HEALTH TIPS

ಸತ್ಯ ತಿಳಿಯುವುದು ಹೇಗೆ?; ಫ್ಯಾಕ್ಟ್​ಚೆಕ್​ಗೆ ಇಲ್ಲಿವೆ ಸುಲಭದ ಮಾರ್ಗಗಳು.

         ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಗಳನ್ನು ಪೋಸ್ಟ್ ಮಾಡಿ ದಾರಿ ತಪ್ಪಿಸುವ ತಂತ್ರಗಳು ಹೊಸದೇನಲ್ಲ. ದಿನವೂ ಅಂಥ ಹಲವು ವದಂತಿಗಳು ಫೇಸ್​ಬುಕ್​-ಟ್ವಿಟರ್​ ಮುಂತಾದವುಗಳ ಮೂಲಕ ಪೋಸ್ಟ್ ಆಗುತ್ತಲೇ ಇರುತ್ತವೆ. ಹಾಗೆ ಪೋಸ್ಟ್ ಆದ ಸುಳ್ಳುಸುದ್ದಿಗಳ ಸತ್ಯಾಸತ್ಯತೆ ಕುರಿತು ಅನುಮಾನ ಉಂಟಾದಲ್ಲಿ ಅದನ್ನು ತಿಳಿದುಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಸಹಜ. ಅದಕ್ಕಾಗಿ ಇಲ್ಲಿವೆ ಕೆಲವು ಸುಲಭದ ಮಾರ್ಗಗಳು ಇಲ್ಲಿವೆ.

          ಒಂದು ವೇಳೆ ಯಾವುದೇ ಒಂದು ಸುದ್ದಿ ಸುಳ್ಳಿರಬಹುದೇ ಎಂಬ ಅನುಮಾನ ಕಾಡಿದರೆ ಅದನ್ನು ಪತ್ತೆ ಮಾಡಲು ಕೆಲವೊಂದು ಖಾಸಗಿ ಫ್ಯಾಕ್ಟ್​ಚೆಕ್​ ಸಂಸ್ಥೆಗಳು ಇವೆ. ಆದರೆ ನಿರ್ದಿಷ್ಟ ಸುದ್ದಿಗಳು ಸತ್ಯಾಸತ್ಯತೆಯನ್ನು ಸುಲಭದಲ್ಲೇ ತಿಳಿಯಲು ಭಾರತ ಸರ್ಕಾರದಿಂದಲೇ ಅಧಿಕೃತವಾಗಿ ತಿಳಿದುಕೊಳ್ಳಬಹುದು. ಹಾಗೆ ಅನುಮಾನಾಸ್ಪದ ಎನಿಸುವಂಥ ಮೆಸೇಜ್​ಗಳನ್ನು ಭಾರತ ಸರ್ಕಾರದ ಪ್ರೆಸ್​ ಇನ್​ಫಾರ್ಮೇಷನ್​ ಬ್ಯೂರೋ(ಪಿಐಬಿ)ಗೆ ಕಳುಹಿಸಿದೆ ಅವರು ಸತ್ಯಾಸತ್ಯತೆ ಪರಿಶೀಲಿಸಿ ಸ್ಪಷ್ಟಪಡಿಸುತ್ತಾರೆ.

          ಅದಕ್ಕಾಗಿ ಆಸಕ್ತರು ಮಾಡಬೇಕಾದ್ದು ಇಷ್ಟೇ. ಅನುಮಾನಾಸ್ಪದ ಸಂದೇಶಗಳನ್ನು https://factcheck.pib.gov.in ಕಳುಹಿಸಿಕೊಡಬಹುದು. ಅಲ್ಲದೆ ಪಿಐಬಿಯ +918799711259 ಸಂಖ್ಯೆಗೆ ವಾಟ್ಸ್​ಆಯಪ್​ ಮೂಲಕ ಕಳಿಸಬಹುದು. ಮಾತ್ರವಲ್ಲ http://pibfactcheck@gmail.com ಗೆ ಇ-ಮೇಲ್ ಮಾಡಿಯೂ ಸತ್ಯಾಸತ್ಯತೆ ತಿಳಿಯಬಹುದು. ಇನ್ನು ಸತ್ಯಾಸತ್ಯತೆ ಪರಿಶೀಲಿಸಲಾಗಿರುವ ಹಲವಾರು ಸುದ್ದಿಗಳ ಕುರಿತ ಮಾಹಿತಿಯನ್ನು https://pib.gov.in ವೀಕ್ಷಿಸಿಯೂ ಪಡೆಯಬಹುದು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries