಟ್ರೀಯ ನಾಟಕ ಶಾಲೆಯ ರೆಪರ್ಟರಿ ಕಂಪನಿಯಲ್ಲಿ ಭಾರತದ ಪ್ರಖ್ಯಾತ ರಂಗ ನಿದರ್ೇಶಕರಾದ ಶ್ರೀ ಬಿ.ವಿ. ಕಾರಂತ, ಶ್ರೀ ಬಿ.ಎಂ.ಶಾ, ಶ್ರೀ ಸತ್ಯದೇವ್ ದುಬೆ, ಶ್ರೀ ಡಿ.ಆರ್. ಅಂಕೂರ್, ಶ್ರೀ ಬನ್ಸಿಕೌಲ್ ಮುಂತಾದವರೊಂದಿಗೆ ದುಡಿದಿದ್ದಾರೆ. ಫ್ಲೇಮ್-ಪುಣೆ, ನಗರಿ-ನಾಟಕ್ ಮಂಡಳಿ-ವಾರಣಾಸಿ, ಬಿಎಂವಿ ಸಿಎಲ್ಜಿ-ನಾಗಪುರ್, ಮುಂತಾದ ಪ್ರತಿಷ್ಠಿತ ರಂಗತಂಡಗಳಿಗೆ ಅಭಿನಯ ಕಾಯರ್ಾಗಾರಗಳನ್ನು ನಡೆಸಿದ್ದಾರೆ ಮತ್ತು ರಂಗಪ್ರಯೋಗಗಳನ್ನು ನಿದರ್ೇಶನ ಮಾಡಿದ್ದಾರೆ.

ರಾಷ್ಟ್ರೀಯ ನಾಟಕಶಾಲೆಯ ವತಿಯಿಂದ ರಾಷ್ಟ್ರದ ಹಲವಾರು ಭಾಗಗಳಲ್ಲಿ ರಂಗಕಾರ್ಯಗಳನ್ನು ನಡೆಸಿದ್ದಾರೆ. ಅಲ್ಲದೆ ಶ್ರೀ ಚಿತ್ತರಂಜನ್ ಗಿರಿ ರವರು ರಾಷ್ರೀಯ ಹಾಗೂ ಪ್ರಾದೇಶಿಕ ಭಾಷೆಯ ಹಲವಾರು ಚಲನಚಿತ್ರಗಳಲ್ಲೂ ನಟಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ಮಕ್ಡಿ, ಮಾತೃಭೂಮಿ ದಿ ನೇಷನ್ ವಿತೌಟ್ ವುಮೆನ್, ಕಸೂರ್, ಚೋಟ್, ಮಧ್ಯಂತರ್, ಭೋಸ್ಲೆ. ಲೇತ್ ಜೋಶಿ ಚಲನಚಿತ್ರದ ಪ್ರಮುಖ ಭೂಮಿಕೆಯಲ್ಲಿ ಶ್ರೀ ಚಿತ್ತರಂಜನ್ ಗಿರಿಯವರು ನಟಿಸಿದ್ದು, ಈ ಚಿತ್ರವು ಪುಣೆ ಅಂತರರಾಷ್ಟ್ರೀಯ ಚಲನಚತ್ರೋತ್ಸವ-17 ರಲ್ಲಿ ಸಂತ ತುಕರಾಂ ಪುರಸ್ಕಾರವನ್ನು ಗಳಿಸಿದೆ. ಅಂತೆಯೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ತೀಪರ್ುಗಾರರ ಮೆಚ್ಚುಗೆ ಗಳಿಸಿದೆ. 

ನಿದರ್ೇಶಕರ ನುಡಿ
ಸಾಮಾನ್ಯವಾಗಿ ಎಲ್ಲೆ ನನ್ನನ್ನು ನಾಟಕ ನಿದರ್ೇಶಿಸಲು ಆಹ್ವಾನಿಸಿದಾಗ ಸಾಮಾನ್ಯವಾಗಿ ನಾನು ಸಾಮಾಜಿಕವಾಗಿ ಅತ್ಯಂತ ಪ್ರಮುಖವಾದ ವಸ್ತು ವಿಷಯವನ್ನುಳ್ಳ ನಾಟಕ ಪಠ್ಯವನ್ನು ಆಯ್ದುಕೊಳ್ಳುತ್ತೇನೆ. ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರಕ್ಕೆ ವಾಸ್ತವವಾದಿ ಅಭಿನಯ ಶೈಲಿಯನ್ನು ಕಲಿಸುತ್ತಲೆ ನಾಟಕವೊಂದನ್ನು ನಿದರ್ೇಶನ ಮಾಡಲು ಒಪ್ಪಿ. ಹಲವಾರು ನಾಟಕ ಪಠ್ಯಗಳನ್ನು ಓದಿದಾಗ ನನ್ನನ್ನು ಬಹುವಾಗಿ ಸೆಳೆದದ್ದು ಮರಾಠಿ ರಂಗಭೂಮಿಯ ಖ್ಯಾತ ನಾಟಕಕಾರರಾದ ಶ್ರೀ ಅಭಿರಾಮ್ ಭಡಕಮ್ಕರ್ ರವರ ದೇಹಭಾನ ನಾಟಕ.
ಈ ನಾಟಕ ರಂಗಾಭ್ಯಾಸಿಗಳಿಗೆ ಅತ್ಯಂತ ಸೂಕ್ತವಾದ ನಾಟಕವು ಹೌದೆಂದು ನನ್ನಗನ್ನಿಸಿತು ಹಾಗೂ ಈ ನಾಟಕ ನಿದರ್ೇಶನದ ದೃಷ್ಟಿಯಿಂದಲೂ ಸವಾಲಿನ ಕೃತಿಯೆಂದು ನನಗನ್ನಿಸಿತು. ನಿದರ್ೇಶನ ಮಾಡುವಲ್ಲಿ ಹಲವಾರು ಸಾಧ್ಯತೆಗಳನ್ನು ಆವಿಷ್ಕರಿಸುವ ಸಾಧ್ಯತೆ ಇರುವ ನಾಟಕ ಎಂದೆನಿಸಿತು. ಇಂದಿನ ವಿದ್ಯಾಥರ್ಿಗಳ ವೈಯಕ್ತಿಕ ಹಾಗೂ ಸಾಮಾಜಿಕ ಬದುಕನ್ನು ಒಳಗೊಂಡಿರುವ ನಾಟಕ ಇದೆನ್ನಿಸಿತು. ಈ ನಾಟಕವನ್ನು ನಿದರ್ೇಶಿಸುವಲ್ಲಿ ಯಾವುದೇ ನಟನಿಗೆ ಅತ್ಯಂತ ಕಷ್ಟವಾದ ಸಾತ್ವಿಕಾಭಿನಯಕ್ಕೆ ನಾನು ಹೆಚ್ಚು ಒತ್ತು ನೀಡಿದ್ದೇನೆ. ದೇಹಭಾನ ನಾಟಕ ನಟರಿಂದ ಸಾತ್ವಿಕಾಭಿನಯವನ್ನು ಬೇಡುತ್ತದೆ. ಅಂತೆಯೇ ಆಂತರಿಕ ಹಾಗೂ ಭಾಹ್ಯ ತೊಳಲಾಟಗಳನ್ನು ಚಿತ್ರಿಸುತ್ತದೆ. ಈ ನಾಟಕದ ವಸ್ತು, ರಚನಾ ಸಂವಿಧಾನ, ನಟನ ಅಭಿವ್ಯಕ್ತಿ ಪ್ರಸ್ತುತ ನಾಟಕದಲ್ಲಿ ಅತ್ಯಂತ ಸಮರ್ಥವಾಗಿ ಮೂಡಿ ಬಂದಿದ್ದು, ಸಮಾಜಕ್ಕೆ ಸೂಕ್ತವಾದ ಸಂದೇಶವನ್ನು ಒಳಗೊಂಡಿದೆ.

ರಂಗದ ಮೇಲೆ
ವಿನೋದ - ವೀರು ಅಣ್ಣೀಗೇರಿ
ಪದ್ಮನಾಭ - ಕಿರಣ್ .ಎಸ್
ವಸುಧಾ -ಸಾಧನಾ - ಜಯಶ್ರೀ ಇಡ್ಕಿದು
ದಾದಾ ಸಾಹೇಬ - ಮನುರಾಜ್ ಹೆಚ್.ಎನ್
ಸೊಹೋನಿ - ಬಸವರಾಜ್ ಎ.ಪಿ
ಆಬಾಸಾಹೇಬ - ನಂದೀಶ ಪಾಟೀಲ್ ಜಿ.ಬಿ
ಮನೋಜ್ - ಧನುಷ್ನಾಯ್ಕ
ಗೋಪಾಳ - ಕಾತರ್ಿಕಗೌಡ ಎಂ.ಸಿ
ಕಿರಣ - ಶ್ರೇಯಸ್ .ಪಿ
ವಿದ್ಯಾ - ರಂಜಿತಾ ಆರ್ ಮತ್ತೂರು
ಶಿಲ್ಪಾ - ಲಕ್ಷ್ಮಿ ಎಂ
ಮೌಶಿ - ಟುವ್ವಿ ಟುವ್ವಿ ಸಿ.ಕೆ
ದಮಯಂತಿ - ಅಶ್ವಿನಿಚಂದ್ರಪ್ಪ .ಬಿ
ಜಯಪ್ರಕಾಶ - ಪವನಕುಮಾರ್ ಎಂ ಗಂಟೆ
ಜಯಪ್ರಕಾಶ ಸಹಾಯಕರು- ಶಿವರಾಜಗೌಡ, ಅಜಯ್ಕುಮಾರ್ ಬಿ.ಎನ್, ಮಲ್ಲೇಶ್ ಮಾಲ್ವಿ
ಗುಂಪು - ಮಲ್ಲೇಶ್ ಮಾಲ್ವಿ, ಭಾಸ್ಕರ್ ಎನ್,  ಶಿವರಾಜಗೌಡ, ಅಜಯಕುಮಾರ್ ಬಿ.ಎನ್, ಸುಕೇತ್ ಪಟೇಲ್, ಪವನ್ ಎಂ ಗಂಟೆ

ರಂಗದ ಹಿಂದೆ
ವಸ್ತ್ರ ವಿಭಾಗ - ಕುಮಾರಿ ದಿವ್ಯಾ ಎನ್
ಸಹಾಯ - ಪವನ್ ಎಂ ಗಂಟೆ, ಮಲ್ಲೇಶ್ ಮಾಲ್ವಿ
ರಂಗಸಜ್ಜಿಕೆ - ಅಜಯಕುಮಾರ್ ಬಿ.ಎನ್, ಭಾಸ್ಕರ್ ಎನ್
ರಂಗಪರಿಕರ - ಶಿವರಾಜಗೌಡ, ಸುಕೇತ್ ಪಟೇಲ್
ಸಂಗೀತ - ಶ್ರೇಯಸ್ ಪಿ
ರಂಗನಿರ್ವಹಣೆ - ಧನುಷ್ನಾಯ್ಕ
*
*ಶೇಕ್ಸ್ಪಿಯರ್ ಮಹಾಕವಿಯ*
*ಎ ಮಿಡ್ ಸಮ್ಮರ್ ನೈಟ್ಸ್* *ಡ್ರೀಮ್*
ಅನುವಾದ : ಪ್ರೊ. ಕೆ.ಎಸ್. ನಿಸಾರ್ ಅಹಮ್ಮದ್
ನಿದರ್ೇಶನ : ಭಾಗೀರಥಿ ಬಾಯಿ ಕದಂ
ಅನುವಾದ : ಪ್ರೊ. ಕೆ.ಎಸ್. ನಿಸಾರ್ ಅಹಮ್ಮದ್
ಸಂಗೀತ : ಶ್ರೀನಿವಾಸ್ಭಟ್ (ಚೀನಿ)

ಭಾರತೀಯ ರಂಗಶಿಕ್ಷಣ ಕೇಂದ್ರ
ರಂಗಾಯಣದ ಅಂಗ ಸಂಸ್ಥೆಯಾದ ಭಾರತೀಯ ರಂಗಶಿಕ್ಷಣ ಕೇಂದ್ರವು 2010-11 ರಿಂದ ಪ್ರಾರಂಭಗೊಂಡು. ಈಗ ಒಂಬತ್ತನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈ ಕೇಂದ್ರದಲ್ಲಿ  ರಂಗಭೂಮಿ ಕುರಿತಂತೆ ಒಂದು ವರ್ಷದ ತರಬೇತಿಯನ್ನು ನೀಡಲಾಗುತ್ತದೆ. ಈ ಕೇಂದ್ರವು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮಾನ್ಯತೆಯನ್ನು ಪಡೆದಿದ್ದು, ಇಲ್ಲಿ ತರಬೇತಿ ಪಡೆಯುವ ವಿದ್ಯಾಥರ್ಿಗಳಿಗೆ ಉಚಿತವಾಗಿ ವಸತಿ ವ್ಯವಸ್ಥೆ ಮತ್ತು ವಿದ್ಯಾಥರ್ಿ ವೇತನವನ್ನು ನೀಡಲಾಗುತ್ತದೆ. ಭಾರತೀಯ ರಂಗಶಿಕ್ಷಣ ಕೇಂದ್ರದ 2017-18ನೇ ಸಾಲಿನ ವಿದ್ಯಾಥರ್ಿಗಳು ಈಗಾಗಲೇ ಜಟಾಯು ಮೋಕ್ಷ, ವೇಣಿಸಂಹಾರ, ದೇಹಬಾನ ನಾಟಕಗಳನ್ನು ಯಶಸ್ವಿಯಾಗಿ ಪ್ರಯೋಗಿಸಿದ್ದು, ಪ್ರಸ್ತುತ ಕೇಂದ್ರದ ನಾಲ್ಕನೆಯ ಹಾಗೂ ಕಡೆಯ ನಾಟಕವಾಗಿ ಶೇಕ್ಸಿಪಿಯರ್ ಮಹಾಕವಿಯ `ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್' ನಾಟಕವನ್ನು ಶ್ರೀಮತಿ ಭಾಗೀರಥಿ ಬಾಯಿ ಕದಂ ಅವರ ನಿದರ್ೇಶನದಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. 

ನಾಟಕ ನಿದರ್ೇಶಕರು : ಭಾಗೀರಥಿ ಬಾಯಿ ಕದಂ
ಶ್ರೀಮತಿ ಭಾಗೀರಥಿ ಬಾಯಿ ಕದಂ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಗಾವಡಗೆರೆಯವರು. ರಾಷ್ಟ್ರೀಯ ನಾಟಕ ಶಾಲೆಯ ಪದವೀಧರರಾದ ಇವರು ಶಾಕುಂತಲಾ, ಗಾಂಧಾರಿ ಮುಂತಾದ ಏಕವ್ಯಕ್ತಿ ಪ್ರಸ್ತುತಿಗಳನ್ನು ನೀಡಿದ್ದಾರೆ. ಇವರು ಕನ್ನಡ, ಅಸ್ಸಾಮಿ, ಹಿಂದಿ ಮತ್ತು ಇಂಗ್ಲಿಷ್ ಮುಂತಾದ ವಿವಿಧ ಭಾಷೆಗಳಲ್ಲಿ 65 ಕ್ಕಿಂತ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅವುಗಳ ಪೈಕಿ ಪ್ರಮುಖವೆಂದರೆ, ನಳ ದಮಯಂತಿ, ಮಿಸ್ ಜೂಲಿ, ಟ್ವೆಲ್ಫ್ತ್ ನೈಟ್, ಸೊಹ್ರಾಬ್ ರುಸ್ತುಂ, ಶಾಂತತಾ ಕೋಟರ್್ ಚಾಲೂ ಅಹೆ, ಹ್ಯಾಮ್ಲೆಟ್, ದ ಫಾದರ್, ಅಂತರ್ ಯಾತ್ರ, ಜಾತ್ರಾ, ಆಷಾಡ್ ಕಾ ಏಕ್ ದಿನ್, ಅಪೇಕ್ಷಾ, ಸೀ ಗಲ್, ಮಧ್ಯವತರ್ಿನ್, ಕಮಲಾ ದೇವಿ ಚಟ್ಟೋಪಾಧ್ಯಾಯ ಇತ್ಯಾದಿ. ಇವರು 1992-93 ರಲ್ಲಿ ಅವರು ಲಂಡನ್ನ `ತಾರಾ ಆಟರ್್' ಸಂಸ್ಥೆ ಸೇರಿ `ಹೀರ್ ರಾಂಝಾ' ನಾಟಕದ ಪ್ರದರ್ಶನವನ್ನು ಇಂಗ್ಲೆಂಡ್ ಹಾಗೂ ಜಪಾನಿನಲ್ಲಿ ಮಾಡಿರುತ್ತಾರೆ. ಇವರು ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮಿ, ಅಂತಿಗೊನೆ, ತುಘಲಕ್, ಸರಸಮ್ಮನ ಸಮಾಧಿ, ಸಾಂಬಶಿವ ಪ್ರಹಸನ, ಪುಂಟಿಲಾ ಮತ್ತು ಅವನ ಮನುಷ್ಯ ಮಟ್ಟಿ, ಕಮಾಲಾದೇವಿ ಚಟ್ಟೋಪಾಧ್ಯಾಯ, ದ ಲೆಸನ್, ಜೂಲಿಯಸ್ ಸೀಸರ್, ಲೆಹರೋನ್ ಕೆ ರಾಜಹನ್ಸ, ಆಷಾಢ್ ಕೇ ಏಕ್ ದಿನ ಇತ್ಯಾದಿ ನಾಟಕಗಳನ್ನು ವಿನ್ಯಾಸಗೊಳಿಸಿ, ನಿದರ್ೇಶಿಸಿದ್ದಾರೆ. ಅವರು ಭಾರತ ಸಕರ್ಾರದ ವಿಶೇಷ ಚೇತನ ಮಕ್ಕಳೊಡನೆ ಕೆಲಸ ಮಾಡಿದ್ದಕ್ಕಾಗಿ ಕಿರಿಯ ಮತ್ತು ಹಿರಿಯ ಫೆಲೋಶಿಪ್ ಸ್ವೀಕರಿಸಿದರು ಮತ್ತು ವಿಶೇಷ ಚೇತನ ಮಕ್ಕಳಿಗಾಗಿ ಕೋಲ ಕೌರಿರ್ ಗಾನ್, ಬುದ್ಧುರಾಮ್, ಆಲಿಬಾಬ ಚಾಲೀಸ್ ಚೋರ್, ಬೋಬಾರ್ ಸಂತಾನ್, ಗಿಲ್ಹೇರಿ ರಾಮಾಯಣ ಮುಂತಾದ ನಾಟಕಗಳನ್ನು ನಿದರ್ೇಶಿಸಿದ್ದಾರೆ.

ಇವರು ಕನ್ನಡದಿಂದ ಅಸ್ಸಾಮಿ ಭಾಷೆಗೆ ಮತ್ತು ಅಸ್ಸಾಮಿನಿಂದ ಕನ್ನಡ ಭಾಷೆಗೆ ಹಲವು ನಾಟಕಗಳನ್ನು ಮತ್ತು ಲೇಖನಗಳನ್ನು ಅನುವಾದಿಸಿದ್ದಾರೆ. ಇವರು ಕನ್ನಡ, ಅಸ್ಸಾಮಿ ಮತ್ತು ಹಿಂದಿ ಭಾಷೆಯ ಅನೇಕ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಭಾರತೀಯ ರಂಗಭೂಮಿಗೆ 2007ರಲ್ಲಿ ಅವರ ಕೊಡುಗೆಗಾಗಿ ಕನರ್ಾಟಕ ಸಕರ್ಾರದಿಂದ ಸ್ವರ್ಣ ಜಯಂತಿ ಪ್ರಶಸ್ತಿ-2015, ಕನರ್ಾಟಕ ಸಕರ್ಾರದಿಂದ 2016 ರಲ್ಲಿ `ಅಗಾಸಿ ಪಾರ್ಲರ್' ಚಲನಚಿತ್ರಕ್ಕಾಗಿ ಪೋಷಕ ಪಾತ್ರದಲ್ಲಿ ಶ್ರೇಷ್ಟ ಅಭಿನೇತ್ರಿ ಪ್ರಶಸ್ತಿ, `ರೋಡೋರ್ ಚಿಟ್ಟಿ.' ಚಲನಚಿತ್ರಕ್ಕಾಗಿ ಶ್ರೇಷ್ಟ ಅಭಿನೇತ್ರಿ ಪ್ರಶಸ್ತಿಯನ್ನು ಲೋನಾವಲ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 2016 ರಲ್ಲಿ ಸ್ವೀಕರಿಸಿದರು.

ನಾಟಕದ ಬಗ್ಗೆ
ಅಥೆನ್ಸ್ನ ರಾಜ ಥಿಸೀಸ್ ಮತ್ತು ಹಿಪಾಲಿಟರ ಮದುವೆಗೆ ಕೇವಲ ನಾಲ್ಕು ದಿನಗಳು ಮಾತ್ರ ಉಳಿದಿರುತ್ತವೆ. ಈ ಸಂದರ್ಭದಲ್ಲಿ ನಡೆಯುವ ಘಟನಾವಳಿಗಳೆ `ಎ ಮಿಡ್ ಸಮ್ಮರ ನೈಟ್ಸ್ ಡ್ರೀಮ್'. ಈಗಿಯಸ್ ತನ್ನ ಮಗಳಾದ ಹಮರ್ಿಯಾಳನ್ನು ಡೆಮಿಟ್ರಿಯಸ್ಗೆ ಮದುವೆ ಮಾಡಿಕೊಡಬೇಕೆಂದು ಸಿದ್ಧತೆ ನಡೆಸಿರುತ್ತಾನೆ. ಆದರೆ ಹಮರ್ಿಯಾ ಲೈಸಾಂಡರ್ನನ್ನು ಮದುವೆಯಾಗುವುದಾಗಿ ಹೇಳುತ್ತಾಳೆ. ಹಮರ್ಿಯಾಳ ಗೆಳತಿ ಹೆಲೆನಾ ಡೆಮಿಟ್ರೀಯಸ್ನನ್ನು ಪ್ರೀತಿಸುತ್ತಿರುತ್ತಾಳೆ. ಈ ಪ್ರಕರಣವು ರಾಜ ಥೀಸಿಸ್ನ ಮುಂದೆ ಬಂದರೂ ಹಮರ್ಿಯಾ ತನ್ನ ಹಠ ಬಿಡುವುದಿಲ್ಲ. ಹಮರ್ಿಯಾ ಮತ್ತು ಲೈಸಾಂಡರ್ ಊರು ಬಿಟ್ಟು ಓಡಿ ಹೋಗುತಾರೆ. ಈ ವಿಷಯ ತಿಳಿದ ಹೆಲೆನಾ ಡೆಮಿಟ್ರಿಯಸ್ಗೆ ಸಂಗತಿ ತಿಳಿಸುತ್ತಾಳೆ. ಡೆಮಿಟ್ರಿಯಸ್ ಹಮರ್ಿಯಾಳ ಪ್ರೇಮವನ್ನು ಹಂಬಲಿಸಿ ಅವರನ್ನು ಬೆನ್ನು ಹತ್ತುತ್ತಾಳೆ. ಈ ಪ್ರೇಮಿಗಳು ಕಾಡನ್ನು ಸೇರುತ್ತಾರೆ. ಯಕ್ಷರಾಣಿಯಾದ ಟೈಟಾನಿಯಾ ತನ್ನ ಗಂಡನಾದ ಓಬೆರಾನ್ನೊಂದಿಗೆ ಜಗಳವಾಡಿಕೊಂಡು ಕಾಡಿಗೆ ಬಂದಿರುತ್ತಾಳೆ. ಅವಳನ್ನು ಹುಡುಕಿಕೊಂಡು ಬಂದ ಓಬೆರಾನ್ ತನ್ನ ಸೇವಕ ಪಕ್ನೊಂದಿಗೆ ಈ ಪ್ರೇಮಿಗಳ ಕಿತ್ತಾಟವನ್ನು ನೋಡಿ ಮುತ್ತೈದೆ ಹೂವಿನ ರಸವನ್ನು ಡೆಮಿಟ್ರಿಯಸ್ನ ಕಣ್ಣಿಗೆ ಹಚ್ಚುವ ಮೂಲಕ ಹೆಲೆನಾಳನ್ನು ಪ್ರೀತಿಸುವಂತೆ ಕಾರ್ಯ ಕೈಗೊಳ್ಳು ಎಂದು ಪಕ್ನಿಗೆ ಸೂಚಿಸುತ್ತಾನೆ. ಪಕ್ ಲೈಸಾಂಡರ್ನ ಕಣ್ಣಿಗೆ ಹೂವಿನ ರಸ ಹಚ್ಚುತ್ತಾನೆ. ಡೆಮಿಟ್ರಿಯಸ್ ಹೆಲೆನಾಳನ್ನು ಕಂಡು ಪ್ರೇಮಿಸಲು ತೊಡಗುತ್ತಾನೆ. ಡೆಮಿಟ್ರಿಯಸ್ ಮತ್ತು ಲೈಸಾಂಡರ್ ಹೆಲೆನಾಳಿಗಾಗಿ ಹೊಡೆದಾಡುತ್ತಾರೆ. ಗೆಳತಿಯರು ತಮ್ಮ ಪ್ರಿಯಕರರನ್ನು ಉಳಿಸಿಕೊಳ್ಳಲು ಕಿತ್ತಾಡುತ್ತಾರೆ. ಮುತ್ತೈದೆ ರಸವನ್ನು ಓಬೆರಾನ್ ಟೈಟಾನಿಯ ಕಣ್ಣಿಗೆ ಹಚ್ಚಿ ತಮಾಷೆ ನೋಡಲು ಯತ್ನಿಸುತ್ತಾನೆ. ಆದರೆ ಪಕ್ ತನ್ನ ಚಮತ್ಕಾರದಿಂದ ಕಾಡಿನಲ್ಲಿ ನಾಟಕ ಕಲಿಯಲು ಬಂದ ಬಾಟಮ್ನಿಗೆ ಕತ್ತೆ ತಲೆ ಬರುವಂತೆ ಮಾಡುತ್ತಾನೆ. ಟೈಟಾನಿಯ ಕಣ್ತೆರೆದು ನೋಡಿ ಕತ್ತೆ ತಲೆಯ ಬಾಟಮ್ನನ್ನು ಪ್ರೇಮಿಸುತ್ತಾಳೆ. ಈ ಅಭಾಸದ ತಮಾಷೆಯ ಸಂಗತಿಗಳ ತಿಳಿಯಾಗುವಿಕೆಯೆ `ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್'.

ಪ್ರೊ. ಕೆ.ಎಸ್. ನಿಸಾರ್ ಅಹಮ್ಮದ್
ಪ್ರೊ. ಕೆ.ಎಸ್. ನಿಸಾರ್ ಅಹಮ್ಮದ್ ಅವರು ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ಮನಸು ಗಾಂಧಿ ಬಜಾರು, ನಿತ್ಯೋತ್ಸವ ಮುಂತಾದ ಜನಪ್ರಿಯ ಪುಸ್ತಕಗಳನ್ನು ರಚಿಸಿದ್ದಾರೆ. ಇವರು ಅನುವಾದಿಸಿರುವ `ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್' ಕನ್ನಡದಲ್ಲಿ ಲಭ್ಯವಿರುವ ಅತ್ಯುತ್ತಮ ಅನುವಾದಗಳಲ್ಲಿ ಒಂದು. ಕನರ್ಾಟಕ ರಾಜ್ಯದ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿಗಳಲ್ಲದೆ ಕೇಂದ್ರ ಸಕರ್ಾರದ ಪದ್ಮಶ್ರೀ ಪ್ರಶಸ್ತಿಗಳಿಗೆ ಶ್ರೀಯುತರು ಭಾಜನರಾಗಿದ್ದಾರೆ.
?
ರಂಗದ ಮೇಲೆ
ಥೀಸಿಯಸ್ _ ಕಿರಣ್ ಎಸ್
ಹಿಪಾಲಿಟ - ಟುವ್ವಿ ಟುವ್ವಿ ಸಿ.ಕೆ
ಈಗಿಯಸ್ - ಮಲ್ಲೇಶ್ ಮಾಲ್ವಿ
ಹನರ್ಿಯಾ - ಅಶ್ವಿನಿ ಚಂದ್ರಪ್ಪ ಬಿ
ಹೆಲೆನಾ - ರಂಜಿತಾ ಆರ್ ಮತ್ತೂರು
ಡೆಮಿಟ್ರೀಯಸ್ - ಅಜಯ್ಕುಮಾರ್ ಬಿ.ಎನ್
ಟೈಟಾನಿಯಾ - ಜಯಶ್ರೀ ಇಡ್ಕಿದು
ಓಬೆರಾನ್ - ಭಾಸ್ಕರ್ ಎನ್ ಕೊಟ್ಯಾನ್
ಪಕ್ - ಧನುಷ್ನಾಯ್ಕ/ಶಿವರಾಜ್ಗೌಡ
ಲೈಸಾಂಡರ್ - ಕಾತರ್ಿಕ್ಗೌಡ ಎಂ.ಸಿ/ ನಂದೀಶ್ ಪಾಟೀಲ್ ಜಿ.ಬಿ
ಯಕ್ಷಿಣಿಯರು - ಲಕ್ಷ್ಮಿ ಎಂ, ಮಲ್ಲೇಶ್ ಮಾಲ್ವಿ,
ಟುವ್ವಿ ಟುವ್ವಿ ಸಿ.ಕೆ, ಧನುಷ್ನಾಯ್ಕ, ಶಿವರಾಜ್
ಫಿಲಾಸ್ಟ್ರೇಟ್ - ನಂದೀಶ್ ಪಾಟೀಲ್ ಜಿ.ಬಿ,  ಕಾತರ್ಿಕ್ಗೌಡ ಎಂ.ಸಿ
ನಿಕ್ಬಾಟಮ್ - ಶ್ರೇಯಸ್ ಪಿ
ಪೀಟರ್ಕ್ವೀನ್ಸ್ - ಮನುರಾಜ್ ಹೆಚ್.ಎನ್
ಫ್ರಾನ್ಸೀಸ್ಪ್ಲೂಟ್ - ದೀಪಕ್ ಪಟೇಲ್
ಟಾಮ್ಸ್ನೌಟ್ - ಬಸವರಾಜ್ ಎ.ಪಿ
ರಾಬಿನ್ ಸ್ಟಾರ್ವಲಿಂಗ್- ಪವನ್ಕುಮಾರ್ ಎಂ ಗಂಟೆ
ಸ್ನಗ್ - ವೀರಭದ್ರಪ್ಪ ಅಣ್ಣಿಗೇರಿ
ಟೈಟಾನಿಯಾಳ ಮಗು- ಶರಣ್ಯ ಆರ್


ರಂಗದ ಹಿಂದೆ
ಪಠ್ಯ ಸಹಾಯ : ಹುಲುಗಪ್ಪ ಕಟ್ಟೀಮನಿ
ಸಂಗೀತ ಸಾಂಗತ್ಯ : ಸುಬ್ರಹ್ಮಣ್ಯ, ಮೈಸೂರು, ಧನಂಜಯ ಆರ್.ಸಿ, ಶುಭಕರ್ ಬಿ, ರಚನಾ
ವಸ್ತ್ರವಿನ್ಯಾಸ : ದಿವ್ಯಾ
ಬೆಳಕು : ಕೃಷ್ಣಕುಮಾರ್ ನಾರ್ಣಕಜೆ, ಮಹೇಶ್ ಕಲ್ಲತ್ತಿ
ಮುಖವಾಡ : ಸಂತೋಷ್ಕುಮಾರ್ ಕುಸನೂರು


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries