HEALTH TIPS

ಶಬರಿಮಲೆ ಉತ್ಸವ ನಿರ್ವಹಣೆ-ಪ್ರಗತಿ ಸಭೆ- ಹೆಚ್ಚಿನ ಯಾತ್ರಿಕರಿಗೆ ಸಿದ್ಧವಾಗಿದೆ ಪೊನ್ನಂಬಲ ಬೆಟ್ಟ

                   

      ಪತ್ತನಂತಿಟ್ಟು:  ಕೋವಿಡ್ ನಿಬಂಧನೆಗಳನ್ನು  ಅನುಸರಿಸಿ ಶಬರಿಮಲೆ ತೀರ್ಥಯಾತ್ರೆ ಉತ್ತಮವಾಗಿ ಪ್ರಗತಿಯಲ್ಲಿದೆ ಮತ್ತು ಮುಂದಿನ ದಿನಗಳಲ್ಲಿ ಹೆಚ್ಚಿನ ಯಾತ್ರಾರ್ಥಿಗಳು ಬಂದರೆ ದರ್ಶನ ಅವಕಾಶ ನೀಡಲು ಸಂಪೂರ್ಣ ಸಿದ್ಧವಿದೆ ಎಂದು ಶಬರಿಮಲೆ ಎಡಿಎಂ ಅರುಣ್ ಕೆ. ವಿಜಯನ್ ಅವರ ಉಪಸ್ಥಿತಿಯಲ್ಲಿ ಪೆÇಲೀಸ್ ವಿಶೇಷ ಅಧಿಕಾರಿ ಬಿ. ಕೃಷ್ಣಕುಮಾರ್ ಅಧ್ಯಕ್ಷತೆಯಲ್ಲಿ ಸೋಮವಾರ ಸನ್ನಿಧಾನಂ ನಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. 

         ಸಭೆಯು ಶಬರಿಮಲೆ ತೀರ್ಥಯಾತ್ರೆಗೆ ಸಂಬಂಧಿಸಿದಂತೆ ಮಾಡಿದ ವ್ಯವಸ್ಥೆಗಳನ್ನು ಪರಿಶೀಲಿಸಿತು. ಕ್ಷೇತ್ರದ ತೀರ್ಥಯಾತ್ರೆಗೆ ಸಂಬಂಧಿಸಿದಂತೆ ಇಲಾಖೆಗಳ ಕಾರ್ಯಗಳು ಉತ್ತಮವಾಗಿ ನಡೆಯುತ್ತಿವೆ ಎಂದು ಶಬರಿಮಲೆ ಎಡಿಎಂ ಅರುಣ್ ಕೆ. ವಿಜಯನ್ ಹೇಳಿದರು. ಕೋವಿಡ್ ತಪಾಸಣೆ ಮತ್ತು ಯಾತ್ರಾರ್ಥಿಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ.

      ಶಬರಿಮಲೆಗೆ ಬರುವ ಯಾತ್ರಿಕರು ಮತ್ತು ಸೇವೆಗೆ ಆಗಮಿಸುವ ಅಧಿಕಾರಿಗಳು ಕೋವಿಡ್ ತಪಾಸಣೆ ಪ್ರಮಾಣಪತ್ರಗಳೊಂದಿಗೆ ಆಗಮಿಸುತ್ತಾರೆ. ಬಹಳ ಎಚ್ಚರಿಕೆಯಿಂದ ಮುಂದುವರಿಯಲು ಸೂಚನೆ ನೀಡಲಾಯಿತು. 

     ಆರೋಗ್ಯ ಇಲಾಖೆಯ ನಿಬಂಧನೆಗಳಿಗೆ ಅನುಗುಣವಾಗಿ ದೃಢೀಕೃತ ತಾತ್ಕಾಲಿಕ ಉದ್ಯೋಗಿಗಳು ಪ್ರಾಥಮಿಕ ಸಂಪರ್ಕವನ್ನು ಎಫ್‍ಎಲ್‍ಟಿಸಿಗೆ ವರ್ಗಾಯಿಸಲು ಮತ್ತು ಅವರೊಂದಿಗೆ ಸಂಪರ್ಕ ಹೊಂದಿರುವವರನ್ನು ಸಂಪರ್ಕಿಸಲು ಸನ್ನಿಧಾನಂ ಕ್ರಮ ಕೈಗೊಂಡಿದ್ದರಿಂದ ಆತಂಕಕ್ಕೆ ಯಾವುದೇ ಕಾರಣವಿಲ್ಲ ಎಂದು ಎಡಿಎಂ ಹೇಳಿದರು. ತಕ್ಷಣದ ಕ್ರಮ ಕೈಗೊಳ್ಳಲಾಗಿದೆ ಮತ್ತು ಕಳವಳಕ್ಕೆ ಯಾವುದೇ ಕಾರಣವಿಲ್ಲ ಎಂದು ದೃಢಪಡಿಸಲಾಯಿತು. 

     ದೇವಸ್ವಂ ಮಂಡಳಿಯ ತಾತ್ಕಾಲಿಕ ಉದ್ಯೋಗಿಯೋರ್ವರಿಗೆ ಸಣ್ಣ ಅಸ್ವಸ್ಥತೆ ಉಂಟಾದ ತಕ್ಷಣ ಆರೋಗ್ಯ ಇಲಾಖೆಗೆ ಸೂಚಿಸಲಾಯಿತು ಮತ್ತು ಪರೀಕ್ಷೆಯು ಸಕಾರಾತ್ಮಕವಾಗಿದೆ ಎಂದು ಕಂಡುಬಂದಿದೆ. ಅವರೊಂದಿಗೆ ಜೊತೆಯಲ್ಲಿದ್ದ ಇನ್ನೊಬ್ಬರಿಗೂ ಕೋವಿಡ್ ಧನಾತ್ಮಕವಾಗಿರುವುದು ಕಂಡುಬಂದಿದೆ. ಅವರು ತಂಗಿದ್ದ ಕೊಠಡಿಯನ್ನು ಸೋಂಕುರಹಿತಗೊಳಿಸಲು ಕ್ರಮ ಕೈಗೊಳ್ಳಲಾಯಿತು. ಇಬ್ಬರಿಗೂ ಅನುಸರಣಾ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಯಿತು.

        ಆರೋಗ್ಯ ಸಮಸ್ಯೆಗಳಿರುವವರು ತಕ್ಷಣ ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಲಾಗಿದೆ. ತೀರ್ಥಯಾತ್ರೆ ನಿರ್ವಘ್ನವಾಗಿ ಮುಂದುವರಿಯುತ್ತಿದೆ. ದೇವರ ಸುಗಮ ದರ್ಶನಕ್ಕೆ ತೊಂದರೆಗಳಿಲ್ಲ. 

      ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ  ಏನು ಮಾಡಬೇಕು ಎಂಬುದರ ಕುರಿತು ವಿವಿಧ ಇಲಾಖೆಗಳ ಪ್ರತಿನಿಧಿಗಳು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ವಿಶೇಷ ಅಧಿಕಾರಿ ಹೇಳಿದರು.

       ಈ ಸಂಬಂಧ ಕೋವಿಡ್ ಅಗತ್ಯ ಮುನ್ನೆಚ್ಚರಿಕೆ ಮತ್ತು ಅನುಸರಣಾ ಕ್ರಮ ಕೈಗೊಳ್ಳಲಾಗಿದೆ ಮತ್ತು ಆತಂಕಕ್ಕೆ ಯಾವುದೇ ಕಾರಣಗಳಿಲ್ಲ ಎಂದು ಕಾರ್ಯನಿರ್ವಾಹಕ ಅಧಿಕಾರಿ ವಿ.ಎಸ್.ರಾಜೇಂದ್ರ ಪ್ರಸಾದ್  ಹೇಳಿದರು. 

       ಕೋವಿಡ್ ಪೆÇ್ರೀಟೋಕಾಲ್ ಸಮಿತಿಯನ್ನು ವಿಸ್ತರಿಸಲು ಸಭೆ ನಿರ್ಧರಿಸಿತು. ಸನ್ನಿಧಾನಂ  ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಕೋವಿಡ್ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ನಿರ್ಧರಿಸಲಾಯಿತು. ಯಾತ್ರಾರ್ಥಿಗಳಲ್ಲದೆ, ಸೇವೆಗಾಗಿ ಶಬರಿಮಲೆಗೆ ಆಗಮಿಸಿದ ಅಧಿಕಾರಿಗಳು ಸಹ ಕೋವಿಡ್ ನಿಯಮಗಳನ್ನು ಪೂರೈಸಬೇಕು, ಸಾಮಾಜಿಕ ಅಂತರವನ್ನು ಸನ್ನಿಧಾನಂ ಮತ್ತು ಇತರೆಡೆ ಪಾಲಿಸಲು ಸೂಚಿಸಲಾಗಿದೆ. ಶಬರಿಮಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಾತ್ಕಾಲಿಕ ಅಂಗಡಿಗಳ ನೌಕರರು ಕೋವಿಡ್ ಪರೀಕ್ಷೆಯ ನಕಾರಾತ್ಮಕ ಫಲಿತಾಂಶವನ್ನು ನೀಡಬೇಕು. ಅಂಗಡಿಗಳ ಸೋಂಕು ರಹಿತದ ಪ್ರಮಾಣಪತ್ರಗಳನ್ನು ಸಹ ಕಡ್ಡಾಯಗೊಳಿಸಲಾಯಿತು.

         ಸನ್ನಿಧಾನಂನಲ್ಲಿ ಗಂಟೆಗೊಮ್ಮೆ ನೈರ್ಮಲ್ಯೀಕರಣವನ್ನು ಕೈಗೊಳ್ಳಲು ನಿರ್ಧರಿಸಲಾಯಿತು. ಸಭೆಯು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶಬರಿಮಲೆ ಮತ್ತು ಸುತ್ತಮುತ್ತಲು ಹಂದಿಗಳ ಹೆಚ್ಚುತ್ತಿರುವ ಉಪದ್ರವವನ್ನು ಕಡಿಮೆ ಮಾಡಲು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸಿತು.

    ಶಬರಿಮಲೆ ಕ್ಷೇತ್ರ ಕಾರ್ಯನಿರ್ವಾಹಕ ಅಧಿಕಾರಿ ವಿ.ಎಸ್. ರಾಜೇಂದ್ರ ಪ್ರಸಾದ್, ಉತ್ಸವ ನಿಯಂತ್ರಕ ಬಿ. ಬಿ.ಎಸ್. ಶ್ರೀಕುಮಾರ್, ಡ್ಯೂಟಿ ಮ್ಯಾಜಿಸ್ಟ್ರೇಟ್ ಕೆ. ಮನೋಜ್, ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಪಿ.ವಿ. ಸುಧೀಶ್, ಇತರ ಇಲಾಖಾ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries