ಸದ್ಯದ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ರೋಗ ನಿರೋಧಕ ಶಕ್ತಿ ಬಹಳ ಮುಖ್ಯ. ಆದರೆ ಒಂದು ಅಥವಾ ಎರಡು ದಿನಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಾಧ್ಯವಿಲ್ಲ. ಬದಲಿಗೆ ಪೌಷ್ಠಿಕ ಆಹಾರದ ಜೊತೆಗೆ ನಿಯಮಿತವಾಗಿ ವ್ಯಾಯಾಮ ಮಾಡುವುದು ಅಗತ್ಯವಾಗಿದೆ. ಒಂದು ವೇಳೆ ಕೊರೊನಾ ಪಾಸಿಟಿವ್ ಆಗಿದ್ದರೆ, ನೀವು ಹೆಸರುಕಾಳಿನ ಸೂಪ್ ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸುವುದು ಉತ್ತಮ ಆಯ್ಕೆ. ಇದು ನಿಮ್ಮನ್ನು ಬೇಗ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.
ಆಯುರ್ವೇದದಲ್ಲಿ ಹೆಸರುಕಾಳನ್ನು ಅತ್ಯಂತ ಪೋಷಣೆ ಮತ್ತು ಜೀರ್ಣಿಸಿಕೊಳ್ಳಲು ಸುಲಭವಾದ ಆಹಾರವೆಂದು ಪರಿಗಣಿಸಲಾಗಿದೆ. ನಿರ್ಜಲೀಕರಣ ಮತ್ತು ಜ್ವರದಿಂದ ಚೇತರಿಸಿಕೊಳ್ಳುವ ಜನರಿಗೆ ಹೆಸರುಕಾಳು ಒಳ್ಳೆಯದು. ಇದು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದ್ದು ಅದು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇಂತಹ ಸೂಪ್ ಹೇಗೆ ತಯಾರಿಸವುದು ಎಂಬುದನ್ನು ಇಲ್ಲಿ ನೋಡೋಣ.
INGREDIENTS ಬೇಕಾಗುವ ಪದಾರ್ಥಗಳು: ¼ ಕಪ್ - ಹೆಸರುಕಾಳು 2 ಕಪ್ - ನೀರು 1 ಚಮಚ - ತುಪ್ಪ ಅರ್ಧ ಚಮಚ- ಜೀರಿಗೆ ½ ಚಮಚ - ತುರಿದ ಶುಂಠಿ ½ ಕಪ್ - ಕತ್ತರಿಸಿದ ತರಕಾರಿ (ಕ್ಯಾರೆಟ್, ಕುಂಬಳಕಾಯಿ) ¼ ಚಮಚ- ಮೆಣಸಿನ ಹುಡಿ ಚಿಟಿಕೆ ಶುಂಠಿ ಪುಡಿ ಚಿಟಿಕೆ ಹಿಂಗು ಚಿಟಿಕೆ ಅಮ್ಚೂರ್ ಪುಡಿ ಉಪ್ಪು ಅಲಂಕರಿಸಲು ಬೆರಳೆಣಿಕೆಯಷ್ಟು ಕಸೂರಿ ಮೇಥೀ
HOW TO PREPARE ತಯಾರಿಸುವ ವಿಧಾನ: ಹೆಸರುಕಾಳನ್ನು ಕನಿಷ್ಠ 30 ನಿಮಿಷಗಳ ಕಾಲ ನೆನೆಸಿಡಿ. * ಪ್ರೆಶರ್ ಕುಕ್ಕರ್ ನಲ್ಲಿ 1 ಟೀಸ್ಪೂನ್ ತುಪ್ಪವನ್ನು ಬಿಸಿ ಮಾಡಿ. ಅದರಲ್ಲಿ ½ ಚಮಚ ಜೀರಿಗೆ ಮತ್ತು ½ ಚಮಚ ತುರಿದ ಶುಂಠಿಯನ್ನು ಹಾಕಿ. * ಅದಕ್ಕೆ ಹೆಸರುಕಾಳು ಸೇರಿಸಿ ಮತ್ತು ಕೆಲವು ನಿಮಿಷಗಳ ಕಾಲ ಹುರಿಯಿರಿ. * ½ ಕಪ್ ಕತ್ತರಿಸಿದ ತರಕಾರಿ ಸೇರಿಸಿ ಮತ್ತು 2 ನಿಮಿಷ ಬೇಯಿಸಿ. * 2 ಕಪ್ ನೀರು ಸೇರಿಸಿ ಮತ್ತು 1-2 ವಿಸಿಲ್ ಬರೋವರೆಗೆ ಮೀಡಿಯಂ ಫ್ಲೇಮ್ ನಲ್ಲಿ ಬೇಯಿಸಿ. * ಬೇಯಿಸಿದ ನಂತರ ¼ ಟೀಸ್ಪೂನ್ ಮೆಣಸಿನ ಪುಡಿ, ಒಣ ಶುಂಠಿ ಪುಡಿ (ಒಂದು ಪಿಂಚ್), ಹಿಂಗು (ಒಂದು ಪಿಂಚ್), ಆಮ್ಚೂರ್ (ಒಂದು ಪಿಂಚ್), ಮತ್ತು ಉಪ್ಪು ಸೇರಿಸಿ. * ಚಮಚ ಅಥವಾ ಸೌಟಿನ ಹಿಂಭಾಗವನ್ನು ಬಳಸಿ ದಾಲ್ ಅನ್ನು ಮ್ಯಾಶ್ ಮಾಡಿ, ಸೂಪ್ ಕುದಿಯಲು ಬರಲಿ, ಮತ್ತು ಅಂತಿಮವಾಗಿ ಸ್ವಲ್ಪ ಕಸೂರಿ ಮೆಥಿ ಸೇರಿಸಿ. * ಬಿಸಿಯಾಗಿ ಸವಿಯಲು ನೀಡಿ.
INSTRUCTIONS NUTRITIONAL INFORMATION People - 2 ಕಾರ್ಬ್ಸ್ - 38.7ಗ್ರಾ ಪ್ರೋಟೀನ್ - 14.2ಗ್ರಾ ಕೊಬ್ಬು - 0.8ಗ್ರಾ ಫೈಬರ್ - 15.4 ಗ್ರಾ



