HEALTH TIPS

ಮಾಸ್ಕ್ ಧರಿಸಿದ್ದಾಗ ಬಾಯಿ ದುರ್ವಾಸನೆ ಬೀರುತ್ತಿದೆಯೇ? ಹಾಗಾದ್ರೆ ಈ ಸಲಹೆಗಳನ್ನು ಪಾಲಿಸಿ

              ಇಂದು ಜನರು ಎದುರಿಸುತ್ತಿರುವ ಅತ್ಯಂತ ಸಾಮಾನ್ಯವಾದ ಸಮಸ್ಯೆಗಳಲ್ಲಿ ಬಾಯಿಯ ದುರ್ವಾಸನೆಯೂ ಒಂದು. ಕೆಲವೊಮ್ಮೆ, ಬಾಯಿಯ ದುರ್ವಾಸನೆಗೆ ಕಾರಣವನ್ನು ಕಂಡುಹಿಡಿಯುವುದು ಕಷ್ಟಕರವಾಗಿದೆ ಆದರೆ ಅದರ ಹಿಂದಿನ ಕಾರಣ ನಿಮಗೆ ತಿಳಿದಿದ್ದರೆ, ಅದನ್ನು ಗುಣಪಡಿಸುವುದು ಸುಲಭ.

                      ಅದರಲ್ಲೂ ಈಗಿನ ಸನ್ನಿವೇಶಕ್ಕೆ ಮಾಸ್ಕ್ ಅತ್ಯಗತ್ಯ, ಹೀಗಿರುವಾಗ ನಮ್ಮದೇ ಬಾಯಿಯ ವಾಸನೆಯನ್ನು ಸಹಿಸಲಾಧ್ಯವಾಗುತ್ತದೆ. ಆದ್ದರಿಂದ, ಉತ್ತಮ ಉಸಿರಾಟವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಹಾಗಾದರೆ ಈ ಬಾಯಿಯಿ ದುರ್ವಾಸನೆಯನ್ನು ಹೇಗೆ ಕಡಿಮೆಮಾಡುವುದು ಎಂಬುದರ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.


                   ಬಾಯಿಯ ದುರ್ವಾಸನೆ: ತಜ್ಞರ ಪ್ರಕಾರ, ಬಾಯಿಯ ದುರ್ವಾಸನೆಯನ್ನು ವೈದ್ಯಕೀಯವಾಗಿ 'ಹ್ಯಾಲಿಟೋಸಿಸ್' ಎಂದು ಕರೆಯಲಾಗುತ್ತದೆ. ಇದು ಬಾಯಿಯಿಂದ ಹೊರಹೊಮ್ಮುವ ಅಹಿತಕರ ವಾಸನೆ. ಇದು ಮುಖ್ಯವಾಗಿ ನೈರ್ಮಲ್ಯದ ಕೊರತೆಯಿಂದ ಬಾಯಿ, ಹಲ್ಲು, ಒಸಡುಗಳು, ಗಂಟಲು ಅಥವಾ ಜೀರ್ಣಾಂಗ ವ್ಯವಸ್ಥೆಯಲ್ಲಿ ಉಂಟಾಗಿರುವ ಆರೋಗ್ಯ ಸಮಸ್ಯೆಗಳಿಂದ ಬರುವುದಾಗಿದೆ. ಇದರ ಜೊತೆಗೆ ನಾವು ಸೇವಿಸುವ ಆಹಾರವೂ ಸಹ ಬಾಯಿಯ ದುರ್ವಾಸನೆಗೆ ಕಾರಣವಾಗುತ್ತದೆ ಎನ್ನುತ್ತಾರೆ ಆಹಾರ ತಜ್ಞರು. ಆ ಆಹಾರ ದೇಹದಿಂದ ಹೊರಹೋಗುವವರೆಗೂ ಕೆಟ್ಟ ವಾಸನೆಯನ್ನು ಉಂಟುಮಾಡುತ್ತದೆ. ಅವುಗಳಲ್ಲಿ ಚೀಸ್, ಪಾಸ್ತಾ, ಕೆಲವು ಮಸಾಲೆಗಳು, ಕಿತ್ತಳೆ ರಸ, ಸೋಡಾ ಮತ್ತು ಕೆಲವು ಮದ್ಯಸಾರಗಳು ಸೇರಿಕೊಳ್ಳುತ್ತವೆ.

               ಬಾಯಿ ದುರ್ವಾಸನೆ ಬೀರಲು 5 ಪ್ರಮುಖ ಕಾರಣಗಳು ಮತ್ತು ಪರಿಹಾರಗಳು: ಆಹಾರ: ಹೌದು, ನೀವು ಏನನ್ನು ತಿನ್ನುತ್ತೀರೋ ಅದು ನಿಮ್ಮ ಹಲ್ಲುಗಳ ನಡುವೆ ಸಿಲುಕಿಕೊಳ್ಳುವ ಹೆಚ್ಚಿನ ಸಂಭವ ಇದೆ. ಅದು ಸಾಕಷ್ಟು ಸಮಯದವರೆಗೆ ಅಲ್ಲೇ ಸಿಕ್ಕಿ ಹಾಕಿಕೊಂಡಿದ್ದಾಗ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಉಂಟುಮಾಡುತ್ತದೆ, ಅದು ನಂತರ ದುರ್ವಾಸನೆಗೆ ಕಾರಣವಾಗುತ್ತದೆ. ಬೆಳ್ಳುಳ್ಳಿ, ಈರುಳ್ಳಿ ಮತ್ತು ಕೆಲವು ಮಸಾಲೆಗಳು ಕೆಟ್ಟ ಉಸಿರಾಟಕ್ಕೆ ಉಂಟುಮಾಡಿ, ಮಾನವ ದೇಹದಲ್ಲಿ ಹೆಚ್ಚು ಗಂಟೆಗಳ ಕಾಲ ಉಳಿಯುಂತೆ ಮಾಡುತ್ತವೆ. ಆದ್ದರಿಂದ ನೀವು ತಿನ್ನುವುದರ ಬಗ್ಗೆ ಎಚ್ಚರವಿರಲಿ, ಜೊತೆಗೆ ಪ್ರತಿ ಊಟದ ನಂತರ ಸರಿಯಾಗಿ ಬಾಯಿ ಮುಕ್ಕಳಿಸಿ.

                    ನಿರ್ಜಲೀಕರಣ: ಒಣ ಬಾಯಿ ಬಾಯಿ ವಾಸನೆಗೆ ಕಾರಣವಾಗುವ ಹೆಚ್ಚಿನ ಬ್ಯಾಕ್ಟೀರಿಯಾಗಳಿಗೆ ಸಂತಾನೋತ್ಪತ್ತಿ ಸ್ಥಳವಾಗಿರುತ್ತದೆ. ನಾಲಿಗೆ ಕೂಡ ಬ್ಯಾಕ್ಟೀರಿಯಾವನ್ನು ಸೆರೆಹಿಡಿಯುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಕೆಟ್ಟ ವಾಸನೆಯನ್ನು ತಪ್ಪಿಸಲು ನಾಲಗೆಯನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಬಾಯಿಯನ್ನು ತೇವವಾಗಿ, ಸ್ವಚ್ಛವಾಗಿ ಮತ್ತು ವಾಸನೆ ಮುಕ್ತವಾಗಿಡಲು ಸಹಾಯ ಮಾಡುತ್ತದೆ.
                ತಂಬಾಕು ಉತ್ಪನ್ನಗಳು: ಧೂಮಪಾನಿಗಳು ಮತ್ತು ತಂಬಾಕು ಸೇವಿಸುವವರು ಒಸಡು ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದ್ದು ಇದು ಬಾಯಿ ವಾಸನೆಗೆ ಕಾರಣವಾಗುತ್ತದೆ. ಆದ್ದರಿಂದ ಕೆಟ್ಟ ವಾಸನೆಯನ್ನು ತೊಡೆದುಹಾಕಲು ಮಾರ್ಗಗಳನ್ನು ಹುಡುಕುತ್ತಿರುವ ವ್ಯಸನಿಗಳು, ಪ್ರತಿ ಊಟದ ನಂತರ ಹುರಿದ ಸೋಂಪು ಅಥವಾ ಜೀರಿಗೆಯನ್ನು ಅಗಿಯಲು ಪ್ರಯತ್ನಿಸಬಹುದು ಏಕೆಂದರೆ ಇವೆರಡೂ ಜೀರ್ಣಕ್ರಿಯೆಗೆ ಹಾಗೂ ಬಾಯಿಯ ದುರ್ವಾಸನೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ. 
                  ಔಷಧಿಗಳು: ಕೆಲವು ಔಷಧಿಗಳು ರೋಗ ವಾಸಿಮಾಡಲು ರಕ್ತದಲ್ಲಿ ಬಿಡುಗಡೆ ಮಾಡುವ ರಾಸಾಯನಿಕಗಳಿಂದಾಗಿ ಬಾಯಿಯಲ್ಲಿ ವಾಸನೆಯನ್ನು ಉಂಟುಮಾಡಬಹುದು. ಇನ್ನೂ ಕೆಲವು ನಿಮ್ಮ ಬಾಯಿಯನ್ನು ಒಣಗಿಸಿ, ಲಾಲಾರಸದ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ, ಆದ್ದರಿಂದ ವಾಸನೆ ಹೆಚ್ಚಾಗುತ್ತದೆ. ಆದರೆ ಈ ಔಷಧಿಗಳಿಂದ ಉಂಟಾಗುವ ಕೆಟ್ಟ ವಾಸನೆಗಳಿಗೆ ಚಿಕಿತ್ಸೆ ನೀಡಲು ಯಾವುದೇ ನಿರ್ದಿಷ್ಟ ವಿಧಾನವಿಲ್ಲ. ಆದರೆ ಪ್ರತಿ ರಾತ್ರಿ ಮತ್ತು ಮುಂಜಾನೆ ಅರ್ಧ ನಿಂಬೆ ಹಿಂಡಿದ ಸ್ವಲ್ಪ ಬೆಚ್ಚಗಿನ ನೀರನ್ನು ಕುಡಿಯಲು ಪ್ರಯತ್ನಿಸಬಹುದು. 
              ಆಲ್ಕೊಹಾಲ್ ಮತ್ತು ಕಾಫಿಯ ಅತಿಯಾದ ಬಳಕೆ: ಕಾಫಿಯಲ್ಲಿನ ಕೆಫೀನ್ ಲಾಲಾರಸದ ಉತ್ಪಾದನೆಗೆ ಅಡ್ಡಿಯಾಗುತ್ತದೆ, ಇದರ ಪರಿಣಾಮವಾಗಿ ಬಾಯಿಯಲ್ಲಿ ಕೆಟ್ಟ ವಾಸನೆ ಬರುತ್ತದೆ. ಆಲ್ಕೋಹಾಲ್ ದೇಹದಲ್ಲಿ ನಿರ್ಜಲೀಕರಣವನ್ನು ಉಂಟುಮಾಡಿ, ಮತ್ತೆ ಲಾಲಾರಸದ ಉತ್ಪಾದನೆಯನ್ನು ಕಡಿಮೆಮಾಡುತ್ತದೆ. ಎರಡೂ ಪಾನೀಯಗಳು ಬಲವಾದ ಸುವಾಸನೆಯನ್ನು ಹೊಂದಿದ್ದು, ಫ್ಲೋಸಿಂಗ್ ಮತ್ತು ಬ್ರಷ್ ಮಾಡಿದ ನಂತರವೂ ಉಳಿಯುತ್ತದೆ. ಆದ್ದರಿಂದ ಬಾಯಿಯ ವಾಸನೆ ಕಡಿಮೆಮಾಡಲಲು ಬಯಸಿದರೆ, ಇವುಗಳ ಸೇವನೆ ಕಡಿಮೆಮಾಡುವುದು ಒಳ್ಳೆಯದು. 
              ಈ ಮೇಲಿನ ಕಾರಣಗಳ ಹೊರತಾಗಿಯೂ ನಿಮ್ಮ ಬಾಯಿಯ ವಾಸನೆಯು ಗಂಟಲು ಅಥವಾ ಹೊಟ್ಟೆಯ ಸೋಂಕಿನಿಂದಾಗಿರಬಹುದು. ಅದಕ್ಕಾಗಿ, ಅಗತ್ಯವಿದ್ದರೆ ನೀವು ಡಯಟೀಶಿಯನ್ ಅಥವಾ ದಂತವೈದ್ಯರನ್ನು ಭೇಟಿ ಮಾಡಬೇಕು.




Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries