HEALTH TIPS

ಸ್ಮಾರ್ಟ್ ಮಕ್ಕಳಿಗೆ ಸೈಬರ್ ಕಳ್ಳರ ಗಾಳ!; ಮೊಬೈಲ್ ಫೋನ್ ಕೊಡುವ ಮುನ್ನ ಇರಲಿ ಎಚ್ಚರ..

               'ನನ್ನ ಮಗ ತುಂಬಾ ಸ್ಮಾರ್ಟ್ ಕಣ್ರೀ. ಮೊಬೈಲ್​ನಲ್ಲಿ ಅವನಿಗೆ ಗೊತ್ತಿಲ್ದೇ ಇರೋದೇ ಇಲ್ಲ. ನನಗೆ ಏನ್ ಬೇಕೋ ಎಲ್ಲ ಅವನಿಂದ್ಲೇ ಆನ್​ಲೈನ್​ನಲ್ಲಿ ತರಿಸ್ಕೊಳ್ತೀನಿ. ನಮ್ಮ ಯಜಮಾನ್ರಂತೂ ಎಲ್ಲ ಜವಾಬ್ದಾರಿನೂ ಅವನಿಗೇ ಕೊಟ್ಬಿಟ್ಟಿದ್ದಾರೆ. ದಿನದ 12 ಗಂಟೆ ಮೊಬೈಲ್​ನಲ್ಲಿ ಏನಾದ್ರೂ ಹೊಸ ಹೊಸದನ್ನ ಕಂಡು ಹಿಡೀತಾನೆ ಇರ್ತಾನೆ…'

             ನಿಜ. ಮೊಬೈಲ್ ಫೋನ್​ಗಳೀಗ ನಮ್ಮ ಜೀವನ ಶೈಲಿಯನ್ನೇ ಬದಲಿಸಿಬಿಟ್ಟಿವೆ. ಬೆಂಕಿ ಪೊಟ್ಟಣಕ್ಕೂ ಅಂಗಡಿಗೆ ಹೋಗ್ತಿದ್ದ ಜನ ಮಂಚದ ಮೇಲೆ ಮಲಗಿಕೊಂಡೇ ಬೇಕಾದ್ದನ್ನೆಲ್ಲ ಆರ್ಡರ್ ಮಾಡ್ತಾರೆ. ಇನ್ನು ಅಮ್ಮಂದಿರಂತೂ ಮಕ್ಕಳ ಕೈಗೆ ಮೊಬೈಲ್ ಕೊಟ್ರೆ ಸ್ಮಾರ್ಟ್ ಆಗೇ ಬಿಡ್ತಾರೆ ಅಂತ ಬೀಗ್ತಾರೆ. ಆದ್ರೆ ಇಂತಹ ಅಜ್ಞಾನ ಹೇಗೆಲ್ಲ ದಿಕ್ಕುತಪ್ಪಿಸುತ್ತೆ ಎಂಬುದು ಇತ್ತೀಚೆಗೆ ನಡೆದ ಎರಡು ಘಟನೆಗಳನ್ನು ನೋಡಿದರೆ ತಿಳಿಯುತ್ತೆ…

           ಪ್ರಕರಣ-1: ಛತ್ತೀಸ್​ಗಢದ ಕಾಂಕರ್ ಜಿಲ್ಲೆಯ ಪಂಖಜೂರ್ ಎಂಬ ಪ್ರದೇಶ ಅದು. ಸದಾ ಮನೆಕೆಲಸ, ಶಾಲೆ ಕೆಲಸದಲ್ಲಿ ಬಿಜಿಯಾಗಿರುವ ಶಿಕ್ಷಕಿ ಶುಭ್ರಾ ಪಾಲ್ ಅದೊಂದು ದಿನ ತಮ್ಮ ಬ್ಯಾಂಕ್ ಬ್ಯಾಲೆನ್ಸ್ ನೋಡಿ ದಂಗಾಗಿದ್ದರು. ಅವರ ಖಾತೆಯಿಂದ 3.22 ಲಕ್ಷ ರೂ. ನಾಪತ್ತೆಯಾಗಿತ್ತು. ಬ್ಯಾಂಕ್​ನಿಂದ ಹಣ ಡ್ರಾ ಮಾಡಿಲ್ಲ. ಯಾರಿಗೂ ಚೆಕ್ ಕೂಡ ಬರೆದುಕೊಟ್ಟಿಲ್ಲ. ಫ್ರಾಡ್ ಆಗೋಕೆ ಆನ್​ಲೈನ್ ಟ್ರಾನ್ಸಾಕ್ಷನ್ ಮಾಡಿಲ್ಲ. ಅಪರಿಚಿತರಿಗೆ ಒಟಿಪಿಯನ್ನೂ ಕೊಟ್ಟಿಲ್ಲ. ಬ್ಯಾಂಕ್ ಬ್ಯಾಲೆನ್ಸ್ ಮೇಲೆ ಪೂರ್ತಿ ಕಣ್ಣು ಆಡಿಸಿದಾಗ 3 ತಿಂಗಳ ಅಂತರದಲ್ಲಿ ಇಷ್ಟೂ ಹಣ ಮಾಯವಾಗಿರುವುದು ಖಚಿತವಾಗಿತ್ತು. ಸೈಬರ್ ಕ್ರೖೆಂ ಮೊರೆ ಹೋದ ಬಳಿಕ ನಿರಂತರ ತನಿಖೆ ನಡೆಯಿತು. ಬಳಿಕ ಗೊತ್ತಾಗಿದ್ದು ಇದು ಮನೆಯೊಳಗೇ ಇದ್ದ ಕಳ್ಳನ ಕೆಲಸ! ಅವರ 12 ವರ್ಷದ ಪುತ್ರ ಆನ್​ಲೈನ್ ಗೇಮ್ ಆಡಿ ಇಷ್ಟೂ ಹಣ ಕಳೆದಿದ್ದ. ಆನ್​ಲೈನ್ ಶಾಪಿಂಗ್, ಮಗನ ಪಾಠದ ವಸ್ತು ಖರೀದಿಗೆ ನೆರವಾಗುವ ಉದ್ದೇಶದಿಂದ ಅಮ್ಮ ಕೊಟ್ಟ ಸಲುಗೆ ಮಗನ ದಾರಿ ತಪ್ಪಿಸಿತ್ತು. 'ಫ್ರೀ ಫೈರ್' ಎಂಬ ಆನ್​ಲೈನ್ ಗೇಮ್ ಆಡಿ 3.22 ಲಕ್ಷ ರೂ. ಕಳೆದಿದ್ದ. ಪ್ರತಿ ವಹಿವಾಟಿನ ಬಳಿಕ ಬರುತ್ತಿದ್ದ ಒಟಿಪಿಯನ್ನು ಡಿಲೀಟ್ ಮಾಡುತ್ತಿದ್ದ. ಪುತ್ರನ ಈ ಸಾಹಸ ಕಂಡು ಬೇಸ್ತು ಬಿದ್ದ ಅಮ್ಮನಿಗೆ ಉಳಿದಿರುವುದೀಗ ಕಣ್ಣೀರು ಹಾಕುವ ಕೆಲಸ ಮಾತ್ರ.

ಪ್ರಕರಣ-2: ತಮಿಳು ನಾಡಿನ ಮಧುರೈ ಸಮೀಪದ ರಾಮನಾಥಪುರಂನ ಗೃಹಿಣಿಯೊಬ್ಬರು ಬ್ಯಾಂಕ್ ಖಾತೆಯಲ್ಲಿದ್ದ 97 ಸಾವಿರ ರೂ.ನಲ್ಲಿ ಕೊಂಚ ಹಣ ಡ್ರಾ ಮಾಡಲು ಎಟಿಎಂಗೆ ತೆರಳಿದ್ದರು. ಆದರೆ ಬ್ಯಾಲೆನ್ಸ್ ನೋಡಿದಾಗ 7 ಸಾವಿರ ರೂ.ಗೆ ಇಳಿದಿತ್ತು. ಪತಿಗೆ ವಿಷಯ ತಿಳಿಸಿದಾಗ ಇದು ಮಗನದ್ದೇ ಕೃತ್ಯ ಎಂದು ತಿಳಿಯಿತು. ಮಗ ಆನ್​ಲೈನ್ ಗೇಮ್ ಆಡಿ ಹಣ ಕಳೆದಿದ್ದ. ಅಪ್ಪನ ಇ-ವಹಿವಾಟು ನೋಡಿಕೊಂಡಿದ್ದ ಮಗ ಮೊಬೈಲ್ ಬ್ಯಾಂಕಿಂಗ್ ಬಳಕೆಯಲ್ಲಿ ಪರಿಣತಿ ಸಾಧಿಸಿದ್ದ. ಮಾಡಿದ ತಪ್ಪಿಗೆ 1ರಿಂದ 97 ಸಾವಿರದವರೆಗೆ ಬರೆಯುವ ಶಿಕ್ಷೆ ಅನುಭವಿಸುತ್ತಿದ್ದಾನೆ. ಸದ್ಯ 35 ಸಾವಿರದವರೆಗೆ ಬರೆದು ಸುಸ್ತಾಗಿರುವ ಅವನು ಇನ್ನೆಂದೂ ಆನ್​ಲೈನ್ ಗೇಮ್ ಆಡುವುದಿಲ್ಲ ಎಂದು ಶಪಥ ಮಾಡಿದ್ದಾನಂತೆ.

ಈ ಪ್ರಕರಣಗಳು ನಿದರ್ಶನವಷ್ಟೇ. ಮಕ್ಕಳ ಇ-ಜ್ಞಾನ ಹೆಚ್ಚಿಸುವ ಮುನ್ನ ಇಂತಹ ಸೂಕ್ಷ್ಮ ಸಂಗತಿಗಳನ್ನು ಅರಿಯಬೇಕು.

                           ಮೊದಲು ಪಾಲಕರಿಗೆ ಇರಬೇಕು ಸಂಯಮ

         ಬಹುತೇಕ ಮನಃಶಾಸ್ತ್ರಜ್ಞರ ಪ್ರಕಾರ ಮಕ್ಕಳ ಮೊಬೈಲ್ ಗೀಳಿನ ಹಿಂದೆ ತಂದೆ, ತಾಯಿಯರ ಮೊಬೈಲ್ ಮೋಹ ಪ್ರಭಾವ ಬೀರಿರುತ್ತದೆ. ವಾಟ್ಸ್​ಆಪ್ ಗ್ರೂಪ್​ನಲ್ಲಿನ ಫೋಟೋ ಫೇಸ್​ಬುಕ್​ನಲ್ಲಿ ಬಂದಿರುವ ಕಮೆಂಟ್, ಲೈಕ್​ಗಳನ್ನು ಮಕ್ಕಳಿಗೆ ತೋರಿಸಿ, ತಿಳಿಸಿ ಬಹುತೇಕ ಪಾಲಕರು ಖುಷಿ ಪಡುತ್ತಾರೆ. ಅಪ್ಪ, ಅಮ್ಮನಿಗೆ ಖುಷಿ ನೀಡುವ ಮೊಬೈಲ್ ಬಗ್ಗೆ ಮಕ್ಕಳು ಸ್ವಲ್ಪ ಹೆಚ್ಚಾಗಿಯೇ ಆಕರ್ಷಿತರಾಗುತ್ತಾರೆ. ಮೊಬೈಲ್ ಕೈಗೆ ಬಂದ ಬಳಿಕ ಸ್ನೇಹಿತರು, ಕುಟುಂಬ ಸದಸ್ಯರನ್ನು ಅನುಸರಿಸಿ ಆನ್​ಲೈನ್ ಗೇಮ್ಳಿಗೆ ಮೊರೆ ಹೋಗುತ್ತಾರೆ. ಹೀಗಾಗಿ ಫೋನ್ ಬಳಸುವ ಪಾಲಕರು ಮಕ್ಕಳ ಮೇಲೆ ಪ್ರಭಾವ ಬೀರದ ಹಾಗೆ ಪರಿಸ್ಥಿತಿ ನಿಭಾಯಿಸಿದರೆ ಸುತ್ತಲಿನ ಪರಿಸರವೂ ಆರೋಗ್ಯಕರವಾಗಿರುತ್ತದೆ ಎಂಬ ಅಭಿಪ್ರಾಯವಿದೆ.

                         ಇ-ಗೇಮ್ ಗೀಳಿನ ಪರಿಣಾಮ

  • ಆನ್​ಲೈನ್ ಗೇಮ್​​ಗಳನ್ನು ನಿರಂತರವಾಗಿ ಆಡುವುದರಿಂದ ಕಣ್ಣಿಗೆ ಹಾನಿಯಾಗುತ್ತದೆ
  • ನಿದ್ರೆ ಸಮಸ್ಯೆ ಕಾಡುವ ಜತೆಗೆ ಬೊಜ್ಜಿನ ಸಮಸ್ಯೆ ಹೆಚ್ಚುತ್ತದೆ
  • ಮಕ್ಕಳು ಮನೋವ್ಯಾಕುಲತೆಗೆ ಒಳಗಾಗುತ್ತಾರೆ.

ನಿಮ್ಮ ನಿಜವಾದ ಪ್ರೀತಿ, ಕಾಳಜಿ ಸಿಕ್ಕಲ್ಲಿ ಮಕ್ಕಳಿಗೆ ಕೃತಕ ಪೆಟ್ಟಿಗೆಯಲ್ಲಿನ ಕೃತಕ ಭಾವನೆಗಳು ಬೇಕಾಗುವುದಿಲ್ಲ.

                  ಡಾ. ಡೇವಿಡ್ ಹಿಲ್ ಮನಃಶಾಸ್ತ್ರಜ್ಞ

        ಸಾವಿನಲ್ಲಿ ಅಂತ್ಯ: ಆನ್​ಲೈನ್ ಗೇಮ್ ಗೀಳು ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಅನೇಕ ದೇಶಗಳಲ್ಲಿ ಆನ್​ಲೈನ್ ಗೇಮ್ ಬೆಟ್ಟಿಂಗ್​ಗೆ ಅನೇಕ ಜೀವಗಳು ಬಲಿಯಾಗಿವೆ. ಬೆಟ್ಟಿಂಗ್​ನಲ್ಲಿ ಸೋತವರು ಹಣ ಹೊಂದಿಸ ಲಾಗದೆ ಆತ್ಮಹತ್ಯೆಗೆ ಶರಣಾದ ಮತ್ತು ಕಳ್ಳತನ ಮಾಡಿ ಜೈಲು ಪಾಲಾಗಿದ್ದಾರೆ.

                       ಪಾಲಕರ ಜವಾಬ್ದಾರಿ ಏನು?

  •          ಭವಿಷ್ಯದ ದೃಷ್ಟಿ, ಸಾಮಾಜಿಕ ಹೊಣೆಗಾರಿಕೆ ವಿಚಾರ ಪರಿಗಣಿಸುವುದಾದರೆ ಮಕ್ಕಳಿಗೆ ಆನ್​ಲೈನ್ ವಹಿವಾಟು, ಸುರಕ್ಷಿತ ರೀತಿಯಲ್ಲಿ ಮೊಬೈಲ್ ಬಳಸುವುದನ್ನು ಪಾಲಕರು ಹೇಳಿಕೊಡಬೇಕು.
  • ಮೊಬೈಲ್ ಫೋನ್​ ಮೇಲಿನ ನಿಯಂತ್ರಣ ಸಂಪೂರ್ಣವಾಗಿ ಪಾಲಕರ ಕೈಯಲ್ಲಿರಬೇಕು
  • ಮಕ್ಕಳಿಗೆ ಮೊಬೈಲ್ ಫೋನ್ ಕೊಡುವುದು ಅನಿವಾರ್ಯವಾಗಿದ್ದರೆ ಆನ್​ಲೈನ್ ಗೇಮ್​ಗಳಿಗೆ ಅವಕಾಶ ನೀಡದಂತಹ ಆಯಪ್​​ಗಳನ್ನು ಡೌನ್​ಲೋಡ್ ಮಾಡಿಟ್ಟು ಹೋಗಿ.
  • ಆನ್​ಲೈನ್ ವಹಿವಾಟಿನ ಪಾಸ್​ವರ್ಡ್ ಲಾಕ್ ಆಗಿರಲಿ.
  • ಸಾಧ್ಯವಾದರೆ ಆನ್​ಲೈನ್ ಗೇಮ್​ಗಳಿಂದಾಗುವ ಹಾನಿ, ಹಣ ಕಳೆದುಕೊಂಡವರ ಸಂಕಷ್ಟದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries